ಶಿಕಾರಿ – ೪

“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ ಜನ್ಮ ಹೋಯಿತು. ಹಾಳಾದವನು ಎಲ್ಲ ಕಡೆಯಲ್ಲಿ ಟಮಕೀ ಬಾರಿಸುತ್ತ ತಿರುಗುತ್ತಿದ್ದಾನೆ : ನೀನು ನನ್ನ ಮೇಲೆ ಕಾದಂಬರಿ ಬರೆಯುತ್ತಿದ್ದೀಯಂತೆ. ಈಗಾಗಲೇ ಅರ್ಧದ ಮೇಲೇ ಬರೆದು ಮುಗಿಸಿದ್ದೀಯಂತೆ. ಎಲ್ಲವನ್ನು ಉಘಡಾ-ಉಘಡೀ ಹೇಳಿದ್ದೀಯಂತೆ. ಮೊನ್ನೆ ಅರ್ಜುನ್‌ರಾವ್ ಭೇಟಿಯಾದಾಗ ಕೂಡ ಅದನ್ನೇ ಹೇಳಿದ….ಅಮ್ಮನ ಬಗ್ಗೆ ಬರೆದಾಗ ನಾನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೆ ಅದರಲ್ಲಿ ನಮ್ಮ ಬಡತನದ ಬಗ್ಗೆ ಬರೆದದ್ದು….ಬಡವನಾಗಿ ಹುಟ್ಟಿದರೆ ಏನಾಯಿತೋ(ಬೋಳೀಮಗನೇ) ಆದರೆ….ಸ್ವಂತ ಮೆಹನತ್ತಿನಿಂದ ಈ ಎತ್ತರಕ್ಕೆ ಏರಿದವನನ್ನು ಕೆಳಗೆ ಎಳೆಯುವುದರಲ್ಲಿ ನಿನಗೇನು ಸುಖವೋ ? ನನ್ನ ಬದನಾಮೀ ಮಾಡ್ತೀಯೇನೋ ? ಒಮ್ಮೆ ಕೈತಪ್ಪಿ ಆದದ್ದಕ್ಕೆ ಪ್ರಾಯಶ್ಚಿತ್ತವೇ ಇಲ್ಲವೇನೋ ? ಸ್ವತಃ ಸತ್ತವಳ ಅಕ್ಕನೇ ಇದನ್ನೆಲ್ಲ ಮರೆತಾಗ ನಿನಗೆ ಯಾಕೋ ಇಷ್ಟೊಂದು ಜಿದ್ದು ? ಸತ್ಯ ನಿನಗೆ ಗೊತ್ತಿಲ್ಲ ನಾನು ಹೇಳಹೊರಟರೆ ನಾಲಿಗೆ ಹಿಡಿದುಕೊಳ್ಳುತ್ತದೆ. ನಿನ್ನ ಹಾಗೆ ಬರೆಯುವ ಕಲೆ ನನಗಿಲ್ಲವೋ…. ಇಲ್ಲವಾದರೆ ನಿನ್ನ ಚಾರಿತ್ರ್ಯ ಏನೆಂಬುದನ್ನು ನಾನು ತೋರಿಸಿಕೊಡುತ್ತಿದ್ದೆ….”

ಶ್ರೀನಿವಾಸನ ದನಿಯಲ್ಲಿ ಸಿಟ್ಟಿನ ಬದಲು ಒಂದು ರೀತಿಯ ದೈನ್ಯ. ಅಳುಬುರುಕುತನ ಸೇರುತ್ತಿರುವುದನ್ನು ಕಂಡು ಮುದುಕಿ ಒಮ್ಮೆಲೇ ಕೆರಳಿದಳು. ಕೂತಲ್ಲಿಂದ ಕೂಡಲೇ ಏಳಲಾಗದ್ದಕ್ಕೆ ಕುಂಡಿ ಸರಿಸುತ್ತ ನೇರವಾಗಿ ನಾಗಪ್ಪ ಕೂತ ಸೋಫಾದ ತೀರ ಹತ್ತಿರಕ್ಕೆ ಬಂದಳು. ಒಂದರೆನಿಮಿಷ ಶ್ರೀನಿವಾಸನ ಕಡೆ ತಾತ್ಸಾರ ತುಂಬಿದ ದೃಷ್ಟಿ ಚೆಲ್ಲಿದಳು. ಆಮೇಲೆ ಇನ್ನೆಲ್ಲೋ ನೋಡುತ್ತ ; “ಅದೇನು ಕೈಗೆ ಬಳೆ ಹಾಕಿಕೊಂಡ ಹಾಗೆ ಮಾತನಾಡ್ತೀಽಽಯೋ. ನೀರಿಲ್ಲದವನ ಹಾಗೆ ನೀನು ಆಗಬೇಡವೋ. ಷಂಢನಾಗಬೇಡವೋ. ನಿನ್ನ ಅಪ್ಪನ ಹಾಗೆ ಆಗಬೇಡವೋ. ಹೇಳುಽಽ. ಎಲ್ಲವನ್ನುಽಽ. ಕೇಳುವ ಧೈರ್ಯವಿದ್ದರೆ ಕೇಳಲೀ_ಅವನ ಅಪ್ಪ-ಅಮ್ಮರ ಬಗ್ಗೆಽಽ. ಸೋದರತ್ತೆಯ ಬಗ್ಗೆಽಽ. ಅಣ್ಣನ ಬಗ್ಗೆಽಽ. ತಂಗಿಯ ಬಗ್ಗೆಽಽ. ಯಾಕೆ ಹೆದರಿಕೇ ? ಬರೇ ನೀನು ಮೇಲೆ ಬರುತ್ತಿರುವುದನ್ನು ಸಹಿಸಲಾಗದೇ ನಿನ್ನ ಬಗ್ಗೆ ಇಲ್ಲದ ಸುದ್ದಿ ಹಬ್ಬಿಸುವ ಈ ಹಲ್ಕಾಽಽ ಮನುಷ್ಯನ ಬಾಯಿ ಮುಚ್ಚಿಸುವ ತಾಕತ್ತು ನಿನಗಿಲ್ಲವೇನೋಽಽ. ಮೊನ್ನೆ ರಾತ್ರಿ, ಬೆಳಗಾಗುವ ತನಕ ನನ್ನಿಂದ ಎಲ್ಲ ಕೇಳಿ ತಿಳಿದು ಈಗ ಐನ್ ಹೊತ್ತಿಗೆ ಮೆತ್ತಗಾಗುತ್ತೀಯೇನೋ….ಹಳ್ಳಿಯಲ್ಲಿ ಸುಖವಾಗಿ ಜೀವ ಬಿಡುತ್ತಿದ್ದ ಮುದುಕಿಯನ್ನು ಟ್ಯಾಕ್ಸಿಯಲ್ಲಿ ತುರುಕಿ ಮೈ ನುಗ್ಗು ನುಗ್ಗು ಮಾಡಿಸಿ ಕರೆತರಿಸಿದ್ದು….”

ನಾಗಪ್ಪನಿಗೆ ಮುಂದಿನದೆಲ್ಲ ಕೇಳುತ್ತ ಕೂಡ್ರುವ ಮನಸ್ಸಾಗಲಿಲ್ಲ. ವಿಚಿತ್ರ ಸದ್ದು ಮಾಡುತ್ತ, ತಡೆತಡೆದು ಹೊರಗೆ ಬರುತ್ತಿದ್ದ ಮುದುಕಿಯ ಮಾತುಗಳು ಅವಳು ಬಯಸಿದ ಪರಿಣಾಮ ಮಾಡುವ ಬದಲು ಅವ್ಯಕ್ತ ಕಾರಣಕ್ಕಾಗಿ ಮೈಮೇಲೆ ಮುಳ್ಳು ನಿಲ್ಲಿಸುತ್ತಿದ್ದವು : ಅವಳ ವಿಲಕ್ಷಣ ಭಾಷೆಯಲ್ಲಿ ಪ್ರಕಟವಾಗಹತ್ತಿದ ಸಂಗತಿಗಳು ಮನುಷ್ಯ-ಸಂವೇದನೆಗೆ ದಕ್ಕುವ ಸತ್ಯಗಳಾಗಿ ತೋರಲಿಲ್ಲ. ಅಥವಾ ಈಗಾಗಲೇ ತನ್ನ ಸಂವೇದನಾಶಕ್ತಿಯೇ ಮೊಟಕಾಗಿರಬಹುದೇ ? ಅನ್ನಿಸಿತು. ಕುಳಿತಲ್ಲಿಂದ ಎದ್ದವನೇ ಧಡಧಡ ಸದ್ದು ಮಾಡುವ ಹೆಜ್ಜೆ ಇಡುತ್ತ ಸೀದಾ ತನ್ನ ಕೋಣೆಗೆ ನಡೆದ. ಹಾಗೆ ಹೋಗುವಾಗ ತನ್ನಲ್ಲಿ ಮೊಳೆತ ಭಾವನೆಯ ಗುರುತು ನಾಗಪ್ಪನಿಗೇ ಸಿಗಲಿಲ್ಲ : ಸಿಟ್ಟೇ ? ತಿರಸ್ಕಾರವೇ ? ಜಿಗುಪ್ಸೆಯೇ ? ತಿಳಿಯಲಿಲ್ಲ. ಅನ್ನಿಸಿಕೆಗಳೆಲ್ಲ ಸುನ್ನವಾದ ಭಾಸ. ಕೋಣೆಗೆ ಹೋಗಿ ಡ್ರೆಸ್ಸು ಬದಲಿಸಬೇಕೆಂದು ಪ್ಯಾಂಟು ಕೈಗೆ ತೆಗೆದುಕೊಳ್ಳುತ್ತಿರುವಾಗ ಶ್ರೀನಿವಾಸ ಒಳಗೆ ಬಂದು ತನ್ನ ಹಿಂದೆಯೇ ಕದ ಮುಚ್ಚಿಕೊಂಡು ಅಗುಳಿ ಇಕ್ಕಿದ. ಶ್ರೀನಿವಾಸನ ಬಣ್ಣಗೆಟ್ಟ ಮೋರೆ, ಗಾಬರಿ ಬಿದ್ದ ಕಣ್ಣುಗಳನ್ನು ನೋಡಿ ನಾಗಪ್ಪ ಥಕ್ಕಾದ : ಬೆಳಿಗ್ಗೆ ಇಲ್ಲಿಗೆ ಬರುವಾಗ ಊಹಿಸಿಕೊಂಡದ್ದಕ್ಕೆ ವ್ಯತಿರಿಕ್ತವಾದದ್ದೇನೂ ನಡೆಯದೇ ಇದ್ದರೂ ಶ್ರೀನಿವಾಸನ ಸದ್ಯದ ಅವತಾರವನ್ನು ನೋಡಿ ಮಾತ್ರ ದಂಗುಬಡಿದುಹೋದ : ಸಾಯಲು ಹೊರಟ ಹಣ್ಣುಹಣ್ಣು ಮುದುಕಿಯ ಮುಖಾಂತರ ತಾನು ಇಷ್ಟು ದಿನ ಹೆದರಿಕೊಂಡ ತನ್ನ ಭೂತಕಾಲ ತೆರೆದುಕೊಳ್ಳಹತ್ತಿದ ಗಳಿಗೆಯಲ್ಲಿ ಯಾವುದೋ ನಿಗೂಢ ಕಾರಣಕ್ಕಾಗಿ ಶ್ರೀನಿವಾಸನು ಮರೆಯಲು ಯತ್ನಿಸಿದ್ದುದಕ್ಕೆ ತಾನೇ ಜೀವಂತ ಪ್ರತೀಕಾರವಾಗುತ್ತಿದ್ದಿರಬೇಕು: ಎದುರಿಗೆ ಕೂತವನು ಹನ್ನೆರಡು ದಿನಗಳ ಹಿಂದಿನ ಶ್ರೀನಿವಾಸನಾಗಿಯೇ ಇರಲಿಲ್ಲ. ಅಷ್ಟೇಕೆ, ಬೆಳಿಗ್ಗೆ ಬಂದಾಗ ನೋಡಿದ ಶ್ರೀನಿವಾಸ ಕೂಡ ಆಗಿರಲಿಲ್ಲ : ತಾನು ಮಾತನಾಡುವ ಮೊದಲೇ ತನ್ನ ಚಾರಿತ್ರ್ಯವನ್ನು ಬಯಲಿಗೆಳೆಯುವ ಬೆದರಿಕೆ ಹಾಕುತ್ತಿರುವಾಗ ಒಂದೂ ಮಗ ತಾನೇ ಯಾವುದಕ್ಕೋ ಹೆದರಿಕೊಂಡಂತೆ ಬಿಳಿಚಿಕೊಂಡಿದ್ದಾನೆ. ನಾಗಪ್ಪನಿಗೆ ಈ ಘಟನೆ ಅನಿರೀಕ್ಷಿತ. ಈತನನ್ನು ಮೊದಲಿನಿಂದಲೂ ಬೆನ್ನಟ್ಟಿ ಬರುತ್ತಿದ್ದುದಕ್ಕೆ ತಾನು ಪ್ರತೀಕವಾಗುತ್ತಿದ್ದ ಈ ಪ್ರಕ್ರಿಯೆ ದೊಡ್ಡ ಸೋಜಿಗ, ನಾಗಪ್ಪ ಮಾತನಾಡಲಿಲ್ಲ. ಲುಂಗಿ ಕಳಚಿ ಪ್ಯಾಂಟು ಧರಿಸುವಾಗ ಥಟ್ಟನೆಂಬಂತೆ ಒಂದು ವಿಚಾರ ಹೊಳೆದುಹೋಯಿತು : ಶ್ರೀನಿವಾಸನ ಯಾತನೆಗೆ, ಅಸಾಧಾರಣವಾದ ಅದರ ತೀವ್ರತೆಗೆ, ಅದನ್ನು ಮಾತಿನಲ್ಲಿ ಹಿಡಿಯುವ ಅಸಮರ್ಥತೆಯೇ ಕಾರಣವಾಗಿರಬಹುದೇ ? ಏರಿಕ್ ಬರ್ನ್ ನೆನಪಿಗೆ ಬಂದ : ಭಾಷೆ ತಿಳಿಯುವ ಮುಂಚಿನ ಕಾಲದಲ್ಲಿ ಮೆದುಳಿನಲ್ಲಿ ಕೇವಲ ಪ್ರತಿಮೆಗಳಾಗಿಯೇ ನಿಂತ ಅನುಭವ ಈಗಲೂ ಮೂಡಿ ಕಾಡುತ್ತಿರಬಹುದೇ ಹೊರತು ಮಾತಿನಲ್ಲಿ ಹೊರದಾರಿಯನ್ನು ಕಾಣುವಲ್ಲಿ ಸೋಲುತ್ತಿರಬಹುದು. ಈ ವಿವೇಕಪ್ರಜ್ಞೆ ಶ್ರೀನಿವಾಸನ ಬಗ್ಗೆ ಸಹಾನುಭೂತಿಯನ್ನು ಹುಟ್ಟುಸುವಂತಹದಾಗಿತ್ತಾದರೂ ಸ್ವತಃ ತಾನೇ ಕಳೆದ ಹಲವು ದಿನಗಳಿಂದ ಅನುಭವಿಸುತ್ತ ಬಂದದ್ದು ಅದಕ್ಕೆ ಅಡ್ಡ ಬಂತು : ನಾಗಪ್ಪ ತನ್ನ ಮೌನ ಮುರಿಯಲಿಲ್ಲ. ಪ್ಯಾಂಟಿನ ಕಿಸೆಯೊಳಗಿಂದ ಹಣಿಗೆಯನ್ನು ಹೊರತೆಗೆದು ನಿಧಾನವಾಗಿ ಒಂದು ಬಗೆಯ ಬೇಫೀಕೀರತೆಯಿಂದ ಕೂದಲು ಬಾಚಿಕೊಳ್ಳಹತ್ತಿದ : ಈ ನಿಧಾನ, ಊಟಕ್ಕಾಗಿ ಬಂದೂ ಊಟಮಾಡುವ ಮೊದಲೇ ಹೋಗಲು ಹೊರಟು ನಿಂತವನ ಮೌನದಲ್ಲಿಯ ಬೇಫೀಕೀರತ್ ಶ್ರೀನಿವಾಸನನ್ನು ಇನ್ನಷ್ಟು ಹೆದರಿಸಲು ಕಾರಣವಾದವು : “ಊಟ ಮಾಡುವ ಮೊದಲೇ….”_ಮಾತನಾಡುವದು ಅಸಾಧ್ಯವಾಯಿತು. ಕೂತಲ್ಲಿಂದ ಎದ್ದವನೇ ಇವನು ಏನು ಮಾಡುತ್ತಿದ್ದಾನೆ ಎನ್ನುವುದು ನಾಗಪ್ಪನ ಲಕ್ಷ್ಯಕ್ಕೆ ಬರುವ ಮೊದಲೇ ಶ್ರೀನಿವಾಸ ನೆಲದ ಮೇಲೆ ಮಂಡಿಯೂರಿ ಕುಳಿತು ನಾಗಪ್ಪನ ಎರಡೂ ಕಾಲುಗಳನ್ನು ಗಟ್ಟಿಯಾಗಿ ಹಿಡಿದ: “ದಮ್ಮಯ್ಯ ನಾಗಪ್ಪಾಽಽ. ಇಷ್ಟೊಂದು ನಿರ್ದಯನಾಗಬೇಡ. ಇಷ್ಟೆಲ್ಲ ಕಷ್ಟಪಟ್ಟು ಬೆಳೆಸಿಕೊಂಡುಬಂದದ್ದನ್ನು ಹೀಗೆ ಮಣ್ಣುಗೂಡಿಸಬೇಡ” ಎಂದ. ಇದು ಬರಿ ನಾಟಕವಲ್ಲ. ಶ್ರೀನಿವಾಸ ನಿಜಕ್ಕೂ ಯಾವುದಕ್ಕೋ ಹೆದರಿದ್ದಾನೆ ! ವಿವೇಕಶೂನ್ಯವಾದ ರಿತಿಯಲ್ಲಿ ಬೆಚ್ಚಿಕೊಂಡಿದ್ದಾನೆ : ಪ್ಯಾಂಟಿನ ಒಳಗೆ ಕೈಹಾಕಿ ಕಾಲುಗಳನ್ನು ಹಿಡಿದದ್ದೇ ಅಂಗೈಗಳು ಬೆವರಿನಿಂದ ಒದ್ದೆಯಾಗಿದ್ದವು. ತನ್ನ ಕಣ್ಣುಗಳಲ್ಲಿ ಕಣ್ಣು ನೆಡಲು ಹವಣಿಸುತ್ತಿದ್ದವನ ಮೋರೆಯಲ್ಲಿ_ಹಣೆಯ ಮೇಲೆ, ಗದ್ದ ಮೂಗುಗಳ ಮೇಲೆ_ಬೆವರ ಹನಿಗಳು ಸಾಲುಗಟ್ಟಿದ್ದವು. ನಾಗಪ್ಪ ಶಾಕ್ ಬಡೆದವನ ಹಾಗೆ ಶ್ರೀನಿವಾಸನ ಕೈಗಳಿಂದ ಕಾಲುಗಳನ್ನು ಬಿಡಿಸಿಕೊಂಡವನೇ ಕಿಡಕಿಗೆ ಬಂದು ಹೊರಗೆ ನೋಡುತ್ತ ನಿಂತ :ಕಣ್ಣ ಇದಿರಿನ ಪರಿಸರದಿಂದ ಹೊರಟ ಬೆಳಕು ಕಣ್ಣ ಪರದೆಯ ಮೇಲೆ ಚಿತ್ರಗಳಾಗಿ ಮೂಡುತ್ತಿತ್ತೇ ಹೊರತು ಮೆದುಳು ಆ ಚಿತ್ರಗಳ ಗುರುತು ಹಿಡಿಯಲು ನಿರಾಕರಿಸುತ್ತಿದ್ದಂತಿತ್ತು….

ಬೆನ್ನ ಹಿಂದಿನಿಂದ ವಿಚಿತ್ರ ಸದ್ದು, ಬೋಳೀಮಗ ಏನೋ ಹೇಳುತ್ತಿರಬೇಕು ಇಲ್ಲ, ತನ್ನಷ್ಟಕ್ಕೇ ಮಾತನಾಡಿಕೊಳ್ಳುತ್ತಿರಬೇಕು ಅನ್ನಿಸಿ ಮೈ ಜುಮ್ ಎಂದಿತು : ಕಿವಿಯ ಮೇಲೆ ಬೀಳುತ್ತಿದ್ದದ್ದು ಮಾನವಸಹಜ ಭಾಷೆಯಾಗಿ ತೋರಲಿಲ್ಲ; ಬರೇ ಅರ್ಥವಾಗದ ಸದ್ದು :

‘ಬದುಕಿನಲ್ಲಿ ನಾನು ಎಷ್ಟೊಂದು ನೋವು ತಿಂದಿದ್ದೇನೆ. ಕಷ್ಟಪಟ್ಟಿದ್ದೇನೆ. ಆದರೆ ಯಾರ ಮುಂದೂ ದೀನನಾದವನಲ್ಲ. ಯಾರ ಕಾಲನ್ನೂ ಹಿಡಿದವನಲ್ಲ. ಈವತ್ತು ನಿನ್ನದನ್ನು ಹಿಡಿದೆ. ಒಪ್ಪುತ್ತೇನೆ : ನಾವು ಜಿದ್ದಿನ ಜನ ಎಂದು ನೀನು ತಿಳಿದುಕೊಂಡರೂ ಕೆಲವು ವಿಷಯಗಳಲ್ಲಿ ಮಾತ್ರ ನಿನಗಿದ್ದ ಧೈರ್ಯ ನನಗಿಲ್ಲ. ನನ್ನ ಕುಲದ ಬಗ್ಗೆ, ಚಿಕ್ಕಂದಿನ ಬಡತನದ ಬಗ್ಗೆ, ಚಾರಿತ್ರ್ಯದ ಬಗ್ಗೆ_ಯಾರಾದರೂ ಮಾತನಾಡಿದರೆ ಕೇಳುವ ಧೈರ್ಯ ನನಗೆ ಎಳ್ಳಷ್ಟೂ ಇಲ್ಲ.ಇದರ ಕಾರಣ ನಿನಗೆ ಗೊತ್ತಾಗಬೇಕು. ನಿನ್ನಹಾಗೆ ಮಾನವಶಾಶ್ತ್ರ ಓದಿದವನಲ್ಲ ನಾನು. ಅಪ್ಪನ ಬಗ್ಗೆ ನಾನು ಆದರ ಇದ್ದವನಲ್ಲ. ಅವನು ಕೋಟಿತೀರ್ಥದಲ್ಲಿ ಮುಳುಗಿ ಜೀವ ಕಳೆದುಕೊಂಡಾಗ ಒಂದು ದರಿದ್ರ ಪೀಡೆ ತೊಲಗಿತು ಎಂದು ಸಂತೋಷಪಟ್ಟಿದ್ದನ್ನು ಯಾವ ಭಿಡೆ ಇಲ್ಲದೇ ಒಪ್ಪಿಕೊಳ್ಳುವ ಧೈರ್ಯವಿದೆ. ಆದರೆ ಅದೇ ದುರ್ಘಟನೆ ನಿನ್ನ ಕತೆಯಲ್ಲಿ ಮೂಡಿ ಬಂದು ಓದಲು ಸಿಕ್ಕಾಗ ಓದಿದ ಕೆಲವು ದಿನ ನಾನು ಅಂಜಿಕೊಂಡ ರೀತಿ ನನಗೊಬ್ಬನಿಗೇ ಗೊತ್ತು. ನೀನು ನನ್ನ ಅಪ್ಪನ ಹೆಸರನ್ನು ಕೂಡ ಬದಲಿಸದೇ ಎಲ್ಲ ವಿವರಗಳ ವಿಶ್ಲೇಷಣೆ ಮಾಡಿ ಕತೆ ಬರೆದಾಗ ಒಂದು ಹೇಳಹೆಸರಿಲ್ಲದ ಹಳ್ಳಿಯ ಕೊಂಪೆಯಲ್ಲಿ ನಡೆದ ಈ ದುರ್ಮರಣ ಜಗಜ್ಜಾಹೀರವಾಗುತ್ತದೆಯಲ್ಲ ಎಂಬ ಸತ್ಯಕ್ಕೆ ಭೀತನಾಗಿದ್ದೆ….ಮೊದಲಿನಿಂದಲೂ ನಿನ್ನನ್ನು ನೋಡಿದರೆ ನನಗೆ ಭಯ, ಯಾಕೆ ಎನ್ನುವದು ನನಗೇಗೊತ್ತಿಲ್ಲ. ನಾನು ನನ್ನಲ್ಲೇ ಬಚ್ಚಿಟ್ಟುಕೊಂಡದ್ದನ್ನು ಉಳಿದವರೆದುರು ಬಿಚ್ಚುವ ಧೈರ್ಯ ನನಗಿಲ್ಲವೇ ಇಲ್ಲ. ಉಳಿದವರಿಗೆ ಗೊತ್ತಾಗುವ ಶಕ್ಯತೆ ಇಲ್ಲದ ಎಂಥದ್ದನ್ನು ಬೇಕಾದರೂ ಮಾಡುವ ಎದೆಗಾರಿಕೆ ನನಗಿದೆ. ನಾನು ಬಚ್ಚಿಟ್ಟುಕೊಂಡ ಎಷ್ಟೋ ಸಂಗತಿಗಳು ನಿನಗೊಬ್ಬನಿಗೇ ಗೊತ್ತಿವೆ ಎನ್ನುವುದನ್ನು ಬಲ್ಲೆ. ಆದರೂ ನಿನಗೆ ಗೊತ್ತಿಲ್ಲ ಎಂದುಕೊಂಡದ್ದು ? ಅದೂ ಕೂಡ ನಿನಗೀಗ ಗೊತ್ತಾಗಿಬಿಟ್ಟಿದೆಯೇ ? ಗೊತ್ತಾಗಿಬಿಡಬಹುದೇ ? ಇಷ್ಟು ದಿನ ಬಂದಿರದ ಸಂಶಯ, ನೀನು ಕಾದಂಬರಿ ಬರೆಯುತ್ತಿದ್ದೀ ಎಂದು ತಿಳಿದದ್ದೇ, ಹೀಗೇಕೆ ಕಾಡುತ್ತಿದೆಯೋ, ಅರಿಯೆ. ಅಪ್ಪ ಕೋಟಿತೀರ್ಥದಲ್ಲಿ ಸತ್ತದ್ದು ನನಗೆ ಗೊತ್ತಿದೆ. ಯಾಕೆ ಎನ್ನುವದು ಗೊತ್ತಿದೆಯೆ ? ಹೇಗೆ ಎನ್ನುವದು ? ಅದು ಆತ್ಮಹತ್ಯೆಯೆಂದುನಿಜಕ್ಕೂ ನಂಬುತ್ತೀಯಾ ? ಶಾರದೆಯ ಬಗ್ಗೆ ಕೂಡ ಏನೋ ಗೊತ್ತಾಗಿದೆ ಎಂಬ ಗುಮಾನಿ. ಆದರೆ ಅವಳ ಚೊಚ್ಚಲು-ಮಗುವಿನ ಬಗ್ಗೆ ? ಆ ಮಗುವಿನ ತಂದೆಯ ಬಗ್ಗೆ ? ನಿನಗೆ ಗೊತ್ತಿರಬಹುದಾಗಿದ್ದದ್ದಕ್ಕೆ ಹೆದರಿಕೆಯಿಲ್ಲ; ಗೊತ್ತಿದ್ದನ್ನು ಬಿಚ್ಚುವ ನಿನ್ನ ದುರಭ್ಯಾಸಕ್ಕೆ. ಅಮ್ಮನ ಬಗ್ಗೆ ಕತೆ ಬರೆದಾಗಲೇ ಹೆದರಿಕೊಂಡಿದ್ದೆ. ಈಗ ನೇತ್ರಾವತಿಯ ಸಾವಿನ ಬಗ್ಗೆ ಕಾದಂಬರಿ ಬರೆಯುತ್ತೀಯಂತೆ. ಈಗಾಗಲೇ ಅರ್ಧದಷ್ಟು ಬರೆದು ಮುಗಿಸಿದ್ದೀಯಂತೆ. ನೀನು ಹೈದರಾಬಾದ್ ಬಿಟ್ಟು ಮುಂಬಯಿಗೆ ಬಂದದ್ದೇ ಈ ಕಾದಂಬರಿ ಬರೆಯಲಿಕ್ಕಂತೆ_ಸೀತಾರಾಮ ಹೇಳಿದ. ಸಂತೋಷಭವನದ ನಾಯಕನೂ ಸಹ. ಈ ಮೂವರಿಗೂ ನನ್ನ ಬಗ್ಗೆ ಹೊಟ್ಟೆಕಿಚ್ಚು. ಬೇಡವಾದದ್ದನ್ನೆಲ್ಲ ಹೇಳಿ ಹೆದರಿಸುತ್ತಾರೆ. ಖೇತವಾಡಿ, ಅದರಲ್ಲೂ ಖೇಮರಾಜಭವನ, ಗೋಲಪೀಠಾಗಳ ವರ್ಣನೆ ಮಾಡಿದ ರೀತಿಯನ್ನಂತೂ ಒಂದು ದಿನ ನಮ್ಮ ಮನೆಯಲ್ಲೇ ಸತ್ಯನಾರಾಯಣಪೂಜೆಗೆ ಬಂದ ಜನರ ಇದಿರು ಉಪ್ಪು-ಖಾರ ಹಚ್ಚಿ ಹೇಳುತ್ತ ಬಾಯಿ ಚಪ್ಪರಿಸುತ್ತಿದ್ದ ಸೀತಾರಾಮ. ಹೆಸರುಗಳನ್ನು ಕೂಡ ಬದಲಿಸಿಲ್ಲವಂತೆ….ಹೌದೇನೋ ನಾಗಪ್ಪ ? ಯಾಕೋ ನಿನಗೆ ನನ್ನ ಮೇಲೆ ಇಷ್ಟೊಂದು ಹಗೆ ? ಈ ಕಾದಂಬರಿ ಈಗ ಯಾಕೆ ? ಇಷ್ಟೆಲ್ಲ ವರ್ಷಗಳ ಮೇಲೆ ? ನನ್ನ ಅಭ್ಯುದಯದ ಕಾಲದಲ್ಲಿ ? ಈವತ್ತು ನಮ್ಮ ಸಮಾಜದಲ್ಲಿ ನನಗೊಂದು ಮಾನದ ಸ್ಥಾನವಿದೆ. ಸಾರಸ್ವತ-ಬ್ರಾಹ್ಮಣ-ಲೀಗಿನ ಅಧ್ಯಕ್ಷ ಆಗಲಿದ್ದೇನೆ. ನಗರಪಾಲಿಕೆ ಚುನಾವಣೆಗೆ ನಿಂತಿದ್ದೇನೆ. ಮುಂದೆ ದೈವ ತೆರೆದರೆ ಎಸ್ಸೆಂಬ್ಲೀ ಇಲೆಕ್ಷನ್ನಿಗೂ. ಹಣ ಬೇಕಾದಷ್ಟು ಗಳಿಸಿದ್ದೇನೆ ನಾಗಪ್ಪಾ. ಸ್ವಂತ ಮೆಹನತ್ತಿನಿಂದ ಸದ್ಯ ಟ್ರಾನ್ಸ್‌ಪೋರ್ಟ್ ಬಿಸಿನೆಸ್ಸೂ ಶುರುಮಾಡಿದ್ದೇನೆ_ಈಗ ಎರಡು ವರ್ಷಗಳಾಗುತ್ತ ಬಂದವು. ಆ ಮೂಲಕವೇ ನಿನ್ನ ಕಂಪನಿಯೊಡನೆ ಸಂಬಂಧ. ನಿನ್ನ ಪರಿಚಯದ ಆಧಾರದ ಮೇಲೆ ನಿನ್ನ ಇಲ್ಲಿಯ ಆಫೀಸಿಗೆ ಹೋಗಿದ್ದೆ. ಆಗಲೇ ಖಂಬಾಟಾನ ಪರಿಚಯವಾಯಿತು. ಅತ್ಯಂತ ಖೋಟಾ ಮನುಷ್ಯ . ಎಲ್ಲ ದಗಲ್ಬಾಜಿಯ ವ್ಯವಹಾರ. ಖಂಬಾಟನ ಹೆಂಡತಿ, ನಿನ್ನ ಆ‌ಒ‌ಆ ಯ ಹೆಂಡತಿ ಇಬ್ಬರ ನನ್ನ ಕಂಪನಿಯಲ್ಲಿ ಭಾಗೀದಾರಾರು. ಇದು ನಿಮ್ಮ ಕಂಪನಿಯಲ್ಲಿ ಎಷ್ಟು ಮಂದಿಗೆ ಗೊತ್ತಿದೆಯೋ ಅರಿಯೆ. ಹಾಗೆಂದೇ ಅಲ್ಲವೆ ಕಂಪನಿಗೆ ಬರುವ, ಕಂಪನಿಯಿಂದ ಹೊರಗೆ ಹೋಗುವ ಎಲ್ಲ ಮಾಲುಗಳ ಸಾಗಾಣಿಕೆಯ ಮೂರು ವರ್ಷಗಳ ಕಾಂಟ್ರ್ಯಾಕ್ಟು ನಮಗೆ ಸಿಕ್ಕದ್ದು? ಕಾಂಟ್ರ್ಯಾಕ್ಟಿನ ಮೇಲೆ ಸಹಿ ಮಾಡಿದವರು ಹೈದರಾಬಾದ ಫ್ಯಾಕ್ಟರಿಯ ಮ್ಯಾನೇಜರರು: ಆದರೆ ಆ‌ಒ‌ಆ ಯವರ ಇನೀಶಲ್ಸೂ ಇವೆ ಅದರೆ ಮೇಲೆ. ಸದ್ಯ ನಿನ್ನ ಬಂದೂಕವಾಲಾ ದೊಡ್ಡ ಲಫಡಾದಲ್ಲಿ ಸಿಕ್ಕಿಕೊಂಡಿದ್ದಾನೆ. ಹತ್ತು ಟನ್ನಿನಷ್ಟು ಕಚ್ಚಾ ಮಾಲನ್ನು ನಿಮ್ಮ ಫ್ಯಾಕ್ಟರಿಯಿಂದ ಕಳ್ಳರೀತಿಯಿಂದ ಸಾಗಿಸಿ ಮುಂಬಯಿಯ ಒಬ್ಬ ದೊಡ್ಡ ವ್ಯಾಪಾರಿಗೆ ಮಾರಿದ್ದಾನೆ. ಈ ಮಾಲನ್ನು ತಯಾರಿಸುತ್ತಿದ್ದ ಕಾರಖಾನೆಯಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಉತ್ಪಾದನೆ ಹಲವು ತಿಂಗಳವರೆಗೆ ನಿಂತುಹೋದಾಗ ಈ ಸರಕಿನ ಧಾರಣೆ ಪೇಟೆಯಲ್ಲಿ ಮೂಲಧಾರಣೆಯ ಹತ್ತುಪಟ್ಟಿನಷ್ಟಾಯಿತು. ಬಂದೂಕವಾಲಾ ಹಾಗೂ ಅವನ ಚೇಲಾಗಳು ಕೂಡಿ ಕಾರಖಾನೆಯ ಒಂದು ವಿಭಾಗಕ್ಕೆ ಬೆಂಕಿಹತ್ತಿದ ನಾಟಕ ಮಾಡಿ ಈ ಮಾಲು ಆ ಬೆಂಕಿಯಲ್ಲಿ ಸುಟ್ಟುಹೋದಂತೆ ವರದಿ ಮಾಡಿದ್ದಾರೆ. ಬೆಂಕಿ ಹತೋಟಿಯ ಹೊರಗೆ ಹೋಗಿ, ಪಾಪ ಮೂರು ಜನ ಸತ್ತರಂತೆ. ಈ ಎಲ್ಲ ಲಫಡಾದ ವಿವರಗಳೆಲ್ಲ ಯಾರಿಗೋ ಹೇಗೋ ಗೊತ್ತಾಗಿ ಸಹಿ ಮಾಡಿರದ ಪತ್ರದ ಪ್ರತಿಗಳನ್ನು ಕಂಪನಿಯ_ದೇಶದಲ್ಲಿಯ, ವಿದೇಶದಲ್ಲಿಯ_ ಡೈರೆಕ್ಟರರಿಗೆ, ಷೇರುದಾರರಿಗೆ ಕಳಿಸಿದ್ದಾರಂತೆ. ಈ ಪತ್ರದ ಹಿಂದಿನ ತಲೆ ನಿನ್ನದು ಎಂದು ಬಂದೂಕವಾಲಾನ ಸಂಶಯ. ಈ ತನಿಖೆಯ ಹಗರಣ ನಿನ್ನ ಬಾಯಿ ಮುಚ್ಚಿಸುವ ದುಷ್ಟ ಉಪಾಯ. ಈಗ ನಿನ್ನ ಆ‌ಒ‌ಆ ಯವರು ಏಕಾ‌ಏಕಿ ಅಮೇರಿಕೆಗೆ ಹೊರಟುಹೋದದ್ದಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲವೆಂದು ತಿಳಿಯಬೇಡ. ಸಮಯ ಬಂದರೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ನಿನ್ನನ್ನು ಬಲಿಕೊಟ್ಟರೂ ಕೊಟ್ಟರೇ. ನನಗೊಬ್ಬನಿಗೇ ಗೊತ್ತಿದೆ ಯಾವ ವ್ಯಾಪಾರಿಗೆ ಕಳ್ಳಮಾಲನ್ನು ಮಾರಿದ್ದಾರೆ ಎನ್ನುವದು. ಹಾಗೆಂದೇ ನಮ್ಮ ಸೊಸೈಟಿಯಲ್ಲಿ ಮೂರು ಫ್ಲ್ಯಾಟ್ಸ್ ಬುಕ್ ಮಾಡಿದ್ದು; ಪ್ರತಿಯೊಂದಕ್ಕೆ ರೋಖು ಹಣ ೨೫,೦೦೦ ರೂಪಾಯಿ ನನ್ನ ಕೈಲಿ ಕೊಟ್ಟದ್ದು ; ಮುಂದೊಂದು ದಿನ ಕಂಪನಿಯ ಡೈರೆಕ್ಟರ್ ಮಾಡುವ ಭರವಸೆ ಕೊಟ್ಟದ್ದು….”

