ವಿಧೇಯ ಪುತ್ರ

“ನಾವು ಬದುಕಿರೋವಾಗ್ಲೇ ಹೀಗೆ,
ಗೊಟಕ್ಕಂದ್ರೆ ಹೇಗೋ ಏನೋ,
ಇನ್ನು ನಮ್ಮನ್ನ ಜ್ಞಾಪ್ಕಾ ಇಡ್ತಾನ?”
_ಮನಸಾರೆ ನೊಂದು
ಆಡಿಕೊಂಡಿರಲು ಮುದಿ ತಾಯಿ ತಂದೆ
ಅಮಾವ್ರಗಂಡ ಬಿರುದಿನ ಮಗನನ್ನ;
ಸುಪುತ್ರ ಸಮಾಧಾನಿಸಿದ:
“ಯಾಕೆ ಪಡ್ತೀರಿ ಅನುಮಾನ?
ನಂಬಿಕೆ ಬರೋ ಹಾಗೆ ಮಾಡ್ಲೆ
ನಾಳೇನೇ ನಿಂ ಶ್ರಾದ್ಧಾನ?”
*****