ಸಮೀರನ ದಿನ

ಸಮೀರನಿಗೆ ಮೊಟ್ಟಮೊದಲ ಬಾರಿಗೆ ತನ್ನ ಹುಮ್ಮಸ್ಸಿನಲ್ಲೇ ಒಂಥರದ ನಾಟಕೀಯತೆಯ ಭಾಸವಾಗತೊಡಗಿತು. ತನ್ನ ಆರ್ಭಟ ಉನ್ಮಾದ ಎಚ್ಚರ ಕೇಕೆಗಳ ಮುಖಾಂತರವೇ ಈ ಜಗತ್ತನ್ನು ಅಥವಾ ತನ್ನನ್ನು ಇರಿಸಿಕೊಳ್ಳಬಲ್ಲೆ ಎಂಬಂತೆ-ಎಂದೂ ಜೋಲುಮೋರೆಗೆ ಎಡೆಗೊಡದ, ನೋವಿನ ನೆನಪುಗಳ ಬಳಿಯೂ […]

ಕ್ಯಾಪ್ಸಿಕಂ ಮಸಾಲಾ

ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […]

ಶಬ್ದದೊಳಗಣ ನಿಶ್ಯಬ್ದ : ಅಲ್ಲಮನ ಆರು ವಚನಗಳು

೧. ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ ಗುಹೇಶ್ವರ ನಿಮ್ಮ ಶರಣ ಸಂಬಂಧ ೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ ನಿಮ್ಮ ನಿಲವನನುಭವ […]

ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು – ಭಾಗ ಎರಡು ಹಾಗು ಅಂತಿಮ ಕಳೆದ ಸಂಚಿಕೆಯಿಂದ ಮುಂದುವರೆದದ್ದು

ಶಬ್ದಾಲಂಕಾರ ಅರ್ಥಾಲಂಕಾರಗಳು ಎರಡನೆಯ ಪರಿಚ್ಛೇದವು ಶಬ್ದಾಲಂಕಾರಗಳಿಗೆ ಸಂಬಂಧಿಸಿದ್ದು. ಇಲ್ಲಿ ಅಲಂಕರ ಮತ್ತು ಶಬ್ದಾಲಂಕಾರ-ಅರ್ಥಲಂಕರ ಭೇದಗಳ ಲಕ್ಷಣಗಳನ್ನು ಮೊದಲಿಗೆ(೧-೩) ಹೇಳಿದೆ. ಆಮೇಲೆ ‘ಇಲ್ಲಿಗೆ ಇದು ತಕ್ಕುದು ಇಲ್ಲಿಗೆ ಪೊಲ್ಲದು ಇದು ಎಂದು ಅರಿದು ಸಮರಿ ಬಲ್ಲಂತೆ, […]

ಹುಲಿಯ ಬೆನ್ನಿನಲ್ಲಿ ಒಂದು ಹುಲ್ಲೆ ಹೋಗಿ

(ಕಪ್ಪು ಕಾದಂಬರಿಯ ಮುನ್ನುಡಿ) ಈ ನನ್ನ ಕಪ್ಪು ಪ್ರೀತಿಯ ಕಾದಂಬರಿ ಮತ್ತೆ ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಈ ಕೆಳಗೆ ಕಾಣಿಸಿದಂತೆ ನಾಲ್ಕು ಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಈ ಕೃತಿ ಪ್ರಕಟವಾದ ವರ್ಷದಲ್ಲಿ ನನ್ನ ಜೀವಕ್ಕೆ ಸಂಚಕಾರ […]

ತದ್ರೂಪ

ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […]

ಮಾನವೀಯತೆಯನ್ನೇ ಮುಟ್ಟಿ ಮಾತಾಡಿಸುವ -ಫ಼್ರಿಟ್ಜ್ ಬೆನೆವಿಟ್ಜ್

ಜರ್ಮನರ ವ್ಯಕ್ತಿತ್ವವನ್ನು ‘ಡೈನಮೊ’-ಕ್ಕೆ ಹೋಲಿಸಿ ಯಾರೋ ವರ್ಣಿಸಿದ್ದು ನೆನಪಾಗುತ್ತದೆ. ಆ ಹೋಲಿಕೆ ನನಗೆ ನಿಜವಾಗಿ ಅನುಭವವಾದ್ದು – ಆತ ರಂಗದ ಮೇಲೆ ನಿಂತು ತಾಲೀಮು ನಡೆಸುವ ಸಂಭ್ರಮ ಕಂಡಾಗ. ಹದವಾದ ಮೈಕಟ್ಟು, ಶಸ್ತ್ರಚಿಕಿತ್ಸೆಯಿಂದ ಇಡೀ […]

ಕಿವಿ ಮಾತು

ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ. ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ. ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ […]

ಕನ್ನಡಿಯೇ ಕನ್ನಡಿಯೇ

ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? ನೀ ನೋಡುತಿರುವೆಯ ನನ್ನ? ಇಲ್ಲವೆ| ನಾ ನೋಡುತಿರುವೆನೆ ನಿನ್ನ? ನಾ ನಿನ್ನ ಬಿನ್ಬವೋ? ನೆರಳೊ? ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? ನಾನಿರದೆ ನೀನಿಲ್ಲ ಹೌದೆ? […]

ನೀರು

ಗೆರೆಯಿಂದ ಕೊರೆದಿಡಲಾದೀತೇ ನೀರನ್ನ? ಗೆರೆಯ ಬರುವುದರೊಳಗೆ, ನೀರು ಕರಗಿ ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು, ನದಿಯಾಗಿ ಹರಿದು, ಕಾಲನ ಇರಿದು ಅಲೆ‌ಅಲೆ ರಿಪೀಟಾಗಿ ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ ಮತ್ತೆ ನೀರಾಗುವುದರೊಳಗೆ […]