ನಡೆದದ್ದು

ಹಾಗೇ ಕಾಲು….. ಹೆಜ್ಜೆ ಮುಂದೊಂದು ಹೆಜ್ಜೆ ದೂರ…. ದೂರದ ತನಕ ತನ್ನ ಪಾಡಿಗೆ ತಾನು, ಅಕ್ಕ ಪಕ್ಕದ ಗಿಡಮರಗಳೆಲ್ಲಾ ಮುಂದು ಮುಂದಕ್ಕೆ ಸಾಗಿದಹಾಗೆ, ನಡೆದಷ್ಟೂ ಸುಮ್ಮನೆ ನಡೆಸುತ್ತದೆ ದಿಕ್ಕಿಲ್ಲದ ಮನಸ್ಸು. ಹಾದಿಯಂಚಿಗೆ ಗುಡ್ಡಗಾಡು ಸರಿದು […]

ಕಾವ್ಯಾಕ್ಷಿ

ಆ ಗಿಡಾ, ಈ ಗಿಡಾ ಒಂದೊಂದೂ ಜೇಂಗೊಡಾ; ಬಾಂದೇವಿಗೆ ನೆಲದಾಯಿಯ ಹೂಗೊಂಡೆಯ ಹೊಂಗೊಡಾ ಯಾವ ಹಸಿರೊ, ಯಾವ ಹೆಸರೊ ತರುಲತೆಗಳ ತೋರಣಾ; ಬಂದುದೆಲ್ಲಿ? ಬೆಳೆಯಿತಲ್ಲಿ? ನಿಷ್ಕಾರಣ ಕಾರಣಾ ನೀಲಾಂಗಣ, ತಿರೆ-ಕಂಕಣ ಕೆಂದಳಿರಿನ ಕಾವಣಾ; ಅಲ್ಲಿ […]

ಅಸ್ತಿತ್ವ

ನಾನು ಮೈತುಂಬ ಬಾಯಾಗಿ ತುಂಬಿ ತುದಿಯಾಗಿರುವ ಬದ್ಧ- ಬುಗುರಿ. ಗುರುತ್ವ – ಬಿಂಬದ ಸುತ್ತೂ ಸುತ್ತಾಗಿಸಿ ಹತ್ತಿ ಹತ್ತಾಗಿಸಿ ಗರಾ ಗರಾ ತಿರುಗಿಸಿಕೊಂಡು ತಿರುಗಿ ನೇರ ನಿಗುರಿ ನಿಂತರೆ ಮಾತ್ರ ನನಗೆ ಏನಾದರೂ ಅಸ್ತಿತ್ವ-ಒಂದು […]

ಒಳದನಿ

ನನ್ನೆದೆಯ ಗೂಡಿನೊಳಗಾವುದೋ ಹಕ್ಕಿಯುಲಿ ಚಿಲಿಪಿಲಿಸುತಿಹುದಾವ ನಿಮಿಷದಲ್ಲು; ಜಗದ ಮೊರೆ-ಕರೆಗಳಿಗೆ ಚೆಲುವು ಚಿನ್ನಾಟಕ್ಕೆ ದನಿಗೂಡಿ ಹಾಡುತಿದೆ ಕನಸಿನಲ್ಲು! ಹಾಡ ಸವಿಸೊಲ್ಲಿನಲೆ ತೋಡುತಿದ ಮತ್ತೊಂದು ನೋವು ನರಳಾಟಗಳ ವಿಷಮ ಬಿಂದು; ಮಣ್ಣ ಕಣಕಣದಲ್ಲಿ ಮರದ ಹನಿಹನಿಯಲ್ಲಿ ಹುಡುಕುತಿಹುದಾವುದನೊ […]

ಈ ನಮ್ಮ ಕಾಲದಲ್ಲಿ ಏನೇನು ಚೆಂದ?

ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […]

ಜಾಜಿ – ೨

ದೂರ ದೂರದ ತನಕ ದಾರಿ ಕಾಯುವ ಹುಡುಗಿ ಏನು ಹೇಳೆ ನಿನ್ನ ಮನದ ಅಳಲು. ಯಾವ ಊರಿನ ಅವನು! ಯಾವ ಊರಿನ ಇವಳು! ಆಲಿಕಲ್ಲಿನ ಮಳೆಯ ಕಪ್ಪು ಮೋಡ ಜಾಡು ನದಿಯ ನಾಡಿಯಲ್ಲೆಲ್ಲಾ ತಣ್ಣನೆಯ […]

ತಾಯೆ ನಿನ್ನ ಮಡಿಲೊಳು

ನಿನ್ನ ಬಸಿರೊಳೊಗೆದು ಬಂದು ಎದೆಯ ಹಾಲ ಕುಡಿದು ನಿ೦ದು ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; ನಿನ್ನ ಕರುಣ ರಸದೊಳಾಳ್ದು ತೊದಲು ನುಡಿಯ ಜಾಲ ನೆಯ್ದು ಹಸುಳೆತನದ ಹಾಲುಗಡಲ ಸವಿಯ ನೋಡಿದೆ. ೨ ನಿನ್ನ ಮುತ್ತು […]

ಮೂರನೇಯತ್ತೆಯ ಮೊದಲ ಮಳೆ

ಮೊದಲ ಮಳೆ ಸುರಿದಾಗ ಮನೆಯ ನುಣ್ಣನಂಗಳಕೆಲ್ಲ ಪರಿಮಳದ ಮಾತು ಮುಂಜಾನೆ ಎದ್ದು ಕಣ್ಣುಜ್ಜುತ ಬೆಚ್ಚನೆ ಹಾಸಿಗೆ ಬಿಟ್ಟು ಹೊಸ್ತಿಲಿಗೆ ಬಂದಾಗ ಮೆಟ್ಟಿಲಿನೆತ್ತರಕೂ ಕರಗಿದ ಕಾಗದ ಕಸ ಮಣ್ಣು ಚೂರು ಒರೆದ ಅಂಗಳ ಗುಡ್ಡೆಗಟ್ಟಿ ಒಕ್ಕಿ […]

ದೀಪಧಾರಿ

೧ ಒಂದು…. ಎರಡು… ಮೂರು ಒಂದೊಂದು ಹೂ ಹಗುರು ಮಗುವಿಡುವ ಮೊಟ್ಟ ಮೊದಲಿನ ಪುಟ್ಟ ಹೆಜ್ಜೆಗಳನೆಣಿಸಿದನು ಸೃಷ್ಟಿ ಕರ್ತ ! ದಟ್ಟಡಿಯನಿಡುತಲಿವ ನಡೆಗಲಿತುದೇ ಒಂದು ಶುಭ ಮುಹೂರ್‍ತ. ಭೂಮಂಡಲವ ನೆತ್ತಿಯಲ್ಲಿ ಹೊತ್ತು ಮೇಲೆತ್ತುವೊಲು ಏಳುವನನಾಮತ್ತು […]

ಕುದುರೆಗಳು

– ಎಡ್ವಿನ್ ಮುಯಿರ್ ಪ್ರಪಂಚವನ್ನು ಚಿರನಿದ್ದೆಗೆ ತಳ್ಳಿದ ಏಳು ದಿನಗಳ ಯುದ್ಧ ಕೊನೆಯಾಗಿ ಇನ್ನೇನು ಒಂದುವರ್ಷ ಕಳೆಯುವುದರ ಒಳಗೆ ಸಂಧ್ಯಾಕಾಲ ಕತ್ತಲಿಗೆ ಜಾರುತ್ತ ಇರುವ ಹೊತ್ತಲ್ಲದ ಹೊತ್ತಿನಲ್ಲಿ ಬಂದೇಬಿಟ್ಟವು ಅವು ಅಪರೂಪದ ಕುದುರೆಗಳು ಅಷ್ಟರಲ್ಲಿ […]