ಮೀನಿನ ಬಲೆಯಲ್ಲೂ ಕಲೆಗಾರಿಕೆ
ಮನಗಾಣಬಲ್ಲಾತ ರಸಿಕ;
ಜೇನುಗೂಡಿನ ಕಲೆಯಲ್ಲೂ
ರಂಧ್ರಗಳನ್ನೇ ಕಾಣುವಾತ ಸಿನಿಕ.
*****
Related Posts
ಅಮ್ಮನಿಗೆ – ೨
- ಮಮತ ಜಿ ಸಾಗರ
- ಆಗಷ್ಟ್ 3, 2003
- 0
ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****
ಒಂದೇ ಆದರೂ…
- ನಿಸಾರ್ ಅಹಮದ್ ಕೆ ಎಸ್
- ಜನವರಿ 23, 2023
- 0
ಎರಡೂ ಬಲೆಯೇ: ಹೀಗಿದ್ದರೂ ಜೇಡನ ಬಲೆಯಿಂದ ಮೀನು ಹಿಡಿಯಲಾಗದು; ಮೀನಿನ ಬಲೆಯಿಂದ ನೊಣ ದಕ್ಕಲಾರದು. *****
ಗುಣದ ಗರಿಮೆ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****