ವಾರಗಟ್ಟಲೆ, ತಿಂಗಳುಗಟ್ಟಲೆ, ವರ್ಷಗಟ್ಟಲೆ ಅನುಭವಿಸುತ್ತ ಬಂದದ್ದು ಐದು ಮಿನಿಟುಗಳ ಮಾತಿನಲ್ಲಿ ಹಿಡಿಯುವುದು ಶಕ್ಯವಾಗಿ ತೋರಲಿಲ್ಲ. ಶ್ರೀನಿವಾಸನಿಗೆ, ಮಾತನಾಡೋಣವೆಂದು ಬಾಯಿತೆರೆದರೆ ತುಟಿಗಳು ಥರಥರ ಅದುರುತ್ತಿದ್ದುವೆ ಹೊರತು ಶಬ್ದ ಹುಟ್ಟಿರಲಿಲ್ಲ. ಹಿಟ್ಟಿದ್ದು ಇನ್ನೊಬ್ಬನಿಗೆ ಅರ್ಥವಾಗಬಹುದಾದ ಭಾಷೆಗಿಂತ ಹೆಚ್ಚಾಗಿ ಒಂದು ಖಾಸಗೀ ಸಂಜ್ಞಾ ಕ್ರಮವನ್ನು ಹೋಲುವ ವಿಚಿತ್ರ ಸದ್ದಾಗಿ, ನರಳಿಕೆಯಾಗಿ ನಾಗಪ್ಪನ ಕಿವಿಗಳನ್ನು ಹೊಕ್ಕಾಗ, ನಾಗಪ್ಪ ನಿಂತಲ್ಲೇ ಬೆವರಿ ಸಣ್ಣಗೆ ನಡುಗಹತ್ತಿದ :ಅದೆಷ್ಟು ಹೊತ್ತು ನಿನ್ನ ಮಾತಿನ ಹಾದಿ ಕಾಯಲೋ ಬೋಳೀಮಗನೇ. ಬಾಯಿಬಿಡೋ,ಅದೇನು ಪೆಟ್ಟು ತಿಂದ ನಾಯಿಯ ಹಾಗೆ ಕುಂಯ್ಗುಡುತ್ತೀ :ಹುಟ್ಟಿದ ನಡುಕ ಬೆನ್ನ ಹಿಂದೆ ಕೂತವನ ? _ನಿಂತವನ ? ದೃಷ್ಟಿಗೆ ಬೀಳದೆ ಇರಲಿ ಎನ್ನುವಂತೆ ಕಿಡಕಿಯ ಕಟ್ಟಿಗೆಯ ಚೌಕಟ್ಟನ್ನು ಗಟ್ಟಿಯಾಗಿ ಅದುಮಿ ಹಿಡಿದ.ಬೆನ್ನ ಹಿಂದಿನವನ ನರಳಿಕೆಯ ಸದ್ದು ಹೆಚ್ಚುತ್ತ ಹೋದಹಾಗೆ, ಕಿಡಕಿಯ ಹತ್ತಿರ ನಿಲ್ಲುವದು ನಾಗಪ್ಪನಿಗೆ ಅಸಾಧ್ಯವಾಗಹತ್ತಿತು :ಹೊರಗಿನ ಪರಿಚಯದ ಪರಿಸರ ಕೂಡ ಎಂದಿನ ಗೆಳೆತನವನ್ನು ಬಿಟ್ಟುಕೊಟ್ಟು ಕೆಲ ಹೊತ್ತಿನ ಮೊದಲಷ್ಟೇ ಸಂಧಿಸಿದ ಮುದುಕಿಯ ಬೀಭತ್ಸವಾದ ದ್ವೇಷಪಂಥ ಕುರೂಪ ಮುಸುಕೆಳೆದುಕೊಳ್ಳುತ್ತಿದ್ದ ಭಾಸವಾಗಿ ಸರಕ್ಕನೆ ಹಿಂತಿರುಗಿದಾಗ ಅಪ್ರತಿಭನಾದ : ಮಂಚದ ಅಂಚಿನಲ್ಲಿ ಕೂತ ಶ್ರೀನಿವಾಸ ಕೆಲವೇ ಕ್ಷಣಗಳಲ್ಲಿ ತಾರುಣ್ಯವನ್ನು ಕಳೆದುಕೊಂಡು ಹಣ್ಣುಹಣ್ಣು ಮುದುಕನಾದವನ ಹಾಗೆ ತೋರುತ್ತಿದ್ದ ! ಎದ್ದು ನಿಲ್ಲುವ ತಾಕತ್ತೇ ಇಲ್ಲದವನ ಹಾಗೆ ತೂಗಾಡುತ್ತ ಮಂಚದಿಂದ ಎದ್ದ. ಮುದ್ದೆಯಾಗಿ ನಾಗಪ್ಪನ ಕಾಲ ಮೇಲೆ ಬಿದ್ದು : “ನನ್ನ ಬಗ್ಗೆ ಕಾದಂಬರಿ ಬರೀಬೇಡಾಽಽ,” ಎಂದ. “ಬೇಕಾದರೆ ಬೇಕಾದರೆ….” ಮುಂದಿನ ಮಾತುಗಳು ಕುರಿಯ ಹಾಗೆ ಬೇ ಬೇ ಬೇ ಎಂದು ಅಸಂಬದ್ಧವಾದ ಧ್ವನಿ ಎಬ್ಬಿಸಿದವು. ಆದರೆ ನಾಗಪ್ಪನಿಗೆ ಮಾತ್ರ _ ಸ್ವತಃ ಆಡಿದವನಿಗೇ ಅರ್ಥವಾಗಿರಲಾರದ_ಮಾತಿನ ಪ್ರತಿ ಶಬ್ದವೂ ಸ್ಪಷ್ಟವಾಗಿ,ಸ್ಪುಟವಾಗಿ ಕೇಳಿಸಿದಂತಾಗಿ ಶ್ರೀನಿವಾಸನ ಕೈಗಳಿಂದ ಕಾಲುಗಳನ್ನು ಬಿಡಿಸಿಕೊಂಡವನೇ ಕೋಣೆಯ ಕದಗಳನ್ನು ತೆರೆದು ಅಲ್ಲಿಂದ ಓಟ ಕಿತ್ತ.
uಟಿಜeಜಿiಟಿeಜ‌ಓಡುವ ರಭಸಕ್ಕೆ ಎರಡು ಸಾರೆ ಹೆಜ್ಜೆ ತಪ್ಪಿ ಮುಗ್ಗರಿಸಿ ಬೀಳುವಂತಾಯಿತು : ಓಟಕ್ಕೆ ಪ್ರೇರಣೆಯಾದದ್ದರಲ್ಲಿ ಭಯ ಹಾಗೂ ಜಿಗುಪ್ಸೆ ಒಂದು ಇನ್ನೊಂದರೊಡನೆ ಸ್ಪರ್ಧಿಸುವಂತಿದ್ದವು. ಇಲ್ಲಿಗೆ ಬಂದಾಗ ಕಳಚಿಟ್ಟ ಬೂಟುಗಳನ್ನು ಈಗ ಹಾಕಿಕೊಳ್ಳುವ ವ್ಯವಧಾನವೂ ಇಲ್ಲದವನ ಹಾಗೆ ಬರಿಗಾಲಲ್ಲೇ ಮನೆಯಿಂದ ಹೊರಬಿದ್ದ. ಭಡಭಡ ಜಿನ್ನೆಯ ಮೆಟ್ಟಿಲಿಳಿದು, ಅಂಗಳದಲ್ಲಿ ಕಾಲಿಟ್ಟವನೇ ಏನೋ ಭಯಾನಕವಾದದ್ದು ಬೆನ್ನಟ್ಟಿ ಬರುತ್ತಿದೆ ಎನ್ನುವ ಹಾಗೆ ಓಡುತ್ತಿದ್ದ ರೀತಿಗೆ ನೋಡಿದ ಜನ ಬೆಕ್ಕಸಬೆರಗಾದರು. ಆದರೆ ಇದಾವುದರ ಪರಿವೆಯೇ ಇಲ್ಲದವನ ಹಾಗೆ ನಾಗಪ್ಪ ಓಡುತ್ತಿದ್ದ. ಓಡೋಡಿ ಕೆಡಲ್ ರೋಡಿಗೆ ಬರುವಷ್ಟರಲ್ಲಿ ಕೂದಲು ಕೆದರಿಕೊಂಡಿದ್ದವು. ಮೈ ಧಾರಾಳವಾಗಿ ಬೆವೆತಿತ್ತು. ಕಲ್ಲು-ಮಣ್ಣುಗಳ ಮೇಲೆ ತಿಕ್ಕಿದ ಪಾದಗಳು ಉರಿಯತೊಡಗಿದ್ದವು. ಒಳ್ಳೇ ಬಿಸಿಲಿನ ಹೊತ್ತು ಹೊಟ್ಟೆ ಚೆನ್ನಾಗಿ ಹಸಿದಿತ್ತು ಎಂಬುದರ ನೆನಪು ಕೂಡ ಮಾಯವಾಗಿತ್ತು. ಟ್ಯಾಕ್ಸಿ ಹಿಡಿದು ಆದಷ್ಟು ಬೇಗ ಕೋಣೆ ಸೇರಬೇಕು ಎಂಬ ಒಂದೇ ಒಂದು ವಿಚಾರ ಮನಸ್ಸಿನಲ್ಲಿಯ ಉಳಿದೆಲ್ಲವನ್ನೂ ಮೆಟ್ಟಿ ನಿಂತಿದ್ದರೂ ರಸ್ತೆಗೆ ಬಂದದ್ದೇ ಧುತ್ ಎಂದು ಇದಿರಾದದ್ದು ಟ್ಯಾಕ್ಸಿಯೆಂದು ಗುರುತು ಹಿಡಿಯುವದೇ ಕಠಿಣವಾಯಿತು. ಇವನು ಓಡಿ ಬಂದ ರೀತಿಯನ್ನು ಕಂಡೇ ಏನೋ ವಿಶೇಷವನ್ನು ಊಹಿಸಿಕೊಂಡ ಟ್ಯಾಕ್ಸೀವಾಲಾನೇ_‘ಟ್ಯಾಕ್ಸೀ ಬೇಕೇನು, ಸಾಹೇಬ್ ?’ ಎಂದು ಕೇಳಿದಾಗ ಯಾಂತ್ರಿಕವಾಗಿ ಟ್ಯಾಕ್ಸಿಯನ್ನು ಸಮೀಪಿಸಿ, ಯಾಂತ್ರಿಕವಾಗಿಯೇ ಕದ ತೆರೆದು ಸೀಟಿನ ಮೇಲೆ ಮೈಚೆಲ್ಲಿ ಕಣ್ಣುಮುಚ್ಚಿದ : ತನಗೆ ತಿಳಿಯದ ಹಾಗೆ ಎಲ್ಲಾದರೂ ತೆರೆದುಕೊಂಡಾವೆಂಬ ಅಳುಕಿನಿಂದೆಂಬಂತೆ ಎರಡೂ ಕೈಗಳಿಂದ ಅವುಗಳನ್ನು ಗಟ್ಟಿಯಾಗಿ ಮುಚ್ಚಿ ಹಿಡಿದ. ಟ್ಯಾಕ್ಸಿಯವನು ಮೀಟರಿನ ಪತಾಕೆಯನ್ನು ಕೆಳಗೆ ಇಳಿಸುತ್ತ ‘ಎಲ್ಲಿಗೆ ಹೋಗುವದು, ಸಾಹೇಬ್ ?’ ಎಂದು ಕೇಳಿದಾಗ ‘ಖೇತವಾಡೀ_ಏಳನೇ ಗಲ್ಲಿ’ ಎನ್ನುವದೂ ಕಠಿಣವಾಯಿತು. ಶ್ರೀನಿವಾಸ ಬೇ ಬೇ ಬೇ ಎಂದು ಬೊಗಳಿದ ಮಾತುಗಳು ನೆನಪಿಗೆ ಬರಹತ್ತಿದವು : ಅವನು ಅಂದದ್ದಾದರೂ ಹೌದೆ ? ಅಥವಾ….ಇಲ್ಲ, ನಾಗಪ್ಪನಿಗೆ ಯಾವ ಸಂಶಯವೂ ಉಳಿಯಲಿಲ್ಲ. ಸರಿಯಾಗಿಯೇ ಕೇಳಿದ್ದೇನೆ ಎನ್ನುವದು ಮನದಟ್ಟಾಗುತ್ತಿದ್ದ ಹಾಗೇ ಹೊಟ್ಟೆ ತೊಳಸಿದಂತಾಗಿ ಟ್ಯಾಕ್ಸಿಯವನಿಗೆ ವಾಹನವನ್ನು ರಸ್ತೆಯ ಅಂಚಿಗೆ ತರುವಂತೆ ಹೇಳಿ ಅವನು ಹಾಗೆ ತರುವ ಪುರುಸೊತ್ತೂ ಇಲ್ಲದವನ ಹಾಗೆ ಕಿಟಕಿಯೊಳಗಿಂದ ತಲೆ ಹೊರಗೆ ಹಾಕಿ ಬಕಬಕ ಕಾರಿಕೊಂಡ. ಪುಣ್ಯಕ್ಕೆ ಆ ಹೊತ್ತಿಗೆ ವಾಹನಗಳ ಓಡಾಟ ಕಡಿಮೆಯಾಗಿದ್ದರಿಂದ ಟ್ಯಾಕ್ಸಿಯ ಎಡಮಗ್ಗುಲಲ್ಲಿ ಓಡುವ ಇನ್ನೊಂದು ವಾಹನ ಇರಲಿಲ್ಲ. ಬಸ್‌ಸ್ಟಾಪಿನಲ್ಲಿ ನಿಂತವರಲ್ಲಿ ಕೆಲವರು, ಕುಡುಕನಿರಬೇಕು ಎಂಬ ಸಂಶಯದಿಂದ ಕಣ್ಣುಕಿಸಿದು ನೋಡಿದರು. ಟ್ಯಾಕ್ಸೀ ಡ್ರೈವರನ ತಲೆಯಲ್ಲೂ ಅದೇ ಸಂಶಯ ! ಆದರೂ ಬಹಳ ಹೊತ್ತಿನ ತನಕ ಗಿರಾಕಿ ಸಿಗದೆ ಬೇಜಾರುಪಟ್ಟವನಿಗೆ ದೂರದ ಪ್ರಯಾಣದ ಗಿರಾಕಿಯೊಂದು ಸಿಕ್ಕಿದ್ದರಿಂದ ಏನೊಂದೂ ಕೇಳುವ ಧೈರ್ಯವಾಗದೇ ಅವನು ಹೇಳಿದಂತೆ ಜನರಿಲ್ಲದ ಜಾಗ ಬಂದೊಡನೆ ಟ್ಯಾಕ್ಸಿಯನ್ನು ಫುಟ್‌ಪಾಥಿನ ಅಂಚಿಗೆ ಒಯ್ದು ನಿಲ್ಲಿಸಿದ. ಅದೇ ಶಮನವಾಗಹತ್ತಿದ ಓಕರಿಕೆ ಹಾಗೆ ನಿಲ್ಲಿಸಿದ್ದೇ ತಡ, ನಿಲ್ಲಿಸಿದ್ದ ಕಾರಣದ ನೆನಪಿನಿಂದಲೇ ಇನ್ನೊಮ್ಮೆ ಕೆರಳಿ ಟ್ಯಾಕ್ಸಿಯ ಕದ ತೆರೆದು ಕುಳಿತಲ್ಲಿಂದಲೇ ಕಾರಿಕೊಂಡ. ಶ್ರೀನಿವಾಸನ ಮನೆಯ ಊಟದ ಪ್ರತೀಕ್ಷೆಯಿಂದಲೇ ಹಸಿದುಕೊಂಡ ಹೊಟ್ಟೆ ಅವನಲ್ಲಿ ತಿಂದ ಬಿಸ್ಕೂಟು ಆಂಬೋಡೆಗಳನ್ನು ಅರ್ಜುನ್‌ರಾವರ ಮನೆಯಲ್ಲಿ ತಿಂದದ್ದರಲ್ಲಿ ಅರಗದೇ ಉಳಿದ ಬಟಾಟೇ ಪೋವೇ, ಕುಡಿದದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚಾದ ಚಹದ ಬಣ್ಣದ ನೀರಿನಂತಹದನ್ನು_ಎಲ್ಲ ಎಲ್ಲವನ್ನೂ ಹೊರಗೆ ತಂದಿತು. ಟ್ಯಾಕ್ಸೀವಾಲಾನಿಗೆ ಈಗ ಸಂಶಯವೇ ಉಳಿಯಲಿಲ್ಲ. ಕಳ್ಳಸರಾಯಿಯನ್ನು ಎಂದೂ ಮುಟ್ಟಿರದ ಪೋಕ್ತನ ಹಾಗೆ_‘ಥತ್ ! ಸೂಳೇಮಗನೇ, ಇಷ್ಟು ಹೊತ್ತಿಗೇ ಲಕ್ಕಾಗಿ ಬಂದಿದ್ದೀಯಾ’ ಎಂದುಕೊಂಡು ಕಾಲಿಗೆ ಚಪ್ಪಲಿ ಕೂಡ ಹಾಕಿಕೊಳ್ಳದೇ ತೂಗಾಡುತ್ತ ಬಂದಾಗಿನ ನಾಗಪ್ಪನ ವೇಷವನ್ನು ನೆನೆದುಕೊಂಡು ಮೂಗುಮುಚ್ಚಿಕೊಂಡ. ನಾಗಪ್ಪ ಕದ ಮುಚ್ಚಿ, ಪ್ಯಾಂಟಿನ ಕಿಸೆಯೊಳಗಿಂದ ಕೈವಸ್ತ್ರವನ್ನು ಹೊರತೆಗೆದು ಬಾಯಿ-ಮೋರೆಗಳನ್ನು ಒರೆಸಿಕೊಳ್ಳುತ್ತ, ‘ಹೋಗೋಣ’ ಎಂದಾಗಿನ ಕ್ಷೀಣ ಧ್ವನಿ ತನಗಾದರೂ ಕೇಳಿಸಿತ್ತೇ ಎಂಬ ಸಂಶಯ ಬಂತು. ಮೂಗಿನ ಮೇಲಿನ ಕೈ ತೆಗೆಯದೇ ತನ್ನತ್ತ ನೋಡುತ್ತಿದ್ದ ಡ್ರೈವರನಿಗೆ ಹೊರಡುವಂತೆ ಸನ್ನೆಮಾಡಿದ.

ಟ್ಯಾಕ್ಸೀ ಸ್ಟಾರ್ಟ್ ಮಾಡುತ್ತ “ಮಾಲು ಒಳ್ಳೆಯದಿರಲಿಕ್ಕಿಲ್ಲ, ಸಾಹೇಬ್” ಎಂದ ಡ್ರೈವರನ ಉದ್ಧಟತನಕ್ಕೆ ಸಿಟ್ಟಿನ ಬದಲು ನಗು ಬರುವಂತಾದರೂ ಸದ್ಯ ಯಾವ ಭಾವನೆಯನ್ನೂ ವ್ಯಕ್ತಪಡಿಸುವ ತ್ರಾಣವೇ ಇಲ್ಲದವನ ಹಾಗೆ ಸೀಟಿನಮೇಲೆ ಆದಷ್ಟು ನಿಡಿದಾಗಿ ಮೈಚಾಚಿ ಕಣ್ಣುಮುಚ್ಚಿಕೊಂಡ : ಮುಚ್ಚಿಕೊಂಡಲ್ಲೇ ಮತ್ತೆ, ನಡೆದದ್ದೆಲ್ಲ ನೆನಪಿಗೆ ಬರಹತ್ತಿದ ಭಯವಾಗಿ ಎದ್ದು ನೆಟ್ಟಗೆ ಕುಳಿತ : ಯಾವುದನ್ನೂ ಕುರಿತು ವಿಚಾರಮಾಡುವ ಧೈರ್ಯವೇ ಇರಲಿಲ್ಲ. ವಿಚಾರಮಾಡಿದರೆ ಶ್ರೀನಿವಾಸ ಕಾದಂಬರಿ ಬರೆಯದಿರಲು ಒಡ್ಡಿದ ಆಮಿಷದ ನೆನಪಾಗಬಹುದು. ನೆನಪಾದರೆ ತಿರುಗಿ ಕಾರಿಕೊಂಡೇನು ಎಂಬ ಕಾತರದಿಂದ ಮುಂದಿನ ಸೀಟಿನ ಅಂಚನ್ನು ಗಟ್ಟಿಯಾಗಿ ಅದುಮಿ ಹಿಡಿದ. ಅವುಡುಗಚ್ಚಿದ. ಕಣ್ಣುಗಳನ್ನು ದೊಡ್ಡದು ಮಾಡಿ ನೋಡಿದ. ಮುಂದಿನ ಕನ್ನಡಿಯ ತುಂಡಿನಲ್ಲಿ ತನ್ನ ಚಟುವಟಿಕೆಗಳನ್ನು ಅವಲೋಕಿಸುತ್ತಿದ್ದ ಡ್ರೈವರನ ಕಣ್ಣುಗಳನ್ನು ತನ್ನವು ಸಂಧಿಸಿದೊಡನೆ ಮಂದವಾಗಿ ನಕ್ಕ. ಡ್ರೈವರನ ಮೋರೆಯ ಮೇಲೂ ನಗು ಮೂಡಿತು. “ಯಾವ ಊರು?” ಎಂದು ಕೇಳಿದಾಗ “ಮಂಗಳೂರಿನ ಕಡೆಯವನು,” ಎಂದು ಡ್ರೈವರನ ಉತ್ತರ ಬಂತು. “ಹೌದೆ? ಭಾಷೆ ಕೊಂಕಣಿಯೋ ಕನ್ನಡವೋ ?” ಎಂದು ಕೇಳಿದ್ದಕ್ಕೆ “ತುಳು. ಆದರೆ ಕೊಂಕಣಿ ಕನ್ನಡ ಎರಡೂ ಬರುತ್ತವೆ.” ಎಂದ. ನಾಗಪ್ಪ ತಾನು ಉತ್ತರ ಕನ್ನಡದವನೆಂದೂ, ಕನ್ನಡದಲ್ಲಿ ಲೇಖಕನೆಂದೂ ಪರಿಚಯ ಮಾಡಿಕೊಟ್ಟ. ಡ್ರೈವರನಿಗೆ ಕನ್ನಡ ಲೇಖಕರ ಹೆಸರುಗಳಾವುವೂ ಗೊತ್ತಿರಲಿಲ್ಲ. ಆದರೂ ಗೌರವದ ಭಾವನೆಯನ್ನು ಮೋರೆಯ ಮೇಲೆ ಬೆಳಗಿಸಿ ನೋಡುತ್ತಿದ್ದಾಗ ತಾನು ಆಗ ಕಾರಿಕೊಂಡದ್ದು ಸಾರಾಯಿಯಲ್ಲ ಎನ್ನುತ್ತಿರುವಾಗಲೇ ಡ್ರೈವರ್ ಸಂಕೋಚದ ಮುದ್ದೆಯಾಗಿ, ಕ್ಷಮೆ ಬೇಡುವ ದನಿಯಲ್ಲಿ_”ನನಗೆ ಈಗ ಗೊತ್ತಾಯಿತು ಸರ್, ಮರೆತುಬಿಡಿ,” ಎಂದ. ತಾನು ಕನ್ನಡದಲ್ಲಿ ಬರೆಯುತ್ತಿದ್ದದ್ದೇನು ಎನ್ನುವುದನ್ನು ಹೇಳಬೇಕೆನ್ನುವಷ್ಟರಲ್ಲಿ ಮತ್ತೆ ಕಾರಿಕೊಳ್ಳುವಂತಾಯಿತು. ಈ ಹೊತ್ತಿಗೆ ಹೊಟ್ಟೆಯಲ್ಲ ಖಾಲಿಯಾದ್ದರಿಂದ ಓಕರಿಕೆಯ ಸದ್ದೇ ದೊಡ್ಡದಾಯಿತು : ಆಹಾರದಲ್ಲಿ ಏನನ್ನಾದರೂ ಬೆರೆಸಿದರೋ ಏನೋ ಎನ್ನುವಂತಹ ಅನುಮಾನ ಪ್ರಕಟಿಸಿದ ಡ್ರೈವರನಿಗೆ ಆದದ್ದಾದರೂ ಏನು ಎಂದು ಹೇಳೋಣವೆಂದರೆ ತುಟಿಗಳು ನಡುಗಹತ್ತಿದವು. ಆದರೆ ಕೆಲ ಸಮಯದ ನಂತರ, ‘ಓಕರಿಕೆಗೆ ಕಾರಣವಾದದ್ದು ಸತ್ಯದ ಅಜೀರ್ಣ’ ಎನ್ನಬೇಕೆಂದೆನಿಸಿತು. ಟ್ಯಾಕ್ಸಿಯವನಿಗೆ ಅರ್ಥವಾಗಲಿಕ್ಕಿಲ್ಲ ಎಂದು ಸುಮ್ಮನಾದ. ಆದರೆ ಅಜೀರ್ಣದ ನೆನಪಿನಿಂದ ನೆನಪಿಗೆ ಬಂದದ್ದು ಇನ್ನೊಮ್ಮೆ ಟ್ಯಾಕ್ಸಿಯನ್ನು ರಸ್ತೆಯ ಬದಿಗೆಳೆಯುವಂತೆ ಕೇಳಿಕೊಳ್ಳಲು ಕಾರಣವಾಯಿತು : ನಿಲ್ಲಿಸಲು ಹೇಳಿದ ಜಾಗದ ಸಮೀಪ ಪೋಲೀಸ್ ಕಾನ್ಸ್ಟೇಬಲ್ ನಿಂತದ್ದರಿಂದ ಯಾವ ಲಫಡಾದಲ್ಲೂ ಸಿಕ್ಕಿಕೊಳ್ಳುವ ಧೈರ್ಯವಿಲ್ಲದ ಟ್ಯಾಕ್ಸೀವಾಲಾ ತುಸು ಮುಂದೆ ಹೋಗಿ ವಾಹನ ನಿಲ್ಲಿಸಿದ. ಒಳಗಿನದೇನೂ ಹೊರಗೆ ಬರದಿದ್ದರೂ ಓಕರಿಕೆಯ ಒತ್ತಡಕ್ಕೆ ಹೊಟ್ಟೆ ನೋಯಹತ್ತಿತು : ಗಂಟಲು ಉರಿಯಹತ್ತಿತು : ಡಾಕ್ಟರ ಕಡೆಯಿಂದ ಚಿಟಿಣi-sಠಿಚಿsmoಜiಛಿ ಇಂಜೆಕ್ಷನ್ ಆಗಲಿ ಗುಳಿಗೆಯಾಗಲೀ ತೆಗೆದುಕೊಂಡರೆ ಹೇಗೆ ಎಂಬ ವಿಚಾರ ಬಂದು ಕೈಗಡಿಯಾರ ನೋಡಿಕೊಂಡ_ಒಂದೂವರೆ ಗಂಟೆ ! ಇಷ್ಟು ಹೊತ್ತಿಗೆ ಆಗಲೇ ಊಟ ಮುಗಿಸಿ ಗಡದ್ದಾಗಿ ನಿದ್ದೆ ಮಾಡಬಹುದಾಗಿತ್ತು ಎಂಬ ವಿಚಾರದ ಹಿಂದೆಯೇ ಊಟ ತಪ್ಪಿದ್ದರ ಕಾರಣ ನೆನಪಿಗೆ…..ಬರಲು ತಡವಾಗಲಿಲ್ಲ. ಈ ಸರತಿ ಟ್ಯಾಕ್ಸಿಯನ್ನು ನಿಲ್ಲಿಸೆಂದು ಹೇಳುವ ಪುರುಸೊತ್ತೂ ಇರಲಿಲ್ಲ. ಅಬ್ಬಾ! ಹೊಟ್ಟೆಯಲ್ಲಿ ಇಷ್ಟೊಂದು ನೀರು ಹೇಗೋ….ಟ್ಯಾಕ್ಸಿಯವನು ವಾಹನವನ್ನು ತಿರುಗಿ ಬದಿಗೆಳೆದ. ಇವನ ಅವಸ್ಥೆ ಈಗ ನಿಜಕ್ಕೂ ಚಿಂತೆಗೆ ಕಾರಣವಾಯಿತು. ಕನ್ನಡ ನಾಡಿನವನೆಂದು ಈಗ ಗೊತ್ತಾದ್ದರಿಂದ ಹುಟ್ಟಿದ ಒಂದು ಬಗೆಯ ಆತ್ಮೀಯತೆಯೂ ಈಗ ಈ ಚಿಂತೆಗೆ ಇನ್ನಷ್ಟು ಪುಟಕೊಟ್ಟಿತು.
“ಸರ್… ನೀವು ತಪ್ಪು ತಿಳಿಯದಿದ್ದರೆ…. ಇಲ್ಲೇ ವರ್ಲೀ ನಾಕಾದಲ್ಲಿ ಡಾ. ಶೆಟ್ಟಿ ಅಂತ ಇದ್ದಾರೆ. ದವಾಖಾನೆಯ ಮೇಲ್ಗಡೆಯಲ್ಲೇ ಮನೆ. ನಮ್ಮ ಕಡೆಯವರೇ….”
ಟ್ಯಾಕ್ಸಿಯವನ ಸೂಚನೆಗೆ ಸನ್ನೆಯಿಂದಲೇ ಒಪ್ಪಿಗೆ ವ್ಯಕ್ತಪಡಿಸಿದ : ಮಾತನಾಡುವ, ಸರಿಯಾಗಿ ಕೂಡ್ರುವ ತಾಕತ್ತೂ ಇಲ್ಲದೇ ಸೀಟಿನಲ್ಲಿ ಮೈಮುದುಡಿ ಬಿದ್ದುಕೊಂಡ. ಹೊಟ್ಟೆಯಲ್ಲಿ ಒಂದು ಬಗೆಯ ನಡುಕ-ಚಳಿ ಹತ್ತಿದ ರೀತಿ !
ಡಾ. ಶೆಟ್ಟಿಯವರು ಇನ್ನೂ ದವಾಖಾನೆಯಲ್ಲೇ ಇದ್ದರು. ದವಾಖಾನೆ ರಸ್ತೆಯ ಬಲದ ಅಂಚಿನಲ್ಲಿತ್ತು. ಡ್ರೈವರ್ ಮುಂದಿನ ಕೂಟಸ್ಥಾನಕ್ಕೆಹೋಗಿ ಯೂ-ಟರ್ನ್ ಮಾಡಿ ರಸ್ತೆಯ ಇನ್ನೊಂದು ಅಂಚಿಗೆ ಬಂದು ವಾಹನವನ್ನು ಸರಿಯಾಗಿ ದವಾಖಾನೆಯ ಇದಿರಿಗೇ ನಿಲ್ಲಿಸಿದ. ತಾನೇ ಮೊದಲು ಇಳಿದು ಓಡೋಡಿ ಹೋಗಿ ಡಾಕ್ಟರರನ್ನು ಕಂಡು ವರದಿ ಕೊಟ್ಟು ಬಂದ. ಡಾಕ್ಟರರ ಮೋರೆ ಕಂಡದ್ದೇ ತ್ರಾಣ ಬಂದವನ ಹಾಗೆ ಟ್ಯಾಕ್ಸಿಯಿಂದ ಇಳಿದು ದವಾಖಾನೆಯತ್ತ ನಡೆಯಹತ್ತಿದ. ಫುಟ್‌ಪಾಥಿನ ಮೇಲೆ ಒಮ್ಮೆ ಜೋಲಿ ತಪ್ಪಿ ಮುಗ್ಗರಿಸಿ ಬೀಳುವಂತಾಯಿತು. ಅಷ್ಟೇ ಡಾಕ್ಟರರ ಹೆಸರೇ ಅವರು ಕನ್ನಡದವರೆಂದು ಸಾರುತ್ತಿತ್ತು. ಟ್ಯಾಕ್ಸೀವಾಲಾ ಕೂಡಾ ಹಾಗೇ ಹೇಳಿದ್ದ.
“ನನಗೇನೂ ಆಗಿಲ್ಲ, ಡಾಕ್ಟರರೇ. Psಥಿಛಿhosomಚಿಣiಛಿ ಕಂಪ್ಲೇಂಟು. ಹೇಳಲಿಕ್ಕೆ ಹೋದರೆ ಮತ್ತೆಲ್ಲಿ ವಾಂತಿಯಾದೀತೆಂಬ ಭಯ ; ಮಾತು ಮಾಡಬಹುದಾದದ್ದನ್ನು ಹೊಟ್ಟೆಯೇ ಮಾಡಲಿಕ್ಕೆ ಹತ್ತಿದೆಯೆಂದು ತೋರುತ್ತದೆ. ಏನಾದರೂ ಏಂಟೀ-ಸ್ಟೆಸ್ಮಾಡಿಕ್…”
“ಓಹೋಹೋ !….ಮಾತು ಆರಂಭಿಸಿದಾಗ ಸೈಕಾಲಾಜಿಯ ವಿದ್ಯಾರ್ಥಿ ಎಂದುಕೊಂಡಿದ್ದೆ. ವೈದ್ಯಕೀಯದಲ್ಲಿಯೂ….?” ಡಾಕ್ಟರರು ನಗುತ್ತ ಪ್ರಶ್ನೆ ಪೂರ್ಣಗೊಳಿಸುವ ಮೊದಲೇ ಅವನ ನಾಲಗೆ, ಹೊಟ್ಟೆ, ನಾಡಿಗಳ ಪರೀಕ್ಷೆ ನಡೆಸಿದಾಗ, ಟ್ಯಾಕ್ಸೀವಾಲಾ_”ಕನ್ನಡದಲ್ಲಿ ದೊಡ್ಡ ಲೇಖಕರೂ ಅಂತೆ. ಡಾಕ್ಟರರೇ,” ಎಂಬ ಮಾತು ಜೋಡಿಸಿದ. ಡಾಕ್ಟರರು ಇಂಜೆಕ್ಷನ್ ಕೊಡುವ ತಯಾರಿ ಮಾಡುತ್ತ ತುಂಬ ಅಭಿಮಾನದಿಂದ_”ಹೌದೆ ? ಏನು ಬರೆಯುತ್ತೀರೋ ?” ನಾಗಪ್ಪನಿಗೆ ಮತ್ತೆ ಓಕರಿಕೆ ಬರುತ್ತಿದ್ದುದನ್ನು ನೋಡಿ ಕಂಪೌಂಡರ್ ಎಲ್ಯೂಮಿನಿಯಮ್ ಬಟ್ಟಲು ತಂದ. ಡಾಕ್ಟರ್ ಹೆಚ್ಚು ಮಾತನಾಡಿಸಲು ಹೋಗದೇ ಇಂಜೆಕ್ಷನ್ ಚುಚ್ಚಿದರು. ಕೆಲವು ಗುಳಿಗೆಗಳನ್ನು ಕೊಟ್ಟು-“ಮನೆಗೆ ಹೋಗಿ ಸ್ವಸ್ಥ ನಿದ್ದೆಮಾಡಿರಿ. ಇನ್ನೂ ತೊಂದರೆಯಾದರೆ ಸಂಜೆ ಬಂದು ಕಾಣಿರಿ,” ಎಂದು ಬೀಳ್ಕೊಟ್ಟರು.

