ಹೃದಯದರವಿಂದವೇ ಮನದ ಮಂದಾರವೇ ಒಳುಗುಂದದಮಲ ಸೌರಭಸಾರವೆ! ಅರಳಿರುವ ದಲದಲದಿ ನಿನ್ನ ಪದತಲವಿರಿಸಿ ಚಿತ್ತೈಸು ನನ್ನೊಲವೆ ನನ್ನ ಬಲವೆ! ತೆಳ್ಳತೆಳ್ಳನೆ ತೀಡಿ ಮೆಲ್ಲಮಲ್ಲನೆ ಹಾಡಿ ಒಯ್ಯನೊಯ್ಯನೆ ಒಲಿವ ತಂಗಾಳಿಯು ನಿನ್ನುಸಿರ ನರುಗಂಪು ನಿಚ್ಚಪ್ರಸಾದವದು ಪ್ರಣವನಾದವಗೈವ ಶೃಂಗಾಳಿಯು! […]
ಟ್ಯಾಗ್: ಆಕಾಶಬುಟ್ಟಿ
ಬಸವನಾಳರಿಗೆ ಬಾಷ್ಪಾಂಜಲಿ
ಸಂಜೆಯಾಯಿತು; ಬಾನಬಾಳಿಗೆ ಮಂಜು ಕವಿಯಿತು ಒಮ್ಮೆಲೆ! ಕಣ್ಣುಮುಚ್ಚುತ ತಣ್ಣಗಾದನು ರವಿಯು; ಬಳಸಿತು ಕತ್ತಲೆ. ಚಿಲ್ಲನೆಯ ಚಳಿಗಾಳಿ ಕೊರೆಯಿತು ನಂಜಿನಂತಹ ವಾರ್‍ತೆಯ; ಕನ್ನಡದ ಜೇಂಗೊಡವ ಕದ್ದರು ಸುರರು, – ನಾಡಿನ ಬುತ್ತಿಯ. “ಇಲ್ಲವಾದರೆ ಇನ್ನು?” ಎಂಬ […]
ಸಾವ ಗೆದ್ದಿಹ ಬದುಕು
ತುಂಬಿ ಹರಿಯುವ ಹೊಳೆಗೆ ತುಂಬಿ ಬಂದಿತು ಗಳಿಗೆ! ಗಿರಿಯ ಗಂಭೀರತೆಯ ಹೀರಿ ನೆರೆ ನಾಡುಗಳ ಕಾಡುಗಳನಲೆದು ತತ್ವಾಮೃತದ ಶಾಖೆಗಳ ಕೊಂಡು ಸಾಗಿತು ಶಾಂತಿ ಜ್ಞಾನ ಸಿಂಧುವಿನಡೆಗೆ. ಮೆಲುನಗೆಯ ಕಲಕಲ ನಿನಾದದಲಿ ಬಗೆ ತಣಿಸಿ ನಿರ್‍ಮಲೋದಕದಾಳಕಿಳಿದು […]
ಶ್ರೀ ಅರವಿಂದ ಮಹರ್‍ಷಿ
ಓಂ! ತಮೋಹಾರಿ ಜ್ಯೋತಿರ್‍ಮೂರ್‍ತಿ ಚಿಚ್ಛಕ್ತಿ ಚಿತ್ತಪಶ್ಶಕ್ತಿಯಿಂ ಯೋಗಸಾಧನೆಗೈದ ಅಧ್ಯಾತ್ಮದುನ್ನತಿಯನಂತರಾಳದಿ ಪಡೆದ ಪರಮ ಭಗವನ್ಮುಕ್ತ, ಲೋಕತಾರಕ ಶಕ್ತಿ! ಜೀವನ ಸರೋವರದಿ ದೈವತ್ವದರವಿಂದ- ವರಳಿಸಿದ ದಿವ್ಯ ಜೀವನದಮರ ದಾರ್‍ಶನಿಕ ಸರ್‍ವಾರ್‍ಪಣಂ ಬಲಿದ ಸಿದ್ಧಿ ಅತಿಮಾನಸಿಕ ಪೂರ್‍ಣ ತೇಜೋವೃದ್ಧಿ; […]
ಭಾರತಕುಲಾವತಂಸ
೧ ಕಾಲಪುರುಷರು ಧೈರ್‍ಯ ಸಾಲದಾಯಿತು ಇಂದು ನಿನ್ನ ಕೊಂಡೊಯ್ಯುವೊಡೆ ಕೈ ನಡುಗಿತು; ಉಕ್ಕಿನೆದೆ ಬಂಟನಿಗು ಕಂಟಕವನೊಡ್ಡುವರೆ ಕವಡುಗಂಟಕ ವಿಧಿಯ ಎದೆಯುಡುಗಿತು! ೨ ಭಾರತವಿಯತ್ತಳದಿ ವೈರಿಬಲದೆದುರಿನಲಿ ಗುಡುಗು ಹಾಕಿದ ಗಂಡುಗಲಿಯು ನೀನು ‘ವೀರ ವಲ್ಲಭಭಾಯಿ ನಾಡಗುಡಿಯನು […]
‘ಶ್ರೀ’ಯವರನ್ನು ನೆನೆದು
ಕಂನಾಡ ಬಾನಿನಲಿ ಶ್ರೀಕಾರ ಬರೆದಂತೆ ‘ಶ್ರೀ’ ಬೆಳ್ಳಿ ಚಿಕ್ಕೆ ಲಕಲಕಿಸಿ ಬೆಳ್ಳಂಗೆಡೆಯೆ ನಾಡ ನಾಡಿಗಳಲ್ಲಿ ಚೈತನ್ಯ ಸೆಲೆಯೊಡೆಯೆ ಬಾವುಟವನೆತ್ತಿ ದಿಗ್ವಿಜಯಮಂ ಪಡೆದಂತೆ ದಂಡಯಾತ್ರೆಯ ಗೈದ ವಾಗ್ಮಿಭವದುನ್ನತಿಯು! ತುಂಬು-ವಿದ್ಯೆಯ ತುಂಬುಗಾಂಭೀರ್‍ಯದಲಿ ಮೆರೆದು ಕನ್ನಡದ ಸಾರ ಸರ್‍ವಸ್ವ […]
ಷೆಲ್ಲಿ ಕವಿಯನ್ನು ಕುರಿತು
ಭೋರ್‍ಗರೆವ ಕಡಲು ನಿನ್ನೊಡಲ ನುಂಗಿತೆ ಷೆಲ್ಲಿ? “ನಿನ್ನ ಮುಳುಗಿಸಿದ ನೀರಿನ ಬಲವನೊಂದು ಕೈ ನೋಡಿ ಬಿಡುವೆನು” ಎಂದ ಬೈರನ್-ಕವಿಯೆ ಸೈ! ನೂರು ನೋವನ್ನುಂಡ ಕವಿಜೀವ ನಿನಗೆಲ್ಲಿ ವಿಶ್ರಾಂತಿ? ಶಾಂತಿಯೆಂಬುದೆ ಭ್ರಾಂತಿ! ಚಿರಕಾವ್ಯ- ನಂದನದ ಮಂದಾರ! […]