ಸ್ವಾತಂತ್ರ್ಯ ೪೦

ಕಾಲೇಜು ಹುಡುಗ ನಾನಂದು ಅನುಭವಿಸಿದ್ದೆ
ಮಧ್ಯ ರಾತ್ರಿಗೆ ಮಿಂಚು ಹೊಡೆದದ್ದು -ಮೈ ತುಂಬ,
ಬಾನಿಗೇರಿದ ಮೂರು ಬಣ್ಣ -ಬಾವುಟದಿಂದ

ಕನಸು- ಹುಮಳೆ ಸುರಿದು. ಒಂದು ಕ್ಷನ ಮಿನುಗಿದ್ದೆ,
ಸಂಘರ್ಷ ಶತಮಾನ ಹಿಂಸೆಗೆದೆಗೊಟ್ಟಿರುವ
ತ್ಯಾಗದಾವಿರ್ಭಾ, ತೇಲಿ ಒಂದಿತು ಹಂಸ,
ಬೆನ್ನು ಬಿದ್ದ ಕಪೋತ ಪಕ್ಷಿಗಿದೆ ತೊಡೆ-ಮಾಂಸ.

ಬಾಳು ಹೋಳಾದಂತೆ ನುಂಗಿದೆ ನಂಜು-ನೋವು.
ಅರವತ್ತು ; ನನಗಂಥ ಅರಳು-ಮರಳೇನಿಲ್ಲ,
ನಾಲ್ವತ್ತು ವರುಷ ಬದುಕಿಸಿದ ಬಿಡುಗಡೆ-ಬಾಳು ;
ದೇಶಕ್ಕೆ ಇತಿಹಾಸ ಹಾಸಿ ಬೀಸಿದ ನೆರಳು–

ಎಡವಿ ಮುಗ್ಗರಿಸಿದರು ಕಣ್ಣು ಮಂಜಾಗಿಲ್ಲ ;
ಶ್ವಾಸಕೋಶಕ್ಕಿಲ್ಲ ಧಕ್ಕೆ, ಸ್ಪರ್ಧೆಗಿಳಿಯದೆ
ಓಡಬಹುದಲ್ಲ ಹಾಗೆ, ತನ್ನ ಗುರಿಮರಿಯದೆ ?

ವಿರೋಧಾಭಾಸವೆ ಇದರ ಪ್ರಕೃತಿ ಗುಣವೇನೊ-
ಇದ್ದು ಬಿದ್ದದ್ದೆಲ್ಲ ಕೊಚ್ಚಿ ಹೋಗುವ ಹಾಗೆ
ಅತಿವೃಷ್ತಿ. ಇದಿವರುಷ ಒಂದು ಹನಿಯೂ ಬರದೆ
ನೆಲ ಬಿರಿದು ಬಾಯ್ ಬಿಡುವ ಪರಿ, ಮುಂದೆ ಗತಿಯೇನೋ.
ಎಲ್ಲದಕ್ಕು ಬರಗಾಲ, ಕಾಯಬೇಕೆಂತು ಸಮ-
ತೋಲ ? ಅಣೆಕಟ್ಟಿನಲು ಸೋರಿ ಹೋಗುವುದು ಹಣ,
ಸೇತುವೆಯು ನಡೆಗುವುದು, ಜೇನುಹುಟ್ಟೊ ? ಮೇಣ.

[ಉತ್ಸವಮೂರ್ತಿ ಬಂಗಾರ ರಥದಲ್ಲಿ ಕ್ಷೇಮ.]
ಬಲೆಗೆ ಬೀಳುವ ಮೀನು ; ತಿಮಿಂಗಲಕೊ ಸಾಗರ
ತಾನೇ ತಾನು. ಗಂಗೆಗೂ ಸ್ವಚ್ಛತಾಕ್ರಮ,
ನಮ್ಮೊಡಲಿಗಂತು ಅಂತರಗಂಗೆಯದೆ ವಿಕ್ರಮ.

ಬಿತ್ತಿದ್ದೇನೊಧರ್ಮ, ಬೆಳೆಯಿತೆಲ್ಲಿಂದ ಕ್ರೂರ
ಕರ್ಮ? ದುರ್ಧರ್ಷ ಭಯ-ಅತಿರೇಕಗಳ ನಡುವೆ
ಮುಗ್ಧ, ಸಂದಿಗ್ಧ ಜೀವನದಲ್ಲಿ ಬಚ್ಚಿಡುವೆ?

ಭಾಷಣದ ಕ್ರಿಯಾವಿಧಿ ಮುಗಿಸಿ, ಮೊಣಕಾಲೂರಿ
ಭರ್ರೆಂದ ಎಂಬತ್ತೇಳರುತ್ಸವದ ಕಾರು
ಸುರಕ್ಷಿತ ದಾಟಿ ಬಿಟ್ಟು ಸಮಾಧಾನದುಸಿರು

ಕಟ್ಟಿರು ಭದ್ರಕಾವಲು; ಅದಕೆ ಆ ಭಾರಿ,ಸ್
ಮಾತು ಮಾತಿನ ಹೊರಗೆ ಕುಸಿದಿರವ ಸಾಮಾನ್ಯ:
ತಲೆ ಎತ್ತಿದರೆ ಹಾರಾಡಿ ಬಣ್ಣದ ಬಲೂನು
ಈ ಮಣ್ಣ ದಿಣ್ಣೆಗಳಾಚೆ ಧವಳಗಿರಿ ಸಾನು.

ಬೆಳಗಿನಲಿ ಹೊಂಗನಸು ನೆನಸಿಕೊಂಡವ ಧನ್ಯ.
ಹೋಗಾದರು ಹುಡುಕಿ ರಂಗದಮೇಲೆ ತನ್ನಿ;
ತೆರೆಗುಂಟ ತೇಲಿಬಂದಿಹ ಕೊರಡಗಳ ದೂಡಿ,
ಎದುರೀಗಿ, ಬರಡು ಬಾಳಿಗೆ ಭವಿತವ್ಯ ಮೂಡಿ-

ಸುವ ಧೀರ. ಚೇತನರ; ದೂರವಾಗಲಿ ಸನ್ನಿ.

ಹೋರಾಟಕಣಿಗೊಳಿಪ ಸತ್ವೋನ್ನತಿಯ ಕಾಲ
ಮತ್ತೆ ಬಂದಿದೆ; ಓದು ಮೂಲ ಗಾಂಧೀಪಾಠ.
*****