ವಕ್ರ Posted on ಮೇ 23, 2025ಮೇ 25, 2025 by ನಿಸಾರ್ ಅಹಮದ್ ಕೆ ಎಸ್ ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ಹೋಲಿಕೆ ನಿಸಾರ್ ಅಹಮದ್ ಕೆ ಎಸ್ ಜುಲೈ 24, 2023 0 ಫುಟ್ಪಾತಿನ ಮೇಲಿನ ಮರ ರಸ್ತೆಗಿಳಿದ ತೆರದಿ ಹೆಂಗಳುಡುಪು ಮರ್ಯಾದೆಯ ಗಡಿ ಮೀರಿದೆ ಭರದಿ. *****
ಹನಿಗವನ ವಿಧಾಯಕ ನಿಸಾರ್ ಅಹಮದ್ ಕೆ ಎಸ್ ಮೇ 29, 2023 0 ವರ್ಣ ಸುಶೋಭಿತ ಜಮಖಾನೆಯನ್ನು ನೇಯುವ ವ್ಯಕ್ತಿಯ ಭಾಗ್ಯ ಕಗ್ಗತ್ತಲಿನ ನೂಲಿನಿಂದ ಹಾಸುಹೊಕ್ಕಾಗಿರುವುದು ವಿಧಿ ನಿಯಮವೆ? *****
ಹನಿಗವನ ಅಪಾಯ ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 21, 2023 0 ಮೂಲ ಭೂತ ವಾದಿಗಳಿಗಿಂತಲೂ ಮಾಮೂಲುಭೂತ ವಾದಿಗಳು ಸಮಾಜಕ್ಕೆ ನಿತ್ಯ ಗಂಡಾಂತರಕಾರಿಗಳು. *****