ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****
ವರ್ಗ: ಹನಿಗವನ
ಗುಣದ ಗರಿಮೆ
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಅಮ್ಮನಿಗೆ – ೨
ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****
