ಕವನ ಸ್ಪರ್ಧೆ

ಕನ್ನಡ ಸಾಹಿತ್ಯ ಪರಿಷತ್ ಹಾಸನ ಜಿಲ್ಲಾ ಘಟಕ’, ‘ಕನ್ನಡ ಸಾಹಿತ್ಯ ಡಾಟ್ ಕಾಂ ಬೆಂಬಲಿಗರ ಹಾಸನ ಬಳಗ’ ಮತ್ತು ‘ಬಿ.ಸಿ.ಆರ್.ಟಿ., ಅನುಗನಾಳು’ ಇವರ ಸಂಯುಕ್ತ ಆಶ್ರಯದಲ್ಲಿ ಹಾಸನ ಜಿಲ್ಲಾ ಮಟ್ಟದ ಕವಿಗೋಷ್ಟಿಯನ್ನು ಏರ್ಪಡಿಸಲಾಗಿದ್ದು, ಜಿಲ್ಲೆಯ ಕವಿಗಳಿಂದ ಕವನಗಳನ್ನು ಆಹ್ವಾನಿಸಲಾಗಿದೆ.

ಈ ಕೆಳಕಂಡ ವಿಷಯದ ಮೇಲಿನ ತಮ್ಮ ಸ್ವರಚಿತ ಕವನಗಳನ್ನು ಇದೇ ಜ.೧೦ ರ ಒಳಗಾಗಿ, ಕೆಳಕಂಡ ವಿಳಾಸಕ್ಕೆ ತಮ್ಮ ಭಾವಚಿತ್ರ, ದೂರವಾಣಿ ಸಂಖ್ಯೆ ಹಾಗೂ ‘ಈ ಮೇಲ್’ (ಇದ್ದಲ್ಲಿ) ವಿಳಾಸ ಸಹಿತ ಕಳುಹಿಸಿಕೊಡಬೇಕಾಗಿ ಕೋರಲಾಗಿದೆ.

ಅತ್ಯುತ್ತಮ ಕವನಗಳಿಗೆ ಕ್ರಮವಾಗಿ ಪ್ರಥಮ (೫೦೦ ರೂ.) ದ್ವಿತೀಯ (೩೦೦ ರೂ.) ಹಾಗೂ ತೃತೀಯ (೨೦೦ ರೂ.) ಬಹುಮಾನಗಳನ್ನೂ ಇಡಲಾಗಿದೆ. ಬಹುಮಾನಿತ ಕವಿಗಳೂ ಸೇರಿದಂತೆ ಕವಿಗೋಷ್ಟಿಗೆ ಆಯ್ಕೆಯಾದ ಎಲ್ಲ ಕವಿಗಳಿಗೂ ಬಳಿಕ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ನೀಡಲಾಗುವುದು. ಕವಿಗಳಿಗೆ ಪ್ರಶಸ್ತಿ ಪತ್ರಗಳನ್ನೂ ವಿತರಿಸಲಾಗುವುದು. ನಂತರ ಗೋಷ್ಟಿಯಲ್ಲಿ ವಾಚಿಸಲ್ಪಟ್ಟ ಕವನಗಳನ್ನು ಕ್ರಮವಾಗಿ ಕವಿಗಳ ಭಾವಚಿತ್ರ ಸಹಿತ ‘ಕನ್ನಡ ಸಾಹಿತ್ಯ ಡಾಟ್ ಕಾಂ’ ವೆಬ್ ಸೈಟಿನಲ್ಲಿ (ಅಂತರ್ಜಾಲದಲ್ಲಿ) ಪ್ರಕಟಿಸಲಾಗುವುದು.

ಕವನಗಳ ವಿಷಯ: ‘ಜಾಗತೀಕರಣ ಹಾಗೂ ಅಂತರ್ಜಾಲ ಸಂದರ್ಭದಲ್ಲಿ ಕನ್ನಡದ ಪರಿಸರ’.

ಕವನಗಳನ್ನು ಹಾಳೆಯ ಒಂದೇ ಮಗ್ಗುಲಿಗೆ ಸ್ಫುಟವಾಗಿ ತಪ್ಪಿಲ್ಲದೆ ಬರೆದು ಅಥವಾ ಟೈಪ್ ಮಾಡಿರಬೇಕು.

ಕವನ ೨೦ ಸಾಲುಗಳನ್ನು ಮೀರಿರಬಾರದು.

ಕವನಗಳನ್ನು ಕಳುಹಿಸಬೇಕಾದ ವಿಳಾಸ:

‘ಅಧ್ಯಕ್ಷರು, ಕ.ಸಾ.ಪ. ಜಿಲ್ಲಾ ಘಟಕ,
ಕನ್ನಡ ಸಾಹಿತ್ಯ ಪರಿಷತ್ ಭವನ,
ಕಲಾಭವನದ ಪಕ್ಕ, ಸಾಲಗಾಮೆ ರಸ್ತೆ,
ಹಾಸನ ೫೭೩೨೦೧’

ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಈ ಮೇಲ್ ವಿಳಾಸ ಮತ್ತು ಭಾವಚಿತ್ರ ಸಹಿತ ಕವನಗಳು ತಲುಪಬೇಕಾದ ಕೊನೆಯ ದಿನಾಂಕ: ೧೦-೧-೨೦೦೯.

ಕವಿಗೋಷ್ಟಿಯ ದಿನಾಂಕ, ಸಮಯ ಹಾಗೂ ಸ್ಥಳವನ್ನು ನಂತರ ತಿಳಿಸಲಾಗುವುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಉದಯರವಿ, ಅಧ್ಯಕ್ಷರು, ಕಸಾಪ, ಹಾಸನ- ೯೯೬೪೨೮೭೬೩೩

ಎಚ್.ಎಸ್. ಪ್ರಭಾಕರ, ಸಂಚಾಲಕರು, ಕೆ.ಎಸ್.ಸಿ. ಬೆಂಬಲಿಗರ ಬಳಗ, ಹಾಸನ- ೯೪೪೮೩೬೫೮೧೬ ಮತ್ತು

ಕೃಷ್ಣಮೂರ್ತಿ, ಕಾಯರ್ದರ್ಶಿ, ಬಿ.ಸಿ.ಆರ್.ಟಿ. ಹಾಸನ- ೯೩೪೩೪೩೧೮೮೬
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.