ಸೂರ್ಯ

ಸೂರ್ಯ
ಆಗಾಗ
ಹಗಲುಗಳ ನುಂಗಿ
ಸುಖವಾಗಿ
ಸಾಯುತ್ತಿದ್ದ
ಅಥವಾ ಬದುಕುತ್ತಿದ್ದ
ಆಗೊಮ್ಮೆ ಈಗೊಮ್ಮೆ
ಹೆಣ್ಣುಗಳ
ತುಟಿಯಲ್ಲಿ
ಪಿಸುನುಸುಳುತ್ತಿದ್ದ

ಅಯ್ಯೋ ಗದ್ದಲ
ಭೂಮಿಯ ತುಂಬ
ಮಕ್ಕಳೋ ಮಕ್ಕಳು!
*****