ಇಂಜೆಕ್ಷನ್ನಿನ ಪರಿಣಾಮ ಆಗಹತ್ತಿದಂತೆ ಹೊಟ್ಟೆಯ ಜೊತೆಗೆ ಕಣ್ಣಿಗೂ ನಿದ್ದೆ ಬರುತ್ತಿದ್ದಂತೆ ತೋರಿತು. ಖೇತವಾಡಿಯ ೭ನೇ ಗಲ್ಲಿಗೆ ಬಂದ ನಂತರವೇ ತನಗೆ ಹತ್ತಿದ ಜೋಂಪಿನಿಂದ ಎಚ್ಚೆತ್ತ. ಖೇಮರಾಜಭವನಕ್ಕೆ ಬಂದು, ಟ್ಯಾಕ್ಸಿಯವನನ್ನು ಆಭಾರ ಮನ್ನಿಸಿ ಬೀಳ್ಕೊಟ್ಟು, ನಿಚ್ಚಣಿಕೆಯ ಮೆಟ್ಟಿಲುಗಳನ್ನೇರಿ ಮೂರನೇ ಮಜಲೆಯ ಕಡೆಗೆ ಹೋಗುತ್ತಿದ್ದದ್ದು ನೆನಪಿದೆ. ಆದರೆ ಆ ಮುಂದಿನದೆಲ್ಲ ಎಂದೋ ಕಂಡ ಕನಸಿನ ಛಾಯೆಯೆಂದು : ಅಷ್ಟೊಂದು ನಿತ್ರಾಣನಾಗಿದ್ದರೂ ಹಿಂದೆ ಯಾವುದೋ ವಿಚಿತ್ರ ಗಳಿಗೆಯಲ್ಲಿ ಎಣಿಸಿನೋಡಿದಂತಹ ೩೯ ಪಾವಟಿಗೆಗಳನ್ನು ಹೇಗೆ ಹತ್ತಿ ಹೋದೆ ? ಬೂಟು-ಚಪ್ಪಲಿಗಳಿಲ್ಲದೇನೇ ರೂಮಿನತ್ತ ಹೆಜ್ಜೆ ಇಡುತ್ತಿದ್ದಾಗ ಯಾರಾದರೂ ನೋಡಿದರೇ ? ತನ್ನ ವೇಷಭೂಷಣಗಳನ್ನು ನೋಡಿ ಆಶ್ಚರ್ಯಪಟ್ಟರೇ ? ಕೋಣೆಯ ಬೀಗ ತೆರೆದದ್ದು, ಹಾಸಿಗೆ ಸೇರಿದ್ದು ಈ ಯಾವ ವಿವರಗಳ ನೆನಪೂ ಇಲ್ಲ : ಗಾಢ ನಿದ್ದೆಯಿಂದ ಎಚ್ಚರಗೊಂಡವನ ಹಾಗೆ ಹಾಸಿಗೆಯಲ್ಲಿ ಎದ್ದು ಕುಳಿತು ಗಡಿಯಾರ ನೋಡಿಕೊಂಡಾಗ ಸಂಜೆಯ ಐದು ಗಂಟೆ! ಗಂಟೆ ನೋಡಿಕೊಂಡದ್ದೇ ತಟ್ಟನೆ ಅರಿವನ್ನು ತಟ್ಟಿದ ಸಂಗತಿ : ಹೊಟ್ಟೆ ಹಸಿದಿದೆಯೆಂಬುದು, ಹಾಸಿಗೆಯಿಂದ ಎದ್ದಾಗ ಕಾಲುಗಳು ಗಡಗಡ ನಡುಗಿದವು. ನಾಗಂದಿಗೆಯ ಮೇಲಿಂದ ಡಬ್ಬಿಯೊಂದನ್ನು ಪ್ರಯಾಸಪಟ್ಟು ಕೆಳಗಿಳಿಸಿ ಮುಚ್ಚಳ ತೆರೆದರೆ ಎಂದೋ ತಂದಿರಿಸಿದ ಪ್ರಿಟಾನಿಯಾ ಬಿಸ್ಕೀಟುಗಳಲ್ಲಿ ಮೂರು ಹೇಗೋ ತಪ್ಪಿ ಉಳಿದಿದ್ದವು. ಮೂರನ್ನೂ ಹಪಾಪಿಯಂತೆ ಒಂದೇ ಕ್ಷಣದಲ್ಲಿ ಫಸ್ತುಮಾಡಿದ. ಹಣ್ಣುಗಳನ್ನಿಡುತ್ತಿದ್ದ ಸರಿಗೆಯ ತೂಗು-ಬುಟ್ಟಿಯಲ್ಲಿ ನೋಡಿದರೆ ಒಂದೇ ಒಂದು ಬಾಳೆಹಣ್ಣು ಇತ್ತು. ತೆಗೆದು ತಿಂದ. ಮಣ್ಣಿನ ಹೂಜೆಯಲ್ಲಿ ನೀರು ತುಂಬಲು ಮರೆತದ್ದರಿಂದ ನೇರವಾಗಿ ನಲ್ಲಿಯಿಂದ ನೀರನ್ನು ಗ್ಲಾಸಿನಲ್ಲಿ ತುಂಬಿ ಕುಡಿದ. ತುಸು ಸಮಾಧಾನವೆನಿಸಿತು. ಇನ್ನೂ ಕೆಲಹೊತ್ತಿನ ಮೇಲೆ ಕೆಳಗಿನ ಉಡುಪೀ ರೆಸ್ಟೋರೆಂಟಿಗೆ ಹೋಗಿ ಏನಾದರೂ ತಿಂದು ಚಹ ಕುಡಿದು ಬಂದರಾಯಿತು ಎಂದುಕೊಂಡು ಒಂದು ಬಗೆಯ ಆಲಸ್ಯದಿಂದೆಂಬಂತೆ ತಿರುಗಿ ಹಾಸಿಗೆಗೆ ಮೈ ಚಾಚಿದ್ದೇ ತಡ. ಈ ಒಂದು ಕ್ಷಣಕ್ಕಾಗಿಯೇ ಕಾದು ನಿಂತಂತಿದ್ದ ಅರಿವೊಂದು ಮೂಡಿಬಂದ ರಭಸಕ್ಕೆ ನಾಗಪ್ಪ ತತ್ತರಿಸಿ ಬೆವರಹತ್ತಿದ : ಈ ಬೋಳೀಮಗ ಶ್ರೀನಿವಾಸ_ನಾಡೂ ಮಾಸ್ಕೇರಿಯ ಪದ್ಮನಾಭ ನಾರಾಯಣ ಕೇಣಿ ಅವರ ತೊಡೆಗಳ ನಡುವೆ ಜೋತಾಡುತ್ತಿದ್ದುದರ ತೆವಲಿಗೆ ನಿರುದ್ದಿಶ್ಯನಾಗಿ ಹುಟ್ಟಿದ ಹಡಬಿಟ್ಟೀ ಶ್ರೀನಿವಾಸ_ಈಗ ಕೆಂಪು ಸೀರೆ ಸುತ್ತಿಕೊಂಡ ನಿರ್ಜೀವ ಮುದ್ದೆಯಾಗಿಯೂ ಒಂದು ಕಾಲಕ್ಕೆ ಜಿದ್ದಿನ ಪ್ರತಿರೂಪವಾದ ಪದ್ದಕ್ಕನ ಮಗನಾಗಿ ಶೋಭಿಸುವ ಛಲದ ಶ್ರೀನಿವಾಸ_ತಾನೆಂದೂ ಬಡತನವನ್ನು ನೋಡಿಯೇ ಇರಲಿಲ್ಲ ಎಂಬಂತೆ ಈಗ ಬದುಕುತ್ತ ಆಗಿನದೆಲ್ಲವನ್ನೂ ಮರೆಯಲು ಹೋರಾಟ ನಡೆಸಿದ ಶ್ರೀನಿವಾಸ_ಅಪ್ಪನ ಶ್ರಾದ್ದಕ್ಕೆ ಕೂತಾಗ, ಅಪ್ಪನಿಗೆ ರಾತ್ರೆ ನಿದ್ದೆ ಬೀಳದ ಬೇಸರಕ್ಕೆ ಹುಟ್ಟಿದ ಮಕ್ಕಳಲ್ಲವೇ ನಾವು ?_ಎಂದು ಪುರೋಹಿತರ ಜತೆ ಮಾತನಾಡಿದ ಹಲ್ಕಟ್‌ಬಾಯ ಶ್ರೀನಿವಾಸ_ತನ್ನದರ ಪ್ರತಾಪ ಪರೀಕ್ಷಿಸಲು ನೇತ್ರಾವತಿಯನ್ನು ಬಲಿಕೊಟ್ಟ ಶ್ರೀನಿವಾಸ_ಶ್ರೀಮಂತಿಕೆಯ ನಿಚ್ಚಣಿಕೆಯನ್ನೇರಲೆಂದೇ ಕೌಮಾರ್ಯ ಕಳಕೊಂಡವಳನ್ನು ಮದುವೆಯಾಗಿಯೂ ಹೀರೋ ಆಗಿ ಮೆರೆದ ಶ್ರೀನಿವಾಸ_ಫಿರೋಜನೊಡನೆ ಕೂಡಿ ಪಿತೂರಿ ಮಾಡುತ್ತಿರುವ ಶ್ರೀನಿವಾಸ_ನನ್ನನ್ನು ಶಿಕಾರಿಯಾಡುತ್ತಿರುವ ಶ್ರೀನಿವಾಸ_ಸಾರಸ್ವತ ಸಮಾಜದ ಒಬ್ಬ ಗಣ್ಯವ್ಯಕ್ತಿಯಾಗಲು ಹೊರಟ ಶ್ರೀನಿವಾಸ_ರಾತೋರಾತ್ ತನ್ನ ಹಿಂದಿನದೆಲ್ಲವನ್ನೂ ಮರೆಯಲು ಹೊರಟ ಶ್ರೀನಿವಾಸ_ಮರೆಸಲು ಹೊರಟ ಶ್ರೀನಿವಾಸ_ತನ್ನ ಬಗ್ಗೆ ಕಾದಂಬರಿ ಬರೀಬೇಡಾ ಎಂದ ಶ್ರೀನಿವಾಸ_ಕಾಲು ಹಿಡಿದ ಶ್ರೀನಿವಾಸ_ಬೇಕಾದ್ದನ್ನು ಕೇಳು ಎಂದ ಶ್ರೀನಿವಾಸ_ಬೇಕಾದರೆ ಹಣ_ಬೇಕಾದರೆ ಶಾರದೆ…

ನಾಗಪ್ಪನಿಗೆ ಹಾಸಿಗೆಯಲ್ಲಿ ಬಿದ್ದದ್ದೇ ಮತ್ತೆ ವಾಂತಿಯಾಗುವ ಭಯವಾಗಿ ಮೋರಿಗೆ ಓಡಿದ.uಟಿಜeಜಿiಟಿeಜ- ಅಧ್ಯಾಯ ಮೂವತ್ತೆರಡು –

ನಾಗಪ್ಪನಿಗೆ ತಾನು ಎಚ್ಚರಗೊಂಡದ್ದು ನಿದ್ದೆಯಿಂದಲೋ ಮೂರ್ಛೆಯಿಂದಲೋ ಎಂಬುದು ಥಟ್ಟನೆ ತಿಳಿಯಲಿಲ್ಲ. ಹಾಸಿಗೆಯಿಂದ ಎದ್ದು ಕುರ್ಚಿಯಲ್ಲಿ ಕೂತಾಗ ಯೋಚಿಸುವ, ನೆನಸುವ, ಧೇನಿಸುವ ಸಾಮರ್ಥ್ಯವನ್ನೇ ಕಳಕೊಂಡಂತೆ ಮನಸ್ಸು ಸುನ್ನವಾಗಿತ್ತು. ಕೈಕಾಲುಗಳೆಲ್ಲ, ತಿಂಗಳುಗಟ್ಟಲೆ ಬೇನೆ ಬಿದ್ದವನ ಹಾಗೆ, ನಿತ್ರಾಣವಾಗಿದ್ದವು ಕೋಣೆಯೊಳಗಿನ ಬೆಳಕನ್ನು ನೋಡಿ ಹೊತ್ತು ಎಷ್ಟಾಗಿದೆಯೆಂದು ಗೊತ್ತುಹಿಡಿಯುವುದು ಕೂಡ ಕಷ್ಟಕರವಾಯಿತು. ಕೈಗಡಿಯಾರ ನೋಡಿಕೊಳ್ಳೋಣವೆಂದರೆ ಅದರ ಮೋರೆಯೇ ಸರಿಯಾಗಿ ಕಾಣದಾಯಿತು. ಹೊತ್ತು ಹೋದ ಹಾಗೆ ಮೆಲ್ಲನೆ ನೆನಪಿಗೆ ಬರಹತ್ತಿತು : ಹಾಸಿಗೆಯ ಮೇಲೆ ಅಡ್ಡವಾಗುವ ಮೊದಲಷ್ಟೇ ಡಾಕ್ಟರರು ಕೊಟ್ಟ ಗುಳಿಗೆಗಳಲ್ಲೊಂದನ್ನು ನುಂಗಿದ್ದು. ಅದರಲ್ಲಿ ಗುಂಗಿಯ ಔಷಧಿಯೂ ಇದೆಯೆಂದೂ ತೋರುತ್ತದೆ. ಹೇವರಿಸುವ ಹೊಟ್ಟೆಯೊಂದಿಗೆ ವಿಚಾರ-ಶಕ್ತಿಯ ಮೇಲೂ ಪರಿಣಾಮ ಮಾಡಿರಬೇಕು. ಯಾವುದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವ ಶಕ್ತಿಯೇ ಒಸರಿಹೋದಂತೆ ತೋರಿತು. ಡಾಕ್ಟರರ ಗುಳಿಗೆಯ ನೆನಪಿನಿಂದ ಅದಕ್ಕೆ ಕಾರಣವಾದ ಓಕರಿಕೆ, ಅದಕ್ಕೆ ಕಾರಣವಾದ_ಶತಸಹಸ್ರ ಬೈಗುಳಗಳನ್ನು ತಿಂದ_ಶ್ರೀನಿವಾಸ, ಅವನಾಡಿದ ಮಾತುಗಳು, ಎಲ್ಲವೂ ನೆನಪನ್ನು ತಟ್ಟಿಹೋದರೂ ದೇಹವಾಗಲೀ ಮನಸ್ಸಾಗಲೀ ಯಾವುದೇ ರೀತಿಯಿಂದ ಪ್ರತೀಕಾರ ತೋರಿಸಲಿಲ್ಲ. ಇನ್ನೂ ಕೆಲ ಹೊತ್ತಿನ ಮೇಲೆ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿಂತ ಅನ್ನಿಸಿಕೆಯೊಂದೇ : ಹೊಟ್ಟೆ ಅತೀವ ಹಸಿದಿದೆ_ರೆಸ್ಟೋರೆಂಟಿಗೆ ಹೋಗಿ ಏನಾದರೂ ತಿಂದು ಬರಬೇಕು….

ಈ ನಿರ್ಧಾರದಿಂದಲೇ ಬುದ್ದಿ ಚುರುಕುಗೊಂಡಿತೆಂಬಂತೆ ತಕ್ಷಣ ಕುರ್ಚಿಯಿಂದ ಎದ್ದ. ಈ ನಿರ್ಧಾರ ಬದಲಿಸುವ ಮೊದಲೇ ಕೋಣೆಯ ಹೊರಗೆ ಬೀಳಬೇಕು ಎಂಬ ತರಾತುರಿಯಿಂದೆಂಬಂತೆ ಭರಭರ ಮೋರೆ ತೊಳೆದುಕೊಂಡು_ಡ್ರೆಸ್ಸು ಬದಲಿಸಿ ಕಾಲಲ್ಲಿ ಚಪ್ಪಲಿಗಳನ್ನು ಮೆಟ್ಟಿದ. ಕದ ಮುಚ್ಚಿ ಬೀಗ ಹಾಕಿದ. ಅವಸರ ಅವಸರವಾಗಿ ಜಿನ್ನೆ ಇಳಿಸು ರಸ್ತೆಗೆ ಬಂದ. ಇಷ್ಟು ಕೂಡ ದೊಡ್ಡ ಪ್ರಯಾಸದ ಕೆಲಸವಾಗಿತ್ತೆಂಬಂತೆ ಕಾಲರಿನ ಅಡಿಯ ಕೊರಳ ಭಾಗ ಬೆವೆತಿತು. ವಿಚಾರಮಾಡುವ ಮೊದಲೇ ೬ನೇ ಗಲ್ಲಿಗೆ ಹೊರಳಿದ. ಗಲ್ಲಿಯ ಕೊನೆಯಲ್ಲಿ ಸೂರ್‍ಯಾಸ್ತದ ಕಿರಣಗಳು ಮೂಡಿಸಿದ ಅರಿಶಿಣ ಬಣ್ಣದ ಬೆಳಕಿನ ಕಲೆ ಗಡಿಯಾರ ನೋಡಿಕೊಳ್ಳುವಂತೆ ಮಾಡಿತು_ಆರೂವರೆಯಾಗಿತ್ತು. ಖೇತವಾಡೀ ಮೇನ್ ರೋಡ್ ಸೇರಿ ಪ್ರಾರ್ಥನಾ ಸಮಾಜದ ಕಡೆಗೆ ಹೊರಳಿದವನ ಹೆಜ್ಜೆಗಳು ನೇರವಾಗಿ_ವಿಧಿಯ ಕೈವಾಡದಿಂದೆಂಬಂತೆ_ಎಲ್ಲ ಬಿಟ್ಟು ಸಂತೋಷಭವನದ ಕಡೆಗೇ ಬೀಳುತ್ತಿದ್ದರೂ ನಡಿಗೆಯ ದಿಕ್ಕನ್ನು ಬದಲಿಸುವ ಗಟ್ಟಿತನ ಮನಸ್ಸಿಗೆ ಇಲ್ಲವೇ ಇಲ್ಲ ಎಂಬಂತಾಗಿತ್ತು. ಅದೂ ಸಾಲದೆಂಬಂತೆ, ಬೆನ್-ಹ್ಯಾಮ್-ಹಾಲ್-ಲೇನ್ ಸೇರುವಷ್ಟರಲ್ಲಿ ಸುತ್ತಲಿನ ವಾತಾವರಣದಲ್ಲಿ ಒಂದು ಬಗೆಯ ಅಳುಬುರುಕುತನ ಸೇರಿಕೊಂಡ್ಡುಬಿಟ್ಟಿದೆ ಅನ್ನಿಸಿ ನಾಗಪ್ಪನ ಮನಸ್ಸಿಗೂ ಅರ್ಥವಾಗದ ಹಳಹಳಿ ಮುತ್ತಿಕೊಂಡಿತು : ‘ಸಂತೋಷಭವ’ಕ್ಕೆ ಬಂದು ತನ್ನ ಎಂದಿನ ಕೋಣೆಯನ್ನು ಹೊಕ್ಕದ್ದೇ ಕಣ್ಣ ಮುಂದೆ ಧುತ್ ಎಂದು ಹಾಜರಾದ ಮಾಣಿಗೆ ಮೊತ್ತಮೊದಲು ಇತ್ತ ಆದೇಶವೆಂದರೆ ಕೋಣೆಯ ಹಿತ್ತಲ ಬದಿಯ ಕಿಡಕಿಯ ದಡಿಯ ಮೇಲಿರಿಸಿದ ಅಗರಬತ್ತಿಯನ್ನು ತೆಗೆಯಲು ಕೇಳಿಕೊಂಡದ್ದು_ತನ್ನ ಮನಸ್ಸಿನ ಹಳಹಳಿಗೆ, ವಾತಾವರಣದಲ್ಲಿಯ ಅಳುಬುರುಕುತನಕ್ಕೆ ಅವುಗಳೇ ಮೂಲವಾಗಿದ್ದವು ಎನ್ನುವಂತೆ !ರಾಯರ ಈ ಆದೇಶ ವಿಚಿತ್ರವಾಗಿ ಕಂಡಿತಾದರೂ ರಾಯರ ಬಗ್ಗೆ ತುಂಬ ಗೌರವ ಇಟ್ಟುಕೊಂಡ ಮಾಣಿ ಕೂಡಲೇ ಹೇಳಿದ ಹಾಗೇ ಮಾಡಿ ತಿರುಗಿ ಹಾಜರಾದೊಡನೆ_”ಹೇಳಿ, ಏನು ತರಲಿ ? ಉತ್ತಪ್ಪ, ವಡೆ ಹಾಗೂ ಉಷ್ಮಾ ?” ನಾಗಪ್ಪ ಮುಗುಳುನಗುತ್ತ _ “ಸೈ” ಎಂದ. “ಉಷ್ಮಾ ಮೊದಲು ತಾ_ಉತ್ತಪ್ಪ, ವಡೆ ಕಾಫಿಯ ಜೊತೆಗೆ, ಅದಕ್ಕೂ ಮೊದಲು ತಾಜಾ ಲಿಂಬೇ ಹಣ್ಣು ಸೋಡಾ ಹಾಕಿ ಶರ್ಬತ್ : ಹೊಟ್ಟೆ ಸರಿಯಿಲ್ಲ,” ಎಂದ. “ರಾಯರ ಮೋರೆ ನೋಡಿದಾಗಲೇ ಅನ್ನಿಸಿತ್ತು.” ಎನ್ನುತ್ತ ರಾಯರಿತ್ತ ಆಜ್ಞೆ ಪಾಲಿಸಲು ಅಲ್ಲಿಂದ ಹೆಜ್ಜೆ ಕಿತ್ತ.

ಕೆಲ ಹೊತ್ತಿನ ಮೇಲೆ ಮಾಣಿ, ಆ ವಾರದ ಪ್ರಜಾಮತ, ನಿನ್ನೆಯ ದಿನಾಂಕದ ಸಂಯುಕ್ತ ಕರ್ನಾಟಕ ಇವುಗಳ ಜತೆಗೆ ಶರ್ಬತ್ತಿನ ಗ್ಲಾಸ್ ತಂದು ಟೇಬಲ್ ಮೇಲೆ ಇರಿಸಿದ. ಪ್ರಜಾಮತ ಈ ಮೊದಲು ನೋಡಿದ್ದೇ ಆಗಿತ್ತು. ಆದ್ದರಿಂದ ಸಂಯುಕ್ತ ಕರ್ನಾಟಕದ ಪುಟಗಳಲ್ಲಿ ಕಣ್ಣುಹಾಯಿಸುತ್ತ ಲಿಂಬೇ ಹಣ್ಣಿನ ಶರ್ಬತ್ತು ಕುಡಿಯಹತ್ತಿದ : ಅದತ ತಂಪು, ಹುಳಿ ಬೆರೆಸಿದ ಸಿಹಿ ಹೊಟ್ಟೆಗೆ ಹಿತವೆನಿಸಿದವು. ಪಾನೀಯದೊಳಗಿನ ಸಕ್ಕರೆ ಮೆದುಳಿನ ವಿಚಾರಮಾಡುವ ತಾಕತ್ತನ್ನು ಚುರುಕುಗೊಳಿಸುತ್ತಿದೆ ಅನ್ನಿಸಿತು. ಉಷ್ಮಾ ಬಂದಿತು. ಬಹಳ ಖುಶಿಯಿಂದ ಬಾಯಿ ಚಪ್ಪರಿಸುತ್ತ ಅದನ್ನು ಮುಗಿಸಿದ. ಹಾಗೂ ಉತ್ತಪ್ಪ ವಡೆಗಳು ಬರುವ ಹಾದಿಯನ್ನೇ ಕಾಯಹತ್ತಿದ. ಅವೂ ಬಂದವು. ಕಾಫಿಯೂ ಬಂದಿತು. ಇವೇ ತಿಂಡಿಗಳನ್ನು ‘ಸಂತೋಷಭವನ’ದಲ್ಲಿ ಈಗ ಎಷ್ಟು ದಿನಗಳಿಂದ ತಿನ್ನುತ್ತ ಬಂದಿದ್ದರೂ ಇಂದು ಅವುಗಳ ರುಚಿಯೇ ಬೇರೆಯಾಗಿತ್ತು ಎಂಬಂತಹ ಖುಶಿಯಲ್ಲಿ ಮಾಣಿಗೆ ದೊಡ್ಡ ಟಿಪ್ಸ್ ಕೊಟ್ಟು ಹೊರಬಿದ್ದವನಿಗೆ ಚೌಪಾಟಿಗೆ ಹೋಗುವ ಉಮೇದು ಬಂದಿತು. ರುಚಿಕರವಾದ ತಿಂಡಿ ಕೊಟ್ಟ ಖುಶಿ ; ಬೆಳಗ್ಗಿನಿಂದಲೂ ಹಸಿದ ಹೊಟ್ಟೆ ಪಟ್ಟ ಸಂತೃಪ್ತಿಯ ಖುಶಿ ; ಚೌಪಾಟಿಗೆ ಹೋಗಬೇಕು ಎನ್ನುವ ಆತುರ ತಂದ ಖುಶಿ_ಇವುಗಳ ಹಿಡಿತದಲ್ಲಿದ್ದವನಿಗೆ ಗಲ್ಲೆಯ ಮೇಲೆ ಕೂತ ಬೃಹದಾಕಾರದ ನಾಯಕ ಕೂಡ ಲಕ್ಷ್ಯಕ್ಕೆ ಬರಲಿಲ್ಲ. ಅವನನ್ನು ಅಲ್ಲಿ ನೋಡಿ ಆಶ್ಚರ್ಯ ಪಟ್ಟ ನಾಯಕನೇ, ಮಾಣಿಯನ್ನು ಕರೆದು ಇದೀಗ ರಸ್ತೆ ಸೇರಿದವನು ನಾಗಪ್ಪನಲ್ಲವೇ ? ಎಂದು ಕೇಳಿ ಖಾತ್ರಿ ಮಾಡಿಕೊಂಡ.

ಚೌಪಾಟಿಗೆ ಹೋಗಿ ಸಮುದ್ರದಂಡೆಯ ಉಸುಕಿನಲ್ಲಿ ಕಾಲು ಚಲ್ಲಿ ಕೂತವನಿಗೆ ಸೂರ್ಯ ಎಂದೋ ಮುಳುಗಿ ದಂಡೆಯ ಮೇಲೆ ಆಗಲೇ ಮಬ್ಬುಗತ್ತಲೆ ಕವಿದದ್ದು ಲಕ್ಷ್ಯಕ್ಕೆ ಬಂದರೂ ಈ ಪರಿಸರಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಎಚ್ಚರ ಮಾತ್ರ ಇದ್ದಂತೆ ತೋರಲಿಲ್ಲ. ಚಂಪೀವಾಲಾ, ಕುಲ್ಫೀವಾಲಾ, ನಾರಿಯಲ್ ಪಾಣೀವಾಲಾ, ಭೇಳ್‌ಪುರೀವಾಲಾ, ಇವರೆಲ್ಲ ತಮ್ಮ ತಮ್ಮ ಸರಕುಗಳ ಹೆಸರುಗಳನ್ನು ಕೂಗುತ್ತ ಎಬ್ಬಿಸಿದ ಗದ್ದಲ ಒಳಗೆ ನೆಲಸಹತ್ತಿದ ಪ್ರಶಾಂತತೆಗೆ ಭಂಗ ತರಲಿಲ್ಲ : ಅಪೇರಾ_ಹೌಸದ ಆಸುಪಾಸಿನ ಬೆಲೆವೆಣ್ಣುಗಳ ಏಜೆಂಟರು ಆಗೀಗ ಕೊಡುತ್ತಿದ್ದ ಕಿರುಕುಳ ಕೂಡ ಕಾಡಲಿಲ್ಲ. ಇದು ಯುದ್ಧದ ಕೊನೆಯಲ್ಲಿ ಬರುವ ಶಾಂತಿಯೋ ಅದರ ಪೂರ್ವದ್ದೋ ಎನ್ನುವ ಕುತೂಹಲವೂ ತಟ್ಟಲಿಲ್ಲ. ನಾಳೆ : ತಾನು ಇಷ್ಟು ದಿನ ಪಡುತ್ತ ಬಂದ ಯಾತನೆಯ ಕೊನೆ ! ಯಾಕೆಂದರೆ ತಾನೇ ಇದನ್ನೆಲ್ಲ ಕೊನೆಗೊಳಿಸಬೇಕೆಂದು ನಿಶ್ಚಯಿಸಿದ್ದೇನೆ. ನಾಳೆಯ ಮುಖಾಮುಖಿಯ ಬಗ್ಗೆ ತನಗೀಗ ಯಾವುದೇ ಬಗೆಯ ಉದ್ವೇಗವೂ ಇಲ್ಲ ಎಂಬುದರ ಅರಿವು ಇದ್ದೂ ಅದರ ಬಗ್ಗೆ ಆಶ್ಚರ್ಯವೆನ್ನಿಸಲಿಲ್ಲ. ಬೆಳಿಗ್ಗೆ ಶ್ರೀನಿವಾಸನ ಮನೆಯಲ್ಲಿ ಬಂದ ಅನುಭವ ಈ ನಿಶ್ಚಲತೆಗೆ ಕಾರಣವಾಗಿದ್ದೂ ಈ ಕಾರಣದ ಬಗ್ಗೆ ಕೂಡ ವಿಚಾರಮಾಡುವ ಆತುರ ತೋರಲಿಲ್ಲ. ನಾಗಪ್ಪನಿಗೆ ಈ ಕ್ಷಣಕ್ಕೆ ಮಹತ್ವದ್ದೆಂದು ತೋರಿದ್ದು ಒಳಗಿನ ನಿರ್ಭಯತೆಯೇ : ಭೂತಕಾಲಕ್ಕಾಗಲೀ, ಇನ್ನೂ ಕಂಡಿರದ ಭವಿಷ್ಯತ್ತಿಗಾಗಲೀ ಕೈಚಾಚಿ ವೃಥಾ ಬಳಲುವುದನ್ನು ಬಿಟ್ಟುಕೊಟ್ಟು ತನ್ನೆಲ್ಲ ಶಕ್ತಿಗಳನ್ನು ಇದೀಗಿನ ಈ ಒಂದು ಕ್ಷಣದ ಮೇಲೇ ಏಕಾಗ್ರಗೊಳಿಸಿದಾಗ ಹುಟ್ಟಿದ ಪ್ರಚಂಡ ಆತ್ಮವಿಶ್ವಾಸ ! ಇದನ್ನು ಮತ್ತೆ ಎಂದಿಗೂ ಸಡಿಲಗೊಳ್ಳಲು ಬಿಡಬಾರದು. ವಾಂತಿಯ ರೂಪದಲ್ಲಿ ಆಗ ತಾನು ನಿಷೇಧ ವ್ಯಕ್ತಪಡಿಸಿದ್ದು ಶ್ರೀನಿವಾಸ ಅನೂಹ್ಯವಾದ ರೀತಿಯಲ್ಲಿ ಕಣ್ತೆರೆಯಿಸಿದಾಗ ಕಂಡಂಥ ನಿಷ್ಠುರವಾದ, ಬೀಭತ್ಸವಾದ ವಾಸ್ತವತೆಗಷ್ಟೇ ಅಲ್ಲವಾಗಿತ್ತು. ಇಲ್ಲದ ಆಸೆ ಅಪೇಕ್ಷೆಗಳಿಗೆ ಕಟ್ಟುಬಿದ್ದುದರಿಂದಲೇ ಹೆದರಿಸುತ್ತಿದ್ದ ಭೂತಕಾಲಕ್ಕೂ ಆಗಿತ್ತು. ಅಮಿಷವೊಡ್ಡಿ ವಿಲಿವಿಲಿ ಒದ್ದಾಡಿಸುತ್ತಿದ್ದ ಭವಿಷ್ಯತ್ತಿಗೂ ಆಗಿತ್ತು….

ನಾಗಪ್ಪ ಕೂತಲ್ಲೇ ಅಂಗತ್ತನಾಗಿ ತಂಪು ಉಸುಕಿನಲ್ಲಿ ಬೆನ್ನು ಚಾಚಿದ. ಮೇಲಿನ ನಿರಭ್ರವಾದ ನೀಲಿ ಆಕಾಶದಲ್ಲಿ ಕಣ್ಣು ನೆಟ್ಟು ಕೂತ. ಯಾವುದನ್ನೂ ಕುರಿತು ವಿಚಾರಮಾಡಲು ನಿರಾಕರಿಸುತ್ತ ಖಾಲಿಯಾದ ಮನಸ್ಸು ಸುತ್ತಲಿನ ಸದ್ದುಗದ್ದಲಕ್ಕೆ ಕಿವಿ ಮುಚ್ಚಿತ್ತು. ಮೇಲಿನ ಆಕಾಶವನ್ನು ಎಷ್ಟೊಂದು ಏಕಾಗ್ರತೆಯಿಂದ ವೀಕ್ಷಿಸುತ್ತಿದ್ದನೆಂದರೆ ತಾನು ಕ್ರಮೇಣ ಅದರಲ್ಲಿ ಕರಗಿ ಹೋಗುತ್ತಿದ್ದೇನೆಂಬಂತಹ ಅನುಭಾವಿಯ ಅನುಭವ ! ಬೆಚ್ಚಿಬಿದ್ದವನಂತೆ ಎದ್ದ. ದೂರದಲ್ಲಿ ಪರಿಚಯದ ಕ್ಲಾಕ್‌ಟಾವರ್ ಎಂಟು ಗಂಟೆಯ ದನಿ ಮೊಳಗಿಸಿತು : ಯಾವುದೇ ರೀತಿಯಿಂದ ಭಾವುಕನಾಗದೇ ಎದ್ದ. ಊಟ ಮಾಡುವಷ್ಟು ಹಸಿವೆ ಇರಲಿಲ್ಲ. ಭೈಯಾನ ಅಂಗಡಿಯಲ್ಲಿ ಗ್ಲಾಸು ತುಂಬ ಕೆನೆ ತೇಲುವ ಹಾಲು ಕುಡಿದರಾಯಿತು ಎಂದುಕೊಂಡು ಮನೆಯ ಕಡೆಗೆ ಹೆಜ್ಜೆ ಇಡಹತ್ತಿದ….

ಭೈಯಾನಲ್ಲಿ ಹಾಲು ಕುಡಿದು ಮನೆಗೆ ಹೋಗುವ ನಿಚ್ಚಣಿಕೆಯ ಮೆಟ್ಟಿಲುಗಳನ್ನು ಏರುತ್ತಿದ್ದಾಗ ಅರಿವು ಮೂಡಹತ್ತಿತು : ತಾನು ಸಂಜೆ ಕೋಣೆಯಿಂದ ಹೊಬೀಳುವಾಗ ಶಿಂಪಿಯವರ ಮನೆಗೆ ಇನ್ನೂ ಬೀಗವಿತ್ತು. ಅರ್ಜುನ್‌ರಾವರ ತಾತಿ ತಾನು ತನ್ನ ಕೋಣೆಗೆ ಬೀಗ ಹಾಕುವಾಗ_ತನ್ನ ಹತ್ತಿರ ಏನೋ ಮಾತನಾಡುವ ಕುತೂಹಲದಿಂದೆಂಬಂತೆ_ತನ್ನ ಕಡೆಗೇ ನೋಡುತ್ತ ಬಾಗಿಲಲ್ಲಿ ನಿಂತದ್ದನ್ನು ನೋಡಿಯೂ ತಾನು ಅವಳತ್ತ ಲಕ್ಷ್ಯ ಕೊಡದೇ ಸೀದ ಜಿನ್ನೆಯ ಕಡೆಗೆ ಹೆಜ್ಜೆ ಇಟ್ಟಿದ್ದೆ ಎನ್ನುವದು ನೆನಪಾಯಿತು. ಶಿಂಪಿಯವರ ಮನೆಗೆ ಈಗಲೂ ಬೀಗವಿತ್ತು !

ಮನೆಯ ಕದ ತೆರೆದು ದೀಪ ಹಾಕಿದಾಗ, ಕದದ ಸಮೀಪ ಪತ್ರ ಬಿದ್ದದ್ದು ಕಂಡುಬಂತು. ಇಂದು ರವಿವಾರ_ಪೋಸ್ಟಲ್ ಡೆಲಿವರಿ ಇಲ್ಲ. ಯಾರೋ ಖುದ್ದು ಬಂದು ಒಳಗೆ ತೂರಿ ಹೋಗಿರಬೇಕು. ಪತ್ರವನ್ನು ತೆರೆದು ಓದಿನೋಡಿ_ಔh ! ಊeಟಟ ಎಂದ. ತನಿಖೆಯನ್ನು ನಾಳೆ_ಸೋಮವಾರದ_ಬದಲು ಮಂಗಳವಾರಕ್ಕೆ ಮುಂದೂಡಲಾಗಿತ್ತು ! ಇದು, ಈ ತನಿಖೆಯ ಆಯೋಗವನ್ನು ಇದಿರಿಸುವ ತನ್ನ ಮನೋಧೈರ್ಯವನ್ನು ಮುರಿಯುವ ಹಂಚಿಕೆ ಎಂದು ತಿಳಿದ ನಾಗಪ್ಪ ಮನಸ್ಸನ್ನು ತಿರುಗಿ ಕ್ಷೋಭೆಗೆ ಒಳಗಾಗಲು ಬಿಡದೇ_ಅಡ್ಡಿಯಿಲ್ಲ. ಮಂಗಳವಾರವಾದರೆ ಮಂಗಳವಾರ. ನೋಡೋಣ ಈ ಸತ್ವಪರೀಕ್ಷೆ ಯಾವ ಹಂತವನ್ನು ಮುಟ್ಟುತ್ತದೆಯೋ ಎಂದು ! ಶ್ರೀನಿವಾಸನ ಬಗ್ಗೆ ಬರೆಯಬೇಕೆಂದು ಯೋಚಿಸಿದ ಕಾದಂಬರಿಯನ್ನು ನಾಳೆಯಿಂದಲೇ ಆರಂಭಿಸಿದರಾಯಿತು ಎಂದುಕೊಂಡ : ತಾನು ಈ ಕಾದಂಬರಿಯನ್ನು ಬರೆಯುವುದರ ಬಗ್ಗೆ ಶ್ರೀನಿವಾಸನಿಗಿದ್ದ ಭೀತಿ ಇಷ್ಟೊಂದು ವಿಕೋಪಕ್ಕೆ ಹೋದ ಕಾರಣವೇನು ? ಈ ಅವಾಸ್ತವವಾದ ಭಯದ ಸ್ವರೂಪ ಅರಿಯುವ ಪ್ರಯತ್ನವೇ ಕಾದಂಬರಿಯ ವಸ್ತುವಾಗಬೇಕು. ಇಷ್ಟು ದಿನ ಬರಿಯೆ ಹುಡಿಹುಡಿಯಾಗಿ ಭಾವಗೋಚರವಾದದ್ದರ ಕೇಂದ್ರ ಈಗ ಅನಾಯಾಸವಾಗಿ ಹರಳುಗಟ್ಟುತ್ತಿದ್ದದ್ದು ಅರಿವಿಗೆ ಬಂದಾಗ ಮನಸ್ಸು ಪುಲಕಿತವಾಯಿತು. ಶ್ರೀನಿವಾಸ, ಒಂದೂ ಮಗ, ಬರೆಯದಿರಲು ಒಡ್ಡಿದ ಅಸಹ್ಯವಾದ ಅಮಿಷವೇ ಈಗ ಕಾದಂಬರಿಯ ಲೇಖನಕ್ಕೆ ಪ್ರಚೋದನೆಯಾಗುತ್ತಿದ್ದದ್ದು ನೋಡಿ ಮೋಜು ಎನಿಸಿತು….

ನಾಗಪ್ಪ ಬೆಳಿಗ್ಗೆ ಐದು ಗಂಟೆಗೇ ಎದ್ದದ್ದು ಬರೆಯುವ ನಿರ್ಧಾರದಿಂದಲೇ ಆಗಿದ್ದರೂ ಹಾಸಿಗೆಯಲ್ಲಿ ಬಿದ್ದದ್ದೇ ಅವನಿಗೆ ಅರಿವಾಗುವ ಮೊದಲೇ ತೊಡಗಿಸಿಕೊಂಡದ್ದು ನಿನ್ನೆ ಶ್ರೀನಿವಾಸನ ಮನೆಯಲ್ಲಿ ನಡೆದದ್ದರ ಪುನರ್ವಿಮರ್ಶೆಯಲ್ಲೇ ! ಹಿಂದಿನದಕ್ಕೆ ಕೈಚಾಚಲಾರೆನೆಂದು ನಿನ್ನೆಯಷ್ಟೇ ಚೌಪಾಟಿಯ ಉಸುಕಿನಲ್ಲಿ ಅಡ್ಡವಾದಾಗ ನಿರ್ಧಾರಮಾಡಿದ್ದ. ಮಾಡಿದರೇನಂತೆ ! ಈವರೆಗಿನ ತನ್ನ ಆಯುಷ್ಯದಲ್ಲಿ ಇಂತಹ ಮನೋನಿರ್ಧಾರಗಳು ಎಷ್ಟು ಸಾವಿರ ಸನ್ನಿವೇಶಗಳಲ್ಲಿ ನಡೆದಿವೆಯೋ ನಾಗಪ್ಪ ಲೆಕ್ಕ ಹಿಡಿಯಲಾರ. ಕೊನೆಗೂ ಮನೋನಿರ್ಧಾರವೊಂದೇ ನಮ್ಮ ಕ್ರಿಯೆಯೆನ್ನು ನಿಶ್ಚಯಿಸಲಾರದಷ್ಟೇ ! ನಿನ್ನೆ ಶ್ರೀನಿವಾಸ ತನ್ನ ಪೂರ್ವೇತಿಹಾಸದ ಬಗ್ಗೆ ಬರೆಯದಿರಲು ಮುಂದೆ ಒಡ್ಡಿದ ಪ್ರಲೋಭನೆಗೆ ತನ್ನಿಂದಾದ ಪ್ರತೀಕಾರದಲ್ಲಿ ಮನಸ್ಸಿಗಿಂತ ಹೆಚ್ಚಾಗಿ ಹೊಟ್ಟೆಯೇ ಪ್ರಮುಖ ಪಾತ್ರವಹಿಸಿದಂತಿತ್ತು. ರೋಗದ ಲಕ್ಷಣ ತಳೆದ ಈ ಮೇಲೇರುವ ಪಂದ್ಯಾಟದಲ್ಲಿ ಕೈಹಿಡಿದ ಹೆಂಡತಿಯ ಶೀಲವೂ ಸಿಕ್ಕಿಬಿದ್ದಿದೆಯೇ ? ಖಂಬಾಟಾ ಮೇಲೇರಿದ್ದೇ ಹಾಗೆಂದು ಕೇಳಿದ್ದ. ಅತ್ಯಂತ ‘ಮೊಡ್’ ಲಾವಣ್ಯವತಿಯಾದ ಶಿರೀನ್ ಖಂಬಾಟಾನ ಹೆಂಡತಿಹೇಗಾದಳೋ….! ನಮ್ಮ ಒ‌ಆ,ಆ‌ಒ‌ಆ ಇಬ್ಬರೂ ಇವಳನ್ನು ಇಟ್ಟುಕೊಂಡಿದ್ದಾರಂತೆ ! ನಾಗಪ್ಪನಿಗೆ ತನ್ನ ವಿಚಾರಸರಣಿಯನ್ನು ಮುಂದುವರಿಸುವುದಾಗಲಿಲ್ಲ….ಹಾಸಿಗೆಯಿಂದ ಏಳುವಾಗ ಶಾರದೆ ನೆನಪಿಗೆ ಬಂದು, ಆಶಾ, ಚೇತನಾರ ಮೋರೆಗಳೂ ಕಣ್ಣಮುಂದೆ ನಿಂತು ಕಣ್ಣುಗಳು ತುಂಬಿಬಂದವು.

ಈ ಎಲ್ಲ ವೈಯಕ್ತಿಕ ಅಭ್ಯುದಯದ ಅಭಿಲಾಷೆ ಹಾಗೂ ಲೈಂಗಿಕತೆಯ ಕಲಸುಮೇಲೋಗರದಿಂದ ಹುಟ್ಟಿದ ಹೇವರಿಕೆಯನ್ನು ಮರೆಯಲೆಂದೇ ನಾಗಪ್ಪ ತನ್ನ ಮನಸ್ಸನ್ನು ಇನ್ನೊಂದೆಡೆಗೆ ಹಾಯಿಸಲು ಯತ್ನಿಸಿದ_ಮಗ್ಗಲು ಮನೆಯ ಜಾನಕಿಯ ಕಡೆಗೆ : ಅವಳ ಮನೆಯಲ್ಲಿ ಊಟ ಮಾಡಿ ಬಂದ ರಾತ್ರಿ ಬೇರಾವ ಹೆಣ್ಣೂ ತನ್ನ ಮೇಲೆ ಇಷ್ಟೊಂದು ಪ್ರಚಂಡವಾದ ಪರಿಣಾಮ ಮಾಡಿರಲಿಲ್ಲ ಎಂಬುದನ್ನು ಪ್ರಜ್ಞಾತೀತವಾದ ತನ್ನ ದೇಹವೇ ಭಿಡೆ, ಲಜ್ಜೆಗಳನ್ನು ಬಿಟ್ಟೇ ಒಪ್ಪಿಕೊಂಡದ್ದು ಈಗ ನೆನಪಿಗೆ ಬಂದಾಗ ನಾಗಪ್ಪನಿಗೆ ತನ್ನ ಬಗ್ಗೆ ತನಗೇ ನಾಚಿಕೆಯೆನಿಸಿತು ; ತಾನೂ ಶ್ರೀನಿವಾಸರಿಂದ, ಬಂದೂಕವಾಲಾರಿಂದ, ಖಂಬಾಟಾರಿಂದ, ಪಟೇಲರಿಂದ ಬೇರೆಯಾಗಿಲ್ಲವೇನೋ ! ಎಂದುಕೊಳ್ಳುತ್ತ ಹಾಸಿಗೆಯಿಂದ ಎದ್ದು ಪ್ರಾತರ್ವಿಧಿಗಳನ್ನು ಮುಗಿಸಲು ಹೊರಟ : ಈ ಹೊತ್ತು ಕೋಣೆಯಲ್ಲಿ ಕೂಡ್ರುವುದೇ ಬೇಡ. ಹೀಗೆ ಹೊರಗಿನ ಸಂಪರ್ಕವನ್ನು ಕಳೆದುಕೊಂಡು ಈ ಹೊಸಲು ಕೋಣೆಯಲ್ಲೇ ಕುಳಿತುಬಿಟ್ಟರೆ ಮನಸ್ಸು ಎಂತಹ ಹೊಲಸು ಆಳಕ್ಕೂ ಇಳಿದುಬಿಟ್ಟೀತು. ಎಲ್ಲಾದರೂ ಹೋಗಬೇಕು. ದೂರ ಹೋಗಬೇಕು. ಸ್ವಚ್ಛವಾದ ಬಿಸಿಲಲ್ಲಿ, ಗಾಳಿಯಲ್ಲಿ, ಗಿಡ-ಮರಗಳಿದ್ದಲ್ಲಿ, ಹಸಿರು ಇದ್ದಲ್ಲಿ, ದೇವರು ಸೃಷ್ಟಿಸಿದ್ದರ ಸಹವಾಸದಲ್ಲಿ ಕೆಲವು ಕಾಲ ಕಳೆಯಬೇಕು. ಎರಡು ಕಾಲುಗಳುಳ್ಳ, ತಲೆಬುರುಡೆಯಲ್ಲಿ ಬೃಹದಾಕಾರದ ಮೆದುಳಿದ್ದ ಈ ಪ್ರಾಣಿಯಲ್ಲಿ ಮನುಷ್ಯತ್ವದ ಸಾಕ್ಷಾತ್ಕಾರವಾಗುವದು ಕಟ್ಟಕಡೆಗೆ, ಇಂತಹ ಅಪರೂಪದ ಕ್ಷಣಗಳಲ್ಲಿ ಮಾತ್ರವೇನೋ…. ಬರೆಯದಿದ್ದರೂ ಅಡ್ಡಿಯಿಲ್ಲ ! ಓದುವುದೂ ಬೇಡ ! ಹೀಗೇ ಗೊತ್ತು-ಗುರಿಯಿಲ್ಲದೇನೇ ಅಲೆಯುತ್ತಿರುವದು….

ಹೀಗೆ ಅಲೆಯುವ ನಿರ್ಧಾರವೇ ಸ್ಫೂರ್ತಿದಾಯಕವಾಗಿತ್ತೆನ್ನುವಂತೆ ನಾಗಪ್ಪ ಅತ್ಯಂತ ಉತ್ಸಾಹದಿಂದ ಅದರ ಸಿದ್ಧತೆಗೆ ತೊಡಗಿದ.

uಟಿಜeಜಿiಟಿeಜ- ಭಾಗ : ಐದು –
-ಅಧ್ಯಾಯ ಮೂವತ್ಮೂರು –

ಕೊನೆಗೊಮ್ಮೆ, ನಾಗಪ್ಪ ಕಾಯುತ್ತಿದ್ದ ದಿನ ಉದಯಿಸಿತ್ತು.
ಹಾಸಿಗೆಯಿಂದ ಏಳುವಾಗ ಯಾವುದೇ ಬಗೆಯ ಆತಂಕ, ಕಾತರಗಳು ಮನಸ್ಸನ್ನು ತಟ್ಟಿರಲಿಲ್ಲ. ಇದಾವುದರಲ್ಲಿ ತನಗೀಗ ಆಸ್ಥೆಯೇ ಉಳಿದಿಲ್ಲ ಎಂಬ ಭಾವನೆಯ ಕಡೆಗೆ ಕೂಡ ವಿಶೇಷ ಲಕ್ಷ್ಯ ಹರಿಸಿರಲಿಲ್ಲ. ಇಷ್ಟು ದಿವಸ ಕಾದಿದ್ದೆ, ಆ ಮುಹೂರ್ತ ಈಗ ಬಂದಿದೆ ಎಂಬ ತಟಸ್ಥ ಭಾವನೆಯಿಂದಲೇ ಕಂಪನಿಯ ಡ್ರೈವರ್ ಬಂದದ್ದೇ ಕಾರಿನಲ್ಲಿ ಹೋಗಿ ಕುಳಿತಿದ್ದ. ತನ್ನ ಡ್ರೆಸ್ಸಿನ ಬಗ್ಗೆ ವಿಶೇಷ ಕಾಳಜಿ ವಹಿಸದೇ ಕಪ್ಪು ಬಣ್ಣದ ರೇಯ್ಮಂಡ್ ಮಿಲ್ಲಿನ ಟೆರ್ರಿವೂಲ್ ಪ್ಯಾಂಟು, ಅಚ್ಚ ನೀಲೀ ಬಣ್ಣದ ಸ್ಟ್ರಾಯ್ಪ್ಸ್‌ಗಳಿದ್ದ ಉದ್ದತೋಳಿನ ಲಿಬರ್ಟೀ ರೆಡಿಮೇಡ್ ಶರ್ಟು ತೊಟ್ಟಿದ್ದ. ಟಾಯ್ ತೊಡಬೇಕೋ ಬೇಡವೋ ಎಂಬ ಪ್ರಶ್ನೆಗೆ ಕೂಡ ಕ್ಷಣಾರ್ಧದಲ್ಲಿ ಉತ್ತರ ಕಂಡುಕೊಂಡವನ ಹಾಗೆ ಕೈಗೆ ತೆಗೆದುಕೊಂಡ ಟಾಯನ್ನು ತಿರುಗಿ ಸ್ಟ್ಯಾಂಡಿನ ಮೇಲಿರಿಸಿ, ಶರ್ಟಿನ ಕೊನೆಯ ಒಂದು ಗುಂಡಿಯನ್ನು ಬಿಟ್ಟು ಉಳಿದೆಲ್ಲವುಗಳನ್ನೂ ಹಾಕಿಕೊಂಡಿದ್ದ. ಬೂಟು ಹಾಕಿಕೊಳ್ಳುವಾಗ ಮಾತ್ರ ಕ್ಷಣ ಹೊತ್ತು ವಿಚಲಿತನಾಗಿದ್ದ_ಕರಿಯ ಬಣ್ಣದ ಬೂಟುಗಳನ್ನು ಶ್ರೀನಿವಾಸನ ಮನೆಯಲ್ಲಿ ಬಿಟ್ಟುಬಂದಿದ್ದ ! ಮರುಗಳಿಗೆ ಹಾಗೆ ಬಿಟ್ಟು ಬಂದುದ್ದರ ಕಾರಣ ನೆನಪಿಗೆ ಬಂದು, ಮುಗುಳುನಗುತ್ತ, ಬಹಳ ದಿನಗಳಿಂದ ಹಾಕಿಕೊಂಡಿರದ ಕಂದೀಬಣ್ಣದ ಹಳೇ ಬೂಟುಗಳನ್ನೇ ಹಾಕಿಕೊಂಡಿದ್ದ. ಕಪ್ಪುಬಣ್ಣದ ಪ್ಯಾಂಟಿಗೆ ಅವು ಹೊಂದುವದಿಲ್ಲ ಎಂಬುದನ್ನು ಅರಿತೂ ಅದರ ಪರಿವೆಯೇ ಇಲ್ಲದವನ ಹಾಗೆ ಕನ್ನಡಿಯ ಮುಂದೆ ನಿಂತು ಕೂದಲು ಬಾಚಿಕೊಂಡ್ದಿದ್ದ. ಕಣ್ಣಮುಂದೆ ಮೂಡಿದ ಮೋರೆ ತನ್ನದಲ್ಲವೇ ಅಲ್ಲ ಎನ್ನುವಂತಹ ಪರಕೀಯತೆಯ ಭಾವನೆಯಿಂದ ಕ್ಷಣಕಾಲ ನಿರುಕಿಸಿದ್ದ. ಕಾರಿನಲ್ಲಿ ಕೂತು ತಾಜಮಹಲ್ ಹೊಟೆಲ್ ಅತ್ತ ಸಾಗುತ್ತಿದ್ದವನ ಮನಸ್ಸಿನಲ್ಲಿ ಮೂಡಿ ನಿಂತದ್ದು ಅದೇ ಮೋರೆ : ತನ್ನದಾಗಿಯೂ ಬೇರೆಯೇ ಒಬ್ಬನದಾಗಿ ತೋರಿದ್ದು ! ಅದರ ಕಣ್ಣುಗಳಲ್ಲಿ ಮೂಡಿದ ನಿಷ್ಪಾಪ ಮುಗ್ಧತೆ ನಾಗಪ್ಪನನ್ನು ಎಷ್ಟೊಂದು ಆಳಕ್ಕೆ ಕಲಕಿಬಿಟ್ಟಿತ್ತೆಂದರೆ ಅದರಿಂದಾಗಿ ಹುಟ್ಟಿದ ಅಂತರ್ಮುಖತೆಯಿಂದ ಹೊರಗೆ ಬರಲು ಬಹಳ ಹೊತ್ತು ಹಿಡಿಯಿತು….

ಹೊರಗೆ ಬಂದಾಗ ಕಾರು ಸಮುದ್ರದ ದಂಡೆಗುಂಟ ಹರಿದ ಹರವಾದ ಮರೀನ್-ಡ್ರೈವ್-ರಸ್ತೆಯ ಮೇಲೆ ಓಡುತ್ತಿತ್ತು : ಪರಿಚಯದ ನೀರು, ದೂರದ ಎಡಕ್ಕೆ ಪರಿಚಯದ ರೇಲು-ಹಳಿ. ಅದರ ಬದಿಯಲ್ಲೇ ಆಟದ ದೊಡ್ಡ ದೊಡ್ಡ ಮೈದಾನಗಳು. ಕಾರಿನ ಹಿಂದೆ, ಮುಂದೆ ಎಡೆಬಿಡದೇ ಸಾಗುತ್ತಿದ್ದ ವಾಹನಗಳ ಸಾಲುಗಳು, ಪರಿಸ್ಥಿತಿಯ ಸಂಪೂರ್ಣ ಪರಿಚಯವಿದ್ದವನಂತೆ ತೋರುವ ಡ್ರೈವರ್ ಗಂಭೀರ ಮೌನ ತಳೆದು ಕೂತಿದ್ದ. ನಾಗಪ್ಪನಿಗೆ ತಾನೇ ಏನಾದರೂ ಮಾತನಾಡಬೇಕು ಅನ್ನಿಸಿ ಬಾಯಿ ತೆರೆಯೋಣವೆಂದರೆ ಮಾತೇ ಹೊರಡದಾಯಿತು. ಕಣ್ಣುಗಳು ಮಾತ್ರ ತಮ್ಮಿಂದ ತಾವೇ ತುಂಬಿಬಂದವು : ಎಷ್ಟೊಂದು ಧೀರೋದಾತ್ತ ಮಾತುಗಳಲ್ಲಿ ಇದೆಲ್ಲದರ ಸೋಕ್ಷಮೋಕ್ಷಕ್ಕೆ ಮನಸ್ಸನ್ನು ಗಟ್ಟಿಮಾಡಿದ್ದೇನೆಂದು ಹೇಳಿಕೊಂಡರೂ ಏಕೋ ತಾಜಮಹಲ್ ಹೊಟೆಲ್ಲು ಸಮೀಪವಾಗುತ್ತಿದ್ದಂತೆ ಶಬ್ದಗಳ ಆಚೆ ನಿಂತ ಯಾವುದಕ್ಕೋ ಮನಸ್ಸು ಮೆಲ್ಲನೆ ಕರಗಹತ್ತಿತ್ತು : ಇಷ್ಟು ದಿನ ಕೇವಲ ಮಾನಸಿಕವಾದದ್ದು ಈಗ ಪ್ರತ್ಯಕ್ಷ ಕಣ್ಣೆದುರಿನಲ್ಲಿ ನಡೆಯಲಿತ್ತು. ಇಷ್ಟು ವರ್ಷ ಬೆಳೆಸಿಕೊಂಡು ಬಂದ ಒಂದು ಕರಿಯರ್ ತನ್ನ ಶಿಖರಾವಸ್ಥೆಗೆ ಮುಟ್ಟಲಿದ್ದ ಕ್ಷಣದಲ್ಲೇ ಈಗ ಉಧ್ವಸ್ತಗೊಳ್ಳಲಿತ್ತು. ಕಾರಣ : ಮನುಷ್ಯನ ಶಿಕಾರಿಯಾಡುವ ಪ್ರವೃತ್ತಿ, ಕಾರಣ : ಕೆಲವರ ಬದುಕುವ ರೀತಿಗೇ ಮೂಲವಾದ ಭೀತಿ….ನಾಗಪ್ಪಾ ನಾಗಪ್ಪಾಽಽ….ಬೋಳೀಮಗನೇ, ತಿರುಗಿ ಆರಂಭವಾಯಿತೇನೊ ನಿನ್ನ ರಿಪಿ ರಿಪಿ ? ನೀನು ಒಪ್ಪಿಕೊಳ್ಳಲಿದ್ದರೂ ನೀನೇ ಹೆದರಿಕೊಂಡಿದ್ದೀಯೋ : ಎಲ್ಲೋ ಆಳದಲ್ಲಿ ಫಿರೋಜ್ ನಿನ್ನ ಬಗ್ಗೆ ಹಗೆ ಕಾದಿರದಿದ್ದರೆ ?….ಶ್ರೀನಿವಾಸ ಅವನ ಪಿತೂರಿಯಲ್ಲಿ ಸಾಮೀಲಾಗಿರದಿದ್ದರೆ ?….ಇದೆಲ್ಲ ನಡೆಯುತ್ತಿರಲೇ ಇಲ್ಲವೆಂದಲ್ಲವೆ ?_ಮತ್ತೆ ಮೂಲಪದಕ್ಕೆ ಬಂದು ಮುಟ್ಟಿದೆಯಲ್ಲವೋ….ಇದೆಲ್ಲ ನಿರರ್ಥಕ….ಗಳಿಗೆ ಹತ್ತಿರವಾಗುತ್ತಿದೆ….ಹೊರಗೆ ಬಾ…. ಸಿದ್ಧನಾಗು.

ಕಾರು ನರಿಮನ್-ಪಾಯಿಂಟಿಗೆ ಬಂದು ಸಚಿವಾಲಯದತ್ತ ಹೊರಳಿತು : ಆಕಾಶದತ್ತ ಚಂಗನೆ ನೆಗೆದು ಕತ್ತು ಸೆಟೆದು ನಿಂತ ಸ್ಕಾಯ್-ಸ್ಕ್ರೇಪರ್ ಕಟ್ಟಡಗಳು ; ತಮ್ಮ ತಮ್ಮ ಅಫೀಸುಗಳಲ್ಲಿ ನಿನ್ನೆ ಅರ್ಧಕ್ಕೇ ಬಿಟ್ಟುಬಂದ ಕೆಲಸಗಳಿಗೆ ಹಿಂತಿರುಗುವ ಅವಸರದಲ್ಲಿದ್ದ ಜನ ; ಇರಿವೆಗಳ ಹಾಗೆ ಸಾಲುಗಟ್ಟಿ ಹರಿಯುತ್ತಿದ್ದ ವಾಹನಗಳು : ಕಣ್ಣಿನಲ್ಲಿ ಮೂಡಿಯೂ ಮನಸ್ಸನ್ನು ತಟ್ಟುತ್ತಿರಲಿಲ್ಲ. ಸ್ಟ್ಯಾಂಡ್-ಬುಕ್-ಸ್ಟಾಲಿನಲ್ಲಿ ಸೇಲ್ಸ್‌ಮನ್ ಆಗುವ ; ಖೇತವಾಡಿಯ ಗಲ್ಲಿಯೊಂದರಲ್ಲಿ ನ್ಯೂಸ್-ಪೇಪರಿನ ಅಂಗಡಿ ತೆರೆಯುವ ; ಹಳ್ಳಿಯ ಸಾಲೆಯಲ್ಲಿ ಮಾಸ್ತರನಾಗುವ ಬಲವಿಲ್ಲದ ಸಂಕಲ್ಪಗಳು ಹಗಲುಗನಸುಗಳ ಹಾಗೆ ಮನಸ್ಸನ್ನು ತಟ್ಟುತಟ್ಟುವುದರಲ್ಲೇ ಮಾಯವಾಗಹತ್ತಿದ್ದವು….ಕಾರು ರೀಗಲ್ ಸಿನೇಮಾ-ಥಿಯೇಟರ್ ದಾಟಿ ಗೇಟ್‌ವೇ-ಆಫ್-ಇಂಡಿಯಾದ ಕಡೆಗೆ ಸಾಗಿತ್ತು : ಇತ್ತಕಡೆಗೆ ಬರದೇ ಎಷ್ಟು ಕಾಲವಾಯಿತು ? ಪೂರ್ವ ದಿಕ್ಕಿನ ಸಮುದ್ರದ ಮೇಲೆ ಹಲವು ಹಡಗುಗಳು ತೇಲುತ್ತಿದ್ದವು. ಒಂದು ಹಡಗದಿಂದ ನಿಷ್ಕಾರಣವಾಗಿ ಹೊರಟ ಸೈರನ್‌ಗೆ ನಾಗಪ್ಪ ಮನಸ್ಸನ್ನು ಮುತ್ತಿದ ಹಳವಂಡದಿಂದ ಅರ್ಧ ಎಚ್ಚರಗೊಂಡು ಕುಳಿತ : ಅರೆ ! ಕೂತಲ್ಲೇ ಜೊಂಪು ಹತ್ತಿರಬೇಕು ಎಂದುಕೊಂಡು ಕಣ್ಣರಳಿಸಿದ….

ಆಗ, ಕಾರು ತಾಲಮಹಲ್ ಹೊಟೆಲ್ಲಿನ ಭವ್ಯ ಕಟ್ಟಡದ ಇದಿರು ನಿಂತ ಮೇಲೆಯೇ, ಡ್ರೈವರ್ ಕೆಳಗಿಳಿದು ನಮ್ರತೆಯಿಂದ ಕದ ತೆರೆದಮೇಲೆಯೇ ಲಕ್ಷ್ಯಕ್ಕೆ ಬಂದಿತು : ಇದು ತಮ್ಮ ಕಂಪನಿಯ ಕಾರು ಅಲ್ಲ ಎನ್ನುವದು. ಲಕಲಕ ಹೊಳೆಯುವ ಈ ದೊಡ್ಡ ಕಾರು ಮರ್ಸೆಡೀಸ್ ಬೆಂಝ್ ಎನ್ನುವದು. ಕದ ತೆರೆದು ನಿಂತ ಡ್ರೈವರ್ ಕೂಡ ಪರಿಚಯದವನಾಗಿರಲಿಲ್ಲ ; ಪರಿಶುಭ್ರವಾದ ಯೂನಿಫಾರ್ಮು : ತಲೆಗೆ ಕಪ್ಪು ಅಂಚು ಉಳ್ಳ ಬಿಳಿಯ ಹ್ಯಾಟು….ಕಾಲಿಗೆ ಮೋರೆ ಕಾಣುವಷ್ಟು ಹೊಳಪಿನ ಕಪ್ಪು ಬಣ್ಣದ ಬೂಟುಗಳು…

ನಾಗಪ್ಪ ತನಗೆ ಹತ್ತಿದ ಗುಂಗಿನಿಂದ ಸಂಪೂರ್ಣವಾಗಿ ಎಚ್ಚರಗೊಂಡದ್ದು ಮಾತ್ರ ಖಂಬಾಟಾ ನಿಷ್ಕಾರಣವಾಗಿ ಹಲ್ಲುಕಿಸಿಯುತ್ತ, ಹ ಹ ಹ ! ಹೆ ಹೆ ಹೆ ! ಎಂಬ ವಿಚಿತ್ರ ಸದ್ದು ಮಾಡುತ್ತ ಎಲ್ಲಿಂದಲೋ ಬಂದು ಕಣ್ಣಮುಂದೆ ಪ್ರಕಟವಾಗಿ ಬಾ ಬಾ ಬಾ ಎಂದು ಕೈ ಮುಂದೆ ಚಾಚಿದಾಗಲೇ ! ಏನಾದರೂ ಕೇಳಲೇಬೇಕೆಂಬ ಹುಕ್ಕಿಯಿಂದೆಂಬಂತೆ_”ಕಾರು ಹೊತ್ತಿಗೆ ಸರಿಯಾಗಿ ಮುಟ್ಟಿತೆ ?” ಎನ್ನುತ್ತ ಇನ್ನೊಮ್ಮೆ ಹಲ್ಲು ಕಿಸಿದು ನಗುತ್ತ ಹಸ್ತಾಂದೋಲನಕ್ಕಾಗಿ ಚಾಚಿಯೇ ಹಿಡಿ‌ಅದ ಕೈಯನ್ನು ನಾಗಪ್ಪ ಗಮನಿಸಿಯೇ ಇಲ್ಲ ಎಂಬುದನ್ನು ಅರಿತು ಪೆಚ್ಚನಾಗಿ, ಕೈಯನ್ನು ಮೆಲ್ಲಗೆ ಪ್ಯಾಂಟಿನ ಕಿಸೆಗೆ ಸೇರಿಸಿದ. ತನ್ನ ಪ್ರತಿಕ್ರಿಯೆಯಲ್ಲಿ ದೊಡ್ಡ ಕ್ರಾಂತಿಯಾಗುತ್ತಿದೆ ಎಂಬುದು ಲಕ್ಷ್ಯಕ್ಕೆ ಬಂದದ್ದು ಆಗ_ಕಣ್ಣಮುಂದೆ, ಕಣ್ಣುತುಂಬಿ ನಿಂತ ಖಂಬಾಟಾ ಅಕಾರದಲ್ಲಿ, ಮಹತ್ವದಲ್ಲಿ ಒಮ್ಮೆಲೇ ಕುಗ್ಗಿ ಹೋದಂತೆ ತೋರಿದಾಗ ! ಕಾರ್ರಿಡಾರಿನ ನೆಲಕ್ಕೆ ಹಾಸಿದ ಕೆಂಪು ಬಣ್ಣದ ರತ್ನಗಂಬಳಿಯನ್ನು, ಗೋಡೆಗಳ, ಸೀಲಿಂಗಿನ ಭವ್ಯ ಸಿಂಗಾರವನ್ನು ಒಮ್ಮೆ ಅವಲೋಕಿಸಿ ಅದು ತನ್ನ ಮೇಲೆ ಅಂತಹ ಅವಾಸ್ತವವಾದ ಪರಿಣಾಮವನ್ನೇನೂ ಮಾಡುತ್ತಿಲ್ಲ ಎಂಬುದು ಗಮನಕ್ಕೆ ಬರುತ್ತಿರುವಾಗ ! ಕೇಳಿದ: “ಎಲ್ಲರೂ ಬಂದು ತಲುಪಿದ್ದಾರೊ ?” ಇದು ತನ್ನ ದನಿಯೆಂಬುದನ್ನು ಗುರುತು ಹಿಡಿಯಲು ಖಂಬಾಟಾನಿಗೆ ಕಷ್ಟವಾಗುತ್ತಿದ್ದುದನ್ನು ಕಂಡು ಖುಶಿಪಟ್ಟ. ಕಷ್ಟವಾದದ್ದು ಖಂಬಾಟಾನಿಗಷ್ಟೇ ಅಲ್ಲ, ಸ್ವತಃ ತನಗೂ.

