ನನ್ನ ಹಿಮಾಲಯ – ೧

ಕೊನೆಗೆ ಹೀಗೆ ಅಂತೂ ನನ್ನ ಹಿಮಾಲಯದ ಬರವಣಿಗೆ ಸಾಕು ಮಾಡಿದ್ದೇನೆ. ಇಲ್ಲಿ ಬರುವ ಎಲ್ಲ ಘಟನೆಗಳೂ ನಿಜ. ನಾನೇ ಇನ್ನೊಬ್ಬನೆಂದುಕೊಂಡರೂ ‘ಇನ್ನೊಬ್ಬರ’ ಎದುರಿನಲ್ಲಿ ಎಷ್ಟು ಧೈರ್ಯವಾಗಿ ಮಾತಾಡಬಹುದೋ ಅಷ್ಟು ಧೈರ್ಯವನ್ನು ವಹಿಸಿದ್ದೇನೆ. ನನ್ನ ಈ […]

ಶಬ್ದದ ಲಜ್ಜೆ ನೋಡಾ

ಹೇಳಿದರ ಕತಿಗಿತಿ ಅಂದೀರಿ ದೇವರೂಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥಪೋಸ್ಟಿನ ವಿಳಾಸವಂತ, ಮತಿವಂತ ಹಾಗಂತಅರಸೀಕನಲ್ಲ, ಕಿಟ್ಟಲ್‌ಕೋಶವಿನಾ ಹಳಗನ್ನಡಪದಾರ್ಥ ಮಾಡಬಲ್ಲ; ಹೊಸೆಯಬಲ್ಲಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳಪನ್ನು ಜೋಕುಗಳ ಕಟ್ಟಬಲ್ಲ.ಹೇಳಿದರ ಕತೆಗಿತಿ ಅಂದೀರ ದೇವರೂಕಿವಿಗೊಟ್ಟು ಕೇಳಿರಿ […]

ಸೋವಿಯತ್ ರಷ್ಯಾ

ಕೊಳೆಯಬೇಕಾದ ಲೆನಿನ್ ಹೆಣವನ್ನುಕೊಳೆಯದಂತೆ ಕಾದರು,ಮಾರ್ಕ್ಸ್ ಎನ್ನುವಂತೆ ಸ್ಟೇಟೆ ಉವಿದರ್ಸ್ ಅವೆ ಎಂದರು ೨ಸೈಂಟಿಫಿಕ್ಕಾಗಿ ಅರಳಿದ ಗುಪ್ತ ಪೋಲೀಸ್ ದಳಗಳುಇನ್ನೇನು ಉದುರಿಇನ್ನೆನು ಬಿಡಲಿರುವ ಫಲವನ್ನುಸ್ವತಂತ್ರ ಮಾರುಕಟ್ಟೆಯಲ್ಲಿಟ್ಟು ಇನ್ನು ಮಾರಲಿದ್ದಾರೆ-ಅಮೇರಿಕಾದಲ್ಲಿ, ಯೂರೋಪಲ್ಲಿ, ಮೂರನೇ ಜಗತ್ತಲ್ಲೂಎಂಬ ಸುದ್ದಿಯನ್ನು ಮಾಸ್ಕೋದಲ್ಲಿ […]

ಮಿಥುನ

ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನುಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆಕೂಡಿ ಇಮ್ಮೈಯಾಗಿ ಪಡೆಯರಂತೆ ಅಲೆಯ ಮೇಲಲೆಯ ಸುಖವಂತೆ ಪಡುವಾಗಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆಕಣ್ ಮುಚ್ಚರಂತೆ ನಮ್ಮಂತೆ […]

ಜಿಪ್ಸಿ ಮತ್ತು ಮರ

ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂನನಗೆ ಕಂಡವು; ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತುಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. ೨೬-೧೨-೯೧

ಇನ್ನೂ ಒಂದು

ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ […]