ಗಣಕ ಯಂತ್ರ

ಎಲ್ಲ ತಿಳಿಸುವ,
ಎಲ್ಲ ತಿಳಿದಿರುವ,
ಮಡಿಲ ಮೇಲಿನ ಗಣಕವೇ,
ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ
ಏನೇ ಬೇಡಿಕೆ, ಏನೇ ಹಂಬಲ,
ಬೇಕಾದರು, ಏನೇ ಬೆಂಬಲ
ಮೊರೆಹೋಗುವೆ ನಿನ್ನ, ನಾ ದುರ್ಬಲ!
ಜೀವಾತ್ಮದ ಸಂಚಯದ,
ಪರಮಾತ್ಮನ ಪರಿಚಯದ
ಬೇನೆ ಪರಿಹರಿಸುವೆಯ?
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.