ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ
ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು
ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ
ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ
ಅಲ್ಲಿಯಿಲ್ಲಿ ಒಂದೆರಡು ಉರಿಯೊ ಹಣತೆ
ದೂರದಲ್ಲೆಲ್ಲೋ ಒಂದು ಲಾಂದ್ರದ ಕಂಭ
ರಾಶಿ ಕುಂಕುಮ, ತಮಟೆ, ಕುಣಿತ, ಧೂಳು
ಗೋಡೆಲಿ ಸಂಧಿನೆನೋ: ಪುಟ್ಟ ದೇಗುಲವೋ, ಗುಡಿಯೋ.
ಸುತ್ತಲೂ ಅರಮನೆ ಕೋಟೆ ಕೋತ್ತಲವೆನೋ
ಒಳಗೆ ದೇವಸ್ಥಾನ ಬೆಳಕು, ಜ್ಯೋತಿ
ಸುಂದರ ಮೂರ್ತಿಗೆ ಭರ್ಜರಿ ಅಲಂಕಾರ
ಹೂವೂ ತುಳಸಿ ಮಾಲೆ, ಗಂಧ ಕರ್ಪೂರದ ಸುಗಂಧ.
ಆಯ್ಯೋ, ಅಯ್ಯೋ, ನೋವು ತಡಿಲಾರದೆ ಜೋರಾಗಿ ಕಿರುಚ್ತಾನೆ;
ಮಾರಮ್ಮಂಗೆ ಖುಶಿ – ಕೆಂಪಗೆ ಹರಿತು ರಕ್ತವೋ ಎನೋ;
ಅವನ ಕೈಲಿ ಇನ್ನೇನು ಅಗೋಲ್ಲ – ಹಿಜಡ
ಬೂಂದಿ ಹಂಚದ್ರು ಕುಣದ್ರು ಕೂಗಿದ್ರು.
ಗಂಟೆ, ಜಾಗಟೆ, ಮಂಗಳಾರತಿ, ಶಟಾರಿ, ತೀರ್ಥ, ಪಣ್ಯಾರ ಒಳಗೆ
ಜುಟ್ಟು ಬಿಟ್ಟ್ಕೋಂಡು ಬೆನ್ನುಮಾಡಿ ಕುತಿರೋ ಮಾರಮ್ಮ ಹೋರಗೆ ,
ಸೌಮ್ಯ ಮುಖದ ವರಹಸ್ವಾಮಿ ಮುಷ್ಟಿಲಿ ಅವಳ ಜುಟ್ಟು.
ಇದೆ ಚಿತ್ರ, ಇದೆ ದೃಶ್ಯ ಎಷ್ಟು ವರುಶವಾಯ್ತೋ ಎನೋ,
ಇದೆ ಕನಸು, ಇದೆ ದು:ಸ್ವಪ್ನ ಕಾಡಿ, ಕಾಡಿ,
ಹೆದರಿಸಿ ನನ್ನ ಹರಿದು, ಕಿತ್ತು ತಿನ್ನತ್ತಾಯಿವೆ.
ಪಕ್ಷಿಧಾಮಕ್ಕೆ ವಲಸೆ ಬರೊ ಹಕ್ಕಿಯೋಯಿವು,
ಹಾಳದ ಬಾವನೆಗಳು ಎಲ್ಲಿಂದ ಬರತ್ತಾವೋ ?
ಬತ್ತಿಹೋದ ಕಾವೇರಿಲಿ – ಕಾರಣಗಳ ನುಣುಪಾದ
ಬೆಣೆಚುಕಲ್ಲಿಗೆ ತಿಕ್ಕಿ ತೀಡಿದೆನೋ, ಭಾವನೆಗಳಿಲ್ಲದ
ನೋವು ದಗ್ಗೆಂದು ಹತ್ತಿ ಉರಿದು ರೆಕ್ಕೆಪುಕ್ಕ ಸುಟ್ಟು,
ನೀರಿಲ್ಲದ ನದೀಲಿ ಮುಳುಗಿಸಿ, ಛೇಡಿಸಿ,
ರೇಗಿಸಿ, ರೇಜಿಗೆಯಿಂದ ರಾಡಿಗೊಳಿಸಿ,
ಮತ್ತೆ ಮೇಲೆತ್ತಿ ಇನ್ನು ಉರಿತಿರೂ ಬೆಂಕಿಲಿ ನೊಂದು ಬೆಂದು
ಅಂಗಾಂಗವೆಲ್ಲ ಸುಟ್ಟು, ಜೀವಕಣಗಳು ಸುಡೋ ಗಬ್ಬು ನಾಥ.
ನಾವು ಹೊತ್ತಿಸೋ ಬೆಂಕಿಲಿ ನಾವೆ ಸುಟ್ಟು ಸಾಯಬೇಕೆನು ?
ಯೋಗವಲ್ಲಿ ವೇದವಲ್ಲಿ ಕೋಟೆಮೇಲೆ ಕೂತಿದಾಳೆ
ಎರಡೂ ಕಡೇ ಹೋಗೋಬರೋವರಿಗೆ ತಾನು ಒಂಟಿ
ಅಂತ ಟೆಲಿಪತಿಲೆ ಹೇಳೊಕ್ಕೆ ಪ್ರಯತ್ನ ಮಾಡ್ತಾಳೆ
ನನಗದು ಸರಿಯಾಗಿ ಕೇಳಿಸ್ತೋ ಇಲ್ಲವೋ.
ಎಲ್ಲೆಲ್ಲು ಹಸಿರಾದ ಹುಲ್ಲು, ಮಧ್ಯದಲ್ಲೊಂದು ಪಿಚ್ಚು
ಕೋಟೆ ಆಕಡೆಯಿಕಡೆ ಬಾಲ್ ನಾವೂ ಹೊಡೆದಿದ್ದೂಂಟು
ವರಹನೂ ನೋಡಿದಾನೆ ಮಾರಮ್ಮನೂ. ಇವಳಗೋ
ಅಡೋಕ್ಕ್ಯಿಷ್ಟ; ಬೂಂದಿನು ಬೇಕು ಪಣ್ಯಾರವೂ;
ವಿಪರೀತ ಅಸೆಯೆನೋ ನಿಜ ಇವಳಿಗೆ.
ಆದರೆ ಬೇಗ ಸುಸ್ಸ್ತು ಅಗುತ್ತೆ ಇವಳಿಗೆ.
ನಿಶಬ್ದದ ಚೀರು – ಬೆಚ್ಚಿ ನಡುಗಿ ಕಂಪಿಸಿ ಎದ್ದೆ.
ಅದೆ ದೇಗುಲ, ಅದೆ ಗುಡಿ; ಸಾವಿನ ಚಿತ್ಕಾರ ಕಣ್ಣೆದುರಿಗೆ
ಓಡೋಡಿ ಹೋದೆ, ಕೇರಿ ಕುರಿ – ಕಾಲು ಕಟ್ಟಿದೆ
ಮರಣಭಯದ ಭೀತಿ ಕಣ್ಣಲ್ಲಿ ತುಂಬಿದೆ
ಸಾವಿನ ರೋದನೆ ಗಾಳಿಯಲ್ಲಿ ಕರಗಿದೆ
ಬರಿ ಲಂಗೋಟಿ; ಮೈಯೆಲ್ಲ ಇಜ್ಜಲು
ನಾಕು ಮಂದಿ ಕತ್ತಿ ಮಸಿತಾರೆ
ರೋದನೆನೂ ಕೇಳಿಸೊಲ್ಲ ಇವರಿಗೆ
ಕುರಿ ಕಣ್ಣೂ ಕಾಣಿಸೊಲ್ಲ ಇವರಿಗೆ
ಹೆಂಡತಿ ಮಕ್ಕಳಿಗೆ ಮಾಂಸ ಬೇಡವೇ!
ಕತ್ತು ಕುಯ್ಯತ್ತಾರೆ, ಬಲಿ ಕೊಡ್ತಾರೆ, ಚರ್ಮ ಸುಲಿತ್ತಾರೆ.
ಈವೋತ್ತು ಗೋಕಲಾಷ್ಟ್ಮಿ ಉಪವಾಸ ಧ್ಯಾನ ನನಗೆ
ಮನಸ್ಸು ಕುರಿ ಅತ್ಮದೊಂದಿಗೆ ಬೆರೆತು ನಿಲ್ಲೋಲ್ಲ
ಅಲ್ಲಿಯಿಲ್ಲಿ ಜಾರುತ್ತ, ಪರಮಾತ್ಮನಂದನ ಮಗಳು
ಭಾಗಿರಥಿ ಹತ್ತಿರ ನಿಲ್ಲುತ್ತೆ – ನನ್ನ ಸ್ಪರ್ಶಕ್ಕೆ
ಸ್ಪಂದಿಸಿ ತಾಳ್ಮೆಯಿಂದ ಕೇಳ್ತಾಳವಳು, ಅದಕ್ಕೆ
ಜೀವನದ ಇರುವಿನ ಮಾಯೆ, ನನ್ನ ಶೂನ್ಯದ
ಗುಟ್ಟು, ಎಲ್ಲ ಹೇಳೆ ಬಿಡತ್ತೀನಿ.
ಕೇಳಿ ಸುಮ್ಮನೆ ನಗುತ್ತಾಳೆ ಅಷ್ಟೆ.
*****
೭-೧-೨೦೦೨