ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […]