ಆತ್ಮ ಕೊಳೆಯುತ್ತಿದೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ
ನಿನ್ನೆದುರು ಬೆಳೆಯುತ್ತ ಬಂದಿದೆ
ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ?

ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ?
ಬರೀ ಒಂದು ತಲೆಗಾಗಿ, ನಿನ್ನ ಕೈ ಬಿಡಲು ಸಾಧ್ಯವೇ?

ನಿನ್ನ ಸುಗಂಧದಿಂದ ಮತ್ತೇರಿ ಆತ್ಮ ಹಾರಿತೆ ನಿನ್ನೆಡೆಗೆ?
ಆತ್ಮಕ್ಕೆ ಖಂಡಿತ ಗೊತ್ತು, ನಲ್ಲರ ಮೈಯ ಸುಗಂಧ ಗೊತ್ತು

ವಾಕರಿಕೆ ಮೆದುಳಿಂದ ಮರೆಯಾದದ್ದೆ ತಡ
ತಲೆ ನೂರು ಬಾರಿ ಚೀರಿತು. ಕೂದಲೆಲ್ಲ ಕೊರಗಿದವು

ನಾನು ಮನೆ ಖಾಲಿ ಮಾಡಿದೆ, ನಿನ್ನ ಪೀಠವಾಗಲಿ ನಾನು
ನಾನು ಕರಗುತ್ತಿದ್ದೇನೆ, ನಿನ್ನ ಪ್ರೀತಿ ಭೋರ್ಗರೆದು ಉಕ್ಕಲಿ

ನನ್ನ ಆತ್ಮ, ಶಂಸ್, ಅತ್ತಿತ್ತ ಹೊಯ್ದಾಡಿದೆ
ಕಡಲಲ್ಲಿ ಕಾಲಿರದೆ ಹಡಗಿನ ಹಾಗೆ ತೊಯ್ದಾಡಿದೆ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