ದೇಸೀಯತೆಯ ಪ್ರಶ್ನೆ

ಸುಳ್ಯದ ಸ್ವಂತಿಕಾ ಪ್ರಕಾಶನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರು ಸಂಯುಕ್ತವಾಗಿ ಏರ್ಪಡಿಸಿರುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಮಾರೋಪ ಭಾಷಣದ ಮೂಲಕ ನನ್ನ ಕೆಲವು ಆಲೋಚನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾನು […]

ಶಬ್ದದೊಳಗಣ ನಿಶ್ಯಬ್ದ : ಅಲ್ಲಮನ ಆರು ವಚನಗಳು

೧. ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ ಗುಹೇಶ್ವರ ನಿಮ್ಮ ಶರಣ ಸಂಬಂಧ ೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ ನಿಮ್ಮ ನಿಲವನನುಭವ […]

ಕನ್ನಡ ಕಥೆಗಾರರಿಗೊಂದು ಮಾದರಿ; ‘ಭಳಾರೆ ವಿಚಿತ್ರಂ’

ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ […]

ಅನುಭಾವಿ ಅಕ್ಕ

ಅಕ್ಕನ ಅನುಭಾವಿ ವ್ಯಕ್ತಿತ್ವವನ್ನು ಆಕೆಯ ಸಮಕಾಲೀನ ವಚನಕಾರರು ಕಂಡಿರುವ ರೀತಿಯನ್ನು ಒಟ್ಟಾಗಿ ಪರಿಶೀಲಿಸುವುದು ಈ ಟಿಪ್ಪಣಿಯ ಉದ್ದೇಶ. ಅಕ್ಕನನ್ನು ಅವಳ ಕಾಲದ ಉಳಿದ ವಚನಕಾರ್ತಿಯರು ತಮ್ಮ ರಚನೆಗಳಲ್ಲಿ ಸ್ಮರಿಸುವುದಿಲ್ಲವೆಂಬುದು ಕುತೂಹಲದ ಸಂಗತಿ. ಆದರೆ ಬಸವ, […]

ನನ್ನ ಹಿಮಾಲಯ – ೯

ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […]

ನನ್ನ ಹಿಮಾಲಯ – ೮

ಮತ್ತೆ ಬರವಣಿಗೆಯ ಮೊದಲನೆಯ ದಿನ ಹೃಷೀಕೇಶ ನನ್ನನ್ನು ಒಪ್ಪಿಕೊಳ್ಳುತ್ತಿತ್ತು. ದಿನಕ್ಕೆ ಎರಡು ಸಾರಿ ರಾಮ ಝೂಲಾದ ಮೇಲೆ ನಡೆದು ಗಂಗಾನದಿಯ ಆ ದಂಡೆಗೆ ಹೋಗಿಬರುತ್ತಿದ್ದೆ. ಕ್ರಿಕೆಟ್ ಕಾಮೆಂಟರಿ ಕೇಳುತ್ತಿರುವಾಗ, ಈಗ, ಹೃಷಿಕೇಶದ ನೆನಪು ಆಗುತ್ತಿದೆ. […]

ನನ್ನ ಹಿಮಾಲಯ – ೪

ಸು. ಕೃಷ್ಣಾನಂದರ ಎದುರೂ ಕುಕ್ಕರುಗಾಲಿನಲ್ಲಿ ಕುಳಿತು ಅವರಿಂದ ಬೈಸಿಕೊಂಡಿದ್ದನಂತೆ. ಅವನೂ ಕಣ್ಣು ಕಿರಿದು ಮಾಡಿದ. ಕಣ್ಣಂಚಿನಲ್ಲಿ ಸುಕ್ಕು ಮೂಡಿದವು. ತುಟಿಗಳ ಅಂಚನ್ನು ಕೆಳಗಿಳಿಸಿ ಮಾತಾಡಬಯಸುವವನಂತೆ ಆದರೆ ಮಾತಾಡಲಾರದವನಂತೆ ಪೆಚ್ಚಾಗಿ ನಕ್ಕು ಮುಂದೆ ಹೋದ.ಅರ್ಧದಷ್ಟು ಮೆಟ್ಟಿಲಿಳಿದವನು […]

ನನ್ನ ಹಿಮಾಲಯ – ೩

ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […]

ನನ್ನ ಹಿಮಾಲಯ – ೨

ಕುಲುನಲ್ಲಿ ಇರೋಣವೋ ಮನಾಲಿಗೆ ಹೋಗೋಣವೋ? ಆತಂಕ ಹೆಚ್ಚಾಯಿತು. ಜನ ನಮಗೆ ಸಹಾಯವಾಗಲಿ ಅಂತ ಹೇಳಿದ ಪ್ರಾಮಾಣಿಕ ಉತ್ತರಗಳು ನಮ್ಮ ಗೊಂದಲವನ್ನು ಹೆಚ್ಚು ಮಾಡಿದವು. ಮತ್ತೆ ಬಸ್ಸು. ಬಸ್ಸಿನೊಳಗೂ ಹೊರಗೂ ಕತ್ತಲೆ. ಎದುರಿಗೆ ಬರುವ ವಾಹನಗಳು […]

ನನ್ನ ಹಿಮಾಲಯ – ೧

ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […]