ನಡತೆ Posted on ಫೆಬ್ರವರಿ 16, 2024ಸೆಪ್ಟೆಂಬರ್ 18, 2025 by ನಿಸಾರ್ ಅಹಮದ್ ಕೆ ಎಸ್ ಹಿರಿಯರ ಹಿರಿತನ ಅರಿವಾಗುವುದು ಹಿರಿಯರಾಗಿ ನಡೆದುಕೊಳ್ಳುವುದರಲ್ಲಿ ಮಾತ್ರವಲ್ಲ ಹೆರರನ್ನೂ ಹಿರಿಯರಾಗಿ ನಡೆಸಿಕೊಳ್ಳುವುದರಲ್ಲಿ. *****
ಹನಿಗವನ ಕೂಲಿ ನಿಸಾರ್ ಅಹಮದ್ ಕೆ ಎಸ್ ಜೂನ್ 26, 2023 0 ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. *****
ಹನಿಗವನ ಮಾರ್ಪಾಟು ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 7, 2023 0 ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. *****
ಹನಿಗವನ ವಿಶಿಷ್ಟತೆ ನಿಸಾರ್ ಅಹಮದ್ ಕೆ ಎಸ್ ಮೇ 31, 2024 0 ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. *****