ಅಭಾವ

ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […]

ಮರೆಯಾದವರು

“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ […]

ನೆರಳು

ನಿಟ್ಟುಸಿರನೆಳೆದು ದಾಟಿತು ಕೊನೆಯರೈಲು : (ತಕ್ಕೊ ಕೈಮರದ ಕರಡೀಸಲಾಮು !) ಕೈಯ ಚಾಚಿದ ನೆರಳು ಚಲಿಸುತ್ತಿದೆ…..! ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! ಅಸ್ಥಿ ಪಂಜರದೊಡಲ ತುಂಬುತ್ತಿದೆ! ಕೈಯಕೋಲನು ಮೀಟಿ ಸೇತುವೆಯ ದಾಟಿ ಕೈಯ ಚಾಚಿದ […]

ಋತುಸಂಸಾರ

-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […]

ಚಿಂತನ

೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […]

ಸೊಳ್ಳೆ

೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […]

ವಿರಹಿ-ಸಂಜೆ

ಉರಿದುರಿದು ಹಗಲುಆರಿ ಹೋಗಿಹ ಕೆಂಡವಾಯ್ತು ಮುಗಿಲು!ನೇಸರನಿಗೂ ಬೇಸರಾಗುವದು ಸಹಜನಿಜ- ,ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?ಅಂತೆಯೇಅವನೆಂದಿನಂತೆಯೇಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದುಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆಮಳೆಯು ಜಿಟಿ ಜಿಟಿ ಹತ್ತಿ […]

ಒಂದು ಕಥೆ

ಪುಟ್ಟ ಮಗ ಓಡಿ ಬಂದು ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; “ಅಮ್ಮ ನನಗೊಂದು ಕಥೆ ಹೇಳು – ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” ‘ಅದು ಒಂದಾನೊಂದು ಕಾಲದ ಒಂದಾನೊಂದು ಊರು. ನನ್ನೂರು […]

ಮಧ್ಯಾಹ್ನದ ಮಜಲು

ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […]

‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….?

‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […]