(ಇಲ್ಲಿಯವರೆಗೆ…
ಅವನನ್ನೇ ನಾನು ನನ್ನ ಹುಡುಗನನ್ನಾಗಿ ಆರಿಸಿಕೂಂಡಿದ್ದಕ್ಕೆ ನನ್ನದೇ ಕಾರಣವಿದೆ.. ಎಷ್ಟೆಲ್ಲಾ ಓಡಾಡಿದರೂ, ಪ್ರೇಮದಾಟ ಕಣ್ಣುಗಳಲ್ಲಿ ನಡೆದಿದ್ದರೂ ಒಮ್ಮೆಯೂ ಆತ ನನ್ನನ್ನು ತನ್ನ ರೂಮಿಗೆ ಕರೆದಿರಲ್ಲಿಲ್ಲ.. ಸಿನೆಮಾಗಳಿಗೆ ಹೋದಾಗ ಕತ್ತಲಲ್ಲಿ ಮೈ ತಾಕಿಸಿರಲಿಲ್ಲ..ಇಷ್ಟೋಂದು ಮಾತಾಡುವ ಈತನ ಮಾತಿನಲ್ಲಿರೋ ಮನ್ಮಥ ಕೃತಿಯಲ್ಲಿಲ್ಲವಾಂತ..ನಂಗೇ ಆ ಕ್ಷಣಕ್ಕೆ ಅನುಮಾನ ಬಂದಿತ್ತು. ಆದರೆ ನನ್ನ ಅನಿಸಿಕೆ ಸುಳ್ಳಾಗೋ ದಿನ ಬಂದೇಬಂತು..ಅತೀ ಶೀಘ್ರ್‍ಅದಲ್ಲೇ…
ಮತ್ತೆ ಬರ್‍ತೀನಿ..ಬೆಳಕಾಗ್ತಿದೆ..ಜಿನ್ಸಿ.)
**********
ಮುಸ್ಸಂಜೆಯಾಗಿದೆ. ಇರೋ ಬರೋ ಬೆಳಕನ್ನು ಕತ್ತಲೆ ನುಂಗೋ ಸಮಯವಿದು. ಕತ್ತಲೆಗೆ ಬೆಳಕೇ ಊಟವಂತೆ.. ನನ್ನ ಗೋರಿಯ ಸ್ವಲ್ಪ ದೂರದಲ್ಲೇ ಕಾರೊಂದು ಬಂದು ನಿಂತ ಶಬ್ದ ಕೇಳಿಸುತ್ತದೆ ಒಳಗಿರುವ ನನಗೆ. ಮೂಡಿದ್ದ ಬಿರುಕೆಂಬ ಕಿಟಕಿಯಿಂದ ನಾನು ಆಗಸಾನೇ ನೋಡ್ತಿದ್ಡೇನೆ.. ಪರಿಪೂರ್ಣ ಕತ್ತಲೆಯಾಗೋದೆ ಬೇಕಾಗಿದೆ ನನಗೆ.. ನಿಮ್ಮೊಟ್ಟಿಗೆ ಮಾತಾಡಲು. ಹೆಜ್ಜೆಯ ಶಬ್ದ ಏರುತ್ತಾ ಹೋಗುತ್ತದೆ.. ಮತ್ತು ನನ್ನ ಗೋರಿಯ ಬಳಿಯೇ ಬಂದು ನಿಲ್ಲುತ್ತದೆ.. ಆ ಪುರುಷಾಕೃತಿ.. ಆ ಮಂದಾವೃತ ಕತ್ತಲೆಯಲ್ಲಿ ಮುಖ ಸರಿಯಾಗಿ ಕಾಣುತ್ತಿಲ್ಲ.. ನಾನು ಕಣ್ಣು ಕಿರಿದಾಗಿಸಿಕೊಂಡು ನೋಡ್ತೇನೆ.. ಎದೆ ಝಲ್ಲೆಂದು ಬಿಡುತ್ತದೆ. ದೇಹವಿರದ ಈ ಪ್ರೇತಾತ್ಮದ ಭಾವಗಳಲ್ಲೂ ಭಯದ ರುದ್ರ್‍ಅತಾಂಡವದ ಅನುಭವ.. ನಾನು ನಿರೀಕ್ಷಿಸದೇ ಇದ್ದವನು ಬಂದೇ ಬಿಟ್ಟಿದ್ದಾನೆ..! ಬಂದಿರೋನು… ಅವನು..!
ಕೈ ಕಟ್ಟಿ ನಿಂತಿದ್ದಾನೆ.. ಅವನ ಮುಖದಲ್ಲಿ ಈ ಪರಿಯ ಶೋಕವಾ..? ಕತ್ತಲೆಯು ಮುಖದ ಶೋಕದ ಭಾವನೆಯನ್ನು ಹೆಚ್ಚಿಸುತ್ತದ್ದಂತೆ.. ಅವನ ತುಟಿಗಳು ಚಲಿಸುತ್ತಿವೆ..ಆ ತುಟಿಗಳನ್ನು ಓದುತ್ತೇನೆ.. ನಾನು ಮೌನ ಸಂವಾದ ನಡೆಸಿದ ತುಟಿಗಳಲ್ಲವಾ.. ಅದು? ನಾನು ಮುತ್ತಿಟ್ಟ ತುಟಿಗಳಲ್ಲವಾ ಅದು..? ಹಾಗಾಗಿ ಕಷ್ಟವಾಗುವುದಿಲ್ಲ. ಅವನು ನನ್ನ ಆತ್ಮಕ್ಕೆ ಶಾಂತಿ ಕೋರಿಕೆಯ ಪ್ರಾರ್ಥನೆ ಸಲ್ಲಿಸುತಿದ್ದಾನೆ.. ಇದೇನಿದು..? ನನ್ನ ಸಾವಿಗೆ ಕಾರಣನಾದವನು ನನ್ನ ಆತ್ಮಕ್ಕೆ ಶಾಂತಿ ಕೋರುತಿದ್ದಾನೆ.. ಏನು ವಿಚಿತ್ರ ಇದು..? ಕೊಂದವನೇ ಸತ್ತವನಿಗಾಗಿ ರೋಧಿಸೋದು.. ನಗು ಬರುತ್ತಿದೆ ನನಗೆ.. ನನ್ನ ವಿಕಾರದ ನಗೆಯ ಜೊತೆಗೇ ಕಣ್ಣಲ್ಲಿ ನೀರೂ ಇಳಿಯುತ್ತದೆ.. ಹಾಗದರೆ ಈತ ನಾನೊಂದುಕೊಂಡಷ್ಟು ಕೆಟ್ಟವನಲ್ಲ.. ಇಂಥವನನ್ನು ನನ್ನ ಅಙ್ಞಾನದಿಂದ ಅರ್ಥೈಸಿಕೊಂಡು ಸಾವಿನ ನಿರ್ಧಾರ ಮಾಡಿ ಜೀವನವನ್ನೇ ಧಿಕ್ಕರಿಸಿ ತಪ್ಪು ಮಾಡಿಬಿಟ್ಟೆನೇ..? ಗಂಡಸು ಸ್ವಭಾವತಃ ಕೆಟ್ಟವನಲ್ಲವಂತೆ.. ಎಂದಾದರೂ ಹೆಣ್ಣನ್ನು ನೋಯಿಸಿದ್ದರೆ ಆತ ಒಂದು ಕ್ಷಣಕ್ಕಾದರೂ ಅದರ ಬಗ್ಗೆ ಕೊರಗೇ ಇರ್ತಾನೆ ಅಂತಾರೆ.. ಆ ಪಾಪ ಪ್ರಙ್ಞೆಯ ಹೆಲ್ಮೆಟ್ ನಿರಂತರ ಧರಿಸಿಯೇ ಓಡಾಡಿರ್ತಾನೆ ಅಂತಾರೆ ತಿಳಿದವರು.. ಸತ್ಯವಾ ಅದು..? ತೊಳಲಾಡಿಬಿಡ್ತೇನೆ.. ದೇವರ ಕೈಲೇ ಇತಿಹಾಸವನ್ನು ಬದಲಿಸಲು ಸಾಧ್ಯವಿಲ್ಲವಂತೆ.. ಇನ್ನು ನನ್ನ ಪಾಡೇನು..? ಅಷ್ಟರಲ್ಲಿ ಕತ್ತಲಾಗಿ ಬಿಡುತ್ತದೆ.. ನಾನು ಕಾದಿದ್ದ ಕತ್ತಲು.. ನನ್ನ ವಾಕ್ ಸ್ವಾತಂತ್ರ್ಯದ ಕತ್ತಲು.. ಇವೆಲ್ಲವನ್ನೂ ಯೋಚಿಸುತ್ತಲೇ ನನ್ನ ಗೋರಿಯಿಂದ ಹಾರಿಬಿಡ್ತೇನೆ.. ನಾನು. ನನ್ನ ದುಃಖತಪ್ತ ಹುಡುಗನ ಮೈ ಸವರಿಕೋಂಡೇ ಹಾರುತ್ತಾ ಪಕ್ಕದಲ್ಲೇ ಇರೋ ದೈತ್ಯ ಮರದ ಕೊಂಬೆಯೊಂದಕ್ಕೆ ನೇತು ಹಾಕಿಕೊಳ್ತೇನೆ..
ಆಗ ಕಾದಿತ್ತು ನನಗೆ ನಿಜವಾದ ಷಾಕು.. ನಾನು ನನ್ನ ಹುಡುಗನ ಮೈ ತಾಗಿಸಿ ಹಾರಿಬಂದ ಕ್ಷಣ ರೋಮಾಂಚನವಾದಂತಾಗಿ ಕಣ್ಣು ಬಿಟ್ಟವನು ಅವನ ಜೊತೆ ಕರೆತಂದಿರೋ ಗಾರೆಕೆಲಸದವರ ಜೊತೆ ಮಾತಿಗಾರಂಭಿಸುತ್ತಾನೆ.. ನನ್ನ ಗೋರಿಯಲ್ಲಿನ ಬಿರುಕನ್ನು ಸರಿಯಾಗಿ ಮುಚ್ಚುವಂತೆ ಆದೆಶಿಸುತ್ತಾನೆ..ಮತ್ತು ಸಿಗರೇಟು ಹಚ್ಚುತ್ತಾನೆ.. ಗಾರೆಕೆಲಸದೋರು ಸಿಮೆಂಟು ಕಲೆಸಲಾರೊಭಿಸುತ್ತಾರೆ.. ಗೋರಿಯಲ್ಲಿ ಬಿರುಕಿರುವೆಡೆಯಲ್ಲೆಲ್ಲಾ ಅದನ್ನು ಸಮೃದ್ಧವಾಗಿ ತುಂಬುತ್ತಾರೆ.. ಅಂದರೆ.. ಅಂದರೆ.. ನನ್ನ ಹುಡುಗ ಬಂದಿದ್ದು ಶೋಕಾಚರಣೆಗಲ್ಲ.. ಅದು ಪೀಠಿಕೆ ಮಾತ್ರ.. ಮುಖದಲ್ಲಿದುದು ಶೋಕವಲ್ಲ.. ಕತ್ತಲೆಯ ನೆರಳಿನ ಭಾವ ಮಾತ್ರ.. ನನ್ನ ಗೋರಿಯಲ್ಲಿ ಮೂಡಿದ್ದ ಬಿರುಕನ್ನು ಮುಚ್ಚಿಸುವ ಮೂಲಕ ನನ್ನ ಮಾತುಗಳನ್ನು ಆತ ಹೊರಹೋಗದಂತೆ ಬಂಧಿಸಬೇಕಾಗಿದೆ.. ಹೌದು ಆತನಿಗೆ ಅದರ ಅವಶ್ಯಕತೆ ಇದೆ.. ಒಹ್ಹೋ.. ಹ್ಹೊ.. ಹ್ಹೊ.. ಮುಠ್ಠಾಳನಿದ್ದಾನೆ ನನ್ನ ಹುಡುಗ.. ಎಸಿಸಿ ಸಿಮೆಂಟ್ ಬಳಸಿದ ಮಾತ್ರಕ್ಕೆ ಗೋರಿಯ ಬಿರುಕನ್ನು ಮುಚ್ಚಿಬಿಡಬಹುದು.. ಅತೃಪ್ತ ಆತ್ಮದ ಅಶರೀರವಾಣಿಯನ್ನಲ್ಲ.. ಅಷ್ಟೂ ಗೊತ್ತಿಲ್ಲದ ಮೂರ್ಖ.. ನಗು ಬರ್ತಿದೆ ಮತ್ತೆ.. ಕಣ್ಣೀರಿನೊಟ್ಟಿಗೆ ನನ್ನ ಜೀವನದಲ್ಲಿ ಎಂದಿನಂತೆ.. ಒಟ್ಟೊಟ್ಟಿಗೇ.. ಓ.. ಹ್ಹೊ.. ಹ್ಹೋ..ಒಹ್ಹೊಹ್ಹೋ.. ನನ್ನ ಬಾಯಿ ಮುಚ್ಚಿಸ್ತಾನಂತೆ.. ಮುಠ್ಠಾಳ…!
**********
ಅವತ್ತು ಬೆಳಗಿನಿಂದಲೇ ಇಂದು ವಿಶೇಷವದದ್ದೇನೋ ಸಂಭವಿಸುತ್ತೇಂತ ಮನಸ್ಸು ಹೇಳುತ್ತಲೇ ಇತ್ತು.. ಅಂದು ನಮ್ಮಿಬ್ಬರಿಗೂ ರಜೆ ಇತ್ತು.. ಅವನು ಅಧ್ಬುತವಾಗಿ ಕಾರ್ ಓಡಿಸ್ತಾನೆ.. ರಾಕ್ಷಸ ವೇಗದಲ್ಲಿ.. ಅವನ ವ್ಯಕ್ತಿತ್ವದಂತೆ.. ಕಾರ್ನಲ್ಲಿ ಜೋರು ಮ್ಯೂಜಿಕ್.. ಒವರ್ ಟೇಕ್ ಮಾಡಲ್ಪಟ್ಟ ಗಾಡಿಗಳು ಕ್ಷಣ ಮಾತ್ರದಲ್ಲಿ ಹಿಂದೆಯೆಲ್ಲೋ ಚುಕ್ಕಿಯಾಗಿ ಬಿಡುತ್ತಿದ್ದವು..ನಂದಿಬೆಟ್ಟದ ‘ಯು’ ಟರ್ನ್ ಗಳಲ್ಲಿಆತ ಆ ವೇಗದಲ್ಲೂ ಅಲುಗಾಡದೇ ಕಾರ್ ಓಡಿಸ್ತಿದ್ದರೂ ನಾನೇ ಅವನ ಭುಜದ ಮೇಲೆ ಒಂದೆರೆಡು ಬಾರಿ ಹೊರಳಿದ್ದೆ. ‘ ..ಒಂದು ಮಾತು ಹೇಳ್ತೀನಿ.. ಹುಡುಗೀರು ಬ್ಯ್ಯಾಲೆನ್ಸ್ ಕಳ್ಕೊಂಡು ಹುಡುಗರ ಮೇಲೆ ಬಿದ್ದರೆ ಹುಡುಗರ ಬ್ಯಾಲೆನ್ಸ್ ಕಥೆ ಏನಾಗ್ಬೇಕು.. ನಾನು ಬೇಕೂಂತಲೇ ಕಾರ್ ಹೀಗೆ ಓಡಿಸ್ತಿಲ್ಲ.. ಅದು ನಿಂಗೆ ಗೊತ್ತಿದೆ.. ಅಕಸ್ಮಾತ್ ಏನಾದ್ರೂ ನೀನು ಮುಂದೇನೂ ಇದೇ ರೀತಿ ಬ್ಯಾಲೆನ್ಸ್ ತಪ್ತಿದ್ರೆ.. ಆಗೋ ಎಡವಟ್ಟಿಗೆ ನಾನೊಬ್ನೇ ಜವಬ್ದಾರಿ ಅಲ್ಲ.. ನೀನ್ಯೂ ಜವಬ್ದಾರಿ ಆಗ್ತೀಯಾ.. ಈಗ್ಲೇ ಹೇಳಿದ್ದೀನಿ..’ ಅಂತ ಹೇಳಿ ನಕ್ಕ. ಅವನ ಮಾತಿನ ಎಲ್ಲ ಅರ್ಥಗಳೂ ನನಗೆ ಆನಂದವನ್ನೇ ತಲುಪಿಸಿದ್ದವು.. ಸತ್ಯವಾಗಿ ಹೇಳ್ತೀನಿ ಅವನ ನಿಷ್ಠ ವ್ಯಕ್ತಿತ್ವ.. ಆ ವೇಗ.. ಆ ಮ್ಯ್ಯ್ಯೂಜಿಕ್ ನ ಮಾದಕತೆ.. ಕಾರೊಳಗಿನ ಪರಿಮಳ.. ಇಲ್ಲದಕ್ಕಿಂತ ಮುಖ್ಯವಾಗಿ ನಾವಿಬ್ಬರೇ ಇದ್ದ ಓಡುತ್ತಿರೋ ರೂಮ್ ಅದು.. ಈ ಪರಿಸರ ನನ್ನನ್ನು ಅರಳಿಸಿಬಿಟ್ಟಿದ್ದವು.. ಅವನ ಬಗ್ಗೆ ನಂಗೆ ಯಾವ ಭಯವೂ ಇರಲಿಲ್ಲ.. ಆ ಮಟ್ಟಕ್ಕೆ ಅವನ ಪ್ರೇಮಕ್ಕೆ ನನ್ನನ್ನು ನಾನು ಅರ್ಪಿಸಿಕೊಂಡಿದ್ದೆ.. ತನ್ನ ಪ್ರೇಮದಲ್ಲಿ ಅಪನಂಬಿಕೆ ಇಲ್ಲದಾಗ ಮಾತ್ರ ಒಂದು ಹೆಣ್ಣು ಈ ಮಟ್ಟದಲ್ಲಿ ಯೋಚಿಸಲಿಕ್ಕೆ ಸಾಧ್ಯ. ಆದರೆ ಒಂದು ವಿಚಾರ ಗೊತ್ತಾ ನಿಮಗೆ.. ನಾನಂದು ಕೊಂಡಂತೆ ಅಂದು ವಿಶೇಷವಾದದ್ದೇನೂ ನಡೀಲೇ ಇಲ್ಲ.. ಅದು ನಡೆದದ್ದೇ ಬೇರೆಯ ದಿನ.. ನಾನಂದುಕೊಳ್ಳದ ಹೊತ್ತಿನಲ್ಲಿ…
**********
ಅಂದು ಮನಸ್ಸು ತುಂಬಾ ಖಿನ್ನವಾಗಿತ್ತು.. ಅವನು ಮೂರು ದಿನದಿಂದ ಒಂದು ಕಾಲ್ ಅನ್ನೂ ಮಾಡಿರಲ್ಲಿಲ್ಲ.. ಅವನ ಮೊಬೈಲ್ ಆಫ್ ಆಗಿತ್ತು.. ಅವನ ಸ್ನೇಹಿತರಿಗೂ ಫೋನ್ ಮಾಡಿ ಕೇಳಿದೆ. ಅವರಿಗೂ ಅವನು ಸಿಕ್ಕಿರಲಿಲ್ಲವಂತೆ.. ನಮ್ಮ ಆರು ತಿಂಗಳ ಪ್ರೇಮದಲ್ಲಿ ಆತ ನನ್ನನ್ನು ಈ ಮಟ್ಟದ ಟೆನ್ಷನ್ ನಲ್ಲಿ ಯಾವತ್ತೂ ಇಟ್ಟಿರಲಿಲ್ಲ. ಆಸ್ಪತ್ರೆ ಕೆಲಸದಲ್ಲಿ ಏಕಾಗ್ರತೆ ಕಮ್ಮಿಯಾಗಿತ್ತು ಆ ದಿನಗಳಲ್ಲಿ ನಂಗೆ. ಮೊಟ್ಟ ಮೊದಲ ಬಾರಿಗೆ ಬಾಸ್ ಬಾಯಿಗೆ ಬಂದಂತೆ ಬಯ್ದಿದ್ದರು. ಸಾಲದ್ದಕ್ಕೆ ನಮ್ಮ ಆಸ್ಪತ್ರೆಯಲ್ಲಿ ಅಂದು ಮೂರು ಸಾವು ಬೇರೆ.. ಮಾರನೆಯ ದಿನ ರಜೆ ಕೇಳಿದೆ. ಬಾಸ್ ನಾಲ್ಕು ದಿನ ಬಿಟ್ಟು ರಜೆ ತೊಗೊಳ್ಳೋಕೆ ಹೇಳಿದ. ನಾನು ತುಂಬಾ ಹಠ ಮಾಡಬೇಕಾಯಿತು ರಜೆ ಪಡೆಯೋದಿಕ್ಕೆ. ಸಿಗೋದಿಲ್ಲ.. ಒಳ್ಳೇ ಕೆಲಸಗಾರರಿಗೆ ರಜೆ ಸುಲಭವಾಗಿ ಸಿಗೋದಿಲ್ಲ..
ನಾನು ಈ ಮೊದಲು ಒಮ್ಮೆಯಾದರೂ ಆತನ ರೂಮ್ಗೆ ಹ್ಯೋಗಿದಿದ್ದರೆ ಚೆನ್ನಾಗಿತ್ತು ಅಂತ ಆಗ ಅನ್ನಿಸಿತು ನನಗೆ. ಅಡ್ರೆಸ್ ಹುಡುಕೋದಿಕ್ಕೆ ತಾಳ್ಮೆಯಿರಲಿಲ್ಲ. ಅಡ್ರೆಸ್ ಹುಡುಕುತ್ತಲೇ ಅವನ ಆಫ್ ಆಗಿದ್ದ ಮೊಬೈಲ್ ಗೆ ಮೆಸೇಜ್ ಗಳನ್ನು ಹಾಕಿದ್ದೆ. ಅಕಸ್ಮಾತ್ ಆನ್ ಆದ್ರೆ ನನ್ನನ್ನು ಸಂಪರ್ಕಿಸಲೀಂತ. ಬಹುಷಃ ನಾನು ಅವನನ್ನು ಕೆಟ್ಟ ಕೆಟ್ಟದಾಗೆಲ್ಲಾ ಬಯ್ದುಕೊಂಡದ್ದೇ ಅವತ್ತು. ಗಂಡ ಮನೆಗೆ ಒಂದೇ ಒಂದು ಫೋನ್ ಮಾಡದೇ ಇದ್ದ ದಿನ ಹೆಂಡತಿ ಒದ್ದಾಡ್ತಾಳಲ್ಲ..ಹಾಗೆ. ಅವಳೊಬ್ಬಳಿಗೇ ಅರ್ಥವಗೋವಂಥ ವೈಯುಕ್ತಿಕ ಟೆನ್ಷನ್ ಅದು. ಮನೆಗೆ ಫೋನ್ ಮಾಡ್ತೀನಿ ಅಂದ ದಿನ ಮಾಡದೇ ಇದ್ದಾಗ ಅಪ್ಪ ಅಮ್ಮ ಎಷ್ಟು ಟೆನ್ಷನ್ ಅನುಭವಿಸಿರಬಹುದು.. ಮುಂದೆ ಹಾಗೆ ಮಾಡಬಾರದೂಂತೆಲ್ಲಾ ಯೋಚಿಸುತ್ತಲೇ ನಡೀತಿದ್ದೆ. ಹುಡುಕಾಟದ ಕೊನೆಗೂ ಸಿಕ್ಕಿದ್ದು ಬೀಗ ಹಾಕಿದ್ದ ರೂಮು.
ಅಲ್ಲೇ ಕಾಯುತ್ತಾ ಕುಳಿತೆ. ಅವನು ಬರ್ತಾನಾ ಇಲ್ಲವಾ ಗೊತ್ತಿರಲಿಲ್ಲ. ಸುಮಾರು ಮುಕ್ಕಾಲು ಗಂಟೆಯ ನಂತರ ಆ ಮನೆಯವರು ಬಂದರು.. ನನ್ನ ಹುಡುಗನಲ್ಲ. ಕಾಯುತ್ತಾ ಕೂತಿದ್ದ ನನ್ನನ್ನು ವಿಚಿತ್ರವಾಗಿ ಒಮ್ಮೆ ನೋಡಿದರು. ನಾನೇ ಮೊದಲಿಗೆ ಹೋಗಿ ಅವನ ಬಗ್ಗೆ ಕೇಳಿದೆ. ಅವನಿರೋದು ಹಿಂದೆ ಔಟ್ ಹೌಸ್ ನಲ್ಲಿ ಅಂದರು. ಈ ಚಿಕ್ಕ ಉತ್ತರಕ್ಕೆ ಮುಕ್ಕಾಲು ಗಂಟೆಯೇ.? ಅದೂ ಬೀಗ ಹಾಕಿರದೇ ಇರಲಿ.. ಒಳಗಡೆ ನನ್ನ ಹುಡುಗ ಇರಲೀ.. ಬಹುಷಃ ಹುಷಾರಿಲ್ಲದೇ ಮಲಗಿದ್ದಾನೇನೋ..? ತುಂಬಾ ಬೈಕೊಂಡೆ ಅನ್ಸುತ್ತೆ.. ಯೊಚಿಸುತ್ತಲೇ ಔಟ್ ಹೌಸ್ ಬಳಿ ಬಂದೆ. ಬೀಗ ಹಾಕಿರಲಿಲ್ಲ.. ಕಿಟಕಿಗಳು ತೆರೆದೇ ಇದ್ದವು. ಸ್ವಲ್ಪ ಧೈರ್ಯ ಬಂದಂತಾಯಿತು ನನಗೆ.. ಈ ಟೆನ್ಷನ್ ಇಲ್ಲಿಗೇ ಮುಗಿಯಲಿ ಎಂಬ ಪ್ರಾರ್ಥನೆಯೊಂದಿಗೇ ಬಾಗಿಲು ಬಡಿದೆ.. ಅವನ ಕಾರು ಗ್ಯಾರೇಜ್ ನಲ್ಲಿ ಕಾಣದಿದ್ದಾಗ ಮತ್ತೆ ಅಧೈರ್ಯಗೊಂಡೆ.. ಕಾರ್ ಮನೆ ಹಾಳಾಗ..ಯಾರದೋ ಏನೋ.. ಹುಡುಕುತ್ತಿರೋದು ನನ್ನ ಹುಡುಗನಿಗೆ.. ಅವನಿದ್ರೆ ಆಯ್ತಲ್ಲ ಒಳಗೆ…
‘ಯಾರೂ..’ ಒಳಗಿನಿಂದ ಒಂದು ಧ್ವನಿ… ನನ್ನ ಹುಡುಗನದ್ದೇ..!
**********
ನಿಧಾನವಾಗಿ ನಡೆಯುತ್ತಾ ಬಂದು ಬಾಗಿಲು ತೆರೆದ. ಅವನ್ನನ್ನು ನೋಡುತ್ತಲೇ ನನ್ನ ಜಂಘಾಬಲವೇ ಉಡುಗಿ ಹೋದಂತಾಯ್ತು.. ಮೂರು ದಿನದಿಂದ ಏನೂ ತಿಂದಿರದ ಹಾಗಿದ್ದ.. ನನ್ನ ಕಣ್ಣಂಚಲ್ಲಿ ಸಣ್ಣಗೆ ನೀರು.. ಆತನ ಕಣ್ಣಲ್ಲಿ ನಿನ್ನನ್ನು ನಿರೀಕ್ಷಿಸಿದ್ದೇ ಅನ್ನೋ ಭಾವ. ಒಳಗೆ ಕರೆದ. ಇಬ್ಬರೂ ಒಳ ನಡೆದವು. ಅವನು ಹಾಸಿಗೆಯ ಮೇಲೆ ಕೂತ.. ನನಗೆ ಕುರ್ಚಿಯೊಂದನ್ನು ಎಳೆದು. ಆ ಕ್ಷಣದಲ್ಲಿ ನಮ್ಮಿಬ್ಬರ ನಡುವೆ ಇದ್ದದ್ದು ಒಂದು ಅಪರಚಿತ ಭಾವ. ಆತ ಮೌನವಾಗಿದ್ದ. ಯಾವತ್ತಿಗೂ ಆತನಿಗೂ ಮೌನಕ್ಕೂ ಸಂಬಂಧವೇ ಇರಲಿಲ್ಲ.. ಇವತ್ತು ಹೀಗಿದ್ದಾನೆ. ರೂಮಿನ ತುಂಬಾ ಹರಡಿದ್ದ ಸಿಗರೇಟು ವಾಸನೆಯ ಪರದೆಯಲ್ಲೇ ಆತನ ದೇಹವನ್ನೆಲ್ಲಾ ಒಮ್ಮೆ ಗಮನಿಸಿಬಿಟ್ಟಿತ್ತು ನನ್ನ ನರ್ಸ್ ಬುದ್ಧಿ. ಸಧ್ಯ.. ಆತನಿಗೆ ಏನೂ ಆಗಿಲ್ಲ.. ಆದರೆ ಯಾಕೆ ಹೀಗೆ ಕಳಾಹೀನನಾಗಿದ್ದಾನೆ ಅನ್ನೊದೇ ನನ್ನ ಆ ಕ್ಷಣದ ಪ್ರಶ್ನೆಯಾಗಿತ್ತು. ಅವನ ಮೌನದಿಂದ ನನಗೆ ಪ್ರಪಂಚವೇ ನಿಸ್ತೇಜವಾದಂತೆ ಅನಿಸಿತು. ಯಾಕೆ ಫೋನ್ ಮಾಡ್ಲಿಲ್ಲ.. ಮೂರು ದಿನದಿಂದ..? ಮೊಬೈಲ್ ಯಾಕೆ ಆಫ್ ನಲ್ಲಿಟ್ಟಿರೋದು..? ಯಾಕೆ ಹೀಗೆ ಡಲ್ ಆಗಿದ್ದಿಯಾ..? ಏನಾಯ್ತು ಅಂಥದ್ದು..ನಿನ್ನನ್ನೇ ಧೃತಿಗೆಡಿಸುವಂಥದ್ದು..? ನಿನ್ನಂಥ ಚೈತನ್ಯದ ಚಿಲುಮೆಯೇ ಹೀಗಾದ್ರ್‍ಎ ನಮ್ಮ ಕಥೆ ಏನು..? ನನ್ನ ಪ್ರಶ್ನೆ ಪತ್ರಿಕೆ. ಅವನು ಸಿಗರೇಟು ಹಚ್ಚಿಸುತ್ತಾ ಕೂಟ್ಟದ್ದು ಒಂದೇ ಉತ್ತರ. ‘..ನನ್ನ ಕೆಲಸ ಹೋಯ್ತು..’
‘ಒಹ್..’ ನನ್ನ ಕಡೆಯಿಂದ ಒಂದು ದೈತ್ಯ ನಿಟ್ಟುಸಿರು. ‘ಅಷ್ಟೇನಾ.. ನಾನು ಏನೇನನ್ನೋ ಭ್ರಮಿಸಿದ್ದೆ.. ಅದಕ್ಯಾಕೆ ಹೀಗಿರಬೇಕು.?’ ಅವನು ತುಂಬಾ ಸ್ಪಷ್ಟವಾಗಿ ಹೇಳಿದ. ‘.. ನಿಂಗೆ ಗೊತ್ತಿಲ್ಲ ಗಂಡಸಿಗೆ ಕೆಲಸ ಹೋಗುತ್ತೇ ಅನ್ನಿಸಿದಾಗ ಅಥವಾ ಕೆಲಸ ಹೋದಾಗ ಆಗೋ ಮಾನಸಿಕ ಚಿತ್ರಹಿಂಸೆ ಬೇರೆ ಯಾವಾಗ್ಲೂ ಆಗಲ್ಲ.. ಅದು ಆತನಿಗೊಂದು ಐಡೆಂಟಿಟಿ ಕೊಟ್ಟಿರುತ್ತೆ.. ಸ್ನೇಹ ವರ್ಗವನ್ನು ಕೊಟ್ಟಿರುತ್ತೆ.. ಭವಿಷ್ಯವನ್ನು ಕೊಟ್ಟಿರುತ್ತೆ.. ಒಂದು ಕಡೆ ಜೀವನದ ಪ್ರಶ್ನೆಯಾದರೆ ಇನ್ನೋಂದು ಕಡೆ ಅವಮಾನದ ಸಾಗರ.. ಕೆಲಸದಲ್ಲಿ ನಾನು ನಂಬಿದ್ದ ಸಿದ್ಧಾಂತಗಳು ನನಗೇ ತಿರುಗಿ ಬಿದ್ದವು.. ಒಳ್ಳೇ ಕೆಲಸ ಹ್ಯೋಯ್ತು.. ಇಷ್ಟು ಹೊತ್ತಿಗೆ ನಾನು ಸಂಪರ್ಕವಿಟ್ಟುಕೊಂಡಿದ್ದ ಎಲ್ಲಾ ಕಂಪನಿಗಳಿಗೂ ಈ ಸುದ್ದಿ ಹೋಗಿರುತ್ತೆ.. ನಾನು ಕೆಲಸ ಮಾಡುತ್ತಿದ್ದ ಕಂಪನಿಯೋರು ತಮಗೆ ಅನ್ನಿಸಿದ್ದನ್ನು ನನ್ನ ಬಗ್ಗೆ ಬರೆದು ಈತನಿಗೊ ನಮ್ಮ ಕಂಪನಿಗೂ ಸಂಬಂಧವಿಲ್ಲ.. ಈತನೊಂದಿಗೆ ವ್ಯವಹರಿಸಬೇಡೀಂತ ಪತ್ರಿಕೆಗಳಲ್ಲಿ ಕೊಡ್ತಾರೆ.. ಅದು ನನ್ನ ಭವಿಷ್ಯವನ್ನೇ ಕೆಡಿಸುತ್ತೆ.. ಓದಿದೋರು ಅದನ್ನೇ ನಿಜಾಂತ ನಂಬ್ತಾರೆ.. ಬಹುಷಃ ನಿನ್ನನ್ನೂ ಸೇರಿಸಿ…’
ಅವನು ತನ್ನ ಕೆಲಸವನ್ನು ಇಷ್ಟೋಂದು ಗಂಭೀರವಾಗಿ ತೆಗೆದು ಕೊಂಡಿದ್ದಕ್ಕೆ ಹೆಮ್ಮೆಯೆನಿಸಿತು. ಆದರೆ ನನಗೆ ಬೇಜಾರಾಗಿದ್ದು ಒಂದಕ್ಕೆ.. ಎಲ್ಲರಂತೆ ನನ್ನನ್ನೂ ಭಾವಿಸಿದ್ದಕ್ಕಾಗಿ.. ಮತ್ತು ನನ್ನನ್ನು ಅನುಮಾನಿಸಿದ್ದಕ್ಕಾಗಿ.. ನಾನು ಬೇರೇನೇ ಇದ್ದೀನೋ ನನ್ನ ಹುಡುಗಾ.. ಯಾವ ಪರಿಸ್ಥಿತಿಗಳಿಗೂ ನನಗೆ ನಿನ್ನ ಮೇಲಿರೋ ಭಾವನೆಗಳನ್ನು ಬದಲಿಸೋ ಶಕ್ತಿ ಇಲ್ಲ.. ಮುಂದೆ ನಿನಗೇ ಗೊತ್ತಾಗುತ್ತೆ.. ಮನಸಲ್ಲೇ ಅಂದುಕೊಂಡೆ. ನಮ್ಮಪ್ಪ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಸ್ ಮಾಡಿ ಕೊಂಡಾಗ ಮನೆಯಿಂದಾಚೆ ತಿಂಗಳುಗಟ್ಟಲೆ ಹೊರಗೆ ಹೋಗದೇ ಮನೆಯೊಳಗೇ ಉಳಿದಿದ್ದ ಕಾರಣ ನನಗಾಗ ತಿಳಿಯಿತು. ಹೆಂಡತಿ ಕೊಡೋ ಜೀವನದ ಭಾವ ಸುಭದ್ರತೆ ಹೊರಗಿನ ಪ್ರಪಂಚದಲ್ಲಿ ಸಿಗೋಲ್ಲ.. ಆ ಸೋಲಿನ ದಿನಗಳಲ್ಲಿ.. ಇವನಿರೋದು ಅದೇ ಸ್ಥಿತಿಯಲ್ಲಿ ಈಗ…
‘ಈಗೇನು ನಾನು ನಿನ್ನನ್ನು ಯಾವ ಪ್ರಶ್ನೆಯನ್ನೂ ಕೇಳಲ್ಲ..ನಿನ್ನನ್ನು ಧೃತಿಗೆಡಿಸಬಲ್ಲ ಶಕ್ತಿ ಯಾರಿಗೂ ಇಲ್ಲ.. ಈ ಪ್ರಪಂಚಕ್ಕಂತೂ ಇಲ್ಲವೇ ಇಲ್ಲ.. ಇಷ್ಟು ದಿನ ಕೆಲ್ಸ ಮಾಡಿದ್ದೀ.. ಇದು ತಾನಾಗೆ ಬಂದ ಒಂದು ಬ್ರೇಕ್ ಅಂದ್ಕೋ.. ನನ್ನ ಜಗತ್ತಿಗೆ ನೀನು ಭಾರವೇನಲ್ಲ.. ನಾನಿದ್ದೇನೆ ನಿನ್ನ ಜೊತೆಗೇ.. ನೀ ಮತ್ತೆ ಮೈ ಕೊಡವಿ ನಿಲ್ಲೋದಕ್ಕೆ ಬೇಕಾದಷ್ಟು ಸಾಂತ್ವನವನ್ನು ನಾನು ಖಂಡಿತಾ ಕೊಡಬಲ್ಲೆ.. ಸರೀನಾ…’ ಮನಸ್ಫೂರ್ತಿಯಾಗಿ ಹೇಳಿದೆ. ಆಗಲೇ ನಾನು ನೋಡಿದ್ದು ಮೊಟ್ಟಮೊದಲ ಬಾರಿಗೆ ಅವನ ಕಣ್ಣಲ್ಲಿ ನೀರು.. ನಾನು ಅವನ ಪಕ್ಕದಲ್ಲೇ ಹೋಗಿ ಕೂತೆ.. ಭುಜದ ಮೇಲೆ ಕೈ ಇಟ್ಟೆ.. ಅಪ್ಯಾಯಮಾನವಾಗಿ. ಆತನಿಗೆ ಏನನ್ನಿಸಿತೋ ಏನೋ.. ಜೋರಾಗಿ ದುಃಖಿಸಿ ಒಮ್ಮೆ ಚಿಕ್ಕ ಮಗುವಿನಂತೆ ನನ್ನ ತೊಡೆಯ ಮೇಲೆ ತಲೆಯಿಟ್ಟು ಮಲಗಿಬಿಟ್ಟ.. ಈತ ಭಾವನತ್ಮಕವಾಗಿ ನನ್ನನ್ನು ಇಷ್ಟೋಂದು ಅವಲಂಬಿಸಿದ್ದಾನೆ ಅನ್ನೋದು ನಂಗೆ ಗೊತ್ತಾಗಿದ್ದೇ ಆಗ.. ನಾನು ಅವನನ್ನು ತಡೆಯಲಿಲ್ಲ.. ನನ್ನ ಮಾತುಗಳಿಗೆ ನಾನು ಬದ್ಧ ಎನ್ನುವಂತೆ ಅವನ ತಲೆಯನ್ನೇ ನೇವರಿಸ್ತಿದ್ದೆ ಅಷ್ಟೂ ಹೊತ್ತು. ಐದಾರು ನಿಮಿಷದ ನಂತರ ಅವನೇ ಎದ್ದ. ಸ್ವಲ್ಪ ಚೇತರಿಸಿದ್ದ ಹಾಗೆ ಕಂಡು ಬಂದ. ‘ಹೊರಗೆ ಹೋಗಿ ಬರೋಣ್ವಾ..’ ಕೇಳಿದೆ ‘ಬೇಡಾ.. ನೀನು ಎಷ್ಟು ಹೊತ್ತಿಗೆ ರೂಮಿಗೆ ಹೋಗಬೇಕು?’ ಕೇಳಿದ. ‘ಅದೇನು ತೊಂದರೆ ಇಲ್ಲ.. ಸ್ವಲ್ಪ ಲೇಟಾದ್ರೂ ನಡೆಯುತ್ತೆ.. ನೀನು ಸ್ನಾನ ಮಾಡು ಮನಸ್ಸಿಗೆ ಫ್ರೆಷ್ ಅನ್ಸುತ್ತೆ.. ಮುಂದಿನದೆಲ್ಲಾ ಚರ್ಚಿಸೋಣ..’ ಅವನನ್ನು ಹುರುದುಂಬಿಸುತ್ತಲೇ ಕಿಟಕಿಗಳನ್ನು ತೆಗೆದು ಫ್ಯಾನ್ ಹಾಕಿ ಸಿಗರೇಟು ಹೊಗೆಯೆಲ್ಲಾ ಹೋಗುವಂತೆ ಮಾಡಿದೆ. ಅಡುಗೆ ಮನೆಯಲ್ಲಿದ್ದ ಹುಳವಾಡುತ್ತಿದ್ದ ಹಳಸಿದ್ದ ಪದಾರ್ಥಗಳನ್ನೆಲ್ಲಾ ದೂರ ಬಿಸಾಕಿ ಬಂದೆ. ಆತ ಸ್ನಾನ ಮನೆಗೆ ಹೊರಟ.. ಅವನು ಸ್ನಾನ ಮುಗಿಸಿ ಬರೋವಷ್ಟರಲ್ಲಿ ಮನೆ ಫಳ.. ಫಳ. ಇದ್ದ ಬದ್ದ ಅಡುಗೆ ಸಾಮಾನೇ ಬಳಸಿ ನನಗೆ ಚೆನ್ನಾಗಿ ಬರುತ್ತಿದ್ದ ಅವಲಕ್ಕಿಯ ಚಿತ್ತ್ರಾನ್ನ ಮಾಡಿದೆ.. ಇಬ್ಬರೂ ಒಂದೇ ತಟ್ಟೆಯಲ್ಲಿ ತಿಂದೆವು. ಅಷ್ಟೊತ್ತಿಗಾಗಲೇ ರಾತ್ರಿ ತುಂಬಾ ಲೇಟಾಗಿತ್ತು. ನನ್ನನ್ನು ರೂಮಿಗೆ ಕರ್ಕೋಂಡ್ ಹೋಗಿ ಬಿಡ್ತೀನಿ ಅಂದ. ನಾನೇ ಬೇಡವೆಂದೆ. ‘ಬೆಳಿಗ್ಗೆ ಬೇಗ ಎದ್ದು ಹೊರಡ್ತೀನಿ…‘ ಅಂದೆ. ಅವನಿಗೂ ನನ್ನನ್ನು ಕಳಿಸಿಕೊಡೋಕೆ ಇಷ್ಟವಿದ್ದಂತೆ ಇರ್‍ಲಿಲ್ಲ.. ನನ್ನ ನೈತಿಕಬೆಂಬಲದ ಸಖ್ಯ ಬೆಕಿತ್ತು ಅವನಿಗೆ. ನಾನು ಅಲ್ಲೇ ಉಳಿದೆ. ತುಂಬಾ ಹತ್ತಿರ ಹತ್ತಿರದಲ್ಲಿ. ಬೆಣ್ಣೆಯಿತ್ತು.. ಬೆಂಕಿಯಿತ್ತು ಪಕ್ಕಪಕ್ಕದಲ್ಲೇ.. ಅವನ ದುಃಖಪೂರಿತ ಮನಸ್ಸಿಗೆ ನಾನಿದ್ದೇನೆ ನಿನ್ನ ಹೊತೆಯಲ್ಲಿ ಅನ್ನೋದರ ಮುದ್ರೆಯಾಗಿತ್ತು ನನ್ನ ಅಂದಿನ ನಡತೆ.. ನಾನು ಆತನಿಗೆ ಅಂದಿತ್ತ ಸಹಕಾರ ಸಾಂತ್ವನದ ಇನ್ನೊಂದು ಮುಖವಾಗಿತ್ತಷ್ಟೆ.. ಹೇಗೆ ಇಷೋಂದು ನಿರ್ದಿಷ್ಟವಾಗಿ ನಾನು ಹೇಳಬಲ್ಲೆನೆಂದೆರೆ ಅವನ ರಾಕ್ಷಸ ಪಟ್ಟುಗಳಿದ್ದಾಗ್ಯೂ ನಾನು ಅಂದು ಅರಳಿರಲಿಲ್ಲ.. ! ನೊಂದವನಿಗೆ ಇನ್ನೂ ನೋಯಿಸಬಾರದೂ ಅನ್ನೋದೇ ನನ್ನ ಉದ್ದೇಶವಗಿತ್ತು. ಅವನು ಸೋತವನು.. ಅವನನ್ನು ಗೆಲ್ಲಿಸಬೇಕದರೆ ನಾನು ಸೋಲಲೇಬೇಕು.. ನಾನೂ ಅವನನ್ನು ಸೋಲಿಸೋದು ನನಗೆ ಬೇಕಿರಲಿಲ್ಲ.. ಪ್ರೆಮ ಇಂಥಾ ಸಂದಿಗ್ಧಗಳನ್ನು ತ್ಂದೊಡ್ಡುತ್ತವ್ಂತೆ… ನನಗರಿವೇ ಇಲ್ಲದ್ಂತೆ ಒಬ್ಬ ಗೃಹಿಣಿಯಂತೆ ಕರ್ತವ್ಯ ನಿರ್ವಹಿಸಿದ್ದೆ ನಾನು.. ಆ ನಂತರದ ದಿನಗಳಲ್ಲಿ.. ಪದೇಪದೇ…
ಅಂದು ಬಾಸ್ ಮಾತಾಡ್ತಿದ್ದ. ‘ಕೇಳಿಸ್ಕೋ ಜಿನ್ಸಿ.. ನಿನ್ನಂಥ ಬೆಳೆದ ಮಗಳಿಗೆ ನಿನ್ನಪ್ಪ ಹೇಳಬೇಕಿದ್ದನ್ನ ನಾನಿವತ್ತು ನಿಂಗೆ ಹೇಳ್ತೇನೆ.. ಗಂಡಸು ಹೇಗೆ ಯೋಚಿಸ್ತನೇಂತ.. ಹುಡುಗಿ ಕುತೂಹಲಿಯಾಗಿದ್ದರೆ ಹುಡುಗನ ಕೆಲಸ ಸುಲಭ.. ಹುಡುಗಿ ಭಾವುಕಳಿದ್ದರ ಮತ್ತೂ ಸಲೇಸು, ಹುಡುಗಿ ಹುಷಾರಿದ್ದರೆ.. ಅದು ಅವನ ಅಹಂಗೇ ವ್ಂದು ಸವಾಲು, ಹುಡುಗಿಯೂ ಇವನ್ತೆಯೇ ಕ್ಷಣದ ಸುಖಿಯಾಗಿದ್ರೆ ಅವನಿಗೆ ಆಸಕ್ತಿಯೇ ಇರಲ್ಲ..! ಹುಡುಗ ಮೊದಲು ಹುಡುಗೆಯ ಮನಸ್ಸನ್ನು ಆಕ್ರಮಿಸಿಕೊಳಾನೆ.. ಮುಂದಿನ ಹಂತಗಳು ಆತನಿಗೆ ತೇರಾ ಸುಲಭೆ.. ಗಂಡಸು ಮಗುವಿನ ಥರಾ ಆಸಕ್ತಿ ಇಲ್ಲದ ಜಾಗದಲ್ಲಿ ಆತ ನಿಲ್ಲಲಾರ.. ಆತನ ಮುಂದಿನ ಹಂತ ನೀನು ಅವನಿಂದ ತಾನೇತಾನಾಗಿ ದೂರವಾಗೋದು.. ನಿನ್ನನ್ನ ಆಕರ್ಷಿಸಿದಷೇ ಸ್ವಾಭಾವಿಕವಾಗಿ ನೀನು ಅವನನ್ನ ಅಸಹ್ಯಿಸುವಂತೆಯೂ ಮಾಡ್ತಾನೆ ಹುಡುಗ.. ಹತ್ತು ಆನೆಯನ್ನು ಪಳಗಿಸಿದವನಿಗೆ ತನ್ನ ಅನುಭೆವದಿಂದ ಹನ್ನೊಂದನೆಯ ಆನೆಯನ್ನ ಸಲೀಸಾಗಿ ಹಿಡಿಯಬಲ್ಲ.. ಆದರೆ ಹತ್ತುಹುಡುಗೀರನ್ನ ಪಳಗಿಸಿದವನಿತೆ ಹನ್ನೊಂದನೇ ಹುಡುಗಿಯೂ ಹೊಸ ಚಾಲೆಂಜೇ ಆಗಿರ್ತಾಳೆ. ತನ್ನ ಹಿಂದಿನ ಅನುಭೆವ ಆತನಿಗೆ ಅಷೇನೂ ಸಹಾಯ ಮಾಡಲ್ಲ.. ಪ್ರತಿ ಹುಡುಗೀನೂ ಒಂದು ರಹಸ್ಯ ಅಂತನೇ ಹುಡುಗ ಭಾವಿಸ್ತಾನೆ. ಅದನ್ನ ಬೇಧಿಸುವಲ್ಲಿ ತನ್ನದೇ ರೂಪುರೇಷೆ ರಯರಿಸ್ತಾನೆ.. ರುಂಬಾ ನಾಜೂಕಾಗಿ ನಂಬಿಸ್ತಾನೆ.. ಅದು ನಂಬಿಕೆ ಇರುವಷ್ಟು ದಿನ ಪ್ರೇಮವಾಗೇ ಕಾಣ್ಸುತ್ತೆ.. ನಂಬಿಕೆ ಹೋದ ದಿನ ಅದು ನಟನೇಂತ ಗೊತ್ತಾಗುತ್ತೆ.. ಅಷ್ಟರಲ್ಲಿ ಅನಾಹುತವಾಗಿ ಹೋಗಿರುತ್ತೆ.. ಹೆಣ್ಣು ಈಗ ಎಷ್ಟು ಹುಷಾರಿದ್ದರೂ ಸಾಲದು.. ಇನ್ನೊಂದು ಗೊತ್ತ ನಿಂಗೆ.. ಪ್ರೇಮ ವ್ಯಕ್ತಪಡ್ದಿಸಿದ ನಂತರ ಅದರ ತೀವ್ರತೆ ಕಮ್ಮಿಯಗುತ್ತೆ ಅಂತಾರೆ.. ಪ್ರೇಮದ್ದೇ ಹೀಗಾದರೆ.. ಕಾಮದ ಪಾಡೇನು..? ನಿನ್ನಿಂದ ಆತ ದೂರವಾಗಿದ್ದೇ ಅದಕ್ಕೆ. ನಿನ್ನಲಿ ಆತನಿಗೆ ಆಸಕ್ತಿ ಉಳಿದಿಲ್ಲ.. ನಿನ್ನನ್ನು ಮುಗಿಸಿದ್ದಾನೆ ಆತ. ಇದೆಲ್ಲ ನಿಂಗೆ ನೋವುಂಟುಮಾಡಬಹುದು.. ಆದ್ರೂ ನಾನ್ ನಿಂಗೆ ಹೇಳಲೇಬೇಕಿದೆ.. ತುಂಬ ತಡವಾಗಿದೆಯಾದರೂ..
ಅವನು ನನ್ನಿಂದ ಕಣ್ಮರೆಯಾಗಿ ತಿಂಗಳುಗಳೇ ಆಗಿದ್ದವು. ಹುಡುಕಾಡಿ ಸಾಕಾಗಿತ್ತು ನನಗೆ.. ಇಲ್ಲಿ ನನ್ನ ಅಪ್ಪನ ಸ್ಥಾನದಲ್ಲಿದ್ದ ನನ್ನ ಬಾಸ್ ಗೆ ಎಲ್ಲವನ್ನೂ ವಿವರಿಸಿದ್ದೆ. ತುಂಬ ನೊಂದುಕೊಂಡಿದ್ದರು ನನ್ನ ಬಾಸ್..
‘ಇಲ್ಲ..ನನ್ನ ಹುಡುಗ ಅಂತಹವನಲ್ಲ.. ಏನೋ ಬಲವಾದ ಕಾರಣ ಇರದೇ ಇದ್ದಿದ್ದರೆ ಅವನು ಹೀಗೆ ನಡ್ಕೋತಿರ್ಲಿಲ್ಲ.. ನನಗೆ ಅವನೊಮ್ಮೆ ಸಿಕ್ಕಲಿ ತಂದು ನಿಮ್ಮ ಮುಂದೆ ನಿಲ್ಲಿಸ್ತೇನೆ.. ನೀವೆ ಮಾತಾಡ್ಸಿ.. ನಿಮಗೇ ಗೊತ್ತಾಗುತ್ತೆ..’ ವಾದಿಸಿದೆ.. ಬಿಕ್ಕುತ್ತಲೇ..
ನಿನ್ನ ಈ ಮನಸ್ಥಿತಿ ನನಗೆ ಅರ್ಥವಾಗದ್ದೇನಲ್ಲ.. ಕಣ್ಣಿಗೆ ಕಾಣೋವಂಥ ಸತ್ಯ ಎದುರಿಗೇ ಇದ್ದರೂ ಅದೆಲ್ಲಾ ಸುಳ್ಳಾಗಿರಲೀ ಅಂತಾನೇ ಆಶಿಸ್ತೀವಿ.. ಪ್ರತಿಯೊಬ್ಬರೂ.. ಆದರೆ ಜಿನ್ಸಿ ನಿಂಗೆ ಗೊತ್ತಿರಲಿ.. ಹಾಗೇ ಆಶಿಸೋದ್ರಿಂದ ಸತ್ಯಗಳು ಬದಲಾಗೋಲ್ಲ.. ಆಶಯಕ್ಕೆ ಆ ಶಕ್ತಿ ಇಲ್ಲ..’ ಮತ್ತೆ ಮುಂದುವರೆಸಿದರು ಬಾಸ್. ಯಾವ ಜನ್ಮದಲ್ಲಿ ನೀನು ನನಗೆ ಮಗಳೋ ಗೊತ್ತಿಲ್ಲ.. ನಿನ್ನ ಅಪ್ಪನಾಗಿ ನಾನು ನಿರ್ವಹಿಸಿದ್ದೇನೆ.. ನಿನ್ನ ಹುದುಗನಿಗೆ ನೀನಂದುಕೊಂಡಂತೆ ಕೆಲಸ ಹೋಗಿರಲಿಲ್ಲ.. ಟ್ರಾನ್ಸ್‍ಫ಼್‍ರ್ ಆಗಿತ್ತು.. ಆತ ಈ ಊರಿನಲ್ಲೇ ಇಲ್ಲ.. ಇರೋದು ಕೊಯಮತ್ತೂರಿನಲ್ಲಿ..
ಬಿಕ್ಕುತ್ತಿದ್ದವಳು ಷಾಕ್‍ನಿಂದ ತಲೆ ಎತ್ತಿದೆ.
ಇನ್ನೂ ನಂಬಿಕೆ ಬರ್ತಿಲ್ಲ್ವಾ.. ಸರಿ ಹೋಗು.. ನಿನ್ನ ಹುಡುಗನ ಬಗ್ಗೆ ನನಗಿಂತ ನಿನಗೇ ಚೆನ್ನಾಗೇ ಗೊತ್ತಿದೆ ಅಂದೆಯಲ್ಲಾ.. ಮೇಲೆ ಟೆರೇಸ್‍ನಲ್ಲಿ ಅವನ್ನನ್ನು ಕೂರಿಸಿದ್ದೇನೆ.. ಹೋಗಿ ಮಾತಾಡಿಸಿ ದಕ್ಕಿಸಿಕೋ…’
ಇದು ಇನ್ನೊಂದು ಷಾಕ್ ನಂಗೆ.. ಧಿಡೀರನೇ ಎದ್ದು ಹೊರಟೆ..
‘ಜಿನ್ಸಿ.. ಇನ್ನೊಂದು ವಿಚಾರ ಅವನು ಇಲ್ಲಿ ಬರೋದಿಕ್ಕೆ ಸುತರಾಂ ಒಪ್ಪಿರಲಿಲ್ಲ.. ತುಂಬಾ ಹೆದರಿಸಿ ಕರ್ಕೊಂಡ್ ಬಂದಿದೀನಿ ಅವನ್ನ.. ನಿಂಗೆ ಗೂತ್ತಿರ್ಲಿ..! ಬಾಸ್‍ನ ಆ ಮಾತುಗಳು ನನ್ನ ಕಿವಿಗೆ ಬೀಳುತ್ತಲೇ ಇತ್ತು.. ಅಷ್ಟರಲ್ಲೇ ನಾನು ರೂಮ್‍ನಿಂದ ಹೊರಬಿದ್ದಿದ್ದೆ.. ಕಣ್ಣೊರೆಸಿಕೊಳ್ಳುತ್ತಾ…
**********
ಬಾಸ್ ಹೇಳಿದೆಲ್ಲಾ ನಿಜವಾಗಿದ್ದಲ್ಲಿ…? ಅಪ್ಪನಿಗೆ ಗೊತ್ತದರೆ…? ಅಮ್ಮನಿಗೆ ಹೇಗೆ ಮುಖ ತೋರಿಸಲಿ..? ತಂಗೀಗೆ ನಾನೇನು ಬುದ್ಧಿ ಹೇಳಬಲ್ಲೆ..? ದೇವ್ರೇ ಇದೊಂದು ತಾಪತ್ರಯದಿಂದ ಕಾಪಾಡು.. ನಿಯತ್ತಾಗಿ ಪ್ರೇಮಿಸಿದೋಳಿಗೆ ಈ ಪರಿಯ ಪರೀಕ್ಷೆಯೇ ನಿನ್ನ ಜಗತ್ತಲ್ಲಿ..? ಯೋಚಿಸುತ್ತಲೇ ಲಿಫ಼್ಟ್ ಏರಿಕೊಂಡೆ.. ಹದಿನಾಲ್ಕು ಅಂತಸ್ತುಗಳ ಕಟ್ಟಡ.. ಟೆರೇಸ್ಗೆ ಬಂದೆ.. ಭರ್ರೆಂದು ಬೀಸೋ ಗಾಳಿ. ಮೂಲೆಯೊಂದರಲ್ಲಿ ಆತ ನಿಂತಿದ್ದ.. ನನಗೆ ಬೆನ್ನು ತೋರಿಸಿಕೊಂಡು.. ನಮ್ಮ ಕಟಡದಿಂದ ಅರ್ಧ ಬೆಂಗಳುರು ಕಾಣುತ್ತೆ.. ಅದನ್ನ ನೋಡೊಕೆ ಬಂದ ಹಾಗೆ ನಿಂತಿದ್ದಾನೆ. ನನ್ನ ಹೆಜ್ಜೆ ಶಬ್ದ ಕೇಳಿ ತಿರುಗಿ ನನ್ನ ಕಡೆ ನೋಡಿದ.. ನಾನಂದುಕೊಂಡ್ ಯಾವ ಜ್ಭಾವವೂ ಇರಲಿಲ್ಲ ಅವನ ಮುಅಖದಲ್ಲಿ.. ಕಾಮ್ ಆಗಿದ್ದಾನೆ. ಅವನ ಮುಖವನ್ನ ನನಗೆ ದಿಟ್ಟಿಸಲಾಗಲಿಲ್ಲ.. ಅಳಲಾರಂಭಿಸಿದೆ.. ಅವನ ಎದೆಗೆ ತಲೆಯಾನಿಸಿ ಜೋರಾಗಿ ಅತ್ತುಬಿಡಬೇಕೆನಿಸಿತು.. ನಿಂತ ಜಾಗದಿಂದ ಮುಂದೆ ಅಡಿಯಿದಲಾಗಲಿಲ್ಲೆ.. ‘ಅಳು ನಿಲ್ಸು.. ಜಿನ್ಸಿ’ ಕೂಲಾಗೇ ಆಙ್ಞಾಪಿಸಿದ. ಅಳುವಿಗೆ ದುಃಖವನ್ನು ವ್ಯಕ್ತಪಡಿಸೋ ಶಕ್ತಿ ಮಾತ್ರ ಇರುತ್ತೆ.. ದುಃಖವನ್ನು ಹೋಗಲಾಡಿಸುವ ಶಕ್ತಿ ಇಲ್ಲ ಅಂತ ಅವನೊಮ್ಮೆ ಹೇಳಿದ್ದು ಙ್ಞಾಪಕಕ್ಕೆ ಬಂತು.. ಅಳು ನಿಲ್ಲಿಸುವ ಪ್ರಯತ್ನ ಮಾಡಿದೆ. ‘ಮುಂದೇನು ಮಾಡಬೇಕೂತ ಅಂದ್ಕೊಡ್ಫ಼ಿದಿಯಾ ಜಿನ್ಸಿ..? ಅದು ನಾನು ಕೇಳಬೇಕಾದ ಪ್ರಶ್ನೆ.. ಇನ್‍ಡೈರೆಕ್ಟಾಗಿ ಅಬಾರ್ಷನ್ ಮಾದಿಸಿಕೋ ಅಂತಿದ್ದಾನೆ.. ನನ್ನನ್ನ ಮರೆತುಬಿದೂಂತ ಸಜೆಸ್ಟ್ ಮಾಡ್ತಿದ್ದ ಭಾವ. ದಿಟ್ಟಿಸಿ ನೋಡಿದೆ ಅವನನ್ನ.. ಬಾಸ್ ಹೇಳಿದ್ದೆಲ್ಲಾ ನಿಜವಾಗಿ ಹೋಗಿತ್ತು.. ಬಿಇಸುತ್ತಿರೋ ಭರ್ರನೆ ಗಾಳಿಗೆ ನಾನು ಚಲಿಸಿಹೋದೆ.. ದುಃಖದ ಕಟ್ಟೆ ಒಡೆದು ಹೊಯ್ತು..‘ಇನ್ನೇನಾದರೂ ನೀನು ನನ್ನನ್ನ ಕೇಳೊದಿದೆಯಾ..’ ಅವನ ಕೊನೆಯ ಪ್ರಶ್ನೆ.. ನಂಗೆ ಆ ಮಟ್ಟದ ಶಕ್ತಿಯನ್ನು ದೆವರು ಹೇಗೆ ಕೊಟ್ಟ್ನೊ ಆ ಹೊತ್ತಿನಲ್ಲಿ ನನಗೀಗಲೂ ಗೊತ್ತಿಲ್ಲ.. ದಿಕ್ಕುಗಳೇ ಡಿಕ್ಕಿ ಹೊಡೆದಂತೆ ಒಂದು ಶಬ್ದ ಅಲ್ಲಿ ನೂರ್ಮಡಿಸಿತು.. ಕಣ್ಣುಗಳಲ್ಲಿ ದುಃಖದ ಮಡುವನ್ನೇ ತುಂಬಿಕೊಂಡಿದ್ದ ನಾನು ನನ್ನ ಬಲವನ್ನೆಲ್ಲಾ ಬಿಟು ಬೀಸಿದ್ದೆ ಅವನ ಕೆನ್ನೆಗೆ.. ಸೀಳ್ಹೋಗುವಂತೆ ಕಪಾಳ.. ‘ನನ್ನಂಥ ಹುಡುಗೀರ ಬಾಳಲ್ಲಿ ಆಟ್ ಆಡ್ತೀಯೇನೋ ಲೋಫ಼ರ್..’ ಕೂಗಿದ್ದೆ.. ನನ್ನೆಲ್ಲ ಶಕ್ತಿಯನ್ನೂ ಕ್ರೋಢೀಕರಿಸಿಕೋಡು… ‘ಹೆಣ್ಣಿನ ಪ್ರೇಮವನ್ನು ಅಗೌರವಿಸ್ತೀಯೇನೋ ಬಾಸ್ಟರ್ಡ..’ ಇನ್ನೊಂದೇ ಒಂದು ಏಟು ಅವನ ಕೆನ್ನೆಗೆ.. ಅವನು ಕುಸಿದ.. ಆ ಉದ್ವೇಗದಲ್ಲೇ ಅಲ್ಲಿಂದ ಹೊರಟ್ಬಿಟ್ಟೆ.. ಲಿಫ಼್ಟ್ ಮೇಲೆ ಹೋಗಿದ್ದಕ್ಕಿಂತಲೂ ನಿಧಾನವಾಗಿ ಕೆಳಕ್ಕೆ ಬಂತೋ ಅನ್ನಿಸಿತು.. ನನ್ನ ರೂಮಿಗೆ ಬಂದೆ.. ನನಗೆ ಬೇದ್ಕಗಿದ್ದ ಕೆಲವು ಮಾತ್ರೆಗಳನ್ನು ತೆಗೆದುಕೊಂಡೆ… ನನ್ನ ಇಲ್ಲಿನ ಅಪ್ಪನಾಗಿದ್ದ ನನ್ನ ಬಾಸ್‍ನ ದೇವರು ನಿರಂತರ ಚೆನ್ನಾಗಿ ಇಡ್ಲಿ ಎಂದೇ ಪ್ರಾರ್ಥಿಸುತ್ತಾ ಮುಚ್ಚಿದ್ದ ಅವರ ರೂಮ್ ಕಡೆ ಒಮ್ಮೆ ನೋಡಿ ಕಣ್ಣೊರೆಸಿಕೊಂಡು ಚರ್ಚ್ ಕಡೆಗೆ ಹೊರಟುಬಿಟ್ಟೆ. ನನ್ನ ಭವಿಷ್ಯವನ್ನು ನಾನು ನಿರ್ಧರಿಸಿಬಿಟ್ಟಿದ್ದೆ.. ಆ ಕ್ಷಣದಲ್ಲೇ…
**********
ಕೊನೆಯ ಬಾರಿಗೆ ಚರ್ಚ್ಗೆ ಹೋಗೆ ದೇವರ ಮುಂದೆ ಜ್ಕೂತು ಮನಸ್ಸು ಬಿಚ್ಚಿ ಪ್ರಾರ್ಥಿಸಬೇಕೆಂದುಕೊಂಡೆ.. ಚರ್ಚ್ ಒಳಗೆ ಕಾಲಡಿಯಿಡುವಾಗ ಇನ್ನೊಂದು ಯೋಚನೆಯೂ ಬಂತು.. ನನಗೆ ಅದೇ ಸರಿ ಎಂದೂ ಅನಿಸಿತು.. ಚರ್ಚ್ ಹೊರಗಿದ್ದ ತೋಟದಲ್ಲಿರೋ ಕಲ್ಲುಹಾಸಿನ ಮೇಲೆ ಕೂತೆ.. ಯಾರೂ ಇರದ ಜಾಗದಲ್ಲಿ. ನನ್ನ ಹೊಟ್ಟೆಯನ್ನೊಮ್ಮೆ ಮುಟ್ಟಿಕೊಂಡೆ.. ಒಳಗೆ ನನ್ನ ಮಗುವಿದೆ.. ಎರಡೂವರೆ ತಿಂಗಳಿನದು.. ಅದರ ಕಾಲಿನ ಬೆರಳುಗಳು ಬೆಳೆದಿರುತ್ತೋ ಇಲ್ಲವೋ ಗೊತ್ತಿಲ್ಲ.. ಬೆಳೆದಿದ್ದರೆ.. ಪುಟ್ಟಪುಟ್ಟದಾಗಿ ಗುಲಾಬಿ ಬಣ್ಣದ ಅತಿ ಚಿಕ್ಕ ಪಾದಗಳಿರಬೇಕು.. ಮನಸ್ಸಿನಲ್ಲೇ ಆ ಗುಲಾಬಿ ಪಾದಗಳನ್ನು ಹಣೆಗೆ ಒತ್ತಿಕೊಂಡೆ.. ಕಂದಾ.. ಮಗುವಿಗಿಂತ ದೇವರಿಲ್ಲಾಂತಾರೆ.. ನನ್ನ ಹಣೆ ಈಗೆ ನಿನ್ನ ಪಾದಗಳ ಮೇಲಿದೆ.. ಹೇಳು ನನ್ನನ್ನು ಕ್ಷಮಿಸ್ತಿಯಾ..? ನಿನ್ನನ್ನು ಮಾತ್ರ ಕೊಂದು ನನ್ನ ಜೀವನವನ್ನು ಮತ್ತೆ ಹೊಸದಾಗಿ ಆರಂಭಿಸಿಬಿಡಬೋದು ನಾನು.. ಹಾಗೆಲ್ಲಾ ಮಾಡಿ ನಾನು ಜೀವಿಸಿ ನನ್ನ ಮೊದಲ ಪ್ರೇಮಕ್ಕೆ ಅಗೌರವ ತೋರಿಸೋದು ಬೇಕಿಲ್ಲ ನನಗೆ.. ನಾನು ಸಾಯಬೇಕಿದೆ.. ನನ್ನ ಸಾವು ನಿನ್ನ ಸಾವು ಬೇರೆ ಬೇರೆಯೇನಲ್ಲ.. ಮುಂದಿನ ಜನ್ಮಗಳಿದ್ದರೆ ನಿನ್ನನ್ನು ಮತ್ತೆ ಮತ್ತೆ ಹತ್ತು ಬಾರೆ ಹೆತ್ತೇನು.. ಆಗ ನನ್ನಲ್ಲೇ ಹುಟ್ಟೋ ಕಂದಾ.. ಈಗ ನನ್ನ ಜೊತೆ ಸಹಕರಿಸಪ್ಪಾ.. ಇಂಥಾ ಅಪ್ಪನ ಮಗುವಾಗಿ ನೀನು ಹುಟ್ಟೋದು ಬೇಡಾ.. ಅವನ ಮೋಸದ ನೆನೆಪಲ್ಲಿ ನೆರಳಲ್ಲಿ ನಾವು ಬಾಳೋದೂ ಬೇಡಾ.. ಅವನು ಪ್ರೇಮಕ್ಕೆ ಅರ್ಹನಲ್ಲದ ಸೈತಾನ. ಅವನ ಸಂಪರ್ಕಕಕ್ಕೆ ಬಂದವರೆಲ್ಲರೂ ಸಾಯಲೇಬೇಕು.. ಹೇಳು ಸಹಕರಿಸ್ತಿಯಾ..? ಅವನ ಜೊತೆ ಗುರುತಿಸಿಕೊಂಡಿದ್ದಕ್ಕಾಗಿ ನಮಗೆ ನಾವೇ ಮಾಡ್ಕೊಳ್ತಿರೋ ಶಿಕ್ಷೆ ಇದು.. ಬರ್ತಿಯಾ ಹೇಳು ನನ್ನ ಕೈ ಹಿಡಿದುಕೊಂಡು.. ಸಾವಿನ ಮನೆಗೆ.. ನನ್ನೊಟ್ಟಿಗೇ.. ನನ್ನ ಈ ನಿರ್ಧಾರದಲ್ಲಿ ನನ್ನೊಟ್ಟಿಗೆ ಹೆಜ್ಜೆ ಹಾಕುವಾಗ ನಿನ್ನ ಮೃದು ಪಾದಗಳು ನೋಯುತ್ತೇಂತ ಗೊತ್ತು.. ಅದಕ್ಕಾಗಿ ಕ್ಷಮಿಸು .. ಕಂದಾ.. ಕ್ಷಮಿಸು..’ ಮನಸಿನಲ್ಲಿ ಹೇಳಿಕೊಳ್ಳುತ್ತಲೇ ಮಾತ್ರೆಯೆನ್ನೆಲ್ಲಾ ನುಂಗಿ ಮುಗಿಸಿದ್ದೆ…
ರಾತ್ರಿಯಾಗಿತ್ತು.. ಮಳೆ ಹನಿ ಬೇರೆ.. ದಿಢೀರನೇ ಅಪ್ಪ ಅಮ್ಮ ತಂಗಿ ನೆನಪಾದರು.. ಕರುಳ ಸಂಕಟದ ಜೊತೆಗೇ.. ಊರಿನ ಙ್ಞಾಪಕ ಬಂತು.. ಆಟೋ ಹಿಡಿದು ನನ್ನ ಊರಿಗಿ ಹೊರಟಿದ್ದ ಬಸ್ ಏರಿದೆ. ಮಾತ್ರೆಗಳು ತನ್ನ ಕೆಲಸ ಮಾಡಲಾರಂಭಿಸಿತ್ತು.. ನಿದ್ದೆ ಆವರಿಸಿ ಬಂದ ಹಾಗಾಗುತ್ತಿತ್ತು.. ಸಣ್ಣ ಓಲಾಟದಲ್ಲೇ ನನ್ನ ಸೀಟಿನೆಡೆಗೆ ನಡೆದೆ.. ಕುಳಿತೆ. ನನ್ನ ಜೀವನದ ಕೊನೆಯ ಪ್ರಯಾಣಕ್ಕೆ ಕೊನೆಯ ಸೀಟು.. ಸಾವಿನ ಆ ಜೋಂಪಿನಲ್ಲೂ ನಗು ಬಂತು ನನಗೆ.. ನನ್ನ ಪಕ್ಕದಲ್ಲೇ ಕೂತಿದ್ದ ಗಡ್ಡದ ಯುವಕ.. ನಿಮ್ಮ ಲೇಖಕ.. ನನ್ನ ನಗುವಿಗೆ ಬೇರೆಯೇ ಅರ್ಥವನ್ನು ಹಚ್ಚಿದ್ದ.. ಮೊಬೈಲ್ ಆಫ್ ಮಾಡಿ ಅವನನ್ನೊಮ್ಮೆ ನೋಡಿದೆ.. ನನ್ನ ಜೀವನದ ಕೊನೆಯ ಷಾಕ್.. ಅದು..! ನಿಮ್ಮ ಗಡ್ಡದ ಲೇಖಕ ಬೀರುತ್ತಿದ್ದ ಆ ಹಸೀ ಕಾಮೋತ್ಸಾಹದ ನೋಟ…
ತಲ್ಲಣಗೊಂಡೆ ನಾನು.. ಇಡೀ ಗಂಡು ಕುಲದ ಬಗ್ಗೇ ಅಸಹ್ಯ ಹುಟ್ಟಿಬಿಡ್ತು.. ಅಷ್ಟೇ ನನಗೆ ಙ್ಞಾಪಕ..ಸಾವೆಂಬ ನಿದ್ದೆ ಆವರಿಸಿಬಿಡ್ತು…
**********
ಹೇಳಬೇಕಾದ್ದೆಲ್ಲಾ ಹೇಳಿಯಾಗಿದೆ.. ಮತ್ತೆ ಎಂದಿಗೂ ಬರಲ್ಲ ಈ ದುಷ್ಟ ಪ್ರಪಂಚಕ್ಕೆ… ಜಿನ್ಸಿ.
**********
(ರೂಪತಾರಾ ಸೆಪ್ಟೆಂಬರ್ ೨೦೦೫ ರಲ್ಲಿ ಪ್ರಕಟಗೊಂಡ ಲೇಖನ)