ಇವು ನನ್ನ ಹಾಡೆಂಬ ಹಗರಣದಿ ಮೈಮರೆತು ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ ಅಣುರೇಣು ಜೀವಾಣು ನಿನ್ನ ಚರಣವನೋತು ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ ಕರಣಿಕನು ನಾನಾಗಿ […]
ವರ್ಗ: ಪದ್ಯ
ಶಬ್ದಗಳ ಮೋಡದ ನಡುವೆ ನೀನು ಸೂರ್ಯ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ರಕ್ತ ಪರದೆಯ ಹಿಂದೆ ಪ್ರೇಮಕ್ಕೆ ಗುಲಾಬಿಯ ಹಾರ ಉಪಮಾತೀತ ಸೌಂದರ್ಯದ ಜತೆಗೆ ಒಲವಿನ ವ್ಯವಹಾರ ತರ್ಕ ಹೇಳಿತು, ಆರು ದಿಕ್ಕುಗಳೇ ಗಡಿ, ಆಚೆಗೆ ದಾರಿಯಿಲ್ಲ ಪ್ರೀತಿ […]
ಚೆನ್-ಬೆಳಕು
ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […]
ನಾವು ನಾಲ್ವತ್ತು ಕೋಟಿ
ಹಿಮಶೈಲದುತ್ತುಂಗ ಶಿಖರದಿಂದೀ ಸೇತು- ವರೆಗೆ ಹಬ್ಬಿದ ನಾಡು ಭಾರತವಲಾ: ಗಂಗೆ ಗೋದಾವರಿಯು, ಸಿಂಧು ಕಾವೇರಿಯರು, ತುಂಗೆ ನರ್ಮದೆಯು, ಕೃಷ್ಣೆ ಓ, ಬಿಡುಗಡೆಯ ಹಾಡಾಂತು ಹರಿಯುತಿವೆ. ವಿಂದ್ಯಾದ್ರಿ ಸಹ್ಯಾದ್ರಿ ಗಿರಿಸಾನು ಪೌರುಷದಿ ಮಲಗಿದೀ ಬಿತ್ತರದ ನಾಡಿನಲಿ […]
ನನ್ನ ಕವಿತೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ನನ್ನ ಕವಿತೆ ಈಜಿಪ್ಟಿನ ರೊಟ್ಟಿಯಿದ್ದಂತೆ ರಾತ್ರಿ ಕಳೆದಂತೆ ಹಳಸುತ್ತ ಹೋಗುತ್ತದೆ ಬಿಸಿಯಿದ್ದಾಗಲೆ ಅದನ್ನು ತಿನ್ನು ಕಸ ಧೂಳು ಕೂರುವ ಮುನ್ನ ಅದನ್ನು ತಿನ್ನು ಅದು ಒಣ […]
ಹೋರು ಬೀಳ್ವನ್ನೆಗಂ
ಅರರೆ! ನರಜೀವಿ ನರನನಿರಿಯುವದಿದೊಳ್ಳಿತೆ? ಜಾತಿಮತ ಪಂಥಗಳ ಕೊಳಚೆಯಲಿ ಕಚ್ಚಾಡಿ ಸೋದರತೆ ಮಾನವ ದಾನವತೆಯಂ ಕೂಡ ಪಾಳ್ಗೈದುದೇನಿದುವೆ ಸುಸಂಸ್ಕೃತಿಯ ಘನತೆ? ನಾಡು ನಿಂತಿಹುದಿಂದು ಬಿಡುಗಡೆಯ ಹೊಸತಿಲಲಿ ಕಳಚಲಿದೆ ಕೈ ಬೇಡಿ, ಮಿಡಿಯಲಿದೆ ಹೊಸ ನಾಡಿ ಧುಮುಕಲಿದೆ […]
