ಸಂಪರ್ಕ

ಅರೇ ಅರೇ ಅನ್ನುತ್ತ ಇಬ್ಬರೂ ಪರಸ್ಪರ ಗುರುತು ಹಿಡಿದರು. ರಾಧಿಕಾಳನ್ನು ಈವತ್ತು….ಹೀಗೆ….ಇಷ್ಟೊಂದು ಆಕಸ್ಮಿಕವಾಗಿ ನೋಡುತ್ತೇನೆಂದು ಅಶೋಕ ಎಂದೂ ಅಂದುಕೊಂಡಿರಲಿಲ್ಲ. ಏನೂ ಮಾತಾಡಲು ತೋಚದೆ ತನ್ನ ಕೈಚಾಚಿ ಅವಳ ಅಂಗೈ ಹಿಡಿದು ಮೆಲ್ಲಗೆ ಅಮುಕಿದ. ತಾನು […]

ವಿವೇಕ ಶಾನಭಾಗರೊಂದಿಗೆ ಸಂದರ್ಶನ

ಸಂದರ್ಶಕರು: ಸುದರ್ಶನ ಪಾಟೀಲ ಕುಲಕರ್ಣಿ, ರಾಘವೇಂದ್ರ ಉಡುಪ ಮತ್ತು ವಿನಾಯಕ ಪಂಡಿತ ಕೆ.ಎಸ್.ಸಿ.: ತೀರಾ ಇತ್ತೀಚಿನವರೆಗೆ ಹೆಚ್ಚಾಗಿ, ಸಣ್ಣಕತೆಯೇ ನಿಮ್ಮ ಪ್ರಿಯವಾದ ಬರಹ ಮಾಧ್ಯಮವಾಗಿತ್ತು. ಈ ಪ್ರಕಾರಕ್ಕೆ ನಿಮ್ಮನ್ನು ಸೆಳೆದ ವಿಶೇಷ ಆಕರ್ಷಣೆ ಏನಾಗಿತ್ತು? […]

ಅಂಚು

ಈ ವರ್ಷದ ಸ್ಕೂಲ್ ಗ್ಯಾದರಿಂಗ್ ದಿವಸದವರೆಗೂ ಸುಬ್ಬರಾಯಪ್ಪ ಅತ್ಮ ವಿಮರ್ಶೆಯ ಗೋಜಿಗೆ ಹೋದವರಲ್ಲ. ತನ್ನನ್ನು ಎದುರಿಸುವ ಎದೆ ಯಾರಿಗೂ ಇಲ್ಲ ಎಂಬ ಧಿಮಾಕಿನಿಂದ, ತನ್ನ ತಾರುಣ್ಯ ಮತ್ತು ಹುಮ್ಮಸ್ಸು ಸತತ ಎಂಬ ಹುಂಬತನದಲ್ಲೇ ಆವರೆಗೂ […]

ಲಂಗರು

-೧- ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ […]

ಸಶೇಷ

ಆರ್ಥಿಕ ಉದಾರೀಕರಣದ ಬಗ್ಗೆ ಮಾತು ಬಂದು, ಎಷ್ಟೊಂದು ವಿದೇಶಿ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುತ್ತಿದೆಯೆಂದು ಎಣಿಸುತ್ತ, ಅವರು ಕೊಡುವ ಸಂಬಳ ಸವಲತ್ತುಗಳನ್ನು ಲೆಕ್ಕ ಹಾಕುತ್ತ, ಒಮ್ಮೆಲೆ ತೆರೆದುಕೊಂಡ ಈ ಹೊಸ ಜಗತ್ತಲ್ಲಿ ತಾವೆಲ್ಲಿ ಸಲ್ಲುತ್ತೇವೆ […]