ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ)
ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು
ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ
ತನ್ನ ಜೀವದ ಕೆಂಪು ರಗ್ತವ ಹರಿಸಿ
ಆರಾಮವಾಗಿ ಹಾದು ಹೋಗುವ
ಕಣ್ಣು, ಆತ್ಮ, ಜೀವ, ಮನ ಇದ್ಯಾವುದೂ ಇಲ್ಲದ ಮನುಜರ ಮುಂದೆ
ಅಂಗಾತ ಬಿದ್ದು ಸತ್ತಿದೆ ನೋಡಲ್ಲಿ
ಎಷ್ಟೊಂದು ವಿಶ್ವಾಸವಿಟ್ಟು ದಿನ ಕಳೆದಿದ್ದಿರಬೇಕು
ಈ ನಾಯಿಯೂ ಕೂಡಾ
ಜಾಗೃತವೇ ಇದ್ದು ರಾತ್ರಿ-ದಿನ ಕಾದು
ಪರರಿಗೆ ಬೊಗಳಿ
ತಮ್ಮವರಿಗೆ ಬಾಲ ಎಸ್ಟು ಸಾರಿ ಅಲ್ಲಾಡಿಸಿದ್ದಿರ್ಬೋದು?
ಎಲುಬು ನೆಕ್ಕಿಯೂ, ಗೊಬ್ರದಲ್ಲೇ ಬಿದ್ದಾದ್ರೂ
ಬದುಕಿದ್ದಿಲ್ಲ ಅದು?
ಈ ಧನಿಗಳು – ಮನುಷ್ಯರೂ ನೋಡಿ
ಕದಿಯುವ ಬೆಕ್ಕಿಗೆ ಮಂಚ ಕೊಟ್ಟು
ಬಹದೂರ್ ನಾಯಿಗೆ ಮುಂದೆ ಇಟ್ಟು
ಒಳಗೆ ಅಡಗಿ ತಮಾಶೆ ನೋಡ್ತಾರೆ ನೋಡಿ
ಸೆರಗಿಗೆ ಹಿಡಿದು, ಕಂಬಳಿ ಹೊದಿದು
ಕನಸಲ್ಲಿ ಹಣ್ಣು ತಿನ್ನೋರು
ಈಗ ಕವಿಗಳ ಆತ್ಮಗಳ ಸಾಲು ನೋಡಿ
ಸತ್ತ ನಾಯಿಸುತ್ತ ನಿಂತು ಬೊಬ್ಬೆ ಹಾಕ್ತಾರೆ
ಇಲ್ಲಿ ಕ್ರಾಂತಿ ಆಗೋ ಹಾಗೆಯೇ ಇಲ್ಲ
ಕ್ರಾಂತಿಯವ್ರಿಲ್ಲಿ ಹೊಟ್ಟೆ ತುಂಡಾಗಿ
ಜಠರ ಸಿಗಿದು, ಅಂಗಾತಬಿದ್ದು
ಈ ಮಂಟಪವನ್ನೇ ಬಿಟ್ಟೋದ್ರು
ಯಾರೂ ಕೇಳ್ಳೇ ಇಲ್ಲ ನೋಡಿ
ಲಾರಿ ಹಾಯಿತೋ ಅಥ್ವಾ ಮರ್ಸಿಡಿಸ್ ಕಾರೋ
ಹಾಯಿತೋ ಅಥ್ವಾ ಯಾರೋ ತೆಗೆದ್ರೋ
ಯಾರಿಗೆ ಯೇನು ಬಿದ್ದೋಗಿದೆ
ಕಡೇಗೆ ಒಂದು ನಾಯಿ ನೋಡಿ; ನಾಯಿಗಳು ಇಷ್ಟೊಂದು ಇರುವಾಗ
ಪೋಸ್ಟ್ ಮಾರ್ಟಮ್ ಯಾಕಪ್ಪಾ ಬೇಕು?
ಕೊಂಕಣಿ ಮೂಲ
ಅನ್ಯೇಕ್ ಪೆಟೊ ಮೆಲಾ ಪಳೆ
ಅಳೇ ಅನ್ಯೇಕ್ ಪೆಟೊ ಮೆಲಾ ಥಂಯ್
ರಾಜ್ ರಸ್ತ್ಯಾಚೆರ್‍ಚ್ ದಿಸಾಚಾ ಮಧೆಂಚ್
ಅಪ್ಲ್ಯಾ ಕುಡಿಂತ್ಲ್ಯಾ ತಾಂಬ್ಡ್ಯಾ ರಗ್ತಾಕ್ ವ್ಹಾಳವ್ನ್
ಸುಶೆಗಾತ್ ಪಾಶಾರ್ ಜಾಂವ್ಚಾ
ದೊಳೆ ಅತ್ಮೊ ಜೀವ್ ಮತ್ ನಾತ್ಲೆಲ್ಯಾ ಮನ್ಶಾಂಸವೆಂ
ಉದಾರೊಚ್ ಪಡೊನ್ ಮೆಲಾ ಪಳೆ
ಕಿತ್ಲ್ಯಾ ವಿಶ್ವಾಸಾನ್ ದೀಸ್ ಕಾಡ್‌ಲ್ಲೆ ಜಾವ್ಯೆತಾ
ಹ್ಯಾ ಪೆಟ್ಯಾನ್‌ಯ್
ಜಾಗೊಚ್ ರಾವೊನ್ ದೀಸ್‌ರಾತ್ ಪಾರೊತ್ ಕರುನ್
ಪರ್ಕ್ಯಾಂಕ್ ಘೊಂಕುನ್
ಅಪ್ಲ್ಯಾಂಕ್ ಶಿಮ್ಟಿ ಕಿತ್ಲಿ ಹಾಲಯಿಲ್ಲಿ ಜಾವ್ಯೆತಾ
ಹಾಡಾಂ ಚಿಂವೊನ್ ಗೊಬ್ರಾರ್ ಪಡೊನ್ ತರ್‍ಯ್
ಆವ್ಕ್ ಸಂಪಯಿಲ್ಲೆಂ ತಾಣೆಂ
ಹಿಂ ಧನ್ಯಾಂ – ಮನ್ಶಾಂಯ್ ಪಳೆ
ಚೊರಿ ಕರ್ಚಾ ಮಾಜ್ರಾಕ್ ಖಾಟ್ ದಿವುನ್
ಬಾದೂರ್ ಪೆಟ್ಯಾಕ್ ಮುಕಾರ್ ಘಾಲುನ್
ಭಿತರ್ ಲಿಪೊನ್ ತಮಾಸೊ ಚೊಯ್ತಾತ್ ಪಳೆ
ಪಾಲಂವಾಕ್ ಧರುನ್, ವೊಲಿಂಕ್ ಗುಟ್ಲಾವ್ನ್
ಸ್ವಪ್ಣಾಂನಿ ಖೆಳಿಂ ಖಾತೆಲೆ
ಕವಿಂಚಾ ಅತ್ಮ್ಯಾಂಚೊ ವ್ಹೊರ್ ಪಳೆ
ಭಂವ್ತೊಣಿಂ ರಾವೊನ್ ಬೊಬೊ ಘಾಲ್ತಾತ್
ಹಾಂಗಾ ಕ್ರಾಂತಿ ಜಾಂವ್ಚೆಪರಿಂಚ್ ನಾ
ಕ್ರಾಂತೆಚೆ ಹಾಂಗಾ ಪೋಟ್ ಫುಟೊನ್
ಆನ್ಕಿಟೊ ಚಿರೊನ್ ಉದಾರೆಚ್ ಪಡೊನ್
ಹೆಂ ರಂಗ್‌ಮಂಚ್‌ಚ್ ಸಾಂಡುನ್ ಗೆಲ್ಯಾತ್
ಕೊಣೆಂಯ್ ವಿಚಾರ್ಲೆನಾಂ ಪಳೆ
ಲೊರಿ ಹಾಂಡ್ಲಿಗಿ ಯಾ ಮರ್ಸಿಡಿಸ್ ಕಾರ್
ಹಾಂಡ್ಲಿಗೀ ಯಾ ಕೊಣೆಯ್ ಕಾಡ್ಲೊಗೀ
ಕೊಣಾಕ್ ಕಿತೆಂ ಪಡೊನ್ ಗೆಲಾಂ
ಅಖ್ರೇಕ್ ಏಕ್ ಪೆಟೊ ಪಳೆ; ಪೆಟೆ ಕಿತ್ಲೆಯ್ ಆಸ್ತಾನಾ
ಪೋಸ್ಟ್ ಮಾರ್ಟಮ್ ಕರ್ಚೆಂಚ್ ಕಿತ್ಯಾಕ್?
*****