ಪ್ರಸ್ನೆ – ಹುತ್ತರ

“ಹಲ್ಪ ಪ್ರಾಣ ಮ‌ಆ ಪ್ರಾಣ
ಹೇನೆಂಬುದರ ಹರಿವಿಲ್ಲದ
ಹಿವನೊಬ್ಬ ಕೋಣ.
ಸಿಸ್ಯನಾಗಿ ಹನುಗ್ರಯಿಸಿ
ನೀಡಿ ಹೊಳ್ಳೆಯ ಸಿಕ್ಸಣ.”
“ಆಗೆಯೇ ಹಾಗಲಿ, ಎದರಬೇಡ
ಹೀವೊತ್ತಿನಿಂದಲೇ
ಹೋದು ಹಾರಂಬಿಸೋಣ.”
*****