ಶಿಕಾರಿ – ೫

ಇದ್ದಕ್ಕಿದ್ದಂತೆ ಒಂದು ಬಗೆಯ ಜಿಗುಪ್ಸೆ. ನಿರುತ್ಸಾಹ, ದಣಿವು ಕೂಡಿದಂತಿದ್ದ ನಾಗಪ್ಪನ ದನಿ ದಸ್ತೂರನ ಉಕ್ಕುತ್ತಿದ್ದ ಉತ್ಸಾಹಕ್ಕೆ ಭಂಗ ತಂದಿತು. ಆದರೂ ಹಾಗೆಯೇ ತೋರಗೊಡದೆ, ತನಿಖೆಯನ್ನು ಆರಂಬಿಸಿದ ರೀತಿಯಲ್ಲಿಯ ಅವನ ಜಾಣ್ಮೆಯನ್ನು ಮೆಚ್ಚಿಕೊಂಡ ಫಿರೋಜ್ ಹಾಗೂ […]

ಶಿಕಾರಿ – ೪

“ಬೋಳೀಮಗನೇ, ಬೋಳೀಮಗನೇ, ಈಗ ನಾನು ಕೇಳುತ್ತೇನೆ : ಹೀಗೆ ಹಿಂದಿನದೆಲ್ಲವನ್ನು ಅಗೆದು ಅಗೆದು ತನ್ನನ್ನೇಕೆ ಸತಾಯಿಸುತ್ತೀಯೋ ? ಹೇಳೋ. ನಿನ್ನ ಇರಾದೆಯನ್ನಾದರೂ ತಿಳಿಸೋ. ಆ ಸೀತಾರಾಮ_ಅವನೊಬ್ಬ ಹಜಾಮ ! ಬರೀ ಅವರಿವರ ಶಪ್ಪಾ ಕೆತ್ತುವುದರಲ್ಲೇ […]

ಗೋವಿಂದ ವಿಠಲ… ಹರಿಹರಿ ವಿಠಲ..!

ಪರಮನಾಸ್ತಿಕರಾದ ಜೋಶಿಯವರನ್ನೇ ದಾಸರಪದಗಳ ಸಮಗ್ರ ಸಂಕಲನಕ್ಕೆ ಸಂಪಾದಕರನ್ನಾಗಿ ಮಾಡಿ-ದ್ದರಲ್ಲಿ ಪ್ರಸಾರಾಂಗದ ನಿರ್ದೇಶಕ ಶರಣಬಸಪ್ಪನವರ ಕೈವಾಡವಾಗಲೀ ಕುಚೋದ್ಯವಾಗಲೀ ಕಿಂಚಿತ್ತೂ ಇರಲಿಲ್ಲ. ತಾಳೆಗರಿಗಳನ್ನೂ ಹಳೆಯ ಹಸ್ತಪ್ರತಿಗಳನ್ನು ಓದುವುದರಲ್ಲಿ ನಿಷ್ಣಾತರಾದ ಜೋಶಿಯವರೇ ಕೀರ್ತನೆಗಳನ್ನು ಸಂಪಾದಿಸಲು ಸಮರ್ಥರು ಎನ್ನುವುದು ಶರಣಬಸಪ್ಪನವರಿಗೆ […]

ಕನ್ನಡಿಯೊಳಗೆ ಗಳಗನಾಥರಿರಲಿಲ್ಲ

ಗಳಗನಾಥರು ಬೆಚ್ಚಿಬಿದ್ದರು! ಯಾವತ್ತಿನ ಹಾಗೆ ಕನ್ನಡಿಯ ಮುಂದೆ ಹೋಗಿ ನಿಂತ ಗಳಗನಾಥರಿಗೆ ಕನ್ನಡಿಯಲ್ಲಿ ಪ್ರತಿಬಿಂಬ ಕಾಣಿಸಲಿಲ್ಲ. ಕಣ್ಣು ಮಂಜಾಗಿದೆ ಅನ್ನಿಸಿ ಹೊಸಕಿಕೊಂಡು ನೋಡಿದರು. ಆದರೂ ಪ್ರತಿಬಿಂಬ ಕಾಣಿಸಲಿಲ್ಲ. ಗಾಬರಿಯಿಂದ ಕಿಟಕಿಯಾಚೆ ನೋಡಿದರು. ಹೊರಗೆ ದೂರದಲ್ಲಿ […]

ಡಾ. ರೇವಣಸಿದ್ಧಪ್ಪ

ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […]

ಶಿಕಾರಿ – ೩

ನಾಗಪ್ಪ ತುಂಬ ಮೆತ್ತಗಾದ :”ನಿಮಗೆ ತೊಂದರೆಯಿಲ್ಲ ತಾನೇ ?” ಇದನ್ನು ಬಾಗಿಲಲ್ಲೇ ನಿಂತ ಧಂಡೋಬಾನ ಹೆಂಡತಿ ಕೇಳಿರಬೇಕು. ಅವಳು, “ತೊಂದರೆಯೇನು ಬಂತು ! ನಮಗಾಗಿ ಮಾಡಿದ್ದರಲ್ಲೇ ಸ್ವಲ್ಪ ತಿನ್ನುವಿರಂತೆ, ಬನ್ನಿ” ಎಂದಳು. ಅವಳ ದನಿಯಷ್ಟೇ […]

ಶಿಕಾರಿ – ೨

ಹೊರಗೆ ರಿಕ್ಷಾವಾಲ ಗದ್ದಲ ಮಾಡಹತ್ತಿದ. ನಾಗಪ್ಪ ಮೊದಲು ಅದೇ ರಿಕ್ಷಾ ಹತ್ತಿ ಯಾವುದಾದರೂ ಹೊಟೆಲ್ಲಿಗೆ ಹೋಗಿ ಊಟ ಮಾಡೋಣ. ಬರುವಾಗ ಟ್ಯಾಕ್ಸಿಯಿಂದ ಬಂದರಾಯಿತು ಎಂದುಕೊಂಡಿದ್ದ. ಆದರೆ ಇದೀಗ ಫೋನ್ ಮೇಲೆ ತಿಳಿದ ಸುದ್ದಿಯಿಂದ ಊಟದ […]

ಶಿಕಾರಿ – ೧

ಅಧ್ಯಾಯ ಒಂದು : ಹೇಳದೇ ಕೇಳದೇ ಎಂಬಂತೆ ಉದ್ಭವಿಸಿ, ಧುತ್ ಎಂದು ಕಣ್ಣೆದುರಿಗೆ ಹಾಜರಾದ ಪರಿಸ್ಥಿತಿಯ ಅರ್ಥ ನಿಚ್ಚಳವಾಗುತ್ತ ಹೋದಹಾಗೆ ನಾಗಪ್ಪನಿಗೆ ತಾನು ಬಹಳ ವರ್ಷಗಳ ಹಿಂದೆ ಓದಿದ ಕಾಫ್ಕಾನ ‘ಟ್ರಾಯಲ್’ ಕಾದಂಬರಿಯ ನಾಯಕ […]

ಬೊಳ್ಳದ ಸಂಕ

ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ […]

ಶುಲ್ಕ

ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […]