ಅನಿವಾರ್ಯ Posted on ಸೆಪ್ಟೆಂಬರ್ 5, 2025ಸೆಪ್ಟೆಂಬರ್ 18, 2025 by ನಿಸಾರ್ ಅಹಮದ್ ಕೆ ಎಸ್ ಫ್ಯಾಷನ್ನು ಅಲ್ಲ, ಮಣ್ಣೂ ಅಲ್ಲ, ಗೊತ್ತಿಲ್ವೆ ನಿಮ್ಗೆ ಈ ಗುಟ್ಟು? ಜಡೆಗೆ ಕೂದಲು ಕಮ್ಮಿಯಾಗಿ ಮಾಡಿಸಿಕೊಳ್ತಾರೆ ಬಾಟ್ ಕಟ್ಟು. *****
ಹನಿಗವನ ತಪ್ಪೇನು? ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 2, 2024 0 ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? *****
ಹನಿಗವನ ಒಂದೇ ಆದರೂ… ನಿಸಾರ್ ಅಹಮದ್ ಕೆ ಎಸ್ ಜನವರಿ 23, 2023 0 ಎರಡೂ ಬಲೆಯೇ: ಹೀಗಿದ್ದರೂ ಜೇಡನ ಬಲೆಯಿಂದ ಮೀನು ಹಿಡಿಯಲಾಗದು; ಮೀನಿನ ಬಲೆಯಿಂದ ನೊಣ ದಕ್ಕಲಾರದು. *****
ಹನಿಗವನ ವಕ್ರ ನಿಸಾರ್ ಅಹಮದ್ ಕೆ ಎಸ್ ಮೇ 23, 2025 0 ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****