ಲಿಫ್ಟ್ ಇದ್ದ ಜಾಗದತ್ತ ಹೋಗುವಾಗ ಗೋಡೆಯ ಮೇಲಿನ ಆಳೆತ್ತರದ ಕನ್ನಡಿಯಲ್ಲಿ ತನ್ನನ್ನೊಮ್ಮೆ ನೋಡಿಕೊಂಡ : ತನ್ನ ಅನುಭವಕ್ಕೆ ಸ್ಪಷ್ಟವಾಗಿ ವೇದ್ಯವಾಗುವಷ್ಟರಮಟ್ಟಿಗೆ ತನ್ನಲ್ಲಾದ ಪರಿವರ್ತನೆ ಬರಿಯೆ ಒಳಗಿನದೇ ? ಎಂಬ ಗುಮಾನಿಯಿದೆಯೆಂಬಂತೆ ಅಪಾದಮಸ್ತಕ ನೋಡಿಕೊಂಡ : ಹೊರಗೇನೂ ಬದಲಾಗಿರಲಿಲ್ಲ_ತಲೆಯಲ್ಲಿ ಕೋಡುಮೂಡಿರಲಿಲ್ಲ : ಹಣೆಯಲ್ಲಿ ಇನ್ನೊಂದು ಕಣ್ಣು ತೆರೆದಿರಲಿಲ್ಲ. ಕಾಫ್ಕಾನ ಕತೆಯಲ್ಲಿ ಗ್ರೆಗೆರ್ ಸಾಮ್ಸಾಗೆ ಆದದ್ದು ನೆನಪಿಗೆ ಬಂದು ತನ್ನಷ್ಟಕ್ಕೇ ಮುಗುಳುನಕ್ಕ. ಖಂಬಾಟಾ ಇನ್ನೂ ತನ್ನ ಅರಿವಿನ ಗಡಿಯಲ್ಲೇ ನಿಂತಿದ್ದ. ಕನ್ನಡಿಯಲ್ಲಿ ನೋಡಿಕೊಂಡಾಗ, ಲಿಫ್ಟಿಗಾಗಿ ಕಾಯುತ್ತ ಸಾಲುಗಟ್ಟಿ ನಿಂತವರನ್ನು ಗಮನಿಸಿದಾಗ ತಾನು ಸೂಟು ಧರಿಸಿರಬೇಕಿತ್ತೇನೋ ಅನ್ನಿಸಿತು. ಕನಿಷ್ಠ ಟೈಯನ್ನಾದರೂ ತೊಡಬೇಕಿತ್ತೇನೋ. ಖಂಬಾಟಾ ಸೂಟಿನಲ್ಲಿದ್ದದ್ದು ಲಕ್ಷ್ಯಕ್ಕೆ ಬಂದದ್ದು ಆಗ ! ಖಂಬಾಟಾನನ್ನು ಬುಡದಿಂದ ತುದಿಯವರೆಗೆ ನೋಡುತ್ತಿದ್ದಂತೆ ನಗು ತಡೆಯುವದು ಅಸಾಧ್ಯವಾಯಿತು : ಯಾವ ಅಜ್ಜನ ಕಾಲಕ್ಕೆ ಹೊಲಿಸಿದ್ದೋ_ಈಗ ಬೊಜ್ಜು ಬೆಳೆದು ದಪ್ಪವಾದ ದೇಹಕ್ಕೆ ಬಿಗಿಯಾಗುತ್ತಿತ್ತು ! ಈಗಿನ ಫ್ಯಾಶನ್ನಿಗೆ ಶೋಭಿಸುವಂತಹದೂ ಅಲ್ಲ ಮತ್ತೆ. ತೊಟ್ಟ ಶರ್ಟು ಕೂಡ ಟಾಯ್ ತೊಡಲು ಸರಿಯಾದ ಕಾಲರ್ ಇಲ್ಲದ್ದು. ಶುದ್ಧ ಪೆದ್ದನಂತೆ ತೋರುತ್ತಿದ್ದ : ನಾಗಪ್ಪನ ಮೋರೆಯ ಮೇಲೆ ತಂತಾನೇ ಪ್ರಕಟವಾದಭಾವಕ್ಕೆ ಖಂಬಾಟಾ ಅತೀವ ಗೊಂದಲಿಸಿದ. ಎಷ್ಟು ಗೊಂದಲಿಸಿದನೆಂದರೆ ತಾವು ಇಳಿಯಬೇಕಾದದ್ದು ಏಳನೇ ಮಜಲು ಎಂಬುದು ಮರೆತು ಎಂಟನೇ ಮಜಲಿಗೆ ಹೋಗಿ ತನ್ನ ಎಚ್ಚರಗೇಡಿತನವನ್ನು ತಾನೇ ಶಪಿಸಿಕೊಂಡ.

ಲಿಫ್ಟಿನಿಂದ ಹೊರಗೆ ಬಂದು ತತತಾ ಪತತಾ ಎನ್ನುತ್ತ ಕ್ಷಮೆಯೋ ವಿವರಣೆಯೋ ಯಾವುದೂ ಸ್ಪಷ್ಟವಾಗಿ ಗೊತ್ತಾಗದ ಹಾಗೆ ಗೊಣಗುಟ್ಟುತ್ತ ನಿಚ್ಹಣಿಕೆಯ ಮೆಟ್ಟಿಲಿಳಿದು ಏಳನೇ ಮಜಲೆಗೆ ನಾಗಪ್ಪನನ್ನು ಕರೆದೊಯ್ದ. ಕಾರ್ರಿಡಾರಿನ ಮೇಲೆ, ಮೆಟ್ಟಿಲುಗಳ ಮೇಲೆಲ್ಲ ಕೆಂಪು ಮೈಗೆ ಬಿಳಿಯ ಹೂವುಗಳನ್ನು ಚಿತ್ರಿಸಿಕೊಂಡ ರತ್ನಗಂಬಳಿಗಳು, ಮೆಟ್ಟಿಲು ಸಾಲಿನ ಎದುರಿನಲ್ಲಿಯೇ ಗೋಡೆಯಷ್ಟು ಎತ್ತರವಾದ ನಿಲುವುಗನ್ನಡಿ. ಬಗೆಬಗೆಯ ದೀಪಗಳು. ಸೀಲಿಂಗಿನಿಂದ ತೂಗುವ ಶೆಂಡಲಿಯರ್‍ಗಳು.ಪೂರ್ವದ ಕಿಡಕಿಗಳಿಂದ ಕಾಣುವ ಸಮುದ್ರ ; ಯಾವ ಒಂದು ತರಾತುರಿಯೂ ಇಲ್ಲದವನ ಹಾಗೆ_ತಾನು ಈ ಹೊಟೆಲ್ಲಿಗೆ ಬಂದದ್ದೇ ಇವೆಲ್ಲವುಗಳನ್ನು ನೋಡಲಿಕ್ಕೆ ಎನ್ನುವ ಹಾಗೆ_ನಿಧಾನವಾಗಿ ತದೇಕಚಿತ್ತದಿಂದ ಎಲ್ಲವನ್ನೂ ಅವಲೋಕಿಸಹತ್ತಿದ. ನಾಗಪ್ಪನ ಈ ಬೇಫೀಕೀರತೆಯೇ ಖಂಬಾಟಾನನ್ನು ಇನ್ನಷ್ಟು ಗೊಂದಲಕ್ಕೀಡುಮಾಡಿತು. ಕಿಡಕಿಯ ಹತ್ತಿರ ಬಂದು ಸಮುದ್ರದ ನೀರನ್ನು ಜನ್ಮದಲ್ಲಿ ಇದೇ ಮೊದಲ ಬಾರಿ ನೋಡುತ್ತಿದ್ದವನ ರೀತಿ ನೋಡುತ್ತ ನಿಂತುಬಿಟ್ಟ ನಾಗಪ್ಪನನ್ನು ತಾವು ಇಲ್ಲಿಗೆ ಬಂದ ಉದ್ದೇಶದ ಬಗ್ಗೆ ಹೇಗೆ ಎಚ್ಚರಿಸುವುದು ಎಂದು ತಿಳಿಯದೆ ಖಂಬಾಟಾ, ಒಳಗೆ ಹೋಗುವ ಹೊತ್ತು ಆಗಲೇ ಮೀರಿಹೋಗಿದೆ, ಅವರೆಲ್ಲ ತಮ್ಮ ಹಾದಿ ಕಾಯುತ್ತಿದ್ದಾರೆ_ಎಂಬ ಉತಾವಳಿಯ ಭಾವನೆಯಿಂದ ಕೈ ಬೆರಳುಗಳನ್ನು ಹೊಸೆಯುತ್ತ _ “We ಚಿಡಿe geಣಣiಟಿg ಟಚಿಣe,” ಎಂದ. ತನ್ನ ದನಿಯಲ್ಲಿಯ ಧೈನ್ಯತೆಗೆ ತಾನೇ ನಾಚಿಕೆಪಟ್ಟ. “ಐಚಿಣe ಜಿoಡಿ ತಿhಚಿಣ ?” ಎಂಬ ನಾಗಪ್ಪನ ಮರುಸವಾಲಿನಿಂದ ಮಾತ್ರ ಖಂಬಾಟಾನ ತಾಳ್ಮೆಗೆ ಧಕ್ಕೆ ತಗಲದೇ ಇರಲಿಲ್ಲ : ‘ಒಳಗೆ ಹೋದ ಮೇಲೆ ಗೊತ್ತಾದೀತು ಭೆಂಛೋದ್ _ ಟಚಿಣe ಜಿoಡಿ ತಿhಚಿಣ ಎನ್ನುವುದು,’ ಎಂದು ಒದರಿ ಹೇಳುವಷ್ಟರ ಮಟ್ಟಿಗೆ ಬಂದ. ಸಿಟ್ಟನ್ನು ಶತಪ್ರಯತ್ನದಿಂದ ಅದುಮಿಹಿಡಿಯುತ್ತ _ “ಖಿheಥಿ ಚಿಡಿe ತಿಚಿiಣiಟಿg ಜಿoಡಿ us” ಎಂದ.

uಟಿಜeಜಿiಟಿeಜಖಂಬಾಟಾ ‘us’ ಎಂದದ್ದನ್ನು ಗಮನಿಸಿ, “ಯಾಕೆ ? ನನ್ನ ಜೊತೆಗೆ ಪಾಪ ನಿನ್ನನ್ನೂ ಸೇರಿಸಿದ್ದಾರೆಯೇ ?” ಎಂದು ಕೇಳಿದನೇ ಹೊರತು ನಾಗಪ್ಪ ಕಿಡಕಿಯಿಂದ ಕದಲಲಿಲ್ಲ. ಕದಲುವ ಆತುರವನ್ನೂ ತೋರಲಿಲ್ಲ ; ಒಂದು ಬಗೆಯ ವಿಸ್ಮಯ, ಕೌತುಕ ತುಂಬಿದ ಕಣ್ಣುಗಳಿಂದ ತಾವು ನಿಂತ ಕಾರ್ರಿಡಾರನ್ನು, ಹೊಟೆಲ್ಲಿನ ಬಾಹ್ಯ ಪರಿಸರವನ್ನು ನೋಡುತ್ತ ನಿಂತೇ ಉಳಿದ. ತನ್ನ ಸಂಕಲ್ಪ ಬಲವನ್ನು ಮೀರಿ ನಿಂತಂತಹದೇನೋ ಒಳಗೊಳಗೇ ಸದ್ದಿಲ್ಲದೇ_ಖಂಬಾಟಾ ತನ್ನನ್ನು ಕರೆದೊಯ್ಯಲಿದ್ದ ರೂಮಿನಲ್ಲಿ ನಡೆಯಲಿದ್ದುದ್ದನ್ನು ಇದಿರಿಸಲು_ತನ್ನಷ್ಟಕ್ಕೆ ಸಿದ್ಧವಾಗುತ್ತಿದೆ ಎಂಬಂತಹ ಅರ್ಧ ಕಣ್ತೆರೆದ ಅರಿವು ಈ ತನ್ನ ನಿಷ್ಪಾಪವೆಂದು ತೋರುತ್ತಿದ್ದ ಅವಲೋಕನದ ಹಿಂದೆ ಕೆಲಸ ಮಾಡುತ್ತಿದೆ ಎನ್ನುವ ಅನ್ನಿಸಿಕೆಯಿಂದ ನಾಗಪ್ಪ ಪುಲಕಿತನಾಗದೇ ಉಳಿಯಲಿಲ್ಲ. ತಾಳ್ಮೆಗೆಟ್ಟ ಖಂಬಾಟಾಗೆ ಇದೆಲ್ಲ ಉದ್ಧಟತನವೆಂದು ತೋರಹತ್ತಿ ಒಳಗೊಳಗೇ ಕುದಿಯಹತ್ತಿದ. ಆದರೆ ನಾಗಪ್ಪನನ್ನು ಅಲ್ಲಿಂದ ಕದಲಿಸುವದು ಹೇಗೆ ಎನ್ನುವುದು ತಿಳಿಯದೆ ಹತಾಶನಾದ. ನಾಗಪ್ಪನೇ ಅವನ ಸಹಾಯಕ್ಕೆ ಬಂದ. ಕೈಗಡಿಯಾರ ನೋಡಿಕೊಳ್ಳುತ್ತ, “ಒಳಗೆ ಹೋಗುವ ಹೊತ್ತಾಯಿತಲ್ಲವೆ ? ಕೋಣೆ ಯಾವುದೆಂದು ಗೊತ್ತಿದೆಯೇ ?” ಎಂದು ಕೇಳಿದ. ಅವನು ಕೇಳಿದ ರೀತಿಗೇ ಖಂಬಾಟಾನ ಮೈ ಉರಿಯಹತ್ತಿತು. ಆದರೆ ಏನು ಮಾಡಲೂ ನಿರುಪಾಯನಾದವನ ಹಾಗೆ_”Pಟeಚಿse huಡಿಡಿಥಿ uಠಿ. ಈಗಾಗಲೇ ಹತ್ತು ಮಿನಿಟುಗಳ ವಿಳಂಬವಾಗಿದೆ.” ಎನ್ನುತ್ತ ಹೊಟೆಲ್ಲಿನ ಏರ್-ಕಂಡೀಶಂಡ್ ತಂಪಿನಲ್ಲಿಯೂ ಹಣೆಯ ಮೇಲೆ ಹನಿಗೂಡಹತ್ತಿದ ಬೆವರನ್ನೊರೆಸಿಕೊಳ್ಳಲು ಕಿಸೆಯಿಂದ ಕೈರುಮಾಲನ್ನು ಹೊರತೆಗೆದ. ತಾವು ಹೋಗಬೇಕಾದ ರೂಮು ತಲುಪಿದೊಡನೆ ಕರೆಗಂಟೆಯನ್ನು ಒತ್ತಿ, ಕದ ತೆರೆಯುವುದನ್ನೇ ಕಾಯುತ್ತ, ಹಣೆಯಮೇಲಿನ ಬೆವರನ್ನೊರೆಸಿಕೊಂಡ.

ನಾಗಪ್ಪ ಖಂಬಾಟಾನ ದಶೆ ನೋಡಿ ಒಳಗೊಳಗೇ ನಗುತ್ತ, “ನಿನಗೆ ಈ ತನಿಖೆ ಉಂಟುಮಾಡಿದ ಆತಂಕವನ್ನು ಸುಲಭವಾಗಿ ಗ್ರಹಿಸಬಲ್ಲೆ. ಆದರೆ ಕಾಳಜಿ ಮಾಡಬೇಡ. I ತಿoಟಿ’ಣ be ಣoo hಚಿಡಿsh oಟಿ ಥಿou. ಃuಣ I ತಿoಟಿ’ಣ sಠಿಚಿಡಿe Phiಡಿoz….” ಎಂದ. ಇವನ ವಾಕ್ಯ ಪೂರ್ಣವಾಗುವುದಕ್ಕೂ ಕದ ತೆರೆದು ಸ್ವತಃ ಫಿರೋಜನೇ ಧುತ್ ಎಂದು ಕಣ್ಣ ಮುಂದೆ ಹಾಜರಾಗುವುದಕ್ಕೂ ಗಂಟುಬಿದ್ದಿತು. ಖಂಬಾಟ ಕಂಗೆಟ್ಟು ನೆಲಕ್ಕೆ ಇಳಿಯುವ ಸ್ಥಿತಿಯಲ್ಲಿದ್ದ. ಫಿರೋಜನೇ ಅವನನ್ನು ಪಾರುಮಾಡಿದ: ನೀನು ಹೋಗಬಹುದೆಂದು ಕಣ್ಸನ್ನೆಯಿಂದ ತಿಳಿಸಿದವನೇ ನಾಗಪ್ಪನತ್ತ ತಿರುಗಿ, “ಹೆಲ್ಲೋ ಹೆಲ್ಲೋ ನಾಗ್….ಅome iಟಿ, ಛಿome iಟಿ,” ಎಂದು ಕೈ ಮುಂದೆ ಮಾಡಿದ. ನಾಗಪ್ಪ, ತನ್ನ ಅಂತಃಶಕ್ತಿಗಳೆಲ್ಲ ಸಂಪೂರ್ಣವಾಗಿ ತನ್ನ ವಶದಲ್ಲಿವೆ ಎಂಬ ಆತ್ಮವಿಶ್ವಾಸ ಪ್ರಕಟಿಸುತ್ತ, “ಹೆಲ್ಲೋ ಫಿರೋಜ್” ಎಂದು ಒಳಹೊಕ್ಕನೇ ಹೊರತು ಅವನು ಮುಂದೆ ಮಾಡಿದ ಕೈಯನ್ನು ಕುಲುಕಲಿಲ್ಲ. ಅದರತ್ತ ನೋಡಿಯೇ ಇಲ್ಲವೆಂದು ನಟಿಸುತ್ತ, ಕಣ್ಣ ಇದಿರಿನ ದೊಡ್ಡ ಸೋಫಾದಲ್ಲಿ ಆಸನಾರೂಢರಾಗಿದ್ದ ಇಬ್ಬರು ಗೃಹಸ್ಥರನ್ನು ಒಮ್ಮೆ ನೋಡಿ ರೂಮಿನ ಕಣ್ಣುಕುಕ್ಕಿಸುವ ಅಲಂಕಾರವನ್ನು ಮೆಚ್ಚಿಕೆ ತುಂಬಿದ ಕಣ್ಣುಗಳಿಂದ ನೋಡುತ್ತ ನಿಂತ. ಕೋಣೆಯ ಕದ ಮುಚ್ಚಿ ಒಳಗೆ ಬಂದ ಫಿರೋಜ್ ನಾಗಪ್ಪನ ನಡತೆಯಿಂದ ವಿಚಲಿತನಾಗಿದ್ದರೂ ಹಾಗೆಂದು ತೋರಿಸಿಕೊಳ್ಳದೇ “ಬಾ ನಾಗ್, ನನ್ನಿಬ್ಬರು ಗೆಳೆಯರ ಪರಿಚಯ ಮಾಡಿಸುತ್ತೇನೆ :ಖಿhis is ಒಡಿ.ಆಚಿsಣuಡಿ_ಒಚಿಟಿಚಿgiಟಿg ಆiಡಿeಛಿಣoಡಿ oಜಿ ಆಚಿsಣuಡಿ & ಅo. Pಡಿivಚಿಣe ಐimiಣeಜ. ಸಧ್ಯವೇ ನಮ್ಮ ಕಂಪನಿಯ ಬೋರ್ಡಿನ ಮೇಲೂ ಬರಲಿದ್ದಾರೆ,” ಎಂದ.
“ನಿನ್ನನ್ನು ಭೇಟಿಯಾದದ್ದು ಬಹಳ ಬಹಳ ಸಂತೋಷ. ಮಿಸ್ಟರ್ ದಸ್ತೂರ್,” ಎಂದು ಬೇಕಷ್ಟೇ ನಕ್ಕು ಹಸ್ತಲಾಘವ ಮಾಡಿದ, ನಾಗಪ್ಪ.
ಫಿರೋಜ್, ಇನ್ನೊಬ್ಬ ಗೃಹಸ್ಥನತ್ತ ತಿರುಗಿ “ಂಟಿಜ ಣhis is ಒಡಿ. Pಚಿಣeಟ_ಆiಡಿeಛಿಣoಡಿ oಜಿ….”
ಫಿರೋಜನ ವಾಕ್ಯ ಮುಂದುವರಿಯುವ ಮೊದಲೇ ನಾಗಪ್ಪನೇ ಅಂದ_”ಆಫ್ ಪಟೇಲ್ ಅಂಡ್ ಕೋ ಪ್ರೈವೇಟ್ ಲಿಮಿಟೆಟ್, ಊe ಣoo is goiಟಿg ಣo be oಟಿ ouಡಿ boಚಿಡಿಜ sooಟಿ.”
ಫಿರೋಜನಿಗೆ ಇದು ಸೇರಲಿಲ್ಲ. ಆದರೂ ತನ್ನ ಅಸಂತೋಷವನ್ನು ತೋರಗೊಡದೇ_ “ಙouಡಿ guess is ಡಿighಣ….” ಎನ್ನುತ್ತಿರುವಾಗ ಪಟೇಲನೊಡನೆ ಹಸ್ತಾಂದೋಲನ ಮಾಡುತ್ತ, ನಾಗಪ್ಪ _”ಂಟಿಜ ಥಿou musಣ be ಚಿ Pಚಿಡಿsee Pಚಿಣeಟ ?” ಎಂದು ಕೇಳಿದ. ಪಟೇಲ ಈ ಪ್ರಶ್ನೆಯನ್ನು ಹೇಗೆ ಉತ್ತರಿಸಬೇಕು ಎನ್ನುವುದು ತಿಳಿಯದೇ ಹಲ್ಲು ಕಿಸಿದು ನಕ್ಕ. ನಾಗಪ್ಪನ ಕಣ್ಣ ಮುಂದೆ ಖಂಬಾಟಾನ ಚಿತ್ರ ನಿಲ್ಲುತ್ತಿರುವಾಗ ಫಿರೋಜನ ಮೋರೆ ಬಣ್ಣಗೆಡಹತ್ತಿತು. ನಾಗಪ್ಪ, ಪಟೇಲನ ಇದಿರಿನ ಸೋಫಾದಲ್ಲಿ ಕೂಡ್ರುತ್ತ :
“ಪಟೇಲರು ಗುಜರಾಥಿಗಳಲ್ಲೂ ಇದ್ದಾರೆ ಪಾರ್ಸೀಗಳಲ್ಲೂ ಇದ್ದಾರೆ_ಆದ್ದರಿಂದ ನಮ್ಮ ಒ‌ಆ ಇದ್ದಾರಲ್ಲ ಅವರು ಗುಜರಾಥೀ ಪಟೇಲರು” ಎಂದ. ಅವನು ಈ ಮೊದಲು ಕೇಳಿದ ಪ್ರಶ್ನೆಯ ಅರ್ಥ ಈಗ ಹೊಳೆಯಿತೆನ್ನುವಂತೆ ಪಾರ್ಸೀ ಪಟೇಲನ ಮೋರೆಯ ಮೇಲೆ ನಿರಂಬಳತೆ ಬೆಳಗಿತು. ಆದರೆ ನಾಗಪ್ಪನ ಮುಂದಿನ ಮಾತುಗಳು ಮಾತ್ರ ಮೂವರನ್ನೂ ಮತ್ತೆ ಗೊಂದಲಕ್ಕೀಡುಮಾಡಿದವು :
“ಮೇಲಾಗಿ ಈ ತನಿಖೆಯ ಆಯೋಗದಲ್ಲಿ ಫಿರೋಜನ ಜತೆಗೆ ಇನ್ನಿಬ್ಬರು ಸದ್ಗೃಹಸ್ಥರು ಇದ್ದಾರೆ ಎಂದು ನಮ್ಮ ಖಂಬಾಟಾನಿಂದ_ನಿಮಗೆ ಅವನ ಪರಿಚಯ ಇಲ್ಲವಾದರೆ, ಅವನು ನಮ್ಮ ಪರ್ಸೊನಲ್ ಆಂಡ್ ಎಡ್ಮಿನಿಸ್ಟ್ರೇಶ್‌ನ್ ಮ್ಯಾನೇಜರ್_ತಿಳಿದಾಗ ‘ಈ ಇಬ್ಬರು ಸದ್ಗೃಹಸ್ಥರ ಹೆಸರುಗಳನ್ನು ತಿಳಿಯಬಹುದೇ ?’ ಎಂದು ಕೇಳಿದ್ದೆ. ಖಂಬಾಟಾ_‘ಅದು ನಿನಗೆ ತನಿಖೆಯ ಹೊತ್ತಿಗೆ ಗೊತ್ತಾಗಿಯೇ ಆಗುತ್ತದೆ’ ಎಂದಿದ್ದ, ಮುಂದೆ ನನಗೆ ಕಳಿಸಿದ ಪತ್ರದಲ್ಲೂ ಹಾಗೇ ತಿಳಿಸಿದ್ದ. ಆಗಲೇ ನಾನು ಮನಸ್ಸಿನಲ್ಲಿ ಎಣಿಸಿದ್ದೆ : ಫಿರೋಜ್ ನೇಮಿಸಿದ ಆಯೋಗವೆಂದಮೇಲೆ ಆ ಇಬ್ಬರು ಸದ್ಗೃಹಸ್ಥರು ಪಾರ್ಸೀ ಇರಲೇಬೇಕು ಎಂದು.”
ಮೂವರೂ ಸೋಫಾಗಳಲ್ಲಿ ಕೂತಲ್ಲೇ ಚಡಪಡಿಸಿದ್ದು ಗಮನಿಸಿ_
“ನನ್ನನ್ನು ತಪ್ಪು ತಿಳಿಯಬೇಡಿ, ಮಾರಾಯರೇ….ನೀವು ಪಾರ್ಸೀ ಎಂದು ತಿಳಿದು ಮನಸ್ಸಿಗಾದ ಉಲ್ಲಾಸ ಎಷ್ಟೆಂದು ಹೇಳಲಿ ! ಯಾಕೆಂದರೆ, ಪಾರ್ಸೀ ಜನರ ನ್ಯಾಯಬುದ್ದಿಯಲ್ಲಿ ದೊಡ್ಡ ವಿಶ್ವಾಸ ಇಟ್ಟುಕೊಂಡವನು ನಾನು.” ಎಂದ.
ಸನ್ನಿವೇಶ ಸಂಪೂರ್ಣವಾಗಿ ತಮ್ಮ ಹತೋಟಿಯ ಹೊರಗೆ ಹೋಗುತ್ತಿದೆ ಎಂಬುದನ್ನು ಗಮನಿಸಿದ ದಸ್ತೂರ್ ಫಿರೋಜನ ಕಡೆಗೊಮ್ಮೆ ನೋಡಿ, ಕಣ್ಣು ಮಿಟುಕಿಸಿ, ಮೂಗಿನ ಹೊರಳೆಗಳನ್ನು ಕ್ಷಣಕಾಲ ಅರಳಿಸಿ, ಸರಿಯಾಗಿದ್ದ ತನ್ನ ಟಾಯ್ ಮೇಲೆ ಅದನ್ನು ಸರಿಪಡಿಸುವವನ ಹಾಗೆ ಕೈಯಾಡಿಸಿ, ಗಂಟಲು ಸಡಿಲಿಸಿ_
“ಖಿhಚಿಟಿಞs ಥಿouಟಿg mಚಿಟಿ_ಣhಚಿಟಿಞs ಜಿoಡಿ ಣhe ಟಿiಛಿe ಛಿomಠಿಟimeಟಿಣs. ರಿusಣiಛಿe ಥಿou ತಿiಟಟ ಛಿeಡಿಣಚಿiಟಿಟಥಿ hಚಿve ಜಿಡಿom us…. ಂಟಿಜ ಡಿeಟಚಿx….” ಎಂದ.
ದಸ್ತೂರನ ಈ ಮಾತಿಗೆನಾಗಪ್ಪ ತುಂಬ ಸುಖವಾಗಿ ಮುಗುಳುನಕ್ಕ :
“ನಾನೂ ನಿಮಗೆ ಅದನ್ನೇ ಹೇಳುವವನಿದ್ದೆ….ಅರ್ಥಾತ್ ನನ್ನ ಈ ಇನ್‌ಫಾರ್ಮಲ್ ಡ್ರೆಸ್ಸಿಗೆ ನಿಮ್ಮ ಆಕ್ಷೇಪಣೆ ಇಲ್ಲದಿದ್ದರೆ ಮಾತ್ರ…ಮತ್ತೆ ಒಂದನ್ನು ಮೊದಲೇ ಸ್ಪಷ್ಟಪಡಿಸಬೇಕೇನೋ…. I ಚಿm ಟಿoಣ ಣhe ಣಥಿಠಿe ಣo be iಟಿಜಿಟueಟಿಛಿeಜoಡಿ iಟಿ ಚಿಟಿಥಿ ತಿಚಿಥಿ ಠಿಡಿessuಡಿiseಜ bಥಿ ಣhe ಜeಛಿoಡಿ oಜಿ ಣhe ಠಿಟಚಿಛಿe oಡಿ oಜಿ iಣs oಛಿಛಿuಠಿಚಿಟಿಣs.”
ಈ ಮಾತಿನ ಪರಿಣಾಮ ಇವನನ್ನು ಮೊದಲಿನಿಂದಲೂ ಒಂದು ಬಗೆಯ ಕೌತುಕದಿಂದಲೇ ನೋಡುತ್ತ ಕುಳಿತ ಪಟೇಲನ ಮೇಲೆ ಎಷ್ಟೊಂದು ಆಗಿತ್ತೆಂದರೆ ತಾನು ಏನು ಮಾಡುತ್ತಿದ್ದೇನೆ ಎನ್ನುವುದರ ಅರಿವು ಬರುವ ಮೊದಲೇ ಧಡಕ್ಕನೆ ಕೂತಲ್ಲಿಂದ ಎದ್ದು ನಿಂತವನೇ _
“ನಿಮಗೆ ಹೇಗೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಃuಣ I ಚಿgಡಿee ತಿiಣh ಣhis ಥಿouಟಿg mಚಿಟಿ,” ಎಂದು ಕೋಟು ಟಾಯ್ ಕಳಚಿದ ; ಹೊಟೆಲ್ಲಿನ ಏರ್-ಕಂಡೀಶನಿಂಗ್ ಕೂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ,” ಎಂದ.
ದಸ್ತೂರನೂ ಕೋಟು ಕಳಚಿದ ; ಟಾಯ್ ತೆಗೆಯಲಿಲ್ಲ. ಉದ್ಧಟತನವೆಂದು ತೋರಬಹುದಾದ ನೇರವಾದ ಮಾತುಗಳಿಂದ ಅದಾಗಲೇ ನಾಗಪ್ಪ, ಪಟೇಲ್ ಹಾಗೂ ದಸ್ತೂರರ ಗೆಳೆಯನಾಗಿಬಿಟ್ಟಿದ್ದಾನೆ ಎಂಬ ಅನ್ನಿಸಿಕೆಯಿಂದಲೇ ಫಿರೋಜ್ ಒಳಗೊಳಗೇ ಸಿಟ್ಟಿನಿಂದ ಕುದಿಯಹತ್ತಿದ. ಆದರೂ ತಾನೊಬ್ಬನೇ ‘ನಿನ್ನೊಡನೆ ಹಗೆ ಕಾದವನು’ ಎಂಬಂತೆ ತೋರಬಾರದೆಂದು ಕುಳಿತಲ್ಲಿಂದ ಎದ್ದು ಕೋಟು ತೆಗೆದ, ಹಾಗೂ ನಾಗಪ್ಪನಿಗೆ_”Whಚಿಣ ತಿiಟಟ ಥಿou ಛಿಚಿಡಿe ಣo hಚಿve_hoಣ oಡಿ ಛಿoಟಜ ?” ಎಂದು ಕೇಳಿದ.
‘I ತಿiಟಟ ರಿoiಟಿ ಥಿou, geಟಿಣಟemeಟಿ_I ಚಿm gಚಿme ಜಿoಡಿ ಚಿಟಿಥಿಣhiಟಿg.” ಇದನ್ನು ಹೇಳಿದ ನಾಗಪ್ಪ ಪಟೇಲ ಹಾಗೂ ದಸ್ತೂರರಿಬ್ಬರಿಗೂ ತುಂಬ ಮೋಹಕವಾಗಿ ಕಂಡ : ಅವರ ಮೋರೆಯ ಮೇಲೆ ಮುಚ್ಚುಮರೆಯಿಲ್ಲದೆ ವ್ಯಕ್ತವಾದ ಮೆಚ್ಚಿಗೆಯನ್ನು ನೋಡಿ ಫಿರೋಜ್ ಅಸೂಯೆಪಟ್ಟ.
“ಃeeಡಿ ತಿoಟಿ’ಣ be ಚಿ bಚಿಜ iಜeಚಿ,” ಎಂದು ದಸ್ತೂರ್ ಸೂಚಿಸಿದ್ದಕ್ಕೆ, ನಾಗಪ್ಪ, ಕೈ ಗಡಿಯಾರ ನೋಡಿ, “ಇಚಿಡಿಟಥಿ ಜಿoಡಿ ಣhe ಜಚಿಥಿ buಣ gooಜ ಜಿoಡಿ ಣhe seಚಿsoಟಿ.” ಎಂದು ಸಮ್ಮತಿ ಇತ್ತಾಗ ಫಿರೋಜ್ ಕೂತಲ್ಲಿಂದ ಎದ್ದು ‘ರೂಮ್ ಸರ್ವೀಸ್’ಗೆ ಫೋನ್ ಮಾಡಿ ನಾಲ್ಕು ಬಿಯರ್ ಬಾಟಲಿಗಳನ್ನೂ ಅದರ ಜೊತೆಗೆ ಒಂದು ಪ್ಲೇಟು ಕೆಶ್ಯೂನಟ್ಸ್ ಹಾಗೂ ಒಂದು ಪ್ಲೇಟು ವೇಫರ್ಸ್ ಕಳಿಸುವಂತೆ ಕೇಳಿಕೊಂಡು ತನ್ನ ಸ್ಥಾನಕ್ಕೆ ಮರಳಿದ.

