ಒಂದು ಸಂಜೆ

ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […]

ಮುಚ್ಚಂಜೆ

೧ ಒಂದರಗಳಿಗೆಯ ಬಂಧುರ ಸ್ಪರ್‍ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […]

ಮಾನಸ ಪೂಜೆ

ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ ಹರಿವರಿದು ಬರುವ ಗಂಧೋದಕದಿ ಮಿಂದ ತಂ- ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ! ದಿವ್ಯಾನುಭೂತಿಯಲಿ ರಸದ […]

ಒಂದು ಮುಂಜಾವು

ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […]

ಪ್ರಕೃತಿಯ ಮಡಿಲಲ್ಲಿ

“Earth has not anything to show more fair!” – Wordsworth (ಕರ್ನಾಟಕ ಕಾಲೇಜಿನ ಅಟ್ಟದಿಂದ ಕಾಣುವ ನಾಲ್ಕೂ ಹೊತ್ತಿನ ನೋಟ) ಮೂಡಣದ ಬಾನಿನಲಿ ಮುಗಿಲು ನೆಲ ಮಿಲನದಲ ಕ್ಷಿತಿಜ ಕಂಕಣದಲ್ಲಿ ಉಷೆಯ […]

ವಿಶ್ವಕವಿಯ ದೃಶ್ಯಕಾವ್ಯ

ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […]

ಬಾಳಕೊರಡು

೧ ಇದು ಬಾಳಕೊರಡ ಮುಡಿ- ಮೇಲೆ ಕಾಣದ ಕೈಯ ಕರಗಸವು ರೌರವದಿ ಕೊರೆಯುತಿದೆ ಕೊರಡಿನೆದೆ ಬಿರಿಯುತಿದೆ ಕಂದರದಿ ಧಡಧಡಿಸಿ ನುಗ್ಗುತಿಹ ರೈಲಿನೊಲು ಮೇಲೆ ಕೆಳಗೋಡುತಿದೆ ಕರಗಸದ ಹಲ್ಲು! ಅದರ ಬಿರುಕಿನ ಕ್ಷೀಣ ಸ್ವರವೊಂದು ಬೇಸರದಿ […]

ಕಂಬನಿಯೆ ಸಾಕು!

ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ ಮಾತು ಮಾತಿನ ಮೊನೆಯ ಮಸೆಯಿತೆಂತು? ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ! ಮೌನದೇವತೆ ಶಾಪವಿತ್ತಳೆಂತು? ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ? ಪ್ರೀತಿ ಅಂತಃಕರಣ ನಿನ್ನದಿದೆಕೊ! ಅದನುಳಿದರೇನುಂಟು? ಬರಿಯ ಗಾಳಿಯ ಗಂಟು! […]

ಕಂಬನಿಗೆ

ಕಂಬನಿಯೆ, ನೀನೀಸು ದಿನವಲ್ಲಿ ಹುದುಗಿದ್ದೆ ಯಾವ ಹೃದಯದ ತಳವ ಸೋಸುತಿದ್ದೆ? ನಾನು ನೀನೂ ಅವಳಿ-ಜವಳಿಯೆಂಬುದ ಮರೆತು ಯಾರ ನಿಟ್ಟುಸಿರೊಡನೆ ಬೆರೆಯುತಿದ್ದೆ? ಇಂದು ನಾನಾಗಿಯೇ ಕರೆವೆ ಕನಿಕರಿಸಿ ಬಾ ಇಳಿಸು ನನ್ನೆದೆ ಭಾರ ದುಃಖಪೂರ! ಮರಮಳೆಗೆ […]