ಈಗ ಕವಿತೆ ಬರೆಯಲು….

ಈಗ ಕವಿತೆ ಬರೆಯಲು ನಾನು ಹೊರಟಿಲ್ಲ ; ಹೊರಟೀದ್ದು ಆಫೀಸಿಗೆ: ಉಂಡು ಅವಸರದಿಂದ- ಸಿಕ್ಕರೆ ಬಸ್ಸು ಹಿಡಿದು, ಇಲ್ಲ, ಮೆಲ್ಲಗೆ ನಡೆದು ; ಸಡಿಲಾಗಿರುವ ಕೋಟು ಪ್ಯಾಂಟುಗಳನ್ನು ಇದ್ದು – ದರಲ್ಲಿ ಸರಿಪಡಿಸಿಕೊಂಡು. ಎಷ್ಟೋ […]

ದೀಪಾವಳಿ

೧ ಅಲ್ಲಲ್ಲಿ ಹುಲ್ಲು ಹಳದಿಗೆ ತಿರುಗಿ, ಗದ್ದೆಯಲಿ ನೆಲ್ಲು ತೆನೆಹಾಯ್ದು ಗಾಳಿಯುದ್ದಕು ಬಾಗಿ ಬಾಚುತ್ತ ಬಿಸಿಲಿನಲಿ ಮಿರಿಮಿರಿ ಮಿಂಚಿ; ಆಕಾಶದಲ್ಲಿ ಸ್ವಾತಿಯ ಮೋಡ ಸುರಿದು ಹಿಂಜರಿದು ಕ್ಷಿತಿಜದಂಚಿನಲಿ ಸಂಜೆಯ ಸೂರ್ಯ ಝಗಝಗಿಸಿ ಅಲ್ಲೊಂದು ಇಲ್ಲೊಂದು […]

ಅಡ್ಡಮಳೆ

ಅಡ್ಡಮಳೆ ಹೊಡೆದು ಹೋಯಿತು- ಗುಡ್ಡದಾಚೆಗೆ, ಹೊಲಗದ್ದೆಗಳ ದಾಟಿ, ಬೇರೂರಿಗೆ. ಅಲ್ಲಿಯೂ ನಮ್ಮಂತೆ ಚಡಪಡಿಸಿ, ಉಸಿರು ಕಟ್ಟಿ ಕುಳಿತಿರಬಹುದು ಜನರು : ಹೊಚ್ಚ ಹೊಸ ಮಳೆಗೆ. ಉತ್ತರದ ಕಡೆಯಿಂದ ಬೀಸಿಬಂದಿರು ಗಾಳಿ ದಕ್ಷಿಣಕ್ಕೆ, ಮೋಡದೊಳಗೊಂದು ಮೋಡ […]

ಉಲೂಪಿ

ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […]

ಅಮ್ಮ, ಆಚಾರ, ನಾನು

ನನ್ನ ಮದುವೆಗೆ ಮುಂಚೆ ಹತ್ತಾರು ಹೆಣ್ಣುಗಳ ನೋಡಿ ನಮ್ಮಮ್ಮ ಒಬ್ಬೊಬ್ಬರನೂ ತನ್ನ ಒಪ್ಪಿಗೆಯಲ್ಲಿ ಒರೆಯಲ್ಲಿ ಅರೆದು ಅವಳು ಹಾಗೆ ಅವಳು ಹೀಗೆ ಆಕೆಗಿಂತ ವಾಸಿ ಕಾಗೆ ಈಕೆ ಎಲ್ಲ ಸರಿ ಆದರೆ ಉದ್ದ ನಾಲಗೆ […]

ಬಡ ದಶರಥನ ಸಾಂತ್ವನ

೧ ಹೇಳಿ ಕೇಳಿ ಕುಚೇಲನಲ್ಲವೆ ನಾನು? ಅವಳಿಗಿವೆ ಎರಡು ಜಡೆ ತೊಡುತಾಳವಳು ಮಸ್ಲಿನ್ ತೊಟ್ಟಿದ್ದಾಳೆ ಎತ್ತರದಟ್ಟೆ ದಿಮಾಕು ಚಪ್ಪಲಿ ಅವರು ಹಾಗೆ ಇವರು ಹೀಗೆ ಸರಿಯೆ, ನಮಗೇಕೆ, ಅದು? ತಿಂಗಳ ಮೊದಲದಿನವೇ ಏಕೆ ಹಗರಣ? […]

ಗೋಡೆ

ಒಂದೊಂದು ಸಲ ನನಗೂ ನಿನಗೂ ನಡುವೆ ಇದ್ದಕ್ಕಿದ್ದಂತೆ ಗೋಡೆ ಏಳುತ್ತದೆ. ಎಲ್ಲಿಂದಲೋ ಏನೋ ಇಟ್ಟಿಗೆಯ ಮೇಲೆ ಇಟ್ಟಿಗೆ ಬಂದು ಕೂತು, ಕೂತಲ್ಲಿಯೇ ನಮ್ಮನ್ನು ಹೂತು ಸುತ್ತಲೂ ಗೋಡೆ ಕಟ್ಟುತ್ತವೆ. ಎದ್ದ ಗೋಡೆಯ ತುಂಬ ಕೆಂಗಣ್ಣು […]

ಶಿಶಿರದಲ್ಲಿ ಬಂದ ಸ್ನೇಹಿತ

ಚಳಿಗಾಲದಲ್ಲಿ ಒಬ್ಬನೇ ಬೆಚ್ಚಗೆ ಹೊದ್ದು ಕುಳಿತಾಗ ಮುಪ್ಪು ಮಾತಾಡಿಸಿತು,ತೀರ ಹತ್ತಿರಕೆ ಬಂದು : “ಏನಪಾ, ಎಲ್ಲ ಸೌಖ್ಯವೆ? ಇತ್ತೀಚೆ ಮತ್ತೆ ಬರವಣಿಗೆ? ಷಷ್ಟ್ಯಬ್ದಿಗೂ ನಾನು ಬಂದಿದ್ದೆನಲ್ಲ, ನೆನಪಿರಬಹುದು. ವಿಶ್ರಾಂತ ಜೀವನದಲ್ಲು ಬಿಡುವಿಲ್ಲವೆಂದರೆ ಹೇಗೆ? ಮಾತಾಡು, […]

ಶಬ್ದ-ನಿಶ್ಯಬ್ದ

‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […]

ಒಂದು ಬೆಳಗು

ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ- ಎಂದು ಕಿವಿ ನಂಬದಾಯ್ತು. ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ- ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’ ಅದೇ ಅದೇ ಎಂದು ಖಾತ್ರಿಯಾಯ್ತು. ಮಬ್ಬುಗತ್ತಲೆಯನ್ನು ಭೇದಿಸಿ […]