ಮೂಲ ಭೂತ
ವಾದಿಗಳಿಗಿಂತಲೂ
ಮಾಮೂಲುಭೂತ
ವಾದಿಗಳು
ಸಮಾಜಕ್ಕೆ
ನಿತ್ಯ ಗಂಡಾಂತರಕಾರಿಗಳು.
*****
Related Posts
ಅನ್ವರ್ಥ
- ನಿಸಾರ್ ಅಹಮದ್ ಕೆ ಎಸ್
- ಫೆಬ್ರವರಿ 7, 2025
- 0
ಸಂತೆ ಹೊತ್ತಿಗೆ ಮೂರು ಮೊಳ ನೇಯುವ ಲೇಖಕನ ಕೃತಿ `ಹೊತ್ತಿಗೆ?’ *****
ಸಹವಾಸ ಮಹಿಮೆ
- ನಿಸಾರ್ ಅಹಮದ್ ಕೆ ಎಸ್
- ಮೇ 1, 2023
- 0
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
ಗುಣದ ಗರಿಮೆ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
