………. – ೧೦ Posted on ನವೆಂಬರ್ 17, 2023ಏಪ್ರಿಲ್ 28, 2023 by ಮಮತ ಜಿ ಸಾಗರ ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****
ಹನಿಗವನ ಹೋಲಿಕೆ ನಿಸಾರ್ ಅಹಮದ್ ಕೆ ಎಸ್ ಜುಲೈ 24, 2023 0 ಫುಟ್ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. *****
ಹನಿಗವನ ಸಮಸ್ಯೆ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 18, 2023 0 ನಮ್ಮ ನಾಡಿನ ತ್ರಿಶೂಲ ಪ್ರಾಯ ಸಮಸ್ಯೆಯೆಂದರೆ: ನುಡಿ ಗಡಿ ಗುಡಿ. *****
ಹನಿಗವನ ಮಾರ್ಪಾಟು ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 7, 2023 0 ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. *****