ವಾಕ್ ಹೋಗಿ

ವಾಕ್ ಹೋಗಿ ಬದುಕು ಕಲೆಯಂತೆ ಸಮಾನಾಂತರ ಸಾಗಿದ ದೀಪದ ತಂತಿಗಳಲ್ಲೊಂದರಿಂದ ಯಾವುದೋ ಅಪ್ರಖ್ಯಾತ ಪಕ್ಷಿಯ ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ ಬರೀ ಅನಾಥ ಸಂಜೆ. *****

ಅಮ್ಮನಿಗೆ – ೨

ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. *****