ಮಾರ್ಪಾಟು Posted on ಆಗಷ್ಟ್ 7, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. *****
ಹನಿಗವನ ಆ ಮರ-ಈ ಮರ ನಿಸಾರ್ ಅಹಮದ್ ಕೆ ಎಸ್ ಜನವರಿ 1, 2007 0 ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****
ಹನಿಗವನ ………. – ೬ ಮಮತ ಜಿ ಸಾಗರ ಸೆಪ್ಟೆಂಬರ್ 22, 2023 0 ಲೆಸನ್ -೧ ಪಾರ್ಟ್ಸ್ ಆಫ್ ದ ಬಾಡಿ ಒಮ್ಮೊಮ್ಮೆ ಎಲ್ಲರೂ ಒಂದೇ ರೀತಿ ಕಾಣುತ್ತಾರೆ, ಕಣ್ಣು, ಮೂಗು, ಮುಖ, ಕೈ, ಕಾಲು….. ಲಯಬದ್ಧವಾಗಿ ಮಿಡಿಯುವ ಹೃದಯ ಅದರಲ್ಲೊಂದಷ್ಟು ಪ್ರೀತಿ. *****
ಹನಿಗವನ ಬೆದರುಬೊಂಬೆ ನಿಸಾರ್ ಅಹಮದ್ ಕೆ ಎಸ್ ಮಾರ್ಚ್ 29, 2024 0 ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****