ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ ಮಾತು ಮಾತಿನ ಮೊನೆಯ ಮಸೆಯಿತೆಂತು? ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ! ಮೌನದೇವತೆ ಶಾಪವಿತ್ತಳೆಂತು? ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ? ಪ್ರೀತಿ ಅಂತಃಕರಣ ನಿನ್ನದಿದೆಕೊ! ಅದನುಳಿದರೇನುಂಟು? ಬರಿಯ ಗಾಳಿಯ ಗಂಟು! […]
ಲೇಖಕ: ಚನ್ನವೀರ ಕಣವಿ
ಉರುಳುರುಳು ಕಂಬನಿಯೆ!
ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು- ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ ಚಿಮ್ಮಿ […]
ಮಾತಂಗ ಬೆಟ್ಟದಿಂದ
೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […]
