`ಮಯೂರ’ ಕ್ಕಿಂತ `ಸುಧಾ’ ವಾಸಿ
ಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.
ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟು
ಅಂದ್ಕೊಂಡೆ: ಆಸಾಮಿ ಗಟ್ಟಿ.
ಆಮೇಲೆ ಅರಿತೆ ಶೆಟ್ರು ಆ ದಿವ್ಸ
ಆಡಿದ ಮಾತಿನ ಗುಟ್ನ_
“ಅನುಭವದ ಮಾತು ನಾನಂದದ್ದು:
ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.
*****
`ಮಯೂರ’ ಕ್ಕಿಂತ `ಸುಧಾ’ ವಾಸಿ
ಅಂದ್ರೊಮ್ಮೆ ಗುಂಡಯ್ಯ ಶೆಟ್ಟಿ.
ಸಾಹಿತ್ಯ ಪ್ರೇಮಕ್ಕೆ ಅಚ್ಚರಿ ಪಟ್ಟು
ಅಂದ್ಕೊಂಡೆ: ಆಸಾಮಿ ಗಟ್ಟಿ.
ಆಮೇಲೆ ಅರಿತೆ ಶೆಟ್ರು ಆ ದಿವ್ಸ
ಆಡಿದ ಮಾತಿನ ಗುಟ್ನ_
“ಅನುಭವದ ಮಾತು ನಾನಂದದ್ದು:
ಕಟ್‌ಬಹುದು ದೊಡ್ಡ ದೊಡ್ಡ ಪೊಟ್ನ”.
*****