ವಿಧಾಯಕ Posted on ಮೇ 29, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? *****
ಹನಿಗವನ ಗುಣದ ಗರಿಮೆ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಹನಿಗವನ ಋತು ಜಯಂತ ಕಾಯ್ಕಿಣಿ ಅಕ್ಟೋಬರ್ 27, 2023 0 ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ *****
ಹನಿಗವನ ಸಮಸ್ಯೆ ನಿಸಾರ್ ಅಹಮದ್ ಕೆ ಎಸ್ ಸೆಪ್ಟೆಂಬರ್ 18, 2023 0 ನಮ್ಮ ನಾಡಿನ ತ್ರಿಶೂಲ ಪ್ರಾಯ ಸಮಸ್ಯೆಯೆಂದರೆ: ನುಡಿ ಗಡಿ ಗುಡಿ. *****