ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ?
ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ!
ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ
ನಿನ್ನಿಂದ ಇಷ್ಟೊಂದು ಹಠ ಹಿಡಿದು ಜುಗ್ಗತನ
ಸೂರೆ ಬಂದ ವರಗಳು ಅಲ್ಲಿಂದ
ನಿನ್ನಿಂದ ಮಾತ್ರ ಬರೀ ಅಪರಾಧ
ಇಷ್ಟೆಲ್ಲ ಅಸೂಯೆ, ಅಗಾಧ ಅಸಂಬದ್ಧ ಊಹೆ ನಿನ್ನಿಂದ, ಬರೀ ಕರಾಳ ಕಲ್ಪನೆ
ಎಷ್ಟೆಲ್ಲ ಮಧು ಮಧುರ ಉದಾರ ಕೊಡುಗೆ ಅಲ್ಲಿಂದ ?
ಕಡೆಗೂ ಎಲ್ಲ ಪಾಪಕೃತ್ಯಕ್ಕೀಗ ನಿನ್ನಲ್ಲಿ ಪಶ್ಚಾತ್ತಾಪ
ನಿನ್ನ ತುಟಿಯಲ್ಲೀಗ ಬರೀ ಆ ಪುಣ್ಯನಾಮದ ಜಪ
ಎಲ್ಲ ಪಾಪಗಳಿಂದ ನೀನೀಗ ಮುಕ್ತನಾಗು
*****