ಫರಕು Posted on ಜೂನ್ 12, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. *****
ಹನಿಗವನ ನಿರರ್ಥಕ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಅಕ್ರಮ ಗಳಿಕೆಯಲಿ ತೊಡಗಿ ಗುಡಿ ಕಟ್ಟಿಪಾಪ ತೊಳೆಯುವ ಚಪಲ-ಕೋಣೆಯಲಿ ಫ್ಯಾನ್ ಹಾಕಿ ಕಸ ಗುಡಿಸುವಕಾಯಕದ ಹಾಗೆ ಅಸಫಲ.
ಹನಿಗವನ ಸಾವು ಜಯಂತ ಕಾಯ್ಕಿಣಿ ಫೆಬ್ರವರಿ 17, 2023 0 ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****
ಹನಿಗವನ ಕೂಲಿ ನಿಸಾರ್ ಅಹಮದ್ ಕೆ ಎಸ್ ಜೂನ್ 26, 2023 0 ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. *****