ಕೋಟಿತೀರ್‍ಥ

(೧೯೭೫-೧೯೭೯)

ಕಣ್ಣು ಕಾಣದ ಕತ್ತಲಲ್ಲಿ
ಸನ್ನೆ ಕೈ ಕುಲುಕು
ಅಕ್ಷರಶಃ
ಕಾಣದ ಒದ್ದೆ ಪಾಟಿಯ ಮೇಲೆ
ಮುರುಕು ಬಳಪ
ದಾರಿ ಮೇಲೆಲ್ಲೋ ಸಿಕ್ಕುವ
ಕೈಕಳೆದ ಕರವಸ್ತ್ರ ಒಂಟಿ ಚಪ್ಪಲಿ
ನಿಬ್ಬು
ಪಠ್ಯಪುಸ್ತಕ ತುಂಬ ಶಾಯಿ
ದವತಿ

ಎಲ್ಲಾ ಹೇಳುವದು ಹೇಗೆ ಗೆಳತೀ
ಬರೆದಾದ ಮೇಲೆ ಕವಿತೆ
ಉಳಿಯೋದಿಲ್ಲವಲ್ಲಾ
ಇಲ್ಲವಲ್ಲಾ
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