ಮುಟ್ಟದಿರೋ ರಂಗಯ್ಯ

ರಾಗ — ಆನಂದಭೈರವಿ
ತಾಳ — ಅಟ್ಟ

ಮುಟ್ಟದಿರೋ ಎನ್ನನು – ರಂಗಯ್ಯ |
ಮುಟ್ಟದಿರೋ ಎನ್ನನು ||ಪ||

ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ |
ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.||

ಹೊಳೆಯ ಒರತೆಯಲಿ ಮಳಲು ಚೆಲ್ಲಿದಂತೆ |
ಕೆಳದಿಯರ ಕೂಡಾಡಿ ಕಲಿತೆಯೊ ಬೆಡಗ ||
ಬಲು ತುಡುಗ… ಬಲು ತುಡುಗ –
ಬಿಡು ಎನ್ನ ಸೆರಗ ||೧||

ಅತ್ತ ಒಬ್ಬಳ ಕೂಡ ಆಡಿಬರುವುದ ಕಂಡೆ |
ಸತ್ಯವ ಮಾಡದಿರೊ – ಏ ಸರನಂಟ ||
ನೂರೆಂಟ……… ನೂರೆಂಟ –
ಬಿಡು ಎನ್ನ ಗಂಟ ||೨||

ಅಂಗೈಯ ಒಳಗಿನ ಅನುವಾದ ಪಾಯಸ |
ಮುಂಗೈಯಿನ ಮೇಲಿನ ಕಂಡ ಕಲೆಯ ||
ಕಾಗಿನೆಲೆಯ……… ಕಾಗಿನೆಲೆಯ –
ಕನಕಯ್ಯನಿಗೊಲೆಯ ||೩||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.