ಭಾವಗೀತೆ

ಅಕ್ಷರಗಳ ಹೊತ್ತುಕೊಂಡು
ಮಧ್ಯಾಹ್ನದ ರಣ ಬಿಸಿಲಿನಲ್ಲಿ
ಅಲೆಯುತ್ತಿದ್ದೆ.
ಕುದಿಯುವ ತಲೆ ಸೀಳಾಗಿ
ಶಬ್ದಗುಚ್ಛಗಳೆಲ್ಲ ತೇಲತೊಡಗಿದವು
ವರ್ತಮಾನದ ಒಳಗೆ
ಇವುಗಳ ಪದರುಗಳ
ಬಿಡಿಸಿ
ಚರ್ಮ ಒ೦ದೊ೦ದಾಗಿ ಕಳಚಿ
ತಂಪು ಕಾಯಲು ನಿಂತೆ
ಮೋಸಂಬಿ ತೊಳೆ ತೊಳೆ ಬಿಡಿಸಿ
ಒಳಗೊಳಗೇ ರೂಪುಗೊಂಡಿತು
ಥಣ್ಣಗಿನ ಭಾಷೆ
ಭಾವದ ನಕಾಶೆ
*****