………. – ೧೩

ಹೀಗೆ,
ಹಾಳೆಯ ಮೇಲೆ
‘ಹಾಡು’
ಹಚ್ಚೆ ಹೊಯ್ದ ಚಿತ್ತಾರದ ಹಾಗೆ
ಹಾಡು
ಹಾಳೆಯಿಂದೆದ್ದು ಶಬ್ದ,
ಅದರ ಹಿಂದೊಂದು ಶಬ್ದ;
ಶಬ್ದ
ಶಬ್ದಗಳ
ಸರಣಿ
ಗಾಳಿಯಲಿ ತೇಲಿ ಬಿಟ್ಟರೆ….. ಹಾಡು!
ಈಗ ಹಾಳೆಯ ಮೇಲೆ
ಹಾಡು – ಶಬ್ದ
ಹಾಡು – ನಿಃಶಬ್ದ
*****