ಅಡ್ಡ ವೈಸು

“ಗೀತಾ, ಮನೆ ಮುಗೀತಾ? ಯಾವಾಗ ಗೃಹಪ್ರವೇಶ?”
“ಮುಗೀತೂರಿ, ಆದ್ರೆ ಕಂಟ್ರಾಕ್ಟರ್ ಮಾಡ್ದ ಸಖತ್ ಮೋಸ”.
“ಯಾಕೆ? ಏನಾಯ್ತು ಅಂಥದ್ದು? ಪೀಕಿಸಿದ್ನ ದುಡ್ಡು ಜಾಸ್ತಿ?”
“ಅವನ ಮನೆ ಹಾಳಾಗ, ಕರಗಿಸಿಬಿಟ್ಟ ಕಣ್ರಿ ಇದ್ದ ಬದ್ದ ಆಸ್ತಿ”.
“ಛೇ! ನಿಮ್ಮಂಥ ಒಳ್ಳೆಯೋರ್‍ಗೆ ಹಾಗೆ ಮಾಡ್ಬಾರ್‍ದಾಗಿತ್ತು;
ಅವಿಗೆ ಕೊಡೋಕೆ ಮುಂಚೆ ನೀವೂ ಯೋಚಿಸಬೇಕಿತ್ತು”.
“ಎಲ್ಲಾ ನಂ ಖರ್‍ಮ! ಹೊಸ ಮನೆ ಹತ್ತು ಕಡೆ ಸೋರುತ್ತೆ,
ನೋಡೋರ್ ಕಣ್ಗೆ ಥೇಟ್ ಜಲಪಾತದ್ ಥರ ತೋರುತ್ತೆ”.
“ಹೌದಾ? ಹಾಗಿದ್ರೆ ಇಟ್ಬಿಡಿ ಒಪ್ಪೋ ಹೆಸರು ಹೊಸ ಥರ”.
“ಹೇಳಿ ಇವ್ರೆ, ಏನಂತ ಇಡ್ಬೇಕು?”
“ಅದೇ ನಯಾಘರ.”
*****