ದಸ್ತೂರ್ ಎಲ್ಲವನ್ನೂ ಎಲ್ಲಿ ಹಾಳುಮಾಡಿಬಿಡುತ್ತಾನೋ ಎಂಬ ಅಸಮಾಧಾನ ತುಂಬಿದ ಫಿರೋಜನ ಕಣ್ಣುಗಳನ್ನು ಸಂಧಿಸಿದ್ದೇ ತಡ, ದಸ್ತೂರ್_‘ಹೆದರಬೇಡ ಎಲ್ಲವನ್ನೂ ನನಗೆ ಬಿಡು’ ಎನ್ನುವ ರೀತಿ_ಇನ್ನೊಮ್ಮೆ ಕಣ್ಣು ಮಿಟುಕಿಸಿದ. ನಾಗಪ್ಪನ ಸೂಕ್ಷ್ಮ ದೃಷ್ಟಿಯಿಂದ ಇದನ್ನು ಅಡಗಿಸುವುದು ಮಾತ್ರ ಸಾಧ್ಯವಾಗಲಿಲ್ಲ : ಈ ನಗು ಮೋರೆಯ ಪಾರ್ಸೀ ಫಿರೋಜನಷ್ಟೇ ಧೂರ್ತನೆಂಬುದನ್ನು ಅವನು ಎಂದೋ ಅರಿತಿದ್ದ. ತನ್ನ ಬೇಟೆಯನ್ನು ಸರಿಯಾದ ಸನ್ನಿವೇಶದಲ್ಲಿ, ಸರಿಯಾದ ಮುಹೂರ್ತದಲ್ಲಿ ಹಿಡಿಯಲು ಎಷ್ಟು ಹೊತ್ತು ಬೇಕಾದರೂ ಕಾಯುವ ತಾಳ್ಮೆ ಇದ್ದ ಪ್ರಾಣಿಯಿದು….
uಟಿಜeಜಿiಟಿeಜದಸ್ತೂರನೇ ಈ ನಾಟಕದ ಸೂತ್ರಧಾರನೆಂಬುದನ್ನು ನಾಗಪ್ಪ ಅರಿಯದೇ ಇರಲಿಲ್ಲ. ಪರದೆ ಏಳುವ ಸಂಧಿಯನ್ನೇ ಕಾಯುತ್ತಿದ್ದಾನೆ ಒಂದೂ ಮಗ : ಎಲ್ಲ ಪಾರ್ಸಿಗಳೂ ತಮ್ಮ ಮೂಗಿನಿಂದಲೇ ಎದ್ದು ಕಾಣುತ್ತಿದ್ದರೂ ಈ ಪಾರ್ಸಿಯ ಮೂಗಿನಲ್ಲೇನೋ ವಿಶೇಷವಿದೆ ಎಂಬಂತೆ ಲಕ್ಷ್ಯವನ್ನು ಅದರ ಮೇಲೇ ಕೇಂದ್ರೀಕರಿಸಿದಾಗ ಥಟ್ಟನೆ ಇವನೆಲ್ಲೋ ಉಮ್ರಿಗಾರನನ್ನು ಹೋಲುತ್ತಾನೆ ಎಂಬುದು ಹೊಳೆದಾಗ ಒಂದು ಬಗೆಯ ತುಂಟತನದ ಮುಗುಳುನಗೆ ನಾಗಪ್ಪನ ಮೋರೆಯನ್ನು ಬೆಳಗಿಸಿತು. ಆ ನಗೆಯ ಅರ್ಥವಾಗದೇ ಗೊಂದಲಿಸಿದ ದಸ್ತೂರ್ ಮೋರೆಯ ಮೇಲೊಮ್ಮೆ ಕೈಯಾಡಿಸಿಕೊಂಡ ಹಾಗೂ :

” I ತಿouಟಜ ಟiಞe ಣo ಛಿಟಚಿಡಿiಜಿಥಿ oಟಿe ಣhiಟಿg_ಣhಚಿಣ ಣhis is ಟಿoಣ ಚಿಟಿ iಟಿvesಣigಚಿಣioಟಿ buಣ ಚಿಟಿ iಟಿಣeಡಿvieತಿ,” ಎಂದ. ವಿವರಣೆ ಕೊಟ್ಟ ದನಿಯಲ್ಲಿ ಗಾಂಭೀರ್ಯವಿದ್ದರೂ ಅವನಿಗೆ ಅಂಟಿಕೊಂಡಂತಿದ್ದ ಒಂದು ರೀತಿಯ ಪೆದ್ದುತನ ನಾಗಪ್ಪನ ಸೂಕ್ಷ್ಮಗ್ರಹಣ-ಶಕ್ತಿಯಿಂದ ತಪ್ಪಿಸಿಕೊಳ್ಳಲಿಲ್ಲ. ದಸ್ತೂರನ ವಾಕ್ಯ ಮುಗಿಯುತ್ತಲೇ :

“I ಣhiಟಿಞ ತಿe shouಟಜ eಜuಛಿಚಿಣe ouಡಿ ಠಿeಡಿsoಟಿಟಿeಟ ಆeಠಿಚಿಡಿಣmeಟಿಣ ಣo ಞಟಿoತಿ ಣhe ಜiಜಿಜಿeಡಿeಟಿಛಿe beಣತಿeeಟಿ ಣhe ಣತಿo.” ಹೀಗೆ ಹೇಳಿ, ನಾಗಪ್ಪ ಫಿರೋಜನ ಕಡೆ ನೋಡಿದ.

ಇವನಲ್ಲಿ ಕ್ರಾಂತಿಕಾರಕ ಬದಲಾಗಿಬಿಟ್ಟಿದೆ ಎಂಬುದನ್ನು ಯಾವಾಗಲೋ ಮನಗಂಡ ಫಿರೋಜ್ ತಾಳ್ಮೆಗೆಟ್ಟು_”ಖಿhis is ಚಿಟಿ iಟಿvesಣigಚಿಣioಟಿ ಣoo,” ಎಂದ. ಒಳಗೆ ಕುದಿಯುವ ಸಿಟ್ಟು ಇದ್ದಾಗಲೂ ಸನ್ನಿವೇಶ ಬೇಡಿದರೆ ಬೇಕಾದಷ್ಟು ಸಿಹಿಯಾಗಿ ಮಾತನಾಡುವ, ಶಾಂತತೆಯ ಮುಖವಾಡ ಧರಿಸುವ ಕಲೆಯಿದ್ದ ಫಿರೋಜ್ ಕೂಡ ತನಗೆ ಬಂದ ಸಿಟ್ಟನ್ನು ಅಡಗಿಸುವುದರಲ್ಲಿ ಸೋತಿದ್ದ. ಇದನ್ನು ಗಮನಿಸಿದ ನಾಗಪ್ಪ_

“ಔಜಿ ಛಿouಡಿse ಥಿou meಚಿಟಿ_ಣhis is ಚಿಟಿ iಟಿvesಣigಚಿಣioಟಿ ಣhಡಿough ಚಿಟಿ iಟಿಣeಡಿvieತಿ,” ಎನ್ನುತ್ತ ಮುಗುಳುನಕ್ಕ.
ಫಿರೋಜ್ ವರ್ಣಿಸಿದ ವ್ಯಕ್ತಿತ್ವದ ಇಸಮ್ ಅಲ್ಲವಿದು ಎಂದು ಅರಿತ ಪಟೇಲ್ ನಡುವೆ ಬಾಯಿ ಹಾಕಿ :”ಇಟಿoughoಜಿ ಣhese ಠಿಡಿeಟimiಟಿಚಿಡಿies. ಐeಣ us ಛಿome sಣಡಿಚಿighಣ ಣo ಣhe busiಟಿess,” ಎನ್ನುತ್ತಿರುವಾಗ ಸಮವಸ್ತ್ರಧಾರಿಯಾದ ಬೇರರ್ ಆರ್ಡರ್ ಮಾಡಿದ ಬಿಯರ್ ಹಾಗೂ ತಿನಿಸುಗಳೊಂದಿಗೆ ಕದ ದೂಡಿ ಒಳಗೆ ಬಂದ. ಪಟೇಲ_‘sಣಡಿಚಿighಣ ಣo ಣhe busiಟಿess’ ಅನ್ನುವುದಕ್ಕೂ ಬೇರರ್ ಬಿಯರ್ ಒಳಗೆ ತರುವುದಕ್ಕೂ ತಾಳೆಯಾದದ್ದರ ಮೇಲೇ ಜೋಕ್ ಮಾಡುವ ಲಹರಿಯನ್ನು ಪ್ರಯತ್ನಪೂರ್ವಕವಾಗಿ ತಡೆದು, ಗಂಭೀರವಾಗಿ : “ನಾನಂತೂ ಸಿದ್ಧನಾಗಿ ಕುಳಿತಿದ್ದೇನೆ,” ಎಂದ ನಾಗಪ್ಪ. ‘ದನಿಯಲ್ಲಿ ಬಹಳ ದಿನಗಳಿಂದ ಅದಕ್ಕಾಗಿ ಕಾಯುತ್ತಿದ್ದೇನೆ’ ಎನ್ನುವ ಧಾಟಿಯಿತ್ತು.

ಬೇರರ್, ತಂದ ಬಾಟಲಿಗಳನ್ನು ಇಟ್ಟುಹೋಗದೇ, ಒಂದೊಂದೇ ತೆರೆದು ಬಿಯರನ್ನು ಕಾಚಿನ ಮಗ್ಗುಗಳಲ್ಲಿ ತುಂಬಹತ್ತಿದ. ತಂಪು ಬಿಯರಿನ ವಾಸನೆ ಮೂಗು ಹೊಕ್ಕದ್ದೇ ನಾಗಪ್ಪ ಖುಶಿಪಟ್ಟ. ಪಟೇಲ ಕೂಡ ಬಾಯಿ ಚಪ್ಪರಿಸಹತ್ತಿದ. ಫಿರೋಜ್ ಹಾಗೂ ದಸ್ತೂರ್ ಇದೀಗ ಬರುತ್ತೇವೆ ಎನ್ನುವುದನ್ನು ಕಣ್ಣಿನಿಂದಲೇ ಸೂಚಿಸುತ್ತ ಮಗ್ಗಲು ಕೋಣೆಗೆ ಹೋದರು : ಎರಡೂ ಮಗ ಮಜಾ ಮಾಡುತ್ತಿದ್ದದ್ದು ಈ ಏರ್-ಕಂಡೀಶಂಡ್ ‘ಸ್ವೀಟ್’ನಲ್ಲಿ ! ಎಷ್ಟೊಂದು ಹುಡುಗಿಯರೊಡನೆ ಚಕ್ಕಂದವಾಡಿದ್ದಾನೋ ಎಂದುಕೊಳ್ಳುವಾಗ_ಥ್ರೀಟೀ, ಡಾಯನಾರ ಚಿತ್ರಗಳ ಹಿಂದೆಯೇ ಮೇರಿಯ ಚಿತ್ರವೂ ಕಣ್ಣಮುಂದೆ ಬಂದು ನಿಂತವು : ಅವಳೊಡನೆ ಟೆಲಿಫೋನ್ ಮೇಲೆ ಮಾತನಾಡುತ್ತಿದ್ದಾಗ ಅವಳ ಬಾಯಿಂದ ಕೇಳಿದ_ಇದೇ ತಾಜಮಹಲ್ ಹೊಟೆಲ್ಲಿನಲ್ಲಿ ಫಿರೋಜ್ ಕೊಟ್ಟ_ಪಾರ್ಟಿಯ ವರ್ಣನೆಯಿಂದ ತನ್ನಲ್ಲಿ ಸಹಿಸಲಸಾಧ್ಯವಾಗುವಷ್ಟರ ಮಟ್ಟಿಗೆ ಹುಟ್ಟಿದ ಅಸೂಯೆಯ ನೆನಪಿನಿಂದ ಮನಸ್ಸು ಈಗ ಯಾವುದೇ ಬಗೆಯ ಕ್ಷೋಭೆಗೆ ಒಳಗಾಗಲಿಲ್ಲ; ಖುಶಿಯಾಯಿತು. ಹನ್ನೆರಡು ದಿನಗಳ ತೆರಪಿಲ್ಲದ ಯಾತನೆಯ ನಂತರ ನೆಲಸಹತ್ತಿದ ಈ ಭಾವನೆಗಳ ಸ್ಥೈರ್ಯವನ್ನು ಇನ್ನೆಂದಿಗೂ ಕೆಡಿಸಿಕೊಳ್ಳಬಾರದು ಎಂದು ಮನಸ್ಸು ಆಣೆಮಾಡುವುದರಲ್ಲಿ ತೊಡಗಿದಾಗ ಬೇರರ್, ಪಟೇಲನ ಅದೇಶದ ಮೇರೆಗೆ ಬಿಯರ್ ತುಂಬಿದ ಒಂದು ಮಗ್ಗನ್ನು ನಾಗಪ್ಪನ ಕೈಗೂ ಇನ್ನೊಂದನ್ನು ಪಟೇಲನ ಕೈಗೂ ಕೊಟ್ಟ. ವೋಚರದ ಮೇಲೆ ಸಹಿ ಬೇಕಿತ್ತೇನೋ, ತುಸು ತಡೆದು ಬಾ ಎಂದು ಪಟೇಲ ಸೂಚಿಸಿದಾಗ ಬೇರರ್ ಹೊರಟುಹೋದದ್ದೇ “ಅome oಟಿ, ಥಿouಟಿg mಚಿಟಿ. ಐeಣ us ಟಿoಣ ತಿಚಿsಣe ಣime,” ಎಂದು ಮಗ್ ಎತ್ತಿ ಹಿಡಿದು ‘ಚಿಯರ್ಸ್’ ಎಂದ ಪಟೇಲ. ನಾಗಪ್ಪನೂ ‘ಚಿಯರ್ಸ್’ ಎನ್ನುತ್ತ ಬಿಯರಿನ ತಂಪು ಗುಟುಕೊಂದನ್ನು ಸೀಪಿದ್ದೇ ತಡ_ಆಹಾ ಎನ್ನುವಷ್ಟು ಉಲ್ಲಸಿತನಾದ.

ದಸ್ತೂರ್ ಹಾಗೂ ಫಿರೋಜ್ ಇನ್ನೂ ಮಗ್ಗಲು-ಕೋಣೆಯಿಂದ ಹೊರಗೆ ಬರದೇ ಇದ್ದುದನ್ನು ಗಮನಿಸಿ ಇನ್ನೊಂದು ಗುಟುಕು ಬಿಯರನ್ನು ಸೀಪುತ್ತ :

“I ಚಿm soಡಿಡಿಥಿ I seem ಣo hಚಿve uಠಿseಣ some oಜಿ ಥಿouಡಿ eಚಿಡಿಟieಡಿ sಣಡಿಚಿಣegಥಿ,” ಎಂದ ನಾಗಪ್ಪ ; ಹಾಗೂ ತನ್ನ ಮಾತಿನ ಪರಿಣಾಮಕ್ಕಾಗಿ ಪಟೇಲನ ಮೋರೆ ನೋಡಹತ್ತಿದ.

ಪಟೇಲನಿಗೆ ಫಿರೋಜನ ಈ ಲಫಡಾದಲ್ಲಿ ವಿಶೇಷ ಆಸ್ಥೆ ಇದ್ದಂತೆ ತೋರಲಿಲ್ಲ : “ಸ್ಟ್ರಾಟಜಿ ಎಲ್ಲಿಂದ ಬಂತು ಮಣ್ಣು. ನಮ್ಮ ಫಿರೋಜನದು ಅತ್ಯಂತ ನರ್ವಸ್ ಜಾತಿ. ನೀವೂ ಗೆಳೆಯರೂ ಕೂಡ ಕಳಿಸಿದ ಮೂಗರ್ಜಿಯಿಂದ ಹೆದರಿಕೊಂಡುಬಿಟ್ಟಿದ್ದಾನೆ. ಇಷ್ಟೇ_ಃe ಠಿಡಿಚಿಛಿಣiಛಿಚಿಟ ಚಿಟಿಜ ಚಿಛಿಛಿeಠಿಣ ಣhe oಜಿಜಿeಡಿ ಣhಚಿಣ is beiಟಿg mಚಿಜe ಣo ಥಿou….” ಎನ್ನುತ್ತ ಬಿಯರಿನ ತಂಪನ್ನು ಅದು ತರುತ್ತಿದ್ದ ಮತ್ತನ್ನು ಆಸ್ವಾದಿಸಹತ್ತಿದ.

ಒಂದೂ ಮಗನೆ, ನನಗೆ ಚೆಂಡಿಕೆ ಹಚ್ಚುತ್ತೀಯೇನೋ. ಅಂದರೆ ಆ ಸಹಿಯಿಲ್ಲದ ಪತ್ರವನ್ನು ಬರೆದವನು ನಾನೇ ಎಂಬುದನ್ನು ಖಾತ್ರಿಮಾಡಿಕೊಳ್ಳುವುದಕ್ಕೆ ಈ ಹಗರಣ, ಭೆಂಛೋದ್ ! ನೀನೂ ಧೂರ್ತನೇ ಹಾಗಾದರೆ. ನಿನ್ನ ಉಳಿದಿಬ್ಬರು ಗೆಳೆಯರು ಹೀಗೇ ಗಪ್‌ಚಿಪ್ ಎದ್ದುಹೋದದ್ದು ಕೂಡ ಮೊದಲೇ ಯೋಜಿಸಿಕೊಂಡ ಯುಕ್ತಿ_ಅಲ್ಲವೇನೋ ?…. ಇದಾವುದರ ಅರ್ಥವೇ ತನಗಾಗುತ್ತಿಲ್ಲ ಎಂಬಂತೆ ನಟಿಸುತ್ತ ಹಾಗೂ ತಾವಿಬ್ಬರೇ ಗುಟ್ಟಿನಲ್ಲಿ ಈ ತನಿಖೆಯ ಬಗ್ಗೆ ಮಾತನಾಡುವದು ಸರಿಯಲ್ಲವೇನೋ ಎಂಬ ಭಾವನೆಯನ್ನು ವ್ಯಕ್ತಪಡಿಸುವ ಧಾಟಿಯಲ್ಲಿ, ನಾಗಪ್ಪ :

“ತನ್ನ ಗುಟ್ಟನ್ನು ನೀವು ಹೀಗೆ ಹೊರಗೆಡಹಿದ್ದೀರಿ ಎಂದು ಗೊತ್ತಾದರೆ ಫಿರೋಜ್ ನಿಮ್ಮನ್ನು ದ್ವೇಷಿಸದೇ ಇರಲಾರ….ನಮ್ಮ ಹತ್ತೇ ಮಿನಿಟುಗಳ ಪರಿಚಯದಲ್ಲಿ ನೀವು ನನ್ನನ್ನು ಬಹಳ ಮೆಚ್ಚಿಕೊಂಡಂತಿದೆ. ಅದಕ್ಕಾಗಿ ಅಭಾರಿಯಾಗಿದ್ದೇನೆ. ಆದರೆ ನನಗೆ ಹೆಚ್ಚು ಕುತೂಹಲವಿದ್ದದ್ದು ನಿಮ್ಮ ಹಾಗೂ ಫಿರೋಜನ ಪರಿಚಯ ಹೇಗೆ ಆಯಿತು ? ಎಂದು ತಿಳಿಯುವುದರಲ್ಲಿ_”I meಚಿಟಿ ಟಿoಣ ರಿusಣ beಛಿಚಿuse boಣh oಜಿ ಥಿou ಚಿಡಿe ಠಿಚಿಡಿssis….” ಎಂದ.

ಪಟೇಲ ಅಕ್ಷರಶಃ ಸೋಫಾದಲ್ಲಿ ಜಿಗಿದುಬಿದ್ದ : “ಔಜಿ ಛಿouಡಿse ಟಿoಣ…. ಔಜಿ ಛಿouಡಿse ಟಿoಣ….” ವಿವರಣೆ ಕೊಡುವ ಮಾತಿನಲ್ಲಿ ಪ್ರತಿಭಟನೆಯ ಅಂಶವೇ ದೊಡ್ಡದಾಗಿತ್ತು. ಫಿರೋಜ್ ಹಾಗೂ ದಸ್ತೂರರು ಬೇಕಾದ್ದಕ್ಕಿಂತ ಹೆಚ್ಚು ಹೊತ್ತು ಒಳಗಿದ್ದಾರೆ ಅನ್ನಿಸಿ_ಅome oಟಿ ಜಿeಟಟoತಿs_ಥಿouಡಿ beeಡಿ is geಣಣiಟಿg vಚಿಡಿm…” ಎಂದು ಕರೆದೊಡನೆ ಇಬ್ಬರೂ ಲಗುಬಗೆಯಿಂದ ಹೊರಗೆ ಬಂದು ತಾವು ಅವರಿಬ್ಬರನ್ನೇ ಬಿಟ್ಟು ಒಳಗೆ ಹೋಗಬೇಕಾಗಿ ಬಂದದ್ದರ ಬಗ್ಗೆ ಕ್ಷಮೆ ಯಾಚಿಸಿ ತಮ್ಮ ತಮ್ಮ ಬಿಯರ್ ಮಗ್ಗುಗಳನ್ನೆತ್ತಿ ‘ಚಿಯರ್ಸ್’ ಎಂದರು.

“ನೀವು ಕೂಡಲೇ ಹೊರಗೆ ಬಂದದ್ದು ಒಳ್ಳೆಯದಾಯಿತು. ನಾನು ಕೇಳಹತ್ತಿದ ಪ್ರಶ್ನೆಗಳಿಂದ ಪಾಪ, ಪಟೇಲರಿಗೆ ಉಂಟಾದ ಫಜೀತಿ ಹೇಳತೀರದು….” ನಾಗಪ್ಪ ತುಂಟತನದಿಂದ ಮುಗುಳುನಗುತ್ತ ಪಟೇಲನ ಕಡೆಗೆ ನೋಡಿದಾಗ ಪಟೇಲನ ಲಕ್ಷ್ಯವೆಲ್ಲ ಸೀಲಿಂಗಿನ ಬಣ್ಣದ ಮೇಲೂರಿತ್ತು.

ನಾಗಪ್ಪ ಅಲ್ಲಿಗೇ ತಡೆಯಲಿಲ್ಲ_”ನೀವು ಇಲ್ಲಿಂದ ಹೊರಟುಹೋದದ್ದೇ ತಡ, ನಮ್ಮ ಪಟೇಲ ಸಾಹೇಬರು ಎರಡೂ ಬಿಸಿನೆಸ್ಸುಗಳನ್ನು ಒಂದೇ ಕಾಲಕ್ಕೆ ಆರಂಭಿಸಿಬಿಟ್ಟರು_ನನಗೆ ಬಿಯರ್ ಕುಡಿಸುವುದರ ಜತೆಗೆ ನೀವು ಅವರಿಗೆ ವಹಿಸಿಕೊಟ್ಟ ಕೆಲಸವನ್ನೂ, ಅವರು ನನಗೆ ಹೇಳಿದ್ದರ ಮುಖ್ಯ ಸಾರಾಂಶ ಇಷ್ಟೆಂದು ನನ್ನ ಗ್ರಹಿಕೆ : ಬೋರ್ಡು ಮೆಂಬರರಿಗೆ ಕಳಿಸಿದ ಸಹಿಯಿಲ್ಲದ ಪತ್ರ ನಾನು ಬರೆದದ್ದು ಹೌದು ಎಂದಾದರೆ, ನನಗೇನೋ ದೊಡ್ಡ ಆಫರ್ ಬರಲಿದೆಯಂತೆ. ನಾನದನ್ನು ಸ್ವೀಕರಿಸಿ ತೆಪ್ಪಗೆ ಬಾಯಿ ಮುಚ್ಚಿಕೊಂಡಿರುವದು ಒಳ್ಳೆಯದು ಎಂದು ಅವರ ಸಲಹೆಯೆಂದು ತೋರುತ್ತದೆ…. ಅಲ್ಲವೇ ಪಟೇಲರೆ ?” ಪಟೇಲನ ಕಡೆಗೆ ತಿರುಗಿದರೆ ಅಲ್ಲಿ ಅವನು ತನ್ನ ಜಾಗದಲ್ಲಿ ಇರಲೇ ಇಲ್ಲ. ಇವನು ಮಾತಿಗೆ ಆರಂಭಿಸಿದ ರೀತಿ ನೋಡಿಯೇ ಬೆದರಿದವನು ಬಿಯರಿಗೆ ಹೆಚ್ಚಿನ ಜಾಗ ಮಾಡಿಕೊಡುವ ನೆಪದಿಂದೆಂಬಂತೆ ಕ್ಲೋಕ್-ರೂಮ್ ಹುಡುಕುತ್ತ ಒಳಗೆ ಹೋಗಿದ್ದ.

ದಸ್ತೂರ್ ಹಾಗೂ ಫಿರೋಜರಂತೂ ಇವನ ಮಾತಿನ ರೀತಿಗೆ ಥಕ್ಕಾಗಿಬಿಟ್ಟರು. ಈ ಹತ್ತು-ಹನ್ನೆರಡು ದಿನಗಳಲ್ಲಿ ಇವನಲ್ಲಿ ಹೀಗೆ ಅಮೂಲಾಗ್ರವಾಗಿ ಬದಲಾಗುವಂತಹದು ಏನು ನಡೆಯಿತೋ ಎನ್ನುವದು ತಿಳಿಯದೇ ಅವರು ದಿಗ್ಭ್ರಮೆಗೊಂಡರು. ಕಾರಣ ಏನೇ ಇರಲಿ, ಬದಲಾದದ್ದಂತೂ ನಿಃಸಂಶಯ. ಇವನ ವ್ಯಕ್ತಿತ್ವದ ಬಗ್ಗೆ ಫಿರೋಜ್ ಈ ಮೊದಲು ಮಾಡಿಕೊಟ್ಟ ಕಲ್ಪನೆಗೂ ಪ್ರತ್ಯಕ್ಷದಲ್ಲಿ ಕಂಡವನಿಗೂ ಇರುವ ಅಂತರವನ್ನು ಕಂಡು ದಸ್ತೂರ್ ಒಳಗೊಳಗೇ ಫಿರೋಜನ ಬಗ್ಗೆ ಸಿಡಿಮಿಡಿಗೊಂಡ. ಫಿರೋಜನೇ ತಾನು ಸಿಕ್ಕಿಸಿಕೊಂಡ ಈ ಪೇಚಿನ ಪ್ರಸಂಗವನ್ನು ನಿಭಾಯಿಸಿಕೊಳ್ಳಲೀ ಎಂದು ಕೈಚೆಲ್ಲಿ ಕೂತ ಥರ ನಾಗಪ್ಪನ ಕಡೆಗೆ ಕೌತುಕ ತುಂಬಿದ ದೃಷ್ಟಿಯಿಂದ ನೋಡುತ್ತ ಬಿಯರ್ ಸೇವಿಸಹತ್ತಿದ. ಸ್ವಭಾವತಃ ಪುಕ್ಕಲು-ಪ್ರಕೃತಿಯವನಾದ ಫಿರೋಜ್ ದಸ್ತೂರನ ಈ ನಿಲುವಿನಿಂದ ಇನ್ನಷ್ಟು ಗಾಬರಿಯಾದ. ಇದನ್ನು ಸೂಕ್ಷ್ಮವಾಗಿ ಗ್ರಹಿಸಿದ ನಾಗಪ್ಪ, ಇಷ್ಟೊಂದು ಸುಲಭವಾಗಿ ತನ್ನ ಪರವಾಗಿ ಬೆಳೆಯುತ್ತಿದ್ದ ಸನ್ನಿವೇಷವನ್ನು ವ್ಯ್ರ್ಥವಾಗಲು ಬಿಡಬಾರದು ಎನ್ನುವ ಹಟದಿಂದೆಂಬಂತೆ ಅಂದ :

“ಆ ಪತ್ರ ಬರೆದದ್ದು ನಾನಲ್ಲ. ಆ ಪತ್ರದಲ್ಲಿ ಏನೇನು ಇದೆ ಎಂಬುದು ಕೂಡ ನನಗೆ ಗೊತ್ತಿಲ್ಲ. ಇಷ್ಟೇ : ಆ ಪತ್ರದಲ್ಲಿ ನಮೂದಿಸಿರಬಹುದಾದ ಕೆಲವರ ಕರಾಮತಿಗಳ ಬಗ್ಗೆ ನನ್ನ ಹತ್ತಿರ ಸಾಕಷ್ಟು ಮಾಹಿತಿ ಇದೆ. ಅದರಿಂದ ಈ ತನಿಖೆಯ ಆಯೋಗಕ್ಕೆ ಉಪಯೋಗವಾಗಬಹುದಾದ ಪಕ್ಷದಲ್ಲಿ ನಾನು ಯಾವ ಬಕ್ಷೀಸಿನ ಅಪೇಕ್ಷೆ ಇಲ್ಲದೇನೆ ನಿಮ್ಮ ಮುಂದೆ ಇರಿಸಲು ಸಿದ್ಧನಿದ್ದೇನೆ.”

ಫಿರೋಜನಿಂದ ಇನ್ನು ಸುಮ್ಮನಿರುವದು ಸಾಧ್ಯವಾಗಲಿಲ್ಲ. ತನಗೆ ಬಂದ ಸಿಟ್ಟನ್ನು ಅಡಗಿಸುವ ಪ್ರಯತ್ನ ಕೂಡ ಮಾಡದೇ ಗುಡುಗಿದ :

“ಆoಟಿ;ಣ be imಠಿeಡಿಣiಟಿeಟಿಣ. ಇಲ್ಲಿ ನಿನ್ನ ಬಗ್ಗೆ ತನಿಖೆ ನಡೆದಿದೆಯೇ ಹೊರತು….ನೀನೇ ತನಿಖೆ ನಡೆಸಲು ಹೊಟಂತೆ ಮಾತನಾಡಬೇಡ.”

ನಾಗಪ್ಪ, ಫಿರೋಜನ ಮಾತುಗಳಿಂದ ಆಶ್ಚರ್ಯಪಡುತ್ತಿರುವಾಗಲೂ ಸನ್ನಿವೇಶದಲ್ಲಿಯ ಈ ಹೊಸ ಸಾಧ್ಯತೆಯನ್ನು ಕಂಡು ಪುಲಕಿತನಾಗಿ ಮುಗುಳುನಕ್ಕ : “ಅದರ ಅರಿವು ನನಗೆ ಇದೆ ಫಿರೋಜ್…. ಈ ಪರಿಸ್ಥಿತಿಗೆ ವ್ಯತಿರಿಕ್ತವಾದದ್ದೇನನ್ನೂ ನಾನು ಅಂದಿಲ್ಲ…. uಟಿಟess ತಿe ಚಿಡಿe ಠಿಡಿomಠಿಣeಜ bಥಿ ouಡಿ uಟಿಛಿoಟಿsಛಿious ಣo heಚಿಡಿ ಣhiಟಿgs ತಿhiಛಿh ತಿeಡಿe ಟಿoಣ sಚಿiಜ.”
ನಾಗಪ್ಪನ ಈ ಮಾತುಗಳಿಂದ ಫಿರೋಜ್ ಇನ್ನಷ್ಟು ಕೆರಳಿದ. ಆಗ ದಸ್ತೂರ್ ಒಮ್ಮೆಲೇ_ಮಾತಿಗೆ ಪೂರ್ವಯೋಜಿತ ದಿಕ್ಕು ಕೊಡಲು ಕಾದು ಕೂತವನ ಹಾಗೆ_ಕೇಳಿದ :
‘ಓಕೇ ಮಿಸ್ಟರ್ ನಾಗನಾಥ್. ಹೇಳಿ : ತಂದೆ-ತಾಯಿಗಳಿಗೆ ನೀವು ಒಟ್ಟೂ ಎಷ್ಟು ಮಂದಿ ಮಕ್ಕಳು ?”
ನಾಗಪ್ಪ ನಿರುತ್ತರನಾದ : ಎಲ್ಲ ಬಿಟ್ಟು ತನಿಖೆ ಇದೇ ಪ್ರಶ್ನೆಯಿಂದೇಕೆ ಆರಂಭವಾಯಿತು ? ತೀರ ಸಹಜವೆಂದು ತೋರುತ್ತಿದ್ದ ಈ ಪ್ರಶ್ನೆ ನನ್ನ ಮೇಲೆ ಇದೇಕೆ ಇಷ್ಟೊಂದು ಭಾವನಾತ್ಮಕ ಆಘಾತ ಉಂಟುಮಾಡುತ್ತಿದೆ ? ಈ ಪ್ರಶ್ನೆ ಸಹಜವಾದದ್ದೇ ? ಅಥವಾ….ಶ್ರೀನಿವಾಸ ಕೊನೆಗೂ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ತನ್ನ ಬಗ್ಗೆ ಗುಪ್ತ ಮಾಹಿತಿಯನ್ನು ಒದಗಿಸಿರಬಹುದೆ ? ಬೇರೆ ಯಾವುದೇ ಪ್ರಶ್ನೆಯಿಂದ ತನಿಖೆ ಆರಂಭವಾಗಿದ್ದರೂ ನಾಗಪ್ಪ ಹೀಗೆ ಕೇಳಬೇಕೆಂದು ನಿಶ್ಚಯಿಸಿಕೊಂಡಿದ್ದ : ‘ದಯಮಾಡಿ_ಈ ತನಿಖೆಯ ಉದ್ದೇಶವೇನು ? ಅದನ್ನು ನಡೆಸುವ ಅಧಿಕಾರ ನಿಮಗೆ ಯಾರು ಕೊಟ್ಟಿದ್ದಾರೆ ? ಎಂಬುದನ್ನು ಸ್ಪಷ್ಟಪಡಿಸಿರಿ ಇಲ್ಲಾವದರೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ ಕೊಡುವದು ಶಕ್ಯವಿಲ್ಲ….’ಆದರೆ ಈಗ ದಸ್ತೂರ್ ಕೇಳಿದ ಪ್ರಶ್ನೆಯಿಂದ ಮಾತ್ರ ನಾಗಪ್ಪ ತಬ್ಬಿಬ್ಬಾದ : ಈ ಮುಖಾಮುಖಿಯನ್ನು ಇದಿರಿಸಲು ಬೇಕಾದ ಸಂಕಲ್ಪ ಬಲವನ್ನು ನಿಶ್ಚಯಿಸಿದ ಅನೇಕ ಶಕ್ತಿಗಳಲ್ಲಿ ಮಹತ್ವದ್ದೊಂದು ಐನ್ ಗಳಿಗೆಯಲ್ಲಿ ಕುಸಿದುಬೀಳುತ್ತಿದೆ ಎಂಬಂತಹ ಅನುಭವದಿಂದ ಧೃತಿಗೆಡಹತ್ತಿದ.

ಫಿರೋಜ್ ಈ ಸಂಧಿಯನ್ನು ವ್ಯರ್ಥಹೋಗಲು ಬಿಡಲಿಲ್ಲ : “ಅomಚಿ oಟಿ ಓಚಿg, ಜoಟಿ’ಣ ಟeಣ ಥಿouಡಿ subಛಿoಟಿsಛಿious ಡಿeಚಿಜ meಚಿಟಿiಟಿgs ತಿhiಛಿh ಚಿಡಿe ಟಿoಣ ಣheಡಿe is so simಠಿಟe ಚಿ quesಣioಟಿ.” ಫಿರೋಜನ ಈ ಮಾತುಗಳಿಂದ ಅವನು ಬಯಸಿದ ಪರಿಣಾಮ ದಸ್ತೂರನ ಮೇಲೆ ಆಗದೇ ಉಳಿಯಲಿಲ್ಲ : ತನ್ನ ಪ್ರಶ್ನೆಯಿಂದ ನಾಗಪ್ಪನ ಮನಸ್ಸಿಗೆ ಆಘಾತವಾಗಿದೆ ಎನ್ನುವುದು ಅವನ ಲಕ್ಷ್ಯಕ್ಕೆ ಬರದೇ ಇರಲಿಲ್ಲ. ಆದರೆ ಫಿರೋಜನ ಧ್ವನಿಯಲ್ಲಿಯ ವ್ಯಂಗ್ಯವೇ ನಾಗಪ್ಪನಿಗೆ ಆಹ್ವಾನವಾಯಿತು :

“ಕ್ಷಮಿಸಿ ಮಿಸ್ಟರ್ ದಸ್ತೂರ್, ಅನಿರೀಕ್ಷಿತವಾದ ನಿಮ್ಮ ಪ್ರಶ್ನೆ ನನ್ನ ವ್ಯಕ್ತಿತ್ವದ ಒಂದು ಸೂಕ್ಷ್ಮಸ್ಥಾನವನ್ನು ತಟ್ಟಿದ್ದು ನಿಜ. (ಹೀಗೇ ಹೇಳಹೊರಟರೆ ನಿಮಗೆ ಅರ್ಥವಾಗಲಿಕ್ಕಿಲ್ಲ. ಅರ್ಥವಾಗುವಂತೆ ಹೇಳಲಿಕ್ಕೆ ಸಮಯ ಸಾಲದು.) ಒಂದನ್ನು ಹೇಳಿ_ಯಾಕಂದರೆ ಇದು ನನ್ನ ಕರಿಯರಿನ ಪ್ರಶ್ನೆ : ಈ ತನಿಖೆಯ ಉದ್ದೇಶವೇನು ? ಅದನ್ನು ನಡೆಸಲು ನಿಮ್ಮನ್ನು ನೇಮಿಸಿದವರು ಯಾರು ? ಅಧಿಕಾರ ಕೊಟ್ಟವರು ಯಾರು ? ನನ್ನ ಮೇಲಿನ ಆರೋಪಗಳಾದರೂ ಏನು ? ಹೊರಿಸಿದವರು ಯಾರು ?_ಈ ಪ್ರಶ್ನೆಗಳಿಗೆ ಉತ್ತರ ಸಿಗದೇ ನಿಮ್ಮ ಯಾವ ಪ್ರಶ್ನೆಗಳಿಗೂ ನಾನು ಉತ್ತರ ಕೊಡುವದು ಅಸಾಧ್ಯ….”

ಯಾವುದೇ ಬಗೆಯ ನಾಟಕೀಯತೆ ಇಲ್ಲದೇ, ದಸ್ತೂರನ ಕಣ್ಣುಗಳಲ್ಲಿ ಕಣ್ಣುನೆಟ್ಟು ತನಗೆ ಆಡಲು ಶಕ್ಯವಾದ ಈ ಮಾತಿನಿಂದ ನಾಗಪ್ಪನಿಗೆ ಸಮಾಧಾನವಾಗದೇ ಇರಲಿಲ್ಲ. ಉಳಿದವರ ಮೇಲೆ ಅದು ಉಂಟುಮಾಡಿರಬಹುದಾದ ಪರಿಣಾಮ ತಿಳಿಯುವ ಕುತೂಹಲ ಹುಟ್ಟಲಿಲ್ಲ. ಯಾಕೆಂದರೆ ಅಂತಹ ಉದ್ದೇಶವೇ ಆ ಮಾತಿಗೆ ಇರಲಿಲ್ಲ.

ಇತ್ತ ದಸ್ತೂರನೂ ಈ ತನಿಖೆಗೆ ಬೇಕಾದ ಅನೌಪಚಾರಿಕತೆಯನ್ನು ಕಾಯ್ದುಕೊಂಡು ಗಂಭೀರನಾಗಲು ಈಗ ನಿರ್ಧರಿಸಿದಂತಿತ್ತು : ಬಿಯರಿನ ಪಾತ್ರೆಯನ್ನು ಟೀಪಾಯಿಯ ಮೇಲಿಟ್ಟು, ಕೆಲ ಹೊತ್ತಿನ ಮೊದಲಷ್ಟೇ ಬದಿಯ ಕೋಣೆಯಿಂದ ತಂದಿರಿಸಿದ ಫೈಲನ್ನು ಕೈಗೆ ತೆಗೆದುಕೊಂಡು, ಚೂಪಾಗಿ ಕೆತ್ತಿ ತಂದ ಪೆನ್ಸಿಲ್ ಒಂದನ್ನು ಒಮ್ಮೆ ಫೈಲ್ ಮೇಲೆ ಬಡಿಯುತ್ತ, ಇನ್ನೊಮ್ಮೆ ಮೂಸಿನೋಡುವ ರೀತಿ ಮೂಗಿನ ಹತ್ತಿರ ಹಿಡಿಯುತ್ತ, ಮಗದೊಮ್ಮೆ ಗಲ್ಲದ ಮೇಲೆ ಒತ್ತುತ್ತ, ಕೆಲಹೊತ್ತು ಮುಗುಳುನಗೆ ಬೆರೆಸಿದ ಮೌನಧರಿಸಿ ಕುಳಿತ : ಒಂದೂ ಮಗ ಸಿದ್ಧವಾಗ್ತಾಽಽ ಇದಾನೆ : ನಾಗಪ್ಪನೂ ಉತ್ತರ ಕೊಡಲು ಸಿದ್ಧನಾಗಿ ದಸ್ತೂರ್ ಬಾಯಿ ತೆರೆಯುವುದನ್ನೇ ಕಾಯುತ್ತ ಕುಳಿತ : ಇನ್ನು ಹೆದರಕೂಡದು. ಭಾವುಕನಾಗಕೂಡದು. ಫಕ್ಕನೆಂಬಂತೆ ಒಂದು ಸಂಶಯ : ತನಗೆ ನೇರವಾಗಿ ಹೇಳಲು ಹಿಂದೆಗೆದದ್ದನ್ನು ಶ್ರೀನಿವಾಸ ಫಿರೋಜನಿಗೆ ತಿಳಿಸಿಲ್ಲವಷ್ಟೇ ? ತನಿಖೆಯ ದಿನ ಮುಂದೆ ಬೀಳಲು ಕೊನೆಯ ಗಳಿಗೆಯಲ್ಲಿ ಶ್ರೀನಿವಾಸನಿಂದ ದೊರೆತಿರಬಹುದಾದ ಮಾಹಿತಿಯೇ ಕಾರಣ ಅಲ್ಲವಷ್ಟೇ ? ಈ ಸಂಶಯದಿಂದ ನಾಗಪ್ಪನ ಧೈರ್ಯ ಮಾತ್ರ ಎಳ್ಳಷ್ಟೂ ಕುಗ್ಗಲಿಲ್ಲ. ಬದಲು ದಸ್ತೂರನ ಪ್ರಶ್ನೆಯನ್ನು ಕೇಳುವ ಆತುರ ಹೆಚ್ಚಿತು_ಅಷ್ಟೇ. ಆ ಆತುರವನ್ನು ಮೋರೆಯಮೇಲೆ ಸ್ಪಷ್ಟವಾಗಿ ಮೂಡಿಸಿ ದಸ್ತೂರನನ್ನೇ ಎವೆಯಿಕ್ಕದೇ ನೋಡುತ್ತ ಕೂತ.

ದಸ್ತೂರ್ ಪ್ರಶ್ನೆ ಕೇಳಲು ತೆಗೆದುಕೊಳ್ಳುತ್ತಿದ್ದ ವೇಳೆ ಪಟೇಲ್ ಹಾಗೂ ಫಿರೋಜರ ಮೇಲೂ ಪರಿಣಾಮ ಮಾಡುತ್ತಿದ್ದಂತೆ ತೋರಿತು : ಇಬ್ಬರೂ ಕೂತಲ್ಲೇ ಚಡಪಡಿಸುತ್ತಾ ಕುಂಡೆ ಸರಿಸಿದರು. ದಸ್ತೂರ್ ಬಾಯಿ ತೆರೆಯಲು ಹವಣಿಸುತ್ತಿದ್ದ. ಆದರೆ ಶಬ್ದವಾಗಲು ಬಯಸುತ್ತಿದ್ದ ಪ್ರಶ್ನೆ ಒಳಗೆಲ್ಲೋ ತಡವರಿಸುತ್ತಿದ್ದುದನ್ನು ನಾಗಪ್ಪನ ಚೂಪು ದೃಷ್ಟಿಯಿಂದ ಮರೆಯಿಸಲಾಗಲಿಲ್ಲ : ಗಾಳಾ ಹಾಕ್ತಾನೆ ಎರಡೂ ಮಗ. ಲೆಕ್ಕಾ ಹಾಕ್ತಾನೆ_ಎಲ್ಲಿಂದ ಶುರು ಮಾಡಲಿ ? ಹೇಗೆ ಶುರು ಮಾಡಲಿ ? ಹೇಗಾದರೂ ಶುರುಮಾಡೋಽಽ….ಈ ತನಿಖೆಯ ಭವಿತವ್ಯ ನೀನು ಹೇಗೆ ಆರಂಭಮಾಡುತ್ತೀ ಎಂಬುದನ್ನೇನೂ ಅವಲಂಬಿಸಿಲ್ಲವೋ ; ನಾನು ಹೇಗೆ ಕೊನೆಗೊಳಿಸುತ್ತೇನೆ ಎಂಬುದರ ಮೇಲೆ ನಿಂತಿದೆ. ಮತ್ತು ನಾನು ಹೇಗೆ ಕೊನೆಗೊಳಿಸುತ್ತೇನೆ ಎಂಬುದು ನನಗೆ ಗೊತ್ತಿದೆ. ನಿಮಗೂ ಗೊತ್ತಾಗುತ್ತದೆ. ಉತಾವಳಿ ಮಾಡಬೇಡ. ನ್ಯಾಯವನ್ನು ಬೇಡಲು ಬಂದಿಲ್ಲ. ಬಂದದ್ದು ನೀವು ಎಸಗಿದ ಅನ್ಯಾಯವನ್ನು ಬಯಲಿಗೆಳೆಯಲು. ಬಾ, ನೀವು ಬರುವುದನ್ನೇ ಕಾಯುತ್ತ ಇದ್ದೇನೆ ಕಳೆದ ಎರಡು ವಾರಗಳಿಂದಲೂ….

ನಾಗಪ್ಪ ಬಿಯರಿನ ತಂಪು ಗುಟುಕೊಂದನ್ನು ಹೀರಿದ ; ತುಂಬ ಸಮಾಧಾನ ಎನಿಸಿತು. ಫಿರೋಜ್ ಪೈಪ್ ಸ್ವಚ್ಛ ಮಾಡುವ ಉದ್ಯೋಗದಲ್ಲಿ ನಿರತನಾಗಿದ್ದ. ಪಟೇಲ್ ಬಿಯರಿನ ಅಮಲನ್ನು ಆಸ್ವಾದಿಸುತ್ತ, ದಸ್ತೂರನ ಮುಂದಿನ ಚಾಲಿನ ಹಾದಿ ಕಾಯುತ್ತ ಚಡಪಡಿಸುತ್ತಿದ್ದ. ಕುಂಡೆ ಸರಿಸುತ್ತಿದ್ದ. ಭುಜ ಹಾರಿಸುತ್ತಿದ್ದ. ದಸ್ತೂರ್ ಮಹದ್ಗಾಂಭೀರ್ಯದಲ್ಲಿ ಆರಂಭಿಸಿದ. ಅವನ ವ್ಯಕ್ತಿತ್ವಕ್ಕೆ ಶೋಭಿಸದ ಈ ಗಂಭೀರ್ಯದಲ್ಲಿಯ ಸುಳ್ಳುತನವೇ ನಾಗಪ್ಪನ ಸಿಟ್ಟಿಗೆ ಕಾರಣವಾಯಿತು. ಆದರೂ ತಾಳ್ಮೆ ನಟಿಸುತ್ತ ಕುಳಿತ, ಕೇಳಿದ.

ದಸ್ತೂರ್_”ಕಳೆದ ಎರಡು ವಾರಗಳಿಂದ ನೀವು ಪಡಬೇಕಾಗಿ ಬಂದ ನೋವು, ಆತಂಕಗಳನ್ನು ನಾನು ಸುಲಭವಾಗಿ ಊಹಿಸಬಲ್ಲೆ, ಆದರೂ….”

ನಾಗಪ್ಪನಿಂದ ಈ ಸುಳ್ಳನ್ನು ಸಹಿಸುವುದಾಗಲಿಲ್ಲ. ಫಿರೋಜನ ಕೈಕೆಳಗೆ ಅವನ ಇಂತಹವೇ ಸುಳ್ಳಿನ ಕಂತೆಗಳನ್ನು ಕೇಳುತ್ತ ಹದಿನೆಂಟು ವರುಷ ಹೇಗೆ ಕೆಲಸ ಮಾಡಿದೆ ಎನ್ನುವುದರ ಬಗ್ಗೆ ಈಗ ಆಶ್ಚರ್ಯವೆನಿಸಿತು :

“ನೀವು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಕಾಗಿಲ್ಲ. ಮಿಸ್ಟರ್ ದಸ್ತೂರ್. ಮೇಲಾಗಿ, ನನ್ನ ನೋವನ್ನು ಆತಂಕವನ್ನು ನೀವು ಎಂದೂ ಊಹಿಸಲಾರಿರಿ. ಯಾಕೆಂದರೆ ನಾನಿದ್ದ ಸನ್ನಿವೇಶದಲ್ಲಿ ನೀವು ಇಲ್ಲವೇ ಇಲ್ಲ. ಆದರೂ ನಿಮ್ಮ ಅಂತಃಕರಣಕ್ಕೆ ಅಭಾರಿಯಾಗಿದ್ದೇನೆ….”

ನಾಗಪ್ಪನ ಮಾತಿನಲ್ಲಿಯ ಪ್ರತಿಭಟನೆಯ ಧ್ವನಿ ಉಳಿದ ಮೂವರ ಲಕ್ಷ್ಯಕ್ಕೆ ಬರದೇ ಇರುವುದು ಶಕ್ಯವಿರಲಿಲ್ಲ. ಕಣ್ಣೆದುರಿನ ಸೋಫಾದಲ್ಲಿ ಸಿಡಿಮಿಡಿಗೊಳ್ಳುತ್ತ ಆಸ್ಫೋಟನದ ಸಂಧಿ ಕಾಯುತ್ತಿದ್ದ ಬಂಡಾಯವನ್ನು ಕೂಡಲೇ ಹತೋಟಿಗೆ ತರಬೇಕಾದರೆ ತಾನು ಕಳೆದ ಮೂವತ್ತು ವರ್ಷಗಳ ವ್ಯಾವಸಾಯಿಕ ಅನುಭವದಲ್ಲಿ ಕಲಿತ ಎಲ್ಲ ಚಾಣಾಕ್ಷತೆಯನ್ನೂ ಈಗ ಉಪಯೋಗಿಸಬೇಕಾದದ್ದರ ಗರಜನ್ನು ಕಂಡುಕೊಂಡ ದಸ್ತೂರ್, ನಾಗಪ್ಪನ ಮಾತುಗಳಿಂದ ವಿಚಲಿತನಾಗದೇ :

” I ಞಟಿoತಿ, I ಞಟಿoತಿ, ಠಿಟeಚಿse ಜoಟಿ;ಣ ಣಚಿಞe me ಟiಣeಡಿಚಿಟಟಥಿ. ಇveಡಿಥಿ mಚಿಟಿ hಚಿs his oತಿಟಿ sಣಥಿಟe oಜಿ bಡಿeಚಿಞiಟಿg ಣhe iಛಿe…. ಇನ್ನೊಬ್ಬನ ಅಪರಿಚಿತ ವಿಶ್ವವನ್ನು ಪ್ರವೇಶಿಸುವ ಅಪರಿಚಿತನಿಗೆ ನಮ್ಮ ವಿಶ್ವದಲ್ಲಿ ಬರಮಾಡಿಕೊಳ್ಳುವ ಪರಿ ವ್ಯಕ್ತಿವ್ಯಕ್ತಿಗೆ ಭಿನ್ನವಾದದ್ದೆಂದು ಅನಿಸುವದಿಲ್ಲವೇ ? ಈಗ ನಾವೇ, ಈವರೆಗೂ ಪರಸ್ಪರ ಪರಿಚಯವಿಲ್ಲದೆಯೂ ಗೆಳೆಯರಾಗಲು ಹೊರಟಿದ್ದೇವೆ. ಯಾವ ಸಂಕೋಚವೂ ಇಲ್ಲದೇನೆ ನನ್ನನ್ನು ನಿಮ್ಮ ಗೆಳೆಯನೆಂದು ತಿಳಿಯಿರಿ, ಮಿಸ್ಟರ್ ನಾಗನಾಥ. ಹಿತೈಷಿಯೆಂದು ತಿಳಿಯಿರಿ. ದಯಮಾಡಿ ಎಲ್ಲ ದುರಾಗ್ರಹಗಳನ್ನೂ ಸದ್ಯ ಬದಿಗೆ ತಳ್ಳಿರಿ_ನಾವಿಬ್ಬರೂ ತಳ್ಳೋಣ. ಮನಸ್ಸಿನಲ್ಲಿಯ ಎಲ್ಲ ಅಪನಂಬಿಕೆಗಳನ್ನೂ, ನಾವು ನಾವು ಹೇಳಲಿದ್ದುದನ್ನು ತೆರೆದ ಮನಸ್ಸಿನಿಂದ ಕೇಳೋಣ.”

ಕೈಯಲ್ಲಿ ಹಿಡಿದ ಪಾತ್ರೆಯಲ್ಲಿಯ ಬಿಯರಿನಷ್ಟೇ ತಂಪಾದ ಈ ಮಾತು ನಾಗಪ್ಪನ ಮೇಲೆ ದಸ್ತೂರ್ ಬಯಸಿದ ಪರಿಣಾಮ ಮಾಡದೇ ಇರಲಿಲ್ಲ. ಹೊಟ್ಟೆಯೊಳಗೆ ಅದಾಗಲೇ ಸೇರಿದ ಬಿಯರೂ ಈ ಪರಿಣಾಮದಲ್ಲಿ ಭಾಗವಹಿಸಿತ್ತು. ಇದನ್ನರಿತ, ಹೊರಗಿನಿಂದ ಪೆದ್ದನಂತೆ ಕಂಡರೂ ಉಳಿದಿಬ್ಬರಿಗಿಂತ ಧೂರ್ತತನದಲ್ಲಿ ಮೇಲುಗೈಯಾದ ಪಟೆಲ್ ಕೂಡಲೇ ಖಾಲಿಯಾಗಹತ್ತಿದ ಬಿಯರಿನ ಪಾತ್ರೆಗಳನ್ನು ತುಂಬಹತ್ತಿದ. ಆಗಿನಿಂದಲೂ ಸರಿಯಾದ ಮಾತುಕತೆಯನ್ನೇ ಅಸಾಧ್ಯ ಮಾಡಿದ ನಾಗಪ್ಪನ ಪ್ರತಿಭಟನೆಯ ನಿಲುವಿಗೆ_ತಾತ್ಪೂರ್‍ತಿಕವಾಗಿಯಾದರೂ_ತಡೆ ಹಾಕಿದ್ದು, ದಸ್ತೂರನ ಮಾತುಗಳಿಂದ ಹುಟ್ಟಿದ ದಿಗಿಲೇ : ತಮ್ಮ ಮಾತಿಗೆ ಕಿವಿಗೊಡಲು ಸಿದ್ಧನಾದುದನ್ನು ಗಮನಿಸಿಯೇ ಸಂತೋಷಪಟ್ಟ ಉಳಿದ ಮೂವರೂ ಬಿಯರಿನ ಪಾತ್ರೆಗಳನ್ನು ಏಕಕಾಲಕ್ಕೆ ಎತ್ತಿದಾಗಿನ ಆಕಸ್ಮಿಕದಿಂದ ತಾವೇ ಮುಜುಗರಪಟ್ಟರು. ಬಿಯರಿನ ಮತ್ತಿಗೆ ಖುಶಿಯಾದ ನಾಗಪ್ಪ ಮಾತ್ರ ಅದರ ಕಡೆಗೆ ತನ್ನ ಲಕ್ಷ್ಯ ಕೊಡಲಿಲ್ಲ. ದಸ್ತೂರನ ಮುಂದಿನ ಮಾತುಗಳ ಹಾದಿ ಕಾದ.

“ನೆನಪಿದೆಯೆ ?_ನಾನು ಈ ಭೇಟಿಯನ್ನು boಣh ಚಿಟಿ iಟಿಣeಡಿvieತಿ ಚಿಟಿಜ iಟಿvesಣigಚಿಣioಟಿ ಎಂದು ಕರೆದದ್ದು ? ‘ಇಂಟರ್‍ವ್ಯೂ’ ಎಂದು ಯಾಕೆ ಕರೆದೆನೆಂದರೆ_ನಿಮಗೆ ಒಂದು ಹೊಸ ಹುದ್ದೆಗೆ_ ನಿಮ್ಮಿಂದ ಕಲ್ಪಿಸಲೂ ಅಸಾಧ್ಯವಾಗುವಷ್ಟರ ಮಟ್ಟಿಗೆ ಹೊಸದಾದ ಸ್ಥಾನಕ್ಕೆ ಬಡತಿಯಾಗುವ ಸಂಭವ ಇದೆ. ನಂಬುವಿರಾ_ನೇಮಣೂಕಿಯ ಜಾಗ ಹಾಂಕಾಂಗ್ ಎಂಬುದನ್ನು ? ಇನ್‌ವೆಸ್ಟಿಗೇಶನ್ ಎಂದು ಕರೆದದ್ದರ ಕಾರಣವಿಷ್ಟೇ : ಕೆಲವು ತಿಂಗಳ ಹಿಂದೆ ಫ್ಯಾಕ್ಟರಿಯಲ್ಲಿ ನಡೆದ ಬೆಂಕಿಯ ಅನಾಹುತದಲ್ಲಿ ನಿಮ್ಮ ಕೈಯಿದೆ ಎಂಬ ದುಷ್ಟ ಕಂಪ್ಲೇಂಟೊಂದು ಈ ಬಡತಿಗೆ ಅಡ್ಡಬಂದಿದೆ.”

ಈ ಭೇಟಿಯ ಭವಿತವ್ಯವೇ ದಸ್ತೂರ್ ಅಷ್ಟೊಂದು ಚಾಲಾಖಿನಿಂದ ಮಾಡಿದ ಮಂಡನೆಗೆ ನಾಗಪ್ಪನಿಂದ ಬರುವ ಪ್ರತಿಕ್ರಿಯೆಯನ್ನು ಅವಲಂಬಿಸಿದೆ ಎನ್ನುವ ಹಾಗೆ ಫಿರೋಜ್ ಅತ್ಯಂತ ಕಾತರದಿಂದ ಅವನತ್ತ ನೋಡಿದ. ಅವನ ಪ್ರತಿಕ್ರಿಯೆ ಬರಲು ತಡವಾಗಲಿಲ್ಲ. ಆದರೆ ಅದು ಬಂದದ್ದು ಫಿರೋಜ್ ಇಷ್ಟು ದಿನ ಅರ್ಥಮಾಡಿಕೊಂಡಥ ನಾಗಪ್ಪನ ವ್ಯಕ್ತಿತ್ವದ ನೆಲೆಯಿಂದಲ್ಲವಾಗಿತ್ತು. ಒಂದರ್ಥದಲ್ಲಿ, ತನ್ನ ವ್ಯಕ್ತಿತ್ವದ ಈ ಪಾತಳಿಯ ಅರಿವು ಇಷ್ಟು ದಿನ ಸ್ವತಃ ನಾಗಪ್ಪನಿಗೇ ಆಗಿರಲಿಲ್ಲವೇನೋ ! ಯಾಕೆಂದರೆ, ಬೇಟೆಗಾರರು ನೇರವಾಗಿ ತನ್ನ ಮರ್ಮಸ್ಥಾನಕ್ಕೆ ಗುರಿ ಹಿಡಿದು ಕೋವಿಯ ನಳಿಗೆಯಲ್ಲಿ ಕಣ್ಣಿಟ್ಟು ನಿಲ್ಲುವ ಸನ್ನಿವೇಶ ಹಿಂದೆಂದೂ ಹೀಗೆ ಇದಿರಾಗಿ ನಿಂತಿರಲಿಲ್ಲ. ಆತ್ಮಸಂರಕ್ಷಣೆಯ ಪ್ರಾಣಿಬಲ ತಾನೇತಾನಾಗಿ ಕತ್ತೆತ್ತಿ ನಿಂತಿತು :

“Iಣ is veಡಿಥಿ iಟಿಣeಡಿesಣiಟಿg, ಒಡಿ. ಆಚಿsಣuಡಿ…. ಈ ದೂರು ನನ್ನ ಬಗ್ಗೆ ಹುಟ್ಟಿಸಿದ ಸಂಶಯವನ್ನು ನಾನು ಕೂಡಲೇ ದೂರಮಾಡಬೇಕು ಎನ್ನುವದನ್ನೂ ನಾನು ಒಪ್ಪುತ್ತೇನೆ. (ಆ ಒಂದು ಕಾರಣಕ್ಕಾಗಿಯೇ ನಿಮ್ಮ ಪೆದ್ದು ಮುಖಗಳನ್ನು ನೋಡುತ್ತ ಬಿಯರ್ ಕುಡಿಯುವ ಈ ದೌರ್ಭಾಗ್ಯವನ್ನು ಸಹಿಸುತ್ತ ಕೂತದ್ದು.)_ಙes, I musಣ ಛಿಟeಚಿಡಿ mಚಿಥಿ ಟಿಚಿme beಜಿoಡಿe beiಟಿg ಛಿoಟಿsiಜeಡಿeಜ ಜಿoಡಿ ಣhe ಠಿಡಿomoಣioಟಿ. So ಟeಣ us sಣಚಿಡಿಣ ತಿiಣh ಣhe iಟಿvesಣigಚಿಣioಟಿ.”

ನಾಗಪ್ಪನ ಮಾತಿಗೆ ದಸ್ತೂರ್ ಪುಲಕಿತನಾದ :
‘I ಚಿm gಟಚಿಜ ಣhಚಿಣ ಥಿou sಚಿಥಿ so. ಖಿheಡಿe is ಟಿoಣhiಟಿg gಡಿeಚಿಣeಡಿ ಣhಚಿಟಿ oಟಿe’s oತಿಟಿ ಟಿಚಿme, oಟಿe’s ಠಿಡಿesಣige, oಟಿe’s imಚಿge-ತಿhಚಿಣ ಜo ಥಿou sಚಿಥಿ ?”

ತಾನು ಈ ತನಿಖೆಗೆ ಇತ್ತ ಸಮ್ಮತಿಯನ್ನು ತಪ್ಪು ತಿಳಿದ ಈ ಮೂವರ ಫಜೀತಿ ಮಾಡದಿದ್ದರೆ ! ಂಟಿಜ ಣheಡಿe is ಟಿoಣhiಟಿg biggeಡಿ ಣhಚಿಟಿ ಥಿouಡಿ ಜiಡಿಣಥಿ ಟಿose_ಥಿou ಜiಡಿಣu ಠಿig : ನಾಗಪ್ಪ ಮಾತನಾಡದೆ ದಸ್ತೂರನ ಮೂಗನ್ನೇ ನೋಡುತ್ತ ಕುಳಿತುಬಿಟ್ಟ. ಬರಬರುತ್ತ ಅದು ನಿಜಕ್ಕೂ ಹಂದಿಯ ಮುಸುಡಿ ಆಗುತ್ತಿದ್ದುದನ್ನು ನೋಡಿ ಎಲ್ಲಿ ತಾನು ನಕ್ಕುಬಿಟ್ಟೇನೋ ಎಂದು ಭಯವಾಗಿ ತುಟಿ ಕಚ್ಚಿ ಹಿಡಿದ.

” ಙou hಚಿve ಟಿoಣhiಟಿg ಣo ಜಿeಚಿಡಿ, ಒಡಿ. ಓಚಿgಟಿಚಿಣh,” ದಸ್ತೂರನ ಈ ಮಾತಿಗೆ ನಗು ತಡೆಯುವದು ಅಸಾಧ್ಯವಾಗಿ ತೋರಿದ್ದರಿಂದ ಕಿಸೆಯೊಳಗಿಂದ ಕೈವಸ್ತ್ರವನ್ನು ಹೊರಗೆ ತೆಗೆದು ಮೋರೆಯನ್ನು ಒರೆಸಿಕೊಳ್ಳುವ ನಟನೆ ಮಾಡುತ್ತ ತನ್ನ ನಗುವ ಲಹರಿಯನ್ನು ಹತ್ತಿಕ್ಕಿದಾಗ ಹಾಯೆನಿಸಿ_ “ಖಿhಚಿಟಿಞ ಥಿou, ಒಡಿ. ಆಚಿsಣuಡಿ, I ಜeಠಿeಟಿಜ uಠಿoಟಿ ಥಿou. I ಚಿm iಟಿಟಿoಛಿeಟಿಣ,” ಎಂದ. ತಿರುಗೆಲ್ಲಿ ನಗು ಬಂದೀತೆಂಬ ಭಯದಿಂದ ಬಿಯರಿನ ಪಾತ್ರೆಯನ್ನು ಬಾಯಿಗೆ ಹಿಡಿದಾಗ ದಸ್ತೂರನ ಭರವಸೆ ಕೊಡುವ ಮಾತು :

“We ಞಟಿoತಿ. ಆದರೆ ಈ ದುಷ್ಟ ಜಗತ್ತಿನಲ್ಲಿ ನಾವು ನಿರ್ದೋಶಿಗಳಾಗಿ ಇದ್ದರಷ್ಟೇ ಸಾಲದು. ನಿರ್ದೋಶಿಗಳಾಗಿ ಕಾಣಬೇಕು, ನಿರ್ದೋಶಿಗಳೆಂದು ತೋರಿಸಿಕೊಡಬೇಕು. We ಚಿಡಿe heಡಿe ಣo heಟಠಿ ಥಿou.”

“I ಚಿm suಡಿe ಥಿou ಚಿಡಿe, ಒಡಿ. ಆಚಿsಣuಡಿ, I hಚಿve ಟಿo ತಿoಡಿಜs ಣo ಣhಚಿಟಿಞ ಥಿou.”

uಟಿಜeಜಿiಟಿeಜನಾಗಪ್ಪ ತನ್ನ ಮಾತುಗಳನ್ನು ತಾನ್ನಂಬದಾದ….ನಾಗಪ್ಪಾ….ನಾಗಪ್ಪಾಽಽ_ಸುಳ್ಳಾಡಿದೆಯೋ ನಾಗಪ್ಪಾಽಽ…ಕೋಳೀಗಿರಿಯಣ್ಣನ ಕೇರಿಯ ನಾಗಪ್ಪಾಽಽ, ಕೋಳಿಯ ಪುಚ್ಚದಷ್ಟು ಮೆತ್ತಗಿನ ನಾಗಪ್ಪಾಽಽ, ಬೆಳೆದೆಯಲ್ಲವೋ ನಾಗಪ್ಪಾಽಽ, ಗಟ್ಟಿಯಾದಿಯೋ ನಾಗಪ್ಪಾಽಽ, ಜಾಣ ಆದಿಯೋ ನಾಗಪ್ಪಾಽಽ : ಬಾಟಲಿಯೊಳಗಿನ ಬಿಯರನ್ನು ಮಗ್ಗಿಗೆ ಯಾರು ಸುರಿದರೋ ತಿಳಿಯಲಿಲ್ಲ : ಕರುಳಲ್ಲಿ ಅನುಭವಿಸಿದ ತಂಪಿನಿಂದಾಗಿ ರಕ್ತದ ಬಿಸಿ ಮೆಲ್ಲಕ್ಕೆ ಏರಹತ್ತಿದ ಅನಿಸಿಕೆ. ಈವರೆಗೂ ತೆರೆದುಕೊಂಡಿರದ ವ್ಯಕ್ತಿತ್ವದ ಸತ್ಯಗಳು ತೆರೆದುಕೊಳ್ಳದ ಹಾಗೆ ಮಾಡಿದ ಬಿಗಿತಗಳು ಈಗ ಮೆಲ್ಲಗೆ ಸಡಿಲಗೊಂಡಿದ್ದವು ; ಇನ್ನೂ ಅವನ ಅನುಭವಕ್ಕೆ ಬಂದಿರದ ಒಂದು ಆಳದಿಂದ ಧೈರ್ಯ ಅನಾಮತ್ತಾಗಿ ತಲೆಯೆತ್ತಹತ್ತಿತು. “ಈouಡಿ moಡಿe boಣಣಟes oಜಿ beeಡಿ ಠಿಟeಚಿse.” _ ಇದು ಯಾರ ದನಿ ? ಫಿರೋಜನದಲ್ಲವೆ ? ಭೆಂಛೋದ್….ಬಿಯರ್ ಕುಡಿಸಿ ಅಮಲೇರಿಸುವ ತಂತ್ರವೆ ? ಕುಡಿಸು, ಕುಡಿಸಿದಷ್ಟೇ ಬಂತು. ನಿಮ್ಮಂತಹ ಧೂರ್ತ ಖದೀಮರೊಡನೆ ಕದೀಮನಾಗುವ ತಾಕತ್ತು ನನಗೂ ಬೇಕಷ್ಟು ಇದೆಯೋ, ಫಿರೋಜ್….ಬಿಯರ್ ಕುಡಿದಾಗಷ್ಟೇ ಅಲ್ಲ ಮತ್ತೆ….

