ಅರ್ಥ

ನಿನ್ನ
ಮೈ ತುಂಬ
ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ
ಗಳ ಮುಳ್ಳು ಚುಚ್ಚಿ
ಅರ್ಥಕ್ಕಾಗಿ ಕಾದು ಕೂತೆ
ಏನೂ ಹೊರಡಲಿಲ್ಲ
ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು
ನಿನ್ನ
ಬೋಳು ಮೈ ತೊಳೆದು
ಚೊಕ್ಕ ಒರೆಸಿ
ಹಗುರಾಗಿ ಮೀಟಿದೆ
ಹೌದೆ ಕವಿತಾ!!
ಒಮ್ಮೆಗೇ ಹೊಳೆದುಹೋಯಿತು ಅರ್ಥ

ನಿನ್ನದೆ
ಅಥವಾ
ನನ್ನದೆ?
*****