ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ನನ್ನ ಕವಿತೆ
ಈಜಿಪ್ಟಿನ ರೊಟ್ಟಿಯಿದ್ದಂತೆ
ರಾತ್ರಿ ಕಳೆದಂತೆ
ಹಳಸುತ್ತ ಹೋಗುತ್ತದೆ
ಬಿಸಿಯಿದ್ದಾಗಲೆ
ಅದನ್ನು ತಿನ್ನು
ಕಸ ಧೂಳು ಕೂರುವ
ಮುನ್ನ ಅದನ್ನು ತಿನ್ನು
ಅದು ಒಣ ನೆಲದ ಮೇಲ ಮೀನು
ಒಂದು ಕ್ಷಣದಲ್ಲಿ ಅದರ ಹೆಣ
ಅದು ತಾಜಾ ಎಂದು ತಿಂದರೂ
ಅನೇಕ ರಸಗಳ ಆವಾಹನೆ ಬೇಕು
ನೀನೇನು ಕುಡಿಯುತ್ತಿಯೊ ಅದು ನಿನ್ನ ಪ್ರತಿಭೆ
ಅದು ಕೊಳೆವ ಹಳೆಯ ಕಥೆಯಲ್ಲ, ನನ್ನ ಸುಖ
*****