ಬಿಯರಿನ ಮತ್ತು ಸುಖದಾಯಕವಾಗಿತ್ತು. ದಸ್ತೂರನ ಮುಂದಿನ ಮಾತುಗಳನ್ನು ಕೇಳುವ ಉತ್ಸುಕತೆ ಹೆಚ್ಚಿತ್ತು :
ದಸ್ತೂರ್ : “ಓo ಟಿeeಜ ಣo ಣhಚಿಟಿಞ me, ಒಡಿ. ಓಚಿgಚಿಟಿಚಿಣh… ಐeಣ us begiಟಿ ಜಿಡಿom ಣhe begiಟಿಟಿiಟಿg….”
ಶುರು ಮಾಡೋ ಬೋಳೀಮಗನೇ, ಬೇಕಾದಲ್ಲಿಂದ ಶುರು ಮಾಡು. ನಿನ್ನಜ್ಜನ ತರಡಿನಿಂದಲೇ ಶುರು ಮಾಡು ಬೇಕಾದರೆ : ನಿನ್ನ ಈ ಇಲ್ಲದ ಕಿತಾಪತಿಗೆ ಅದೇ ಅಲ್ಲವೇ ಬೇರು….
“ಫ್ಯಾಕ್ಟರಿಯಲ್ಲಿ ಬೆಂಕಿ ಹತ್ತಿತ್ತಲ್ಲ….”
“ಆ ಬೆಂಕಿ ಹತ್ತಿತ್ತಲ್ಲ…. ಖಿhಚಿಣ is, iಜಿ ಥಿou ತಿಚಿಟಿಣ me ಣo sಠಿeಚಿಞ ಣhe ಣಡಿuಣh….. ಆ ಬೆಂಕಿ ಹಚ್ಚಿದ್ದು.”
“We ತಿಚಿಟಿಣ ಥಿou ಣo sಠಿeಚಿಞ ಣhe ಣಡಿuಣh. We ಚಿಡಿe heಡಿe ಣo ಞಟಿoತಿ iಣ. ಆ ಬೆಂಕಿ ಹತ್ತಿದ್ದಲ್ಲ ; ಹಚ್ಚಿದ್ದು ಎಂಬ ಸಂಶಯ ಮೊಟ್ಟ ಮೊದಲು ಬಂದದ್ದು ಯಾವಾಗ ?”
“ಮೊದಲಿನಿಂದಲೂ.”
“ಯಾಕೆ ?”
“ಆ ಡಿಪಾರ್ಟಮೆಂಟಿನಲ್ಲಿ ನಡೆಯುತ್ತಿದ್ದ ಅಂದಾದುಂದಿಯ ಬಗ್ಗೆ ನಾನು ಮೊದಲಿನಿಂದಲೂ ಪ್ರತಿಭಟಿಸುತ್ತ ಬಂದದ್ದು ಫಿರೋಜನಿಗೆ ಗೊತ್ತೇ ಇದೆ. ಪೆರೊಕ್ಸೈಡ್ ಉತ್ಪಾದನೆಗೆ ಸಂಬಂಧಪಟ್ಟ ಯಾವ ಜಾಗರೂಕತೆಯನ್ನೂ ನಾವು ವಹಿಸಲೇ ಇಲ್ಲ. ನಾನೇ ಮುಂದಾಗಿ ಜಗತ್ತಿನ ಉಳಿದ ದೇಶಗಳಲ್ಲಿಯ ದೊಡ್ಡ ದೊಡ್ಡ ಕಂಪನಿಗಳಿಗೆ ಪತ್ರ ಬರೆದು ಈ ಉತ್ಪಾದನೆಯ ವಿಷಯದಲ್ಲಿ ತೆಗೆದುಕೊಳ್ಳಬೇಕಾದ ಎಲ್ಲ sಚಿಜಿeಣಥಿ meಚಿsuಡಿes ಕುರಿತು ಸಿದ್ಧಪಡಿಸಿದ ಮಾಹಿತಿಯನ್ನು ತರಿಸಿ ಒ‌ಆ ಯವರಿಗೆ ಕಳಿಸಿದ್ದೆ. ಅದರಿಂದ ನನಗಾದ ಫಾಯಿದೆ ಎಂದರೆ ವಿನಾಕಾರಣ ಫಿರೋಜನಿಂದ ಗದರಿಸಿಕೊಂಡದ್ದು…..”
“ಖಿhಚಿಣ iಟಿಛಿiಜeಟಿಣ musಣ hಚಿve huಡಿಣ ಥಿou ಜeeಠಿಟಥಿ…. ಸ್ವಾಭಿಮಾನವಿದ್ದ ಯಾರಿಗಾದರೂ ನೋವಾಗುವುದೇ….”
“ನನ್ನ ಭಾವನೆಗಳ ಪರಿಚಯ ಫಿರೋಜನಿಗಿದೆ.”
“ನಿಮ್ಮ ಆ ನೋವನ್ನು ನೀವು ಯಾರ ಮುಂದಾದರೂ ಯಾವಾಗಲಾದರೂ ಆಡಿ ತೋರಿಸಿದ್ದೀರಾ ?”
” ಔಜಿ ಛಿouಡಿse_ ನೇರವಾಗಿ ಫಿರೋಜನಿಗೇ…..ಚಿಟಿಜ Phiಡಿoz ಜiಜ ಟಿoಣ ಟiಞe me ಜಿoಡಿ ಣhಚಿಣ….”

ಬಾಯಲ್ಲಿ ಪೈಪ್ ಹಿಡಿದ ಫಿರೋಜನ ಮೋರೆ ವ್ಯಕ್ತಪಡಿಸಿದ ಭಾವನೆಯನ್ನು ಓದುವದು ನಾಗಪ್ಪನಿಗೆ ಸುಲಭವಾಗಿರಲಿಲ್ಲ. ಓದುವ ಕುತೂಹಲವೂ ಇರಲಿಲ್ಲ. ಕದ ದೂಡಿ ಒಳಗೆ ಬಂದ ಬೇರರ್ ದಸ್ತೂರ್ ಕೇಳ ಹೊರಟ ಪ್ರಶ್ನೆಗೆ ಕೆಲಹೊತ್ತು ತಡೆಹಾಕಿದ. ಬೇರರ್ ಈ ಮೊದಲು ಆರ್ಡರ್ ಮಾಡಿದ ಬಿಯರಿನ ಹೊಸ ನಾಲ್ಕು ಬಾಟಲಿಗಳನ್ನು, ಅವುಗಳ ಜೊತೆಗೆ ಸ್ನ್ಯಾಕ್ಸೂ ತಂದಿದ್ದ. ಸ್ನ್ಯಾಕ್ಸ್ ನೋಡಿದ ಕೂಡಲೇ ಹೊಟ್ಟೆ ಹಸಿದದ್ದರ ಅರಿವು ಬಂತು ನಾಗಪ್ಪನಿಗೆ. ಬಿಯರಿನ ಹೊಸ ಬಾಟಲಿಗಳೂ ತುಂಬ ಸುಖದಾಯಕವಾಗಿ ಕಂಡವು. ಬೇರರ್ ತಂದ ಸರಂಜಾಮನ್ನು ಹೇಳಿದಲ್ಲಿ ಇಟ್ಟು, ವೌಚರ್‍ಗಳ ಮೇಲೆ ಫಿರೋಜನಿಂದ ಸಹಿ ಮಾಡಿಸಿಕೊಂಡು ಅಲ್ಲಿಂದ ಹೊರಟುಹೋದ.
ದಸ್ತೂರ್ ಆರಂಭ ಮಾಡಿದ ರೀತಿಯಿಂದ ತುಂಬ ಖುಶಿಯಾದ ಫಿರೋಜ್: “ನೀನೂ ಮುಂದುವರಿಸು ಬೋಮೀ. ನಾನೂ ಹಾಗೂ ದೋಸ್ತೂ (ಪಟೇಲನ ಅಂಕಿತನಾಮ) ಇದರ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ” ಎಂದದ್ದೆ ಇಬ್ಬರೂ ಬಿಯರ್ ಹಾಗೂ ಸ್ನ್ಯಾಕ್ಸ್‌ಗಳ ವ್ಯವಸ್ಥೆಗೆ ತೊಡಗಿದರು.
ದಸ್ತೂರ್ :”ನೇರವಾಗಿ ನಿಮ್ಮ ಬಾಸ್‌ಗೇ ನಿಮ್ಮ ಅಸಮಾಧಾನವನ್ನು ತಿಳಿಸುವ ನಿಮ್ಮ ಧೈರ್ಯ ಮೆಚ್ಚತಕ್ಕದ್ದೇ. ಆದರೆ ಫಿರೋಜನ ಹೊರತಾಗಿ ಇನ್ನಾರಿಗಾದರೂ ?”
“ಹಾಗೆ ನೋಡಿದರೆ ನನ್ನ ಈ ವಿಷಯದಲ್ಲಿ ಅಸಮಾಧಾನ ಫ್ಯಾಕ್ಟರಿಯಲ್ಲಿ ಅನೇಕರಿಗೆ ಗೊತ್ತಿತ್ತು….”
“ಅದೇ…ಅವರಿಗೆ ಗೊತ್ತಾದದ್ದು ಹೇಗೆ ?….ನೀವೇ ಪ್ರತಿಯೊಬ್ಬನಿಗೆ ಹೇಳುತ್ತಾ ಹೋಗಿರಲಿಲ್ಲ?”
ನಾಗಪ್ಪ ಈ ಮಾತಿಗೆ ನಿರುತ್ತರನಾದ : ಬಿಯರಿನ ಅಮಲಿಗೋ, ಫಿರೋಜ್ ಮುಂದೆ ಹಿಡಿದ ಪ್ಲೇಟಿನಲ್ಲಿಯ ಸ್ನ್ಯಾಕ್ಸ್‌ಗಳಲ್ಲಿ (ಚಿಕನ್‌ಟೀಕಾ, ಮಟನ್ ಕಬಾಬ್, ಫಿಶ್ ಫಿಂಗರ್ಸ್) ಯಾವುದನ್ನು ಎತ್ತಿಕೊಳ್ಳಲಿ ಎಂಬ ಸಂದಿಗ್ಧಕ್ಕೋ ಅಥವಾ ಎಲ್ಲೋ ಆಳದಲ್ಲಿ_‘ಕೋಳೀಗಿರಿಯಣ್ಣನ ಕೇರಿಯವನೇ, ಇದು ಸ್ಕಾಯ್‌ಸ್ಕ್ರೇಪರ್ ಜಗತ್ತಿನ ಪ್ರಶ್ನೆ : ಹುಷಾರ್_’ ಎಂದು ಎದ್ದು ಇಷಾರೆಯ ದನಿಗೋ ನಾಗಪ್ಪ ಕಿರಿಕಿರಿಯಾದ. ಕೂಡಲೇ ಉತ್ತರ ಕೊಡದೇ ಕಬಾಬ್ ಒಂದನ್ನು ಎತ್ತಿಕೊಂಡು ಮೂಲೆ ಕಚ್ಚಿದ. ಬಿಯರಿನ ಗುಟುಕೊಂದನ್ನು ಸೀಪಿದ. ದಸ್ತೂರನತ್ತ, ನಿನ್ನ ಮಾತಿನ ಅರ್ಥವಾಗಿಲ್ಲ ಎನ್ನುವಂತೆ ನೋಡಿದ. ದಸ್ತೂರ್ ಸ್ಪಷ್ಟಪಡಿಸಿದ :
‘ನಿಮ್ಮ ಅಸಮಾಧಾನವನ್ನು ನೀವು ಆತ್ಮೀಯರೆಂದು ತಿಳಿದ ಯಾರಿಗಾದರೂ ಹೆಚ್ಚಿನ ವಿವರಗಳೊಂದಿಗೆ ವ್ಯಕ್ತಪಡಿಸಿದ್ದೀರಾ ? ಉದಾ : I ತಿoಟಿ’ಣ be suಡಿಠಿಡಿiseಜ iಜಿ ಣhe ಜಿಚಿಛಿಣoಡಿಥಿ is seಣ oಟಿ ಜಿiಡಿe, oಟಿe oಜಿ ಣhese ಜಚಿಥಿs’ ಎಂದು ಮುಂತಾಗಿ ?”

ದಸ್ತೂರನ ಈ ಹೇಳಿಕೆಯ ಪರಿಣಾಮ ನಾಗಪ್ಪನ ಮೇಲೆ ಅಷ್ಟೊಂದು ಆದಂತೆ ತೋರಲಿಲ್ಲ.”ಖಿhis is ಣoo geಟಿeಡಿಚಿಟ ಚಿ sಣಚಿಣemeಟಿಣ ಣo hಚಿve beeಟಿ mಚಿಜe ಣo ಚಿಟಿಥಿ ಠಿಚಿಡಿಣiಛಿuಟಚಿಡಿ ಠಿeಡಿsoಟಿ,” ಎಂದ. ಆದರೂ ದಸ್ತೂರನ ಮಾತಿನ ಧಾಟಿಯಿಂದ ಯಾವುದೋ ಒಂದು ವಿಶೇಷ ವ್ಯಕ್ತಿಯ ಹೆಸರು ಮೆಲ್ಲಗೆ ಸೇರ್ಪಡೆಯಾಗ್ತಾ ಇದೆ ಎನ್ನುವುದು ಲಕ್ಷ್ಯಕ್ಕೆ ಬರದೇ ಇರಲಿಲ್ಲ. ತುಸು ಬೇಚೈನುಗೊಂಡರೂ ಅದನ್ನು ತೋರಿಸಿಕೊಳ್ಳಲಿಲ್ಲ.

ದಸ್ತೂರ್ : “ನನ್ನ ಮುಂದಿನ ಮಾತಿನಿಂದ ನಿಮ್ಮ ನೆನಪೇನಾದರೂ ಚುರುಕುಗೊಳ್ಳುತ್ತದೋ ನೋಡಿ. ನೀವು ಅದೇ ವ್ಯಕ್ತಿಗೆ ಹೀಗೇನಾದರೂ ಹೇಳಿದಿರಾ ? _‘ಎusಣ ಣo ಣeಚಿಛಿh ಣhese bಟoಞes ತಿhಚಿಣ ಛಿhemiಛಿಚಿಟ ಜಿiಡಿes ಚಿಡಿe ಟiಞe I ಜಿeeಟ ಟiಞe ಛಿhಚಿಟಿgiಟಿg ಣhe ಜಿoಡಿmuಟಚಿಣioಟಿ ಚಿಟಿಜ ಛಿಚಿuseoಟಿe.”
“ಔh ! ಓo ! Iಣ ತಿಚಿs oಟಿಟಥಿ ಚಿ ತಿಚಿಥಿ oಜಿ exಠಿಡಿessiಟಿg mಥಿ ಚಿಟಿgeಡಿ….”
“ನೀವು ಹಾಗೆ ಹೇಳಿದ್ದಂತೂ ನಿಜ ತಾನೆ ? ಯಾರಿಗೆನ್ನುವದು ಈಗಲಾದರೂ ನಿಮಗೆ ನೆನಪಾಗುತ್ತದೆಯೆ ?”

ಯಾರಿಗೆನ್ನುವುದರ ಬಗ್ಗೆ ನಾಗಪ್ಪನಿಗೆ ಸಂಶಯವೇ ಉಳಿಯಲಿಲ್ಲ. ಆದರೆ ಹೈದರಾಬಾದಿನ ಫ್ಯಾಕ್ಟರಿಯಲ್ಲೇ ತನ್ನ ಬಗ್ಗೆ ಸಹಾನುಭೂತಿ ಇದ್ದ, ಆದರವಿದ್ದ(ಕೆಲವೊಂದು ಭಾವನಾತ್ಮಕ ಗಳಿಗೆಗಳಲ್ಲಿ ಇದನ್ನೇ ಪ್ರೀತಿಯೆಂದು ಕೂಡ ತಿಳಿದ) ಒಂದೇ ಒಂದು ವ್ಯಕ್ತಿ ಎಂಬ ತಿಳವಳಿಕೆಗೆ ಕಾರಣಳಾದ ರೀನಾ ಫಿರೋಜನ ಪಿತೂರಿಯಲ್ಲಿ ?….ನಾಗಪ್ಪ ನಂಬದಾದ. ಯಾಕೆಂದರೆ ನಂಬುವ ಧೈರ್ಯವಾಗಲಿಲ್ಲ. ರೀನಾಳಂಥ ರೀನಾ ಕೂಡ ಸುಳ್ಳಾಗುವದು ಶಕ್ಯವಿದ್ದರೆ ತಾನು ತೊಡಗಿಸಿಕೊಂಡ ಈ ಪ್ರತಿಭಟನೆಗೆ ಯಾವ ಅರ್ಥವೂ ಉಳಿಯಲಿಲ್ಲ…..ದೇವರೇ ಇದು ಸುಳ್ಳಾಗಲೀ…. ಸುಳ್ಳಾಗಲೀ. ಆಗಿನಿಂದಲೂ ಸಂತೋಷ ಕೊಡುತ್ತಿದ್ದ ಬಿಯರು ಹೊರಗೆ ಬರುವ ಭಯವಾಗಿ ಮುಖ ಒಮ್ಮೆಲೇ ಬಣ್ಣಕಳೆದುಕೊಳ್ಳಹತ್ತಿತು : ಕುಳಿತಲ್ಲಿಂದ ಎದ್ದವನೇ ಬಾತ್‌ರೂಮ್ ಹುಡುಕುತ್ತ ಮಗ್ಗಲಿನ ಕೋಣೆಗೆ ಧಾವಿಸಿದ. ಮೂತ್ರ ವಿಸರ್ಜನೆ ಮಾಡಿದ ಮೇಲೆ ತಣ್ಣಗಿನ ನೀರಿನಿಂದ ಮೋರೆ ತೊಳೆದುಕೊಂಡ. ಕಣ್ಣಿಗೆ ನೀರು ಬಡಿದ. ಮೆದುಳು ತುಸು ಚುರುಕುಗೊಂಡಂತೆನಿಸಿತು. ವಾಂತಿಯಾಗುವ ಹೆರದಿಕೆ ಸದ್ಯಕ್ಕಂತೂ ದೂರವಾಗಿತ್ತು…. ಅಂತೂ ತನಿಖೆಯ ಪ್ರಶ್ನೆಗಳು ಬರಬರುತ್ತ ತಾನು ಎಣಿಸಿರದ ಜಾಗಗಳಿಗೇ ತನ್ನನ್ನು ಎಳೆದೊಯ್ಯುತ್ತಿವೆ ಅನ್ನಿಸಿತು : ನಿರಪರಾಧಿಯಾಗಿಯೂ ತನ್ನ ಅಪರಾಧ ಸಿದ್ಧಗೊಳಿಸುವ ಪುರಾವೆಗಳು ಗಟ್ಟಿಯಾಗುತ್ತಿವೆ. ತೀರ ಪರಿಚಯದ್ದೆಂದು ತಿಳಿದ ಜಗತ್ತು ಮೆಲ್ಲಕ್ಕೆ ಅಪರಿಚಿತತೆಯ ಮುಸುಕೆಳೆದುಕೊಳ್ಳುತ್ತಿದೆ : ಕದದ ಮೇಲೆ ಬಡಿದ ಸದ್ದಿನ ಹಿಂದೆಯೇ_ “ಚಿಡಿe ಥಿou ಚಿಟಟ ಡಿighಣ, ಒಡಿ. ಓಚಿgಚಿಟಿಚಿಣh ?” ಎಂಬ ಪೆದ್ದು ಪಟೇಲನ ದನಿ. ನಾಗಪ್ಪ ದಡಬಡಿಸಿದ. ಹತ್ತಿದ ಗುಂಗಿನಿಂದ ಎಚ್ಚರಗೊಂಡ : ಪೊದೆಯಲ್ಲಿ ಅಡಗಿಕೊಂಡ ಭಯಗ್ರಸ್ತ ಪ್ರಾಣಿಯನ್ನು ಹೋ ಹೋ….ಹಾ…ಹಾ ಎಂದು ಗುಲ್ಲೆಬ್ಬಿಸಿ ಹೊರಗೆ ಬರುವಂತೆ ಮಾಡುವ ಬೇಟೆಗಾರರ ಬೇಹುಗಾರಿಕೆ ಇದು ಎಂಬ ಭ್ರಮೆಯನ್ನು ಕೊಡವಿಕಾಕುವವನಂತೆ ತಲೆಯನ್ನು ಗಲಗಲ ಅಲ್ಲಾಡಿಸಿ_”I ಚಿm ಚಿಟಟ ಡಿighಣ. I ತಿiಟಟ be ouಣ iಟಿ ಚಿ miಟಿuಣe,” ಎಂದ. ಸ್ವತಃ ಆಡಿದವನಿಗೇ ಕೇಳಿಸಿರಲಾರದಷ್ಟು ಕ್ಷೀಣಗೊಂಡ ನಾಗಪ್ಪನ ಧ್ವನಿ ಹೊರಗಿನಿಂದ ಕದಕ್ಕೆ ಕಿವಿ ಹಚ್ಚಿ ಆಲಿಸುತ್ತಿದ್ದ ಪಟೇಲನ ಹುರುಪಿಗೆ ಇನ್ನಷ್ಟು ಕಳೆ ತಂದಿತ್ತು ಎನ್ನುವುದು ಮಾತ್ರ ನಾಗಪ್ಪನಿಗೆ ಈಗ ಗೊತ್ತಾಗುವುದು ಶಕ್ಯವಿರಲಿಲ್ಲ.

ನಾಗಪ್ಪ ಕದ ತೆರೆದು ಹೊರಗೆ ಬಂದದ್ದೇ, ಅವನ ದಾರಿ ಕಾಯುತ್ತ ನಿಂತ ಪಟೇಲ ಕಾಳಜಿಯನ್ನು ನಟಿಸುತ್ತ ಈ ಮೊದಲು ತನಗಾದ ಅವಮಾನದ ಸೇಡು ತೀರಿಸಿಕೊಳ್ಳುವ ಗತ್ತಿನಲ್ಲಿ, ಗುಟ್ಟಾದ ಮಾತೊಂದನ್ನು ಹೇಳುವವನಂತೆ ಧ್ವನಿ ತಗ್ಗಿಸಿ _ “ಕಾಳಜಿ ಮಾಡಬೇಡಿ, ಮಿಸ್ಟರ್ ನಾಗನಾಥ, ನಾವೆಲ್ಲ ಇಲ್ಲವೇ ನಿಮ್ಮ ಬೆಂಬಲಕ್ಕೆ?” ಎಂದ . ಬೇರೆ ಯಾವ ಸಮಯದಲ್ಲಾದರೂ ತಲೆಯ ಮೇಲೆ ಜಪ್ಪಿ ಬಿಡುವಷ್ಟು ಸಿಟ್ಟು ಬರುತ್ತಿತ್ತು, ನಾಗಪ್ಪನಿಗೆ. ಈಗ ಮಾತ್ರ ಯಾವುದಕ್ಕೂ ತೀವ್ರವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಇಲ್ಲವಾಗಿತ್ತು. ಅಷ್ಟೊಂದು ಬಿಯರನ್ನು ಕುಡಿಯಬಾರದಿತ್ತೇನೋ.ಇಲ್ಲವಾದರೆ ಈ ಮೂವರು ಠಕ್ಕರೆ ಫಜೀತಿ ಮಾಡದೇ ಬಿಡುತ್ತಿರಲಿಲ್ಲ…. ತಾನು ಬಾತ್ ರೂಮಿಗೆ ಹೋದದ್ದೇ ತನ್ನ ಬಗ್ಗೆ ಏನನ್ನೋ ಮಾತನಾಡಿಕೊಂಡು ಈಗ ತಾನು ಹಿಂತಿರುಗಿ ಬಂದದ್ದೇ ಗಪಕ್ ಎಂದು ಬಾಯಿ ಬಿಗಿ ಹಿಡಿದು ಕೂತವರ ರೀತಿ ತನ್ನತ್ತ ವಿಚಿತ್ರವಾಗಿ ನೋಡುತ್ತಿದ್ದ ಈ ಮೂವರು ನಿಜಕ್ಕೂ ಯಾರು? ಈ ಮೊದಲು ಎಂದಾದರೂ ಇವರನ್ನು ನೋಡಿದ್ದೇನೆಯೇ? ಬಲ್ಲೆನೇ ? …. ಥಟ್ಟನೆ ಹುಟ್ಟಿದ ಗುಮಾನಿ ಹೊತ್ತು ಹೋದ ಹಾಗೆ ಬೆಳೆಯುತ್ತ ಹೋಯಿತು . ನರಿಮನ್ -ಪಾಯಿಂಟ್‌ನಲ್ಲಿ ಎದ್ದು ನಿಂತ ಸ್ಕಾಯ್‌ಸ್ಕ್ರೇಪರುಗಳಂತೆ ತನ್ನ ಭಾವನೆಗಳ ಪರಿಧಿಯೊಳಗೆ ಬರಲು ನಿರಾಕರಿಸುತ್ತ ಬಾಯಿ ಬಿಗಿಹಿಡಿದು ನಿಂತಂತಹದೇನೋ ತಾನು ಬೆಳೆದು ಬಂದ ಕೋಳಿಗಿರಿಯಣ್ಣನ ಕೇರಿಯತ್ತ ಕುಂಡೆ ತಿರುವಿ ತಿರಸ್ಕಾರದಿಂದ ನಗುತಿದೆ ಎನ್ನುವ ಭಾವನೆಯ ಹಿಡಿತದಿಂದ ಬಿಡಿಸಿಕೊಳ್ಳುವುದು ಕಠಿಣವಾಯಿತು: ಕೂತಲ್ಲೇ ಬೆಳೆಯುತ್ತ ನಡೆದವರು, ಕಪ್ಪಾಗಿ ನಿಗೂಢರಾಗುತ್ತ ಮೂಕರಾದವರು ಮಾತು -ಕತೆಯನ್ನೇ ಅಸಾಧ್ಯಮಾಡಿದಾಗ -ತಾನು ಈ ರೂಮಿಗೆ ಬಂದದ್ದಾದರೂ ಯಾಕೆ ಎಂಬುದು ಕೂಡ ಮುಸುಕುಗೊಳ್ಳಹತ್ತಿತು. ಯಾರು ಯಾರೋ ಮಾಡಿದ ಅಪರಾಧಗಳನ್ನು ಬಯಲಿಗೆಳೆಯುವ ಪಣ ತೊಟ್ಟು ಬಂದವನಿಗೆ ತನ್ನ ನಿರಪರಾಧತೆಯನ್ನು ಸಿದ್ಧಗೊಳಿಸಲು ಗರಜಿನ ಭಾರವೇ ದೊಡ್ಡದಾಗಹತ್ತಿತು.

ಇವನ ಒಳಗಡೆ ನಡೆಯುತ್ತಿದ್ದುದನ್ನು ಸರಿಯಾಗಿ ಆರಿತವನ ಹಾಗೆ, ದಸ್ತೂರ್, ದನಿಯಲ್ಲಿಯ ಗಾಂಭೀರ್ಯ ಹೆಚ್ಚಿಸಿ ಬಾಯಿಬಿಚ್ಚಿದ:
“Soಡಿಡಿಥಿ ಣo be ಠಿeಡಿsoಟಿಚಿಟ- ತಿe ಛಿಚಿಟಿ‘ಣ heಟಠಿ iಣ. ಖಿhe mಚಿಣಣeಡಿ is so seಡಿious ತಿe ಛಿಚಿಟಿ‘ಣ ಚಿಜಿಜಿoಡಿಜ ಣo ಣಚಿಞe ಛಿhಚಿಟಿಛಿes”
ನಾಗಪ್ಪ ಬಿಯರಿಗೆ ತಿರುಗಿ ಕೈಹಚ್ಚಲಿಲ್ಲ. ಬಾಥ್‌ರೂಮಿಗೆ ಹೋದಾಗ ಪಾತ್ರೆಯನ್ನು ಯಾರೋ ತುಂಬಿ ಇಟ್ಟಿದ್ದರು. ದಸ್ತೂರನ ಮೋರೆಯಲ್ಲಿಯದೇನೋ ತನ್ನ ದುಗುಡಕ್ಕೆ ಕಾರಣವಾಗಹತ್ತಿತ್ತು.ತಾನು ನಿಜಕ್ಕೂ ನಿರಪರಾಧಿ. ಆದರೆ ಈ ದಸ್ತೂರದನ್ನು ನಂಬುತ್ತಿಲ್ಲವೇನೋ ಎಂಬ ಶಂಕೆ- ಮೋರೆಯ ಮೇಲೆ- ದಯಮಾಡಿ ನಂಬು ಎಂಬಂತಹ ಆರ್ಜವತೆಗೆ ಎಡೆಮಾಡಿಕೊಟ್ಟಿತ್ತು. ದಸ್ತೂರ್ ಬಹು ಗಂಭೀರವಾಗಿ ಕೇಳಿದ;

“ರೀನಾಳೊಡನೆ ನಿಮ್ಮ ಸಂಬಂಧವೇನು ?”
ನಾಗಪ್ಪ ತೀರ ಅನಿರೀಕ್ಷಿತವಾಗಿ ಬಂದ ಈ ಪ್ರಶ್ನೆಯಿಂದ ತಬ್ಬಿಬ್ಬಾದ. ಅದಕ್ಕಿಂತ ಹೆಚ್ಚಾಗಿ, ಒಂದು ಅಸಾಧಾರಣ ಗಳಿಗೆಯಲ್ಲಿ ತಾನು ಬೆಂಕಿಯ ಬಗ್ಗೆ ಹೇಳಿದ್ದನ್ನು ಹೀಗೆ ತನ್ನ ವೈರಿಗಳಿಗೆ ತಿಳಿಸಿದವಳು ರೀನಾಳೇ ಎಂಬುದು ಖಂಡಿತವಾದದ್ದು ದಿಗ್ಭ್ರಮೆಗೆ ಕಾರಣವಾಗಿತ್ತು. ಆದರೂ ಈ ವೈಯಕ್ತಿಕ ಪ್ರಶ್ನೆಗೆ ಕೈ ಹಾಕುವ ಅಧಿಕಾರ ಈ ದಸ್ತೂರನಿಗೆಲ್ಲಿ ? ತಾನು ಈ ಕಂಪನಿಯ ನೌಕರಿಯಲ್ಲಿದ್ದ ಕಾರಣಕ್ಕಾಗಿಯೇ ತಾನೆ ? ಅದನ್ನು ಧಿಕ್ಕರಿಸುವ ನಿರ್ಧಾರ ಮಾಡಿಯೇ ತನ್ನಿಲ್ಲಿಗೆ ಬಂದದ್ದು. ಆದರೆ ಈಗ ಇದ್ದಕ್ಕಿದ್ದಂತೆ ತಾನು ನಿರಪರಾಧಿ ಎಂಬುದನ್ನು ಸಿದ್ಧಗೊಳಿಸಿ ತೋರಿಸುವ ಗರಜೇ ಬಹಳ ದೊಡ್ಡದಾಗಿ ತೋರುತ್ತಿದೆಯಲ್ಲ ! ಬರಬರುತ್ತ ಈ ಪಾರ್ಸಿಯ ದರ್ಪ ಅವನ ಮೂಗಿನ ಹಾಗೇ ದೊಡ್ಡದಾಗುತ್ತ ನೆಡೆದಿದೆಯಲ್ಲ ! ಒಂದು ಬಗೆಯ ಅನಾಸಕ್ತ ಕುತೂಹಲದಿಂದ ದಸ್ತೂರನ ಮುಂದಿನ ಪ್ರಶ್ನೆಯ ಹಾದಿ ಕಾದ. ದಸ್ತೂರ್ ಕೇಳಿದ :

“ನಿಮ್ಮಿಬ್ಬರಿಗೂ ಲೈಂಗಿಕ ಸಂಬಂಧವಿತ್ತೇ ?”

ನಾಗಪ್ಪ ತನ್ನ ಕಿವಿಗಳನ್ನು ನಂಬದಾದ. ಇದು ತೀರ ಖಾಸಗಿ ಪ್ರಶ್ನೆ. ಇದನ್ನು ಕೇಳುವ ಅಧಿಕಾರ ನಿನಗಿಲ್ಲ ಎನ್ನಬೇಕೆಂದರೆ ಹಾಗೆ ಅನ್ನಲು ಕಾರಣವಾಗಬೇಕಾದ ಸಿಟ್ಟು ಕೂಡ ಹುಟ್ಟುವ ಮೊದಲೇ ಅಡಗಿಹೋಗಿತ್ತು : ರೀನಾಳನ್ನು ಬಿಟ್ಟು ಬೇರೆ ಯಾರೂ ಈ ಗೌಪ್ಯವನ್ನು ಒಡೆಯುವುದು ಶಕ್ಯವಿರಲಿಲ್ಲ….ಅಥವಾ ತನ್ನನ್ನು ಹೆದರಿಸಿ ಮಣಿಸಲೆಂದೇ ಇವರು ಹೂಡಿದ ನಾಟಕವೇ ಇದು ? ದಸ್ತೂರನೇ ಇವನ ಮನಸ್ಸನ್ನು ಓದಿಕೊಂಡವನ ಹಾಗೆ ಈ ಸಂಶಯವನ್ನು ದೂರ ಮಾಡಿದ :

“ಬೆಂಕಿ ಎಂದ ಕೂಡಲೇ ಮೈ ಜುಮ್ ಎಂದು ನಡುಗಲು ಕಾರಣವಾಗುವಂತಹ ಶಾರೀರಕ ಊನವೇನಾದರೂ ನಿಮ್ಮಲ್ಲಿದೆಯೇ ? ಆu ಥಿou hಚಿve ಚಿ ಟಿeuಡಿoಣiಛಿ ಜಿeಚಿಡಿ oಜಿ ಜಿiಡಿe ?”

ಈಗ ಮಾತ್ರ ನಾಗಪ್ಪನಲ್ಲಿ ಸಂಶಯವೇ ಉಳಿಯಲಿಲ್ಲ. ಅದೆಲ್ಲ ಅವನಿಗೆ ಹೇಗೆ ಗೊತ್ತಾಯಿತು ಎಂದು ತಿಳಿಯುವ ಕುತೂಹಲ ಕೂಡ ಉಂಟಾಗಲಿಲ್ಲ : ರೀನಾಳ ಸಹವಾಸದಲ್ಲಿ ಕಳೆದ ಹಲವಾರು ರಾತ್ರಿಗಳು ನಾಗಪ್ಪ ಅತ್ಯಂತ ಸುಖದ ಕ್ಷಣಗಳಲ್ಲಿ ಮಾತ್ರ ನೆನೆಯುವಂತಹವುಗಳಾಗಿದ್ದವು. ಮದುವೆಯಾಗಿ ಎರಡು ಮಕ್ಕಳ ತಾಯಿಯಾದ ಈ ಆಂಗ್ಲೋ_ಇಂಡಿಯನ್ ಹುಡುಗಿ ತಮ್ಮ ಈ ಸಂಬಂಧವನ್ನು ಗುಪ್ತವಾಗಿ ಇಡುವುದರ ಬಗ್ಗೆ ತನ್ನಿಂದ ಬೇಡಿದ ಭರವಸೆಗೆ ಉತ್ತರವೆಂಬಂತೆ ಈ ಗುಟ್ಟನ್ನು ತಾನು ತನಗೂ ಒಡೆಯಲು ನಿರಾಕರಿಸಿದ್ದ ! ಅಚ್ಚರಿಯ ಸಂಗತಿಯೆಂದರೆ ರೀನಾಳೇ ಹೀಗೆ ತನಗೆ ಎರಡು ಬಗೆದದ್ದು ತಿಳಿದಾಗ ಸಿಟ್ಟು ಬರದೇ ಇದ್ದದ್ದು. ಮನುಷ್ಯ ಸಂಬಂಧಗಳ ಸತ್ಯವನ್ನು ತಿಳಿಯುವ ಶಕ್ತಿಯೇ ತನ್ನಲ್ಲೀಗ ಉಳಿದಿಲ್ಲವೇನೋ ಎಂಬಂಥ ತಟಸ್ಥ ಭಾವನೆಯಿಂದಲೇ. ಕೆಲ ಸಮಯ ಕೈ ಹಚ್ಚಿರದ ಬಿಯರಿನ ಪಾತ್ರೆಯನ್ನು ಕೈಗೆತ್ತಿ ಎರಡು ಗುಟುಕುಗಳನ್ನು ಒಂದೇ ಬಾರಿಗೆ ಹೀರಿದ. ದಸ್ತೂರನ ಮಾತಿನಲ್ಲಿ ಸೇರಿಕೊಂಡ ವ್ಯಕ್ತಿಯನ್ನು ತಾನು ಈವರೆಗೂ ಕಡೇ ಇಲ್ಲವಲ್ಲ ಎನ್ನುವ ಕುತೂಹಲ ತುಂಬಿದ ಧಾಟಿಯಲ್ಲಿ ಹೇಳಿದ :
“ನೀವು ಹೇಳುತ್ತಿದ್ದದ್ದು ತುಂಬ ಸ್ವಾರಸ್ಯಪೂರ್ಣವಾಗಿದೆ. ಮಿಸ್ಟರ್ ದಸ್ತೂರ್. ನಿಲ್ಲಿಸಬೇಡಿ. ಕೇಳಲು ಬಹಳ ಉತ್ಸುಕನಾಗಿದ್ದೇನೆ….”
*****
ಮುಂದುವರೆಯುವುದು