ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಆಗಿನ್ನೂ
ಚರಾಚರಗಳು ರೂಪುಗೊಂಡಿರಲಿಲ್ಲ
ವಿಶ್ವವಲ್ಲಿರಲಿಲ್ಲ, ಬ್ರಹ್ಮಾಂಡವಿರಲಿಲ್ಲ
ಆಡಂ ಅಲ್ಲಿರಲಿಲ್ಲ, ನಾನೇ ಆಗ ಬಯಲು-ಸಮಾಧಿ
ನಾನೇ ಆಗ ಅನಂತದ ಸಂಕೇತ
ವಿಶ್ವಕ್ಕೆ ಬೆಳಕು ಬಂದಿದ್ದು ನನ್ನಿಂದ
ಆಡಂ ಆಕಾರಗೊಂಡಿದ್ದು ನನ್ನಿಂದ
ನಾನು ಜ್ಞಾನಿ, ಎಲ್ಲ ಬಲ್ಲಾತ
ನಾನೆ ನ್ಯಾಯಾಧೀಶರ ನ್ಯಾಯಾಧೀಶ
*****
