ನಾನು ನೀನು ಎನ್ನದಿರೋ

ರಾಗ — ಭೈರವಿ ತಾಳ — ರೂಪಕ

ನಾನು ನೀನು ಎನ್ನದಿರೋ ಹೀನಮಾನವ |
ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ||

ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |
ಅನ್ನದಿಂದ ಬಂದ ಕಾಮ ನೊನ್ನದೇನೆಲೊ ||
ರ್ಣದಿಂದ ಬರುವ ಘೋಷ ನಿನ್ನದೇನೆಲೊ |
ನಿನ್ನ ಬಿಟ್ಟುಹೋದ ಜೀವ ನಿನ್ನದೇನೆಲೊ ||೧||

ಹಲವು ಜನ್ಮದಿಂದ ಬಂದಿರುವನು ನೀನೆಲೊ |
ಮಲದ ಗರ್ಭದಲ್ಲಿ ನಿಂದಿರುವನು ನೀನೆಲೊ ||
ಜಲದ ದಾರಿಯಲ್ಲಿ ಬಂದಿರುವನು ನೀನೆಲೊ |
ಕೆಲವು ಜಾತಿ – ಗೋತ್ರಗಳುಳ್ಳವನು ನೀನೆಲೊ ||೨||

ಕಾಲ – ಕರ್ಮ ಶೀಲ – ನೇಮ ನಿನ್ನದೇನೆಲೊ |
ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ ||
ಕೀಲು ಜಡಿದ ಮರದ ಬೊಂಬೆ ನಿನ್ನದೇನೆಲೊ |
ಲೋಲ ಆದಿಕೇಶವನ ಭಕ್ತನಾಗೆಲೊ ||೩||


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.