ರಾಗ — ಶಂಕರಾಅಭರಣ
ತಾಳ — ಏಕ
ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ||
ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು |
ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧||
ಹುತ್ತದೊಳಾಡುವ ಸರ್ಪ ಮತ್ತ ಗಜವ ನುಂಗಿತು |
ಉತ್ತರದಿಶೆಯೊಳು ಬೆಳುದಿಂಗಳಾಯಿತಮ್ಮ ||೨||
ಯೋಗಮಾರ್ಗಿ ಕಾಗಿನೆಲೆಯಾದಿಕೇಶವರಾಯ |
ಭಾಗವತರ ಬೆಡಗಿದು ಬೆಳುದಿಂಗಳಾಯಿತಮ್ಮ ||೩||
*****