ನನ್ನ ಕವಿತೆ

ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ
ಬದುಕು ಹುಚ್ಚೀ
ನನ್ನ ಕವಿತೆ ಅದು ಭರ್ಜರಿ
ಬಿರಿಯಾನಿ ಗಮ್ಮತ್ತು ಚಿಕನ್
ತಂದೂರಿಗಳ ಗಿಜಿ ಗಿಜಿ ಘಮದಲ್ಲಿ
ನೊರೆಯಾರುವ ಮೊದಲೇ ತೇಜಿ ತೇಗಿದ್ದು
ಅಕ್ಷರಗಳ ಬಸಿರಿಗೆ
ಕಾವಿಕ್ಕಿ ಅಶ್ಲೀಲ ಚಕ್ಷು ಕಮಕ್ಕೆನಿಸಿ ಶಬ್ದ
ಪತಂಗಗಳ ಪಿನ್ನು ಚುಚ್ಚಿ ಕೇಕೆ ಹಾರಿದ್ದು
ಪಿಳ್ಳು ಬ್ರಾಹ್ಮಣ್ಯಕ್ಕೆ ಸ್ನಿಗ್ಧ
ಸಂಬಂಧ ಬಿತ್ತಿದ್ದು

ಹಲ್ಕಾ ಅನ್ನುವಿಯಾ?
ಹೆತ್, ಅಲ್ನೋಡು
ಬಾನಿಗೆ ಗುಂಡಿಕ್ಕುತ್ತಿದ್ದೇವೆ
ಮತ್ತು ಸೋರಿದ ನೆತ್ತರಿಗೆ
ಕೊಡೆಯೊಡ್ಡುತ್ತಿದ್ದೇವೆ ನೀನು
ಮತ್ತು ನಾನು.
*****