ಬಿಲಾಸಖಾನ

ಮಿಯಾ ತಾನಸೇನರು ಅತ್ರೌಳಿ ಹಳ್ಳಿಯನ್ನು ಬಿಟ್ಟು ದಿಲ್ಲಿಗೆ ಹೋಗಿ ಆಗಲೇ ೧೫ ವರ್ಷಗಳು ಸಂದಿದ್ದವು. ಅತ್ರೌಳಿಯಲ್ಲಿ ಹೊಲ-ಮನೆಯಲ್ಲದೆ ಅವರ ವೃದ್ಧ ತಾಯಿ, ಹೆಂಡತಿ ಹಮೀದಾ ಬಾನು, ಆಕೆಯ ೧೬ ವರ್ಷದ ಮಗ ಬಿಲಾಸ್ ಖಾನ್ […]

ಎ ಸೂಯಿಸೈಡಲ್ ನೋಟ್

ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ […]

ರೈಲು ಜನ

ಇರುಳು ಮೈನೆರೆದ ಹುಡುಗಿಯಂತೆ ಹೊರಗೆ ಗಾಳಿಯ ಜೊತೆ ಸರಸವಾಡುತ್ತಿತ್ತು. ಆಕಾಶದಲ್ಲಿ ನಕ್ಷತ್ರದ ಹಣತೆಗಳನ್ನು ಯಾರೋ ಹಚ್ಚಿದ್ದರು. ರೈಲು ಓಡುತ್ತಿತ್ತು. ಅದರೊಳಗಿನ ತರಾವರಿ ಜನ ನೂರಾರು ರೀತಿಯಲ್ಲಿ ತಮ್ಮ ಲೋಕದ ಲಹರಿಗಳಲ್ಲಿ ರೀಲು ಬಿಡುತ್ತ ಸುತ್ತಿಕೊಳ್ಳುತ್ತ […]

ಸಮೀರನ ದಿನ

ಸಮೀರನಿಗೆ ಮೊಟ್ಟಮೊದಲ ಬಾರಿಗೆ ತನ್ನ ಹುಮ್ಮಸ್ಸಿನಲ್ಲೇ ಒಂಥರದ ನಾಟಕೀಯತೆಯ ಭಾಸವಾಗತೊಡಗಿತು. ತನ್ನ ಆರ್ಭಟ ಉನ್ಮಾದ ಎಚ್ಚರ ಕೇಕೆಗಳ ಮುಖಾಂತರವೇ ಈ ಜಗತ್ತನ್ನು ಅಥವಾ ತನ್ನನ್ನು ಇರಿಸಿಕೊಳ್ಳಬಲ್ಲೆ ಎಂಬಂತೆ-ಎಂದೂ ಜೋಲುಮೋರೆಗೆ ಎಡೆಗೊಡದ, ನೋವಿನ ನೆನಪುಗಳ ಬಳಿಯೂ […]

ಕ್ಯಾಪ್ಸಿಕಂ ಮಸಾಲಾ

ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […]

ಶಬ್ದದೊಳಗಣ ನಿಶ್ಯಬ್ದ : ಅಲ್ಲಮನ ಆರು ವಚನಗಳು

೧. ಶಿಲೆಯೊಳಗಣ ಪಾವಕನಂತೆ ಉದಕದೊಳಗಣ ಪ್ರತಿಬಿಂಬದಂತೆ ಬೀಜದೊಳಗಣ ವೃಕ್ಷದಂತೆ ಶಬ್ದದೊಳಗಣ ನಿಶ್ಯಬ್ದದಂತೆ ಗುಹೇಶ್ವರ ನಿಮ್ಮ ಶರಣ ಸಂಬಂಧ ೨ ಕಲ್ಲೊಳಗಣ ಕಿಚ್ಚು ಉರಿಯಬಲ್ಲುದೆ ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ತೋಱಲಿಲ್ಲಾಗಿ ಬೀರಲಿಲ್ಲಾರಿಗೆಯು ಗುಹೇಶ್ವರ ನಿಮ್ಮ ನಿಲವನನುಭವ […]

ಹುಲಿಯ ಬೆನ್ನಿನಲ್ಲಿ ಒಂದು ಹುಲ್ಲೆ ಹೋಗಿ

(ಕಪ್ಪು ಕಾದಂಬರಿಯ ಮುನ್ನುಡಿ) ಈ ನನ್ನ ಕಪ್ಪು ಪ್ರೀತಿಯ ಕಾದಂಬರಿ ಮತ್ತೆ ಪ್ರಕಟವಾಗುತ್ತಿರುವ ಸಂದರ್ಭದಲ್ಲಿ ಈ ಕೆಳಗೆ ಕಾಣಿಸಿದಂತೆ ನಾಲ್ಕು ಮಾತುಗಳನ್ನು ತಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಈ ಕೃತಿ ಪ್ರಕಟವಾದ ವರ್ಷದಲ್ಲಿ ನನ್ನ ಜೀವಕ್ಕೆ ಸಂಚಕಾರ […]

ತದ್ರೂಪ

ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […]

ಕಿವಿ ಮಾತು

ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ. ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ. ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ […]

ಕನ್ನಡಿಯೇ ಕನ್ನಡಿಯೇ

ಕನ್ನಡಿಯೆ ಕನ್ನಡಿಯೆ ಕಣ್ಣಿವೆಯೆ ನಿನಗು? ಇಲ್ಲವೆ|ಕನ್ನಡಿಯಾಗಿವೆಯೆ ನನ್ನ ಕಣ್ಣು? ನೀ ನೋಡುತಿರುವೆಯ ನನ್ನ? ಇಲ್ಲವೆ| ನಾ ನೋಡುತಿರುವೆನೆ ನಿನ್ನ? ನಾ ನಿನ್ನ ಬಿನ್ಬವೋ? ನೆರಳೊ? ಇಲ್ಲವೆ|ನೀ ನನ್ನ ಬಿಂಬವೊ? ನೆರಳೊ? ನಾನಿರದೆ ನೀನಿಲ್ಲ ಹೌದೆ? […]