ನಾವು ನಾಲ್ವತ್ತು ಕೋಟಿ

ಹಿಮಶೈಲದುತ್ತುಂಗ ಶಿಖರದಿಂದೀ ಸೇತು-
ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ
ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ
ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು
ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು

ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ
ಜೀವಿಸುವ ಜೀವಿಗಳ ಕುಲವೊಂದೆ; ಬಾನಿನಲಿ
ಅಲೆವ ಬಾವುಟವೊಂದೆ, ಬಾರತ ಪಿತಾಮಹನು
ಏರಿದಾ ಮೇರುಗಿರಿ ತತ್ತ್ವಶಿಖರದ ಬೆಳಕು
ಎಲ್ಲೆಡೆಗು ಬೆಳಗಿರಲು, ಇಬ್ಬಣದ ದಿಬ್ಬಣದಿ
ಮೆರೆವ ಸಾಹಸವೇಕೆ? ಇಡಿಯ ಬಾಳಿನ ಜಸದಿ
ಜೀವಿಸುವದೆಮ್ಮಗುರಿ, ದ್ವೇಷದುರಿ ಸಾಕು.
ಭಾರತದ ಧವಲಮಯ ದೀಧಿತಿಗೆ ಆವ ಸಾಟಿ?
ಕೋ, ಎಲ್ಲರೊಂದೇ ನಾವು ನಾಲ್ವತ್ತು ಕೋಟಿ.
